ಕನ್ನಡ ಚಿತ್ರರಂಗದವರು ಹೊಲಸು ಜನ: ನಾಲಿಗೆ ಹರಿಬಿಟ್ಟ ತೆಲುಗು ನಿರ್ದೇಶಕ

ತೆಲುಗು ಯೂಟ್ಯೂಬ್ ರಂಗದಲ್ಲಿ ಕೆಟ್ಟ ಪದ್ಧತಿಯೊಂದು ಆರಂಭವಾಗಿದೆ. ಚಿತ್ರರಂಗದಲ್ಲಿ ಬೇಡಿಕೆ ಕಳೆದುಕೊಂಡು ಅಪ್ರಸ್ತುತರಾದವರನ್ನು ಹಿಡಿದು ತಂದು ಕ್ಯಾಮೆರಾ ಮುಂದೆ ಕೂರಿಸಿಕೊಂಡು ಇತರೆ ಚಿತ್ರೋದ್ಯಮದ ಬಗ್ಗೆ ಸ್ಟಾರ್ ನಟರ ಬಗ್ಗೆ ವಿವಾದಾತ್ಮಕ ವಿಷಯಗಳನ್ನು ಹೇಳಿಸಲಾಗುತ್ತಿದೆ.

ಕಳೆದ ವರ್ಷ ಇಂಥಹುದೇ ಒಂದು ಸಿ ಗ್ರೇಡ್ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾಜಿ ಪೋಷಕ ನಟನೊಬ್ಬ ಕನ್ನಡದ ಖ್ಯಾತ ನಟ ವಿಷ್ಣುವರ್ಧನ್ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದ, ಆ ನಂತರ ಅದಕ್ಕೆ ತಕ್ಕ ಪಾಠವನ್ನೇ ಕಲಿತ. ಈಗ, ಬೆರಳೆಣಿಕೆಯಷ್ಟು ಸಿನಿಮಾ ಮಾಡಿರುವ ನಿರ್ದೇಶಕನೊಬ್ಬ ಕನ್ನಡ ಚಿತ್ರರಂಗದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದಾನೆ.

'ಸೋಷಿಯಲ್ ಪೋಸ್ಟ್ ಟಿವಿ' ಹೆಸರಿನ ಯೂಟ್ಯೂಬ್ ಚಾನೆಲ್‌ ಒಂದು ಮಾಡಿರುವ ಸಂದರ್ಶನದಲ್ಲಿ ಮಾತನಾಡಿರುವ ಗೀತ ಕೃಷ್ಣ ಹೆಸರಿನ ತೆಲುಗು ನಿರ್ದೇಶಕನೊಬ್ಬ ಕನ್ನಡ ಚಿತ್ರರಂಗದ ಬಗ್ಗೆ ತೀರ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ. ಕನ್ನಡ ಚಿತ್ರರಂಗ ಮಾತ್ರವಲ್ಲ ತಮಿಳು ಚಿತ್ರರಂಗದ ಬಗ್ಗೆಯೂ ತೀರ ಕೆಟ್ಟದಾಗಿ ಮಾತನಾಡಿದ್ದಾನೆ.

ಕನ್ನಡ ಚಿತ್ರರಂಗದವರು ಕೊಳಕು ಜನ: ಗೀತ ಕೃಷ್ಣ ತುಚ್ಛ ಹೇಳಿಕೆ

ಕನ್ನಡ ಚಿತ್ರರಂಗದವರು ಕೊಳಕು ಜನ: ಗೀತ ಕೃಷ್ಣ ತುಚ್ಛ ಹೇಳಿಕೆ

ಯೂಟ್ಯೂಬ್ ಸಂದರ್ಶನದಲ್ಲಿ ಸಂದರ್ಶಕಿ, ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಪ್ರಶ್ನೆ ಕೇಳುತ್ತಾ, ''ತಮಿಳು ಚಿತ್ರರಂಗದಲ್ಲಿ ಕೇವಲ ಪ್ರತಿಭೆ ಇದ್ದರಷ್ಟೆ ಅವಕಾಶ ನೀಡುತ್ತಾರಂತೆ ಹೌದಾ?'' ಎನ್ನುತ್ತಾಳೆ, ಇದಕ್ಕೆ ಉತ್ತರಿಸುವ ನಿರ್ದೇಶಕ ಗೀತ ಕೃಷ್ಣ, ''ಈ ಮಾತು ಹೇಳಿದ್ದಕ್ಕೆ ತಮಿಳು ಚಿತ್ರರಂಗದವರು ಬಂದು ನಿನಗೆ ಸನ್ಮಾನ ಮಾಡುತ್ತಾರೆ, ಅಸಲಿಗೆ ಕಾಸ್ಟಿಂಗ್ ಕೌಚ್ ಹುಟ್ಟಿದ್ದೇ ತಮಿಳು ಚಿತ್ರರಂಗದಲ್ಲಿ, ಅವರಂಥಹಾ ಅಸಹ್ಯದ ಜನ ಇನ್ನೆಲ್ಲೂ ಇಲ್ಲ, ಕನ್ನಡದವರಂತೂ ಇನ್ನೂ ಅಸಹ್ಯದವರು, ಕೊಳಕು ಜನ'' ಎಂದಿದ್ದಾನೆ.

ಕನ್ನಡ ಚಿತ್ರರಂಗ ಬೇಡವೆಂದು ಬಂದುಬಿಟ್ಟೆ: ಗೀತ ಕೃಷ್ಣ

ಕನ್ನಡ ಚಿತ್ರರಂಗ ಬೇಡವೆಂದು ಬಂದುಬಿಟ್ಟೆ: ಗೀತ ಕೃಷ್ಣ

''ಒಮ್ಮೆ ಒಂದು ಸಿನಿಮಾ ಚಿತ್ರೀಕರಣಕ್ಕೆ ಹೋಗಿದ್ದಾಗ ಒಬ್ಬ ಹುಡುಗಿ ಸಿಕ್ಕಳು, ಹೈದರಾಬಾದ್‌ಗೆ ಬಾ, ನನ್ನ ಅಸಿಸ್ಟೆಂಟ್ ಡೈರೆಕ್ಟರ್‌ ಆಗಿ ಇರು ಎಂದೇ, ಆಕೆ ನನ್ನನ್ನೇ ಬಲೆಗೆ ಬೀಳಿಸಿಕೊಳ್ಳಲು ಬಂದಲು, ನಾನು ಅಲ್ಲಿಂದ ಕೂಡಲೇ ವಿಮಾನ ನಿಲ್ದಾಣಕ್ಕೆ ಓಡಿ ಹೋದೆ. ಕನ್ನಡ ಚಿತ್ರರಂಗದ ಸಹವಾಸವೇ ನನಗೆ ಬೇಡ ಎಂದು ಓಡಿ ಬಂದೆ. ಕನ್ನಡ ಚಿತ್ರರಂಗದವರು ಬಹಳ ಅಸಹ್ಯ, ಅಲ್ಲಿ ವಿಪರೀತ ಕಾಸ್ಟಿಂಗ್ ಕೌಚ್ ಇದೆ'' ಎಂದು ಬಾಯಿಗೆ ಬಂದಂತೆ ತುಚ್ಛವಾಗಿ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದ್ದಾನೆ ನಿರ್ದೇಶಕ ಗೀತ ಕೃಷ್ಣ.

ತಮಿಳಿನ ಸ್ಟಾರ್ ನಟರೆಲ್ಲ 'ಅಂಥಹವರೇ': ಗೀತ ಕೃಷ್ಣ

ತಮಿಳಿನ ಸ್ಟಾರ್ ನಟರೆಲ್ಲ 'ಅಂಥಹವರೇ': ಗೀತ ಕೃಷ್ಣ

ಕನ್ನಡ ಚಿತ್ರರಂಗದ ಬಗ್ಗೆ ಮಾತ್ರವೇ ಅಲ್ಲದೆ, ತಮಿಳು ಚಿತ್ರರಂಗದ ಬಗ್ಗೆಯೂ ಕೆಟ್ಟದಾಗಿ ಮಾತನಾಡಿರುವ ನಿರ್ದೇಶಕ ಗೀತ ಕೃಷ್ಣ, ತಮಿಳಿನಲ್ಲಿ ವಿಪರೀತ ಕಾಸ್ಟಿಂಗ್ ಕೌಚ್ ಇದೆ. ಎಲ್ಲ ಸ್ಟಾರ್ ನಟರಿಗೂ 'ಆ' ಚಟವಿದೆ. ಎಲ್ಲರೂ 'ಲೈಂಗಿಕ ಸೇವೆ' ಕೇಳುತ್ತಾರೆ. ಗಾಯಕಿಯೊಬ್ಬಳು ಎಲ್ಲರ ಬಣ್ಣ ಬಯಲು ಮಾಡಿದಳಲ್ಲ. ನಟ ಧನುಶ್, ಸಂಗೀತ ನಿರ್ದೇಶಕ ಅನಿರುದ್ ರವಿಚಂದ್ರನ್ ಇನ್ನೂ ಹಲವರು ತನ್ನನ್ನು ಬಳಸಿಕೊಂಡಿದ್ದಾರೆಂದು ಚಿತ್ರಗಳ ಸಮೇತ ಬಿಡುಗಡೆ ಮಾಡಿದ್ದಳು'' ಎಂದಿದ್ದಾನೆ ಗೀತ ಕೃಷ್ಣ.

ನಿರ್ದೇಶಿಸಿರುವುದು ಎಂಟು ಸಿನಿಮಾಗಳಷ್ಟೆ

ನಿರ್ದೇಶಿಸಿರುವುದು ಎಂಟು ಸಿನಿಮಾಗಳಷ್ಟೆ

ಹೀಗೆ ಕನ್ನಡ ಚಿತ್ರರಂಗದ ಬಗ್ಗೆ ತುಚ್ಛವಾಗಿ ಮಾತನಾಡಿರುವ ಗೀತ ಕೃಷ್ಣ ಈವರೆಗೆ ನಿರ್ದೇಶಿಸಿರುವುದು ಎಂಟು ಸಿನಿಮಾಗಳಷ್ಟೆ. 1987 ರಲ್ಲಿ 'ಸಂಕೀರ್ತನ' ಹೆಸರಿನ ಸಿನಿಮಾದೊಂದಿಗೆ ತೆಲುಗು ಚಿತ್ರರಂಗ ಪ್ರವೇಶಿಸಿದ ಗೀತ ಕೃಷ್ಣ, ಆ ನಂತರ ಏಳು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾನೆ. 2013 ರಲ್ಲಿ ಬಿಡುಗಡೆ ಆದ 'ನಿಮಿದಂಗಲ್' ಹೆಸರಿನ ತಮಿಳು ಸಿನಿಮಾ ಈತನ ನಿರ್ದೇಶನದ ಕೊನೆಯ ಸಿನಿಮಾ. ಈತ ಕೆಲವು ಸಾಕ್ಷ್ಯಚಿತ್ರಗಳನ್ನು ಸಹ ನಿರ್ದೇಶನ ಮಾಡಿದ್ದಾನೆ.

More from Filmibeat

English summary
Telugu movie director Geetha Krishna talked very loosely about Kannada movie industry. He said Kannada movie industry people were very nasty and dirty.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X