"ಅವತ್ತೆ ಆಕೆ ಸಹವಾಸ ಸಾಕು ಎಂದುಕೊಂಡಿದ್ದೆ"; ಪತ್ನಿ ಬಗ್ಗೆ ನಿರ್ದೇಶಕ ಪೂರಿ ಜಗನ್ನಾಥ್ ಕಾಮೆಂಟ್ಸ್ ವೈರಲ್

ಟಾಲಿವುಡ್ ಸ್ಟಾರ್ ಡೈರೆಕ್ಟರ್ ಪೂರಿ ಜಗನ್ನಾಥ್ ಟೈಮ್ ಯಾಕೋ ಸರಿಯಿಲ್ಲ. ಇತ್ತೀಚೆಗೆ ಪೂರಿ ಸಿನಿಮಾಗಳ ಮೇಲೆ ಪ್ರೇಕ್ಷಕರ ನಿರೀಕ್ಷೆ ಕಮ್ಮಿ ಆಗಿದೆ. 'ಲೈಗರ್' ಸೋಲು ಇದ್ದಕ್ಕೆ ದೊಡ್ಡ ಕಾರಣ ಎನ್ನಬಹುದು. ಇನ್ನು ವೈಯಕ್ತಿಕ ವಿಚಾರಗಳಿಂದಲೂ ಪೂರಿ ಆಗಾಗ್ಗೆ ಸುದ್ದಿಯಾಗುತ್ತಿರುತ್ತಾರೆ. ಸದ್ಯ 'ಡಬಲ್ ಇಸ್ಮಾರ್ಟ್ ಶಂಕರ್' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ನಟಿ ಚಾರ್ಮಿ ಹತ್ತಿರವಾದ ಬಳಿಕ ಪೂರಿ ಜಗನ್ನಾಥ್ ಪತ್ನಿಗೆ ಡಿವೋರ್ಸ್ ಕೊಡಲು ಮುಂದಾಗಿದ್ದಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಆದರೆ ಅದೆಕ್ಕೆಲ್ಲಾ 'ಪೋಕಿರಿ' ಸಿನಿಮಾ ನಿರ್ದೇಶಕ ತಲೆ ಕೆಡಿಸಿಕೊಳ್ಳಲಿಲ್ಲ. ಪತ್ನಿ ಲಾವಣ್ಯ ಜೊತೆ ಅನೋನ್ಯವಾಗಿ ಜೀವನ ಸಾಗಿಸುತ್ತಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಮಗ ಆಕಾಶ್ ಹೀರೊ ಆಗಿ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷಿಸಿಕೊಂಡಿದ್ದಾನೆ.

Telugu Director Puri Jagannadh interesting comments about wife Lavanya goes viral

ಇನ್ನು ಪೂರಿ ಜಗನ್ನಾಥ್ ಹಾಗೂ ಲಾವಣ್ಯ ಅವರದ್ದು ಲವ್ ಮ್ಯಾರೇಜ್. ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆ ಆದವರು. ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಪೂರಿ ಸಾಕಷ್ಟು ನಿರ್ದೇಶಕರ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದರು. ಹೀಗೆ ಒಮ್ಮೆ ಚಿತ್ರೀಕರಣ ನೋಡಲು ಬಂದ ಲಾವಣ್ಯ ಅವರನ್ನು ನೋಡಿ ಇಷ್ಟಪಟ್ಟು ಮದುವೆ ಆದರು. ಲವ್ ಅಟ್ ಫಸ್ಟ್ ಸೈಟ್ ಎನ್ನುವಂತೆ ಮೊದಲ ನೋಟದಲ್ಲೇ ಆಕೆ ನನ್ನ ಜೀವನ ಸಂಗಾತಿ ಎಂದು ನಿರ್ಧರಿಸಿದ್ದರಂತೆ.

ತಮ್ಮ ಲವ್‌ಸ್ಟೋರಿ ಬಗ್ಗೆ ಮಾತನಾಡುತ್ತಾ ಪೂರಿ ಜಗನ್ನಾಥ್ ಹೇಳಿರುವ ವಿಚಾರವೊಂದು ಈಗ ವೈರಲ್ ಆಗುತ್ತಿದೆ. ಅಂದು ಲಾವಣ್ಯಳನ್ನು ನೋಡಿ ಆಕೆ ಸಹವಾಸವೇ ಬೇಡ ಎಂದುಕೊಂಡಿದ್ದೆ ಎಂದು ಹೇಳಿದ್ದಾರೆ.

"ಅಂದು ಚಿತ್ರೀಕರಣ ನೋಡಲು ಬಂದ ಲಾವಣ್ಯಳನ್ನು ನೋಡುತ್ತಾ ಇದ್ದೆ. 1000 ರೂ. ಸಂಭಾವನೆಗಾಗಿ ಅಂದು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದೆ. ಕೆಲವೊತ್ತು ಆಕೆಯನ್ನು ನೋಡಿ ಬಳಿಕ ಹತ್ತಿರ ಹೋಗಿ ಒಂದು ವಿಸಿಟಿಂಗ್ ಕಾರ್ಡ್ ತೆಗೆದುಕೊಟ್ಟೆ. ನನ್ನನ್ನು ಮದುವೆ ಆಗುವ ಉದ್ದೇಶ ಇದ್ದರೆ ಫೋನ್ ಮಾಡು. ಇಲ್ಲದಿದ್ದರೆ ಬೇಡ ಎಂದು ನೇರವಾಗಿ ಹೇಳಿದ್ದೆ. ಒಂದು ವಾರದ ಬಳಿಕ ಫೋನ್ ಬಂತು. ಎಷ್ಟು ಜನಕ್ಕೆ ಹೀಗೆ ಹೇಳಿದ್ದೀಯಾ? ಇದೇ ನಿನಗೆ ಅಭ್ಯಾಸನಾ ಅಂದ್ಳು"

"ಬಳಿಕ ನಮ್ಮ ಲವ್ ಸ್ಟೋರಿ ಶುರುವಾಯಿತು. ಆಗಾಗ್ಗೆ ಭೇಟಿ ಆಗುತ್ತಿದ್ದೆವು. ಎಲ್ಲಾದರೂ ಊಟಕ್ಕೆ ಹೋಗುತ್ತಿದ್ದೆವು. ಅದು ನನ್ನ ಸ್ಟ್ರಗ್ಲಿಂಗ್ ಡೇಸ್. ನನ್ನ ಬಳಿ ಹಣ ಇರುತ್ತಿರಲಿಲ್ಲ. ಸ್ನೇಹಿತರ ಬಳಿ ಸಾಲ ಪಡೆದು ಭೇಟಿಗೆ ಹೋಗುತ್ತಿದ್ದೆ. ಐಸು, ಊಟ ಏನಾದರೂ ಕೊಡಿಸಿ ಸುತ್ತಾಡಿ ಬರುತ್ತಿದ್ದೆವು"

"ಒಮ್ಮೆ ಒಂದು ಹೋಟೆಲ್‌ಗೆ ಹೋಗಿದ್ದೆವು. ನನ್ನ ಬಳಿ ಹೆಚ್ಚು ಹಣವಿರಲಿಲ್ಲ. ಹೋಟೆಲ್‌ನಲ್ಲಿ ಕೂತು ಊಟ ಆರ್ಡರ್ ಮಾಡಿದೆವು. ಒಂದು ತಂದೂರಿ ಇಡೀ ಕೋಳಿಯನ್ನು ಆಕೆ ಆರ್ಡರ್ ಮಾಡಿದಳು. ನಾನು ನನ್ನ ಲೈಫ್‌ನಲ್ಲಿ ತಂದೂರಿ ಕೋಳಿ ತಿಂದಿರಲಿಲ್ಲ. ಆ ದಿನಗಳಲ್ಲಿ ಐಸ್‌ಕ್ರೀಂ ತಿನ್ನುವುದಕ್ಕೂ ಹಣವಿರಲಿಲ್ಲ. ನಾನು ತಿನ್ನುವಂತೆ ನಾಟಕ ಮಾಡುತ್ತಿದ್ದೆ. ಬಿಲ್ ಎಷ್ಟಾಗುತ್ತೋ ಎನ್ನುವ ಭಯ ನನಗೆ"

Telugu Director Puri Jagannadh interesting comments about wife Lavanya goes viral

"ನಾನು ತಿನ್ನುವಂತೆ ನಾಟಕ ಮಾಡುತ್ತಿದ್ದರೆ ಲಾವಣ್ಯ ಇಡೀ ಕೋಳಿ ತಿಂದುಬಿಟ್ಟಳು. ನಾನು ಸುಸ್ತಾಗಿದ್ದೆ. ಅವತ್ತೇ ಮದುವೆ ಬೇಡ ಎಂದು ನಿರ್ಧರಿಸಿದ್ದೆ. ಯಾಕಂದ್ರೆ ಈಕೆಯನ್ನು ನಾನು ನೋಡಿಕೊಳ್ಳಲು ಸಾಧ್ಯವಾಗಲ್ಲ, ಆಕೆಯ ತಂದೆ ಆ ರೀತಿ ಬೆಳೆಸಿದ್ದಾರೆ. ಹೀಗೆ ದಿನಾ ಕೋಳಿಗಳನ್ನು ತಿಂದುಬಿಟ್ಟರೆ ಹೇಗೆ ಎಂದುಕೊಂಡೆ" ಎಂದು ಪೂರಿ ಜಗನ್ನಾಥ್ ನಕ್ಕಿದ್ದಾರೆ.

"ಬಳಿಕ ಆಕೆಗೆ ಹೇಳಿದೆ. ಇನ್ನು ಮುಂದೆ ಭೇಟಿ ಆಗುವುದು ಬೇಡ. ಮದುವೆ ಆಗುವಂತಿದ್ದರೆ ಹೇಳು. ಸುಮ್ಮನೆ ಈ ರೀತಿ ಭೇಟಿ ಮಾಡೊದೆಲ್ಲಾ ಬೇಡ ಎಂದೆ. ಕೊನೆಗೆ ಮನೆಯಲ್ಲಿ ಒಪ್ಪಿಸಿ ಮದುವೆ ಮಾಡಿಕೊಂಡೆವು. ಅವತ್ತು ಹೇಗೋ ನನ್ನ ಬಳಿ ಇದ್ದ ಹಣ ಬಿಲ್‌ಗೆ ಸರಿಹೋಯಿತು. ನನಗೆ ಸರಿಯಾಗಿ ಹಣವಿಲ್ಲದ ಸಮಯದಲ್ಲಿ ಆಕೆ ಹೀಗೆ ತಿನ್ನುತ್ತಾಳೆ ಎಂದು ನೋಡಿ ಆತಂಕವಾಗಿತ್ತು" ಎಂದಿದ್ದಾರೆ.

ನನಗೆ ಆ ಸಮಯದಲ್ಲಿ ಸರಿಯಾದ ಅವಕಾಶಗಳು ಇರಲಿಲ್ಲ. 'ನಿನ್ನೆ ಪೆಳ್ಳಾಡತಾ' ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೆ. ಲಾವಣ್ಯ ನನ್ನನ್ನು ಮದುವೆ ಆಗುತ್ತೇನೆ ಅಂದಾಗ ನನ್ನ ಬಳಿ ಕೇವಲ 200 ರೂ. ಇತ್ತು. ನಾನು ನಿರ್ದೇಶಕ ಆಗಬೇಕು, ಆಗುತ್ತಿನೋ ಇಲ್ಲವೋ ಗೊತ್ತಿಲ್ಲ ಎಂದೆ. ಆದರೂ ಆಕೆ ಒಪ್ಪಿದಳು. ನನಗೆ ನೀನೇ ಬೇಕು ಎಂದು ಬಂದಳು. ಸ್ನೇಹಿತರೇ ನನ್ನ ಮದುವೆಗೆ ವ್ಯವಸ್ಥೆ ಮಾಡಿದರು. ಒಬ್ಬರು ಪುರೋಹಿತರಿಗೆ ಹಣ ಕೊಟ್ಟರು, ಮತ್ತೊಬ್ಬರು ಬಟ್ಟೆಗೆ, ಇನ್ನೊಬ್ಬರು ಕೂಲ್‌ಡ್ರಿಂಕ್ಸ್ ತಂದರು. ಹೀಗೆ ನಮ್ಮ ಮದುವೆ ನಡೆದಿತ್ತು" ಎಂದು ಪೂರಿ ಜಗನ್ನಾಥ್ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಪೂರಿ ಜಗನ್ನಾಥ್ ಕನ್ನಡದಲ್ಲಿ 'ಯುವರಾಜ', 'ಅಪ್ಪು', 'ರೋಗ್' ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. 'ಬದ್ರಿ', 'ಶಿವಮಣಿ', 'ಪೋಕಿರಿ', 'ಬ್ಯುಸಿನೆಸ್‌ಮ್ಯಾನ್' ಹೀಗೆ ಹಲವು ಸಿನಿಮಾಗಳನ್ನು ಕಟ್ಟಿಕೊಟ್ಟಿದ್ದಾರೆ.

More from Filmibeat

English summary
Puri Jagannadh recalls funny moments about his love story
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X