For Quick Alerts
  ALLOW NOTIFICATIONS  
  For Daily Alerts

  ತೆಲುಗಿನ ಖ್ಯಾತ ಹಾಸ್ಯ ನಟ ವೇಣುಗೋಪಾಲ್ ನಿಧನ

  |

  ತೆಲುಗು ಚಿತ್ರರಂಗದ ಖ್ಯಾತ ಹಾಸ್ಯನಟ ಕೊಸುರಿ ವೇಣುಗೋಪಾಲ್ ನಿಧನ ಹೊಂದಿದ್ದಾರೆ. ಕೋವಿಡ್-19 ನಿಂದ ಬಳಲುತ್ತಿದ್ದ ವೇಣುಗೋಪಾಲ್ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.

  ವೇಣುಗೋಪಾಲ್ ನಿಧನಕ್ಕೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸಿದ್ದಾರೆ. ಕಳೆದ ಕೆಲವು ದಿನಗಳಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಣುಗೋಪಾಲ್ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

  ಚಿತ್ರೀಕರಣ ವೇಳೆ ಕುಸಿದು ಬಿದ್ದು ಮಲಯಾಳಂ ನಟ ನಿಧನಚಿತ್ರೀಕರಣ ವೇಳೆ ಕುಸಿದು ಬಿದ್ದು ಮಲಯಾಳಂ ನಟ ನಿಧನ

  ವೇಣುಗೋಪಾಲ್ ಪಶ್ಚಿಮ ಗೋದಾವರಿಯ ನರಸಾಪುರದವರು. ಚಿತ್ರರಂಗಕ್ಕೆ ಕಾಲಿಡುವ ಮೊದಲು ಭಾರತದ ಆಹಾರ ನಿಗಮದಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಕೆಲಸದ ಜೊತೆಗೆ ಸಿನಿಮಾಗಳಲ್ಲಿಯೂ ಅಭಿನಯಿಸುತ್ತಿದ್ದರು. ನಿವೃತ್ತರಾದ ಬಳಿಕ ನಟನೆಯಲ್ಲಿ ಸಕ್ರೀಯರಾಗಿದ್ದರು. ನಾಟಕ ಮತ್ತು ಸಿನಿಮಾದ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡಿದ್ದ ವೇಣುಗೋಪಾಲ್ ನಾಟಕ ಸ್ಪರ್ಧೆಗಳಲ್ಲಿಯೂ ಭಾಗವಹಿಸುತ್ತಿದ್ದರು.

  'ಮರ್ಯಾದ ರಾಮಣ್ಣ', 'ಚಲೋ', 'ಪಿಲ್ಲಾ ಜಮೀನ್ದಾದ್', ಸೇರಿದಂತೆ ಸಾಕಷ್ಟು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಮರ್ಯಾದ ರಾಮಣ್ಣ' ಸಿನಿಮಾ ವೇಣುಗೋಪಾಲ್ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟ ಸಿನಿಮಾವಾಗಿದೆ. ಸಂದರ್ಶನವೊಂದರಲ್ಲಿ ವೇಣುಗೋಪಾಲ್ 'ಮರ್ಯಾದ ರಾಮಣ್ಣ ಸಿನಿಮಾದಿಂದ ನಟನಾಗಿ ಗುರುಸಿಕೊಂಡಿದ್ದೇನೆ' ಎಂದು ಹೇಳಿದ್ದಾರೆ.

  English summary
  Tollywood famous comedian Kosuri Venugopal passes away due to Coronavirus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X