twitter
    For Quick Alerts
    ALLOW NOTIFICATIONS  
    For Daily Alerts

    ತೆಲುಗಿನ ಖ್ಯಾತ ಗೀತರಚನೆಕಾರ ವೆನ್ನಲಕಂಟಿ ಹೃದಯಾಘಾತದಿಂದ ನಿಧನ

    |

    ತೆಲುಗಿನ ಖ್ಯಾತ ಗೀತರಚನೆಕಾರ ಮತ್ತು ಸಂಭಾಷಣೆಗಾರ ವೆನ್ನಲಕಂಟಿ ರಾಜೇಶ್ವರ ಪ್ರಸಾದ್ ಮಂಗಳವಾರ ಚೆನ್ನೈನ ತನ್ನ ನಿವಾಸದಲ್ಲಿ ನಿಧರಾಗಿದ್ದಾರೆ. 64 ವರ್ಷದ ವೆನ್ನಲಕಂಟಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.

    3 ದಶಕಗಳ ವೃತ್ತಿ ಜೀವನದಲ್ಲಿ ವೆನ್ನಲಕಂಟಿ ಸುಮಾರು 2000ಕ್ಕೂ ಹೆಚ್ಚು ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. 300 ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದಾರೆ. ತೆಲುಗು ಸಿನಿಮಾರಂಗದಲ್ಲಿ ಪ್ರಸಿದ್ಧಿ ಗಳಿಸಿದ್ದ ವೆನ್ನಲಕಾಂತಿ1957ರಲ್ಲಿ ನೆಲ್ಲೂರಿನಲ್ಲಿ ಜನಿಸಿದ್ದರು. ಚಿಕ್ಕ ವಯಸ್ಸಿನಲ್ಲೇ ವೆನ್ನಲಕಂಟಿ ಕವನ ಬರೆಯಲು ಪ್ರಾರಂಭಿಸಿದ್ದರು

    ತೆಲುಗಿನ ಖ್ಯಾತ ನಟ ನರ್ಸಿಂಗ್ ಯಾದವ್ ನಿಧನತೆಲುಗಿನ ಖ್ಯಾತ ನಟ ನರ್ಸಿಂಗ್ ಯಾದವ್ ನಿಧನ

    1986ರಲ್ಲಿ, ವೆನ್ನಲಕಂಟಿ 'ಶ್ರೀ ರಾಮಚಂದ್ರಡು' ಚಿತ್ರದ ಹಾಡುಗಳಿಗೆ ಸಾಹಿತ್ಯ ರಚಿಸುವ ಮೂಲಕ ಗೀತರಚನೆಕಾರರಾಗಿ ಪದಾರ್ಪಣೆ ಮಾಡಿದರು. ವೆನ್ನಲಕಂಟಿ ರಚನೆಯ ಅನೇಕ ಹಾಡುಗಳು ಸೂಪರ್ ಹಿಟ್ ಆಗಿವೆ. ಆದಿತ್ಯ 369 ಸಿನಿಮಾ ಬಳಿಕ ಅವರ ಖ್ಯಾತಿ ಮತ್ತಷ್ಟು ಹೆಚ್ಚಾಯಿತು. ಘರಾನಾ ಬುಲ್ಲೊಡು, ಸಮರಸಿಂಹರೆಡ್ಡಿ, ಕ್ರಿಮಿನಲ್, ತಕ್ಕರಿ ಡೊಂಗಾ ಸೇರಿದಂತೆ ಅನೇಕ ಪ್ರಸಿದ್ಧ ಸಿನಿಮಾಗಳಿಗೆ ಹಾಡನ್ನು ಬರೆದಿದ್ದಾರೆ.

    Telugu Famous Lyricist Vennelakanti Passes away due to cardiac arrest

    Recommended Video

    ಅಕ್ಕ ಪಕ್ಕದ ರಾಜ್ಯದಲ್ಲಿ ಆಗುತ್ತೆ ಅಂದ್ರೆ ನಮ್ಮ ರಾಜ್ಯದಲ್ಲಿ ಯಾಕಾಗಲ್ಲ..? | Filmibeat Kannada

    ವೆನ್ನಲಕಂಟಿ ಕೊನೆಯದಾಗಿ ನಟಿ ಕೀರ್ತಿ ಸುರೇಶ್ ನಟನೆಯ ಪೆಂಗ್ವಿನ್ ಸಿನಿಮಾಗೆ ಸಾಹಿತ್ಯ ರಚಿಸಿದ್ದಾರೆ. ಈ ಸಿನಿಮಾ ಕಳೆದ ವರ್ಷ ಒಟಿಟಿಯಲ್ಲಿ ರಿಲೀಸ್ ಆಗಿದೆ. ವೆನ್ನಲಕಂಟಿ ನಿಧನಕ್ಕೆ ತೆಲುಗು ಸಿನಿಮಾರಂಗ ಕಂಬನಿ ಮಿಡಿದಿದೆ. ವೆನ್ನಲಕಂಟಿ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಇಬ್ಬರು ಮಕ್ಕಳು ಸಹ ಗೀತರಚನೆಕಾರರಾಗಿ ಗುರುತಿಸಿಕೊಂಡಿದ್ದಾರೆ.

    English summary
    Telugu Famous Lyricist Vennelakanti Passes away due to cardiac arrest.
    Wednesday, January 6, 2021, 9:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X