ಲಾಕ್ ಡೌನ್ ನಲ್ಲಿ 2ನೇ ಮದುವೆಯಾದ ತೆಲುಗಿನ ಖ್ಯಾತ ನಿರ್ಮಾಪಕ

By ಫಿಲ್ಮ್ ಡೆಸ್ಕ್

ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ದಿಲ್ ರಾಜು ಎರಡನೆ ಬಾರಿ ಹಸೆಮಣೆ ಏರಿದ್ದಾರೆ. ಲಾಕ್ ಡೌನ್ ನಡುವೆಯೂ ದಿಲ್ ರಾಜು ಸರಳವಾಗಿ ನಿಜಾಮಾಬಾದ್ ನ ವೆಂಕಟೇಶ್ವರ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ತೀರಾ ಗೌಪ್ಯವಾಗಿ ನಡೆದ ಮದುವೆ ಸಮಾರಂಭದಲ್ಲಿ ಕುಟುಂಬದವರು ಮತ್ತು ತೀರ ಆಪ್ತರು ಮಾತ್ರ ಭಾಗಿಯಾಗಿದ್ದರು.

Recommended Video

ಅಮ್ಮನಿಗಾಗಿ ಅಡುಗೆಮನೆ ಸೇರಿಕೊಂಡ ನಿರ್ದೇಶಕ ರಘುರಾಮ್..! | Raghuram

ಮದುವೆಯಲ್ಲಿ ಕೇವಲ 10 ಮಂದಿ ಮಾತ್ರ ಭಾಗಿಯಾಗಿ ನವ ಜೋಡಿಗೆ ಶುಭಹಾರೈಸಿದ್ದಾರೆ. ಕೊರೊನಾ ಲಾಕ್ ಡೌನ್ ಕಾರಣ ಚಿತ್ರರಂಗದ ಗಣ್ಯರು ಭಾಗಿಯಾಗಿಲ್ಲ. ದಿಲ್ ರಾಜು ಎರಡನೆ ಮದುವೆ ಬಗ್ಗೆ ಎಲ್ಲಿಯೂ ಮಾಹಿತಿ ಬಹಿರಂಗ ಪಡಿಸಿರಲಿಲ್ಲ. ಆದರೀಗ ಲಾಕ್ ಡೌನ್ ನಲ್ಲಿ ದಿಢೀರ್ ಮದುವೆಯಾಗಿ ಶಾಕ್ ನೀಡಿದ್ದಾರೆ. ಮುಂದೆ ಓದಿ..

ದಿಲ್ ರಾಜು ಕೈ ಹಿಡಿದ ಹುಡುಗಿ ಯಾರು?

ದಿಲ್ ರಾಜು ಕೈ ಹಿಡಿದ ಹುಡುಗಿ ಯಾರು?

ದಿಲ್ ರಾಜು ಕೈ ಹಿಡಿದ ಪತ್ನಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಮೂಲಗಳ ಪ್ರಕಾರ ದಿಲ್ ರಾಜು ಪತ್ನಿಯ ಹೆಸರು ತೇಜಸ್ವಿನಿ ಅಕಾ ವೈಘಾ ರೆಡ್ಡಿ ಎಂದು ಹೇಳಲಾಗುತ್ತಿದೆ. ಆದರೆ ದಿಲ್ ರಾಜು ಸಹ ಎರಡನೆ ಪತ್ನಿಯ ಬಗ್ಗೆ ಯಾವುದೆ ಮಾಹಿತಿ ಬಹಿರಂಗ ಪಡಿಸಿಲ್ಲ.

ಮದುವೆ ಫೋಟೋ ವೈರಲ್

ಮದುವೆ ಫೋಟೋ ವೈರಲ್

ಮದುವೆ ನಂತರ ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿರ್ಮಾಪಕ ದಿಲ್ ರಾಜು ಅವರೆ ಮದುವೆ ಫೋಟೋವನ್ನು ಶೇರ್ ಮಾಡಿದ್ದಾರೆ. ಆ ನಂತರ ಚಿತ್ರರಂಗದ ಗಣ್ಯರು ಮತ್ತು ಸ್ನೇಹಿತರು ಸಾಮಾಜಿಕ ಜಾಲತಾಣದ ಮೂಲಕವೇ ಶುಭಕೋರುತ್ತಿದ್ದಾರೆ.

ಮೊದಲ ಪತ್ನಿಯ ಬಗ್ಗೆ

ಮೊದಲ ಪತ್ನಿಯ ಬಗ್ಗೆ

ಅಂದ್ಹಾಗೆ ದಿಲ್ ರಾಜು ಮೊದಲ ಪತ್ನಿ ಅನಿತಾ 2017ರಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅನಿತಾ ಸಹ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದು, ಸಿನಿಮಾ ವಿತರಕರಾಗಿ ಗುರುತಿಸಿಕೊಂಡಿದ್ದರು. ಪತ್ನಿಯನ್ನು ಕಳೆದುಕೊಂಡು 3 ವರ್ಷದ ನಂತರ ಈಗ ಎರಡನೆ ಮದುವೆಯಾಗುವ ಮೂಲಕ ಸಂತೋಷದ ಜೀವನಕ್ಕೆ ಕಾಲಿಟ್ಟಿದ್ದಾರೆ.

ದಿಲ್ ರಾಜು ಬಳಿ ಇರುವ ಸಿನಿಮಾ

ದಿಲ್ ರಾಜು ಬಳಿ ಇರುವ ಸಿನಿಮಾ

ದಿಲ್ ರಾಜು ತೆಲುಗಿನ ಖ್ಯಾತ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಬಿಗ್ ಬಜೆಟ್ ಸಿನಿಮಾಗಳನ್ನು ನೀಡಿರುವ ದಿಲ್ ರಾಜು ಬಳಿ ಸಾಕಷ್ಟು ಸಿನಿಮಾಗಳಿವೆ. ಸದ್ಯ ಪವನ್ ಕಲ್ಯಾಣ್ ಅಭಿನಯದ ವಕೀಲ್ ಸಾಬ್ ಸಿನಿಮಾಗೆ ದಿಲ್ ರಾಜು ನಿರ್ಮಾಣದಲ್ಲಿ ಮೂಡಿ ಬರುತ್ತಿದೆ. ಇದು ಬಾಲಿವುಡ್ ನ ಪಿಂಕ್ ಸಿನಿಮಾದ ರಿಮೇಕ್ ಆಗಿದೆ.

More from Filmibeat

English summary
Telugu Famous producer Dil Raju gets second married in small ceremony.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X