ಹಾಲಿವುಡ್ ಗೆ ಟಾಲಿವುಡ್ ಸೆಡ್ಡು ; ಹನುಮಾನ್ ನಂತರ ಆಂಧ್ರದಲ್ಲಿ ಮತ್ತೊಂದು ಅಚ್ಚರಿ, ವಿಸ್ಮಯ ..!
ಈ ವರ್ಷದ ಆರಂಭದಲ್ಲಿ ಪ್ರಶಾಂತ್ ವರ್ಮಾ ಅಭಿನಯದ 'ಹನುಮಾನ್' ಸಿನಿಮಾ ಜನರನ್ನು ಬೆಚ್ಚಿ ಬೀಳಿಸಿತ್ತು. ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಸೂಪರ್ ಹೀರೋ ಚಿತ್ರದ ದೃಶ್ಯಗಳನ್ನು ನೋಡಿ ಜನ ಬೆಕ್ಕಸ ಬೆರಗಾಗಿದ್ದರು. ಚಿತ್ರವನ್ನ ಮುಗಿ ಬಿದ್ದು ನೋಡಿದರು.
ಹನುಮಾನ್ ಚಿತ್ರದಿಂದ ತೆಲುಗು ಚಿತ್ರರಂಗಕ್ಕೆ ಹೊಸ ಚೈತನ್ಯ ಬಂದಿದ್ದು ಸುಳ್ಳಲ್ಲ. ಹೆಚ್ಚು ಕಡಿಮೆ 340 ಕೋಟಿಯನ್ನ ಗಳಿಸಿ ಚರಿತ್ರೆ ಬರೆದ ಸಿನಿಮಾ ಇದು. ಆದರೆ ಈಗ ಹನುಮಾನ್ ಚಿತ್ರವನ್ನೂ ಸೆಡ್ಡು ಹೊಡೆಯುವಂತಹ ಸಿನಿಮಾವನ್ನ, ತೆಲುಗು ಉದ್ಯಮ ನಿರ್ಮಾಣ ಮಾಡಿದೆ. ಆ ಚಿತ್ರದ ಹೆಸರು ಗಾಮಿ. ಸದ್ಯಕ್ಕೆ ಎಲ್ಲೆಡೆ ಈ ಚಿತ್ರದ ಚರ್ಚೆ ನಡೆಯುತ್ತಿದೆ. ಚಿತ್ರದ ಟ್ರೇಲರ್ ಕಂಡು ದಕ್ಷಿಣ ಹಾಗೂ ಉತ್ತರದ ಚಿತ್ರರಂಗ ನಿಬ್ಬೇರಗಾಗಿದೆ

ಯಾವ ಹಾಲಿವುಡ್ ಚಿತ್ರಕ್ಕಿಂತ ಗಾಮಿ ಚಿತ್ರದ ಟ್ರೇಲರ್ ಕಡಿಮೆ ಇಲ್ಲಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಸದ್ಯಕ್ಕೆ ಕೇಳಿ ಬರುತ್ತಿದೆ. ಇನ್ನೂ ಟ್ರೇಲರ್ ಬಾಹುಬಲಿ ಪ್ರಭಾಸ್ ಅವರನ್ನೂ ಕೂಡ ಪ್ರಭಾವಿತಗೊಳಿಸಿದೆ. ಹೀಗಾಗಿಯೇ ಇಡೀ ತಂಡಕ್ಕೆ ಶುಭಾಶಯವನ್ನ ಕೋರಿರುವ ಪ್ರಭಾಸ್ ಚಿತ್ರವನ್ನ ಇದೇ ಮಾರ್ಚ್ 08ರಂದು ನೋಡಲು ಕಾತುರದಿಂದ ಕಾಯುತ್ತಿರುವುದಾಗಿ ಹೇಳಿದ್ದಾರೆ

06 ವರ್ಷದ ಅವಿರತ ಶ್ರಮ
ಇವತ್ತು ಟಾಕ್ ಆಫ್ ದಿ ಟೌನ್ ಆಗಿರುವ ಗಾಮಿ ಚಿತ್ರವನ್ನ ಚಿತ್ರದ ನಿರ್ದೇಶಕ ವಿದ್ಯಾದರ್ ಕಾಗಿತಾ ಶುರು ಮಾಡಿದ್ದು 2018ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ಬರೋಬ್ಬರಿ 06 ವರ್ಷ ಈ ಚಿತ್ರಕ್ಕೆ ವಿದ್ಯಾದರ್ ಹಗಲಿರುಳು ಬೆವರು ಸುರಿಸಿದ ಫಲ ಸದ್ಯಕ್ಕೆ ಕಣ್ಮುಂದೆ ಇದೆ. ತೆಲುಗು ಚಿತ್ರರಂಗದಲ್ಲಿಯೇ ಗಾಮಿ ಹೊಸದೊಂದು ಮೈಲಿಗಲ್ಲಾಗಲಿದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ.
ಅಘೋರಿಯಾದ ವಿಶ್ವಕ್ ಸೇನ್
ತಮ್ಮ ಚಿತ್ರ ಹಾಗೂ ಪಾತ್ರಗಳಿಂದ ತೆಲುಗು ಚಿತ್ರರಂಗದಲ್ಲಿ ತಮ್ಮದೇ ಸ್ಥಾನವನ್ನ ಹೊಂದಿರುವ ವಿಶ್ವಕ್ ಸೇನ್ ಗಾಮಿ ಚಿತ್ರದ ಆಕರ್ಷಣೆ. ಅಘೋರಿ ಪಾತ್ರದಲ್ಲಿ ಇವರಿಲ್ಲಿ ನಿಮಗೆ ಕಾಣಸಿಗಲಿದ್ದಾರೆ. ಚಾಂದಿನಿ ಚೌಧರಿ, ಎಂಜಿ ಅಭಿನಯ, ಮೊಹಮ್ಮದ್ ಸಮದ್, ಹರಿಕಾ ಪೇಡಾಡಾ ಮುಂತಾದವರು ಚಿತ್ರದಲ್ಲಿದ್ದಾರೆ. ಸದ್ಯಕ್ಕೆ ಗಾಮಿ ಚಿತ್ರದ ಟ್ರೇಲರ್ ಎಲ್ಲರ ಗಮನ ಸೆಳೆದಿದೆ. ಬಣ್ಣದ ಲೋಕದಲ್ಲಿ ಹೊಸದೊಂದು ಸಂಚಲನ ಸೃಷ್ಟಿಸಿದೆ. ಮಾರ್ಚ್ 08ಕ್ಕೆ ಚಿತ್ರ ಬಿಡುಗಡೆಯಾಗಲಿದೆ.


Click it and Unblock the Notifications











