For Quick Alerts
  ALLOW NOTIFICATIONS  
  For Daily Alerts

  ಹಿರಿಯ ಸಿನಿಮಾ PRO, ನಿರ್ಮಾಪಕ ರಾಜು ನಿಧನಕ್ಕೆ ಕಂಬನಿ ಮಿಡಿದ ಟಾಲಿವುಡ್

  |

  ತೆಲುಗಿನ ಹಿರಿಯ ಸಿನಿಮಾ PRO ಮತ್ತು ನಿರ್ಮಾಪಕ ಬಿ.ಎ ರಾಜು ಹೃದಯಾಘಾತದಿಂದ ನಿಧನಹೊಂದಿದ್ದಾರೆ. ಈ ಬಗ್ಗೆ ಬಿ.ಎ ರಾಜು ಪುತ್ರ ಮತ್ತು ನಿರ್ದೇಶಕ ಶಿವ ಕುಮಾರ್ ಖಚಿತಪಡಿಸಿದ್ದಾರೆ.

  1000ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿರುವ ಬಿ.ಎ ರಾಜು ನಿಧನಕ್ಕೆ ಇಡೀ ಟಾಲಿವುಡ್ ಕಂಬನಿ ಮಿಡಿದಿದೆ. ಚಿರಂಜೀವಿ, ಜೂ.ಎನ್ ಟಿ ಆರ್, ಮಹೇಶ್ ಬಾಬು, ಸಮಂತಾ ಅಕ್ಕಿನೇನಿ, ನಾಗಾರ್ಜುನ್, ಪ್ರಭಾಸ್ ಸೇರಿದಂತೆ ಅನೇಕ ಸಿನಿ ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸಿದ್ದಾರೆ.

  ಪಿಆರ್ ಕೆಲಸದ ಜೊತೆಗೆ ರಾಜು ಲವ್ಲಿ, ವೈಸಾಖಮ್ ಚಂಟಿಗಾಡು, ಗುಂಡಮ್ಮ ಗೌರಿ ಮನವಾಡು ಮತ್ತು ಪ್ರೇಮಿಕುಲು ಸೇರಿದಂತೆ ಮುಂತಾದ ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ. ಬಿ.ಎ ರಾಜು 2018ರಲ್ಲಿ ಪತ್ನಿ ಬಿ ಜಯಾ ಅವರನ್ನು ಕಳೆದುಕೊಂಡಿದ್ದರು. ಹಿರಿಯ PRO ನಿಧನಕ್ಕೆ ಇಡೀ ಟಾಲಿವುಡ ಕಂಬನಿ ಮಿಡಿದಿದೆ. ಸ್ಟಾರ್ ಕಲಾವಿದರು ರಾಜು ಜೊತೆಗಿನ ನೆನಪನ್ನು ಹಂಚಿಕೊಳ್ಳುತ್ತಿದ್ದಾರೆ. ಮುಂದೆ ಓದಿ..

  ನಟ ಚಿರಂಜೀವಿ

  ನಟ ಚಿರಂಜೀವಿ

  ನಟ ಚಿರಂಜೀವಿ ಟ್ವೀಟ್ ಮಾಡಿ, ಬಿ.ಎ ರಾಜು ಅವರ ಹಠಾತ್ ನಿಧನದ ಸುದ್ದಿ ಆಘಾತತಂದಿದೆ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಆ ದೇವರು ನೀಡಲಿ ಎಂದು ಹೇಳಿದ್ದಾರೆ.

  ಮಹೇಶ್ ಬಾಬು

  ಮಹೇಶ್ ಬಾಬು

  'ಬಿ.ಎ ರಾಜ್ ಅವರ ಹಠಾತ್ ನಿಧನದ ಸುದ್ದಿ ಆಘಾತ ತಂದಿದೆ. ನನ್ನ ಬಾಲ್ಯದಿಂದನೂ ನನಗೆ ಅವರು ಗೊತ್ತು. ನಾವು ಅನೇಕ ವರ್ಷಗಳಿಂದ ಒಟ್ಟಿಗೆ ಪಯಣ ಮಾಡಿದ್ದೇವೆ. ಅವರ ಜೊತೆ ತುಂಬಾ ಹತ್ತಿರದಿಂದ ಕೆಲಸ ಮಾಡಿದ್ದೇನೆ' ಎಂದು ನಟ ಮಹೇಶ್ ಬಾಬು ಹೇಳಿದ್ದಾರೆ.

  ನಟಿ ಸಮಂತಾ

  ನಟಿ ಸಮಂತಾ

  ನಟಿ ಸಮಂತಾ ಟ್ವೀಟ್ ಮಾಡಿ, 'ನನ್ನ ಮೊದಲ ಸಿನಿಮಾದಿಂದನೂ ಅವರು ನನ್ನ ಜೀವನದಲ್ಲಿ ತುಂಬಾ ಸಕಾರಾತ್ಮಕತೆ ಹೊಂದಿದ್ದಾರೆ. ಮೊದಲ ಚಿತ್ರದಿಂದ ಇಲ್ಲಿವರೆಗೂ ಬಿಡುಗಡೆಯಾದ ಪ್ರತಿಯೊಂದು ಚಿತ್ರ ಹಿಟ್ ಅಥವಾ ಫ್ಲಾಪ್ ಆಗಿರಬಹುದು ಯಾವಾಗಲು ಪ್ರೀತಿಯ ಮಾತುಗಳನ್ನು ಆಡುತ್ತಿದ್ರಿ. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ' ಎಂದು ಹೇಳಿದ್ದಾರೆ.

  ಬಿ.ಎ ರಾಜು ಬಗ್ಗೆ ಪ್ರಭಾಸ್ ಟ್ವೀಟ್

  ಬಿ.ಎ ರಾಜು ಬಗ್ಗೆ ಪ್ರಭಾಸ್ ಟ್ವೀಟ್

  'ಹಿರಿಯ ಪತ್ರಕರ್ತ ಮತ್ತು ಪಿ ಆರ್ ಒ ಬಿ ಎ ರಾಜು ಅವರ ಹಠಾತ್ ನಿಧನದಿಂದ ಆಘಾತಗೊಂಡಿದ್ದೇನೆ. ನನ್ನ ಕುಟುಂಬದ ಸದಸ್ಯರ ಹಾಗೆ ಇದ್ದರು. ನಾನು ಅವರೊಂದಿಗೆ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ' ಎಂದು ಪ್ರಭಾಸ್ ಹೇಳಿದ್ದಾರೆ.

  ಕಿರಣ್ ರಾಜ್ ಮನವಿಯನ್ನು ಸ್ವೀಕರಿಸುತ್ತಾರಾ ಸಿಎಂ ಯಡಿಯೂರಪ್ಪ ?? | Filmibeat Kannada
  ನಟ ಜೂ.ಎನ್ ಟಿ ಆರ್

  ನಟ ಜೂ.ಎನ್ ಟಿ ಆರ್

  'ಅತ್ಯಂತ ಹಿರಿಯ ಸಿನಿಮಾ ಪತ್ರಕರ್ತರು ಮತ್ತು ಪಿ ಆರ್ ಒ ಆಗಿ ಸಿನಿಮಾರಂಗಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ನನ್ನ್ ಆರಂಭಿಕ ದಿನಗಳಿಂದ ನಾನು ಅವರನ್ನು ತಿಳಿದಿದ್ದೇನೆ. ತುಂಬಾ ದೊಡ್ಡ ನಷ್ಟವಿದು. ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಜೂ.ಎನ್ ಟಿ ಆರ್ ಟ್ವೀಟ್ ಮಾಡಿದ್ದಾರೆ.

  English summary
  Telugu film PRO and Producer BA Raju passes away. Chirajeevi, Mahesh Babu, Jr.NTR, Samntha and other celebs mourn his desmise.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X