For Quick Alerts
  ALLOW NOTIFICATIONS  
  For Daily Alerts

  ನಟ ಶ್ರೀಹರಿ ಕುರಿತು ಹಳೆಯ ನೆನಪು ಮೆಲುಕು ಹಾಕಿದ ಬಾಲಕೃಷ್ಣ

  |

  ನಟ ಶ್ರೀಹರಿ ನಿಧನರಾಗಿ ಏಳು ವರ್ಷವಾಯಿತು. 2013 ರಲ್ಲಿ ಲಿವರ್‌ ಗೆ ಸಂಬಂಧಿಸಿದ ಖಾಯಿಲೆಯಿದ ನಿಧನರಾದರು ಖ್ಯಾತ ನಟ ಶ್ರೀಹರಿ. ಕನ್ನಡ-ತೆಲುಗು-ತಮಿಳು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದ ಶ್ರೀಹರಿ, ತೆಲುಗು ಭಾಷೆಯಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ತೆಲುಗು ಸಿನಿಮಾ ಉದ್ಯಮದಲ್ಲಿ ಹಲವು ಗೆಳೆಯರನ್ನು ಸಹ ಹೊಂದಿದ್ದರು.

  ಶ್ರೀಹರಿ ನಿಧನವಾಗಿ 7 ವರ್ಷವಾದ ನಂತರೂ ತೆಲುಗು ಸಿನಿ ಉದ್ಯಮದ ಅವರ ಗೆಳೆಯರು ಅವರನ್ನು ನೆನಪಿಸಿಕೊಳ್ಳುತ್ತಾರೆ. ಇತ್ತೀಚೆಗೆ ಖ್ಯಾತ ನಟ, ರಾಜಕಾರಣಿ ಬಾಲಕೃಷ್ಣ, ಶ್ರೀಹರಿ ಕುರಿತು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

  ನಟ ಶ್ರೀಹರಿ, ಬಾಲಕೃಷ್ಣಗೆ ಅತ್ಯಾಪ್ತ ಗೆಳೆಯರಾಗಿದ್ದರು. ಇತ್ತೀಚೆಗಿನ ಕಾರ್ಯಕ್ರಮವೊಂದರಲ್ಲಿ ನಟ ಬಾಲಕೃಷ್ಣ, ಶ್ರೀಹರಿ ಕುರಿತು ಭಾವುಕವಾಗಿ ಮಾತನಾಡಿದರು, ಅವರೊಂದಿಗೆ ಕಳೆದ ಸಮಯವನ್ನು ಮೆಲುಕು ಹಾಕಿದರು.

  ನರ್ತನಶಾಲಾ ಸಿನಿಮಾದಲ್ಲಿ ಶ್ರೀಹರಿ ಭೀಮ

  ನರ್ತನಶಾಲಾ ಸಿನಿಮಾದಲ್ಲಿ ಶ್ರೀಹರಿ ಭೀಮ

  'ನರ್ತನಶಾಲಾ ಸಿನಿಮಾದಲ್ಲಿ ನಟ ಶ್ರೀಹರಿಗೆ ಭೀಮನ ಪಾತ್ರ ನೀಡಲಾಗಿತ್ತು. ಆ ಸಿನಿಮಾಕ್ಕೆ ಆಡಿಶನ್ ಮಾಡಿದ ಕೆಲವರಿಗೆ ಉತ್ತಮ ದೈಹಿಕ ಅಂಗಸೌಷ್ಟವ ಇತ್ತು ಆದರೆ ಪ್ರತಿಭೆ ಇರಲಿಲ್ಲ, ಆದರೆ ಶ್ರೀಹರಿಗೆ ಎರಡೂ ಇತ್ತು, ಹಾಗಾಗಿ ಅವರನ್ನು ಭೀಮನ ಪಾತ್ರಕ್ಕೆ ಆಯ್ಕೆ ಮಾಡಲಾಗಿತ್ತು' ಎಂದಿದ್ದಾರೆ ಬಾಲಕೃಷ್ಣ.

  ಬಾಲಕೃಷ್ಣ ಚೆನ್ನಾಗಿ ಪ್ರತಿಭೆ ಅಳೆಯುತ್ತಾರೆ: ಶ್ರೀಹರಿ ಹೇಳಿದ್ದರಂತೆ

  ಬಾಲಕೃಷ್ಣ ಚೆನ್ನಾಗಿ ಪ್ರತಿಭೆ ಅಳೆಯುತ್ತಾರೆ: ಶ್ರೀಹರಿ ಹೇಳಿದ್ದರಂತೆ

  ಯಾರೇ ಹೊಸ ನಟರು ಶ್ರೀಹರಿಯನ್ನು ಸಂಪರ್ಕಿಸಿದಾಗ ಅವರನ್ನು ಬಾಲಕೃಷ್ಣ ಅನ್ನು ಸಂಪರ್ಕಿಸಲು ಹೇಳುತ್ತಿದ್ದರಂತೆ ನಟ ಶ್ರೀಹರಿ. 'ಬಾಲಕೃಷ್ಣ ಚೆನ್ನಾಗಿ ಪ್ರತಿಭಾವಂತರನ್ನು ಅಳೆಯುತ್ತಾರೆ, ಅವರು ಒಪ್ಪಿದವರು ಸ್ಟಾರ್ ಆಗುವುದು ಖಂಡಿತ' ಎನ್ನುತ್ತಿದ್ದರಂತೆ ಶ್ರೀಹರಿ.

  ಶ್ರೀಹರಿ ಸ್ಟಾರ್ ಆಗಲು ಬಾಲೃಕೃಷ್ಣ ಕಾರಣ

  ಶ್ರೀಹರಿ ಸ್ಟಾರ್ ಆಗಲು ಬಾಲೃಕೃಷ್ಣ ಕಾರಣ

  'ನಾನು ಸ್ಟಾರ್ ಆಗಲು, ಈ ಮಟ್ಟಿಗೆ ಉತ್ತಮ ಕಲಾವಿದನಾಗಲು ಬಾಲೃಕೃಷ್ಣ ಕಾರಣ ಎಂದು ಹಲವು ಕಾರ್ಯಕ್ರಮಗಳಲ್ಲಿ ಶ್ರೀಹರಿ ಹೇಳಿಕೊಂಡಿದ್ದರು' ಎಂದಿದ್ದಾರೆ ಬಾಲೃಕೃಷ್ಣ.

  Mahabharata ಧಾರವಾಹಿ ವೀಕ್ಷಕರಿಗೆ ಕಹಿ ಸುದ್ದಿ | Filmibeat Kannada
  ರಾಣಾ ಸಿನಿಮಾ ಒಪ್ಪಿಕೊಳ್ಳುವಂತೆ ಬಾಲೃಷ್ಣ ಸಲಹೆ

  ರಾಣಾ ಸಿನಿಮಾ ಒಪ್ಪಿಕೊಳ್ಳುವಂತೆ ಬಾಲೃಷ್ಣ ಸಲಹೆ

  'ರಾಣಾ' ಸಿನಿಮಾದಲ್ಲಿ ಕೇಶವ ಪಾತ್ರವನ್ನು ಒಪ್ಪಿಕೊಳ್ಳಲು ಶ್ರೀಹರಿ ಹಿಂಜರಿಕೆ ಇತ್ತಂತೆ ಶ್ರೀಹರಿಗೆ. ಆದರೆ ಬಾಲಕೃಷ್ಣ ಶ್ರೀಹರಿಗೆ ಒತ್ತಾಯ ಮಾಡಿ ಆ ಪಾತ್ರ ಒಪ್ಪಿಕೊಳ್ಳಲು ಹೇಳಿದರಂತೆ. ಅಂತೆಯೇ ಶ್ರೀಹರಿ ಆ ಪಾತ್ರ ಒಪ್ಪಿಕೊಂಡು ಸಿನಿಮಾ ಸೂಪರ್ ಹಿಟ್ ಆಯ್ತಂತೆ.

  English summary
  Telugu hero Nandamuri Balakrishna talked about Shirhari. He said He was very much followed me.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X