twitter
    For Quick Alerts
    ALLOW NOTIFICATIONS  
    For Daily Alerts

    ಕೋವಿಡ್‌ ಸೋಂಕಿತ ನಟ ರಾಜಶೇಖರ್ ಆರೋಗ್ಯ ಸ್ಥಿತಿ ಗಂಭೀರ

    |

    ತೆಲುಗಿನ ಖ್ಯಾತ ನಾಯಕ ನಟ ರಾಜಶೇಖರ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು.

    ಅಕ್ಟೋಬರ್ 17 ರಂದು ನಟ ರಾಜಶೇಖರ್, ಪತ್ನಿ ಜೀವಿತಾ, ಮಕ್ಕಳಾದ ಶಿವಾನಿ ಮತ್ತು ಶಿವಾತ್ಮಿಕ ಗೆ ಕೊರೊನಾ ವೈರಸ್ ಪಾಸಿಟಿವ್ ಇರುವುದು ಗೊತ್ತಾಗಿತ್ತು. ನಂತರ ರಾಜಶೇಖರ್ ಆರೋಗ್ಯ ಕ್ಷೀಣಿಸುತ್ತಾ ಬಂದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ರಾಜಶೇಖರ್ ಅವರನ್ನು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಾಜಶೇಖರ್ ಪುತ್ರಿ ಶಿವಾತ್ಮಿಕ ಸಾಮಾಜಿಕ ಜಾಲತಾಣದಲ್ಲಿ ತಂದೆಯ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, 'ಅಪ್ಪ ಕೊರೊನಾ ವೈರಸ್ ಜೊತೆಗೆ ಕಠಿಣವಾದ ಹೋರಾಟ ಮಾಡುತ್ತಿದ್ದಾರೆ' ಎಂದಿದ್ದಾರೆ.

    ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

    ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

    ತೆಲುಗು ಮಾಧ್ಯಮಗಳ ಪ್ರಕಾರ, ರಾಜಶೇಖರ್ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ರಾಜಶೇಖರ್ ಅನ್ನು ವೆಂಟಿಲೇಟರ್‌ ನ ಸಹಾಯದಲ್ಲಿ ಇರಿಸಲಾಗಿದೆ, ಐಸಿಯು ನಲ್ಲಿ ಸತತ ಚಿಕಿತ್ಸೆಗಳನ್ನು ರಾಜಶೇಖರ್ ಅವರಿಗೆ ನೀಡಲಾಗುತ್ತಿದೆ.

    ಕಠಿಣವಾದ ಹೋರಾಟ ನಡೆಸುತ್ತಿದ್ದಾರೆ: ರಾಜಶೇಖರ್ ಪುತ್ರಿ

    ಕಠಿಣವಾದ ಹೋರಾಟ ನಡೆಸುತ್ತಿದ್ದಾರೆ: ರಾಜಶೇಖರ್ ಪುತ್ರಿ

    'ಅಪ್ಪ ಕೊರೊನಾ ಜೊತೆಗೆ ಕಠಿಣವಾದ ಹೋರಾಟದಲ್ಲಿ ನಿರತರಾಗಿದ್ದಾರೆ, ದಯವಿಟ್ಟು ನೀವುಗಳು ಅವರ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥಿಸಿ, ನಿಮ್ಮ ಪ್ರೀತಿ ಮತ್ತು ಆಶೀರ್ವಾದವೇ ನಮ್ಮನ್ನು ಗಟ್ಟಿಗೊಳಿಸಬಲ್ಲದು' ಎಂದು ರಾಜಶೇಖರ್ ಪುತ್ರಿ ಟ್ವೀಟ್ ಮಾಡಿದ್ದಾರೆ.

    ಅಪ್ಪ ಚೇತರಿಸಿಕೊಳ್ಳುತ್ತಿದ್ದಾರೆ: ಶಿವಾತ್ಮಿಕ

    ಅಪ್ಪ ಚೇತರಿಸಿಕೊಳ್ಳುತ್ತಿದ್ದಾರೆ: ಶಿವಾತ್ಮಿಕ

    ಮತ್ತೊಂದು ಟ್ವೀಟ್‌ನಲ್ಲಿ, ಅಪ್ಪ ರಾಜಶೇಖರ್ ಆರೋಗ್ಯ ತುಸು ಸುಧಾರಿಸಿದೆ, ಅವರ ಆರೋಗ್ಯ ಚಿಂತಾಜನಕವಾಗಿ ಏನೂ ಇಲ್ಲ, ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಯಾರೂ ರಾಜಶೇಖರ್ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವುದು ಬೇಡ, ನಮಗೆ ಪ್ರಾರ್ಥನೆ ಮತ್ತು ಧನಾತ್ಮಕತೆ ಬೇಕಷ್ಟೆ ಎಂದು ಹೇಳಿದ್ದಾರೆ ಪುತ್ರಿ ಶಿವಾತ್ಮಿಕಾ ರಾಜಶೇಖರ್.

    ಬಾಲಸುಬ್ರಹ್ಮಣ್ಯಂ ಕೊನೆ ಉಸಿರೆಳೆದರು

    ಬಾಲಸುಬ್ರಹ್ಮಣ್ಯಂ ಕೊನೆ ಉಸಿರೆಳೆದರು

    ಇತ್ತೀಚೆಗಷ್ಟೆ ಭಾರತದ ಖ್ಯಾತ ಗಾಯಕ ಬಾಲಸುಬ್ರಹ್ಮಣ್ಯಂ ಅವರು ಕೊರೊನಾ ಸೋಂಕಿಗೆ ಗುರಿಯಾಗಿ ಬಹುಕಾಲದ ಹೋರಾಟದ ಬಳಿಕ ಆಸ್ಪತ್ರೆಯಲ್ಲಿಯೇ ಕೊನೆ ಉಸಿರೆಳೆದರು. ಆ ನೆನಪು ಇನ್ನೂ ತಾಜಾ ಇರುವಾಗಲೇ ರಾಜಶೇಖರ್ ಆರೋಗ್ಯ ಸ್ಥಿತಿ ಗಂಭೀರ ಎಂಬ ಸುದ್ದಿ ಬಂದಿದೆ.

    English summary
    Telugu hero Rajsekhar fighting hard with coronavirus. Her daughter said he is in critical condition, kept in ventilator support.
    Thursday, October 22, 2020, 13:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X