ದರ್ಶನ್ ಹುಟ್ಟುಹಬ್ಬಕ್ಕೆ ಪೋಸ್ಟರ್ ಬಿಟ್ಟು ಕುತೂಹಲ ಹುಟ್ಟಿಸಿದ ತೆಲುಗಿನ ಬಿಗ್ಗೆಸ್ಟ್ ಪ್ರೊಡಕ್ಷನ್ ಹೌಸ್‌ಗಳು!

Telugu industry biggest producion houses AK Entertainments and SVCC wished Darshan on his birthday

ಕನ್ನಡ ಚಲನಚಿತ್ರರಂಗದ ಮಂಚೂಣಿಯಲ್ಲಿರುವ ಸ್ಟಾರ್ ನಟರ ಸಾಲಿನಲ್ಲಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇಂದು ( ಫೆಬ್ರವರಿ 16 ) 46ನೇ ಹುಟ್ಟುಹಬ್ಬದ ಸಂಭ್ರಮ. ಕಳೆದೆರಡು ವರ್ಷಗಳಲ್ಲಿ ವಿವಿಧ ಕಾರಣಗಳಿಂದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೇ ಇದ್ದ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಈ ಬಾರಿ ದರ್ಶನ್ ಫ್ಯಾನ್ಸ್ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ.

ಒಂದೆಡೆ ದರ್ಶನ್ ಅಭಿಮಾನಿಗಳು ದರ್ಶನ್ ಮನೆ ಮುಂದೆ ಜಮಾಯಿಸಿ ಡಿ ಬಾಸ್ ಡಿ ಬಾಸ್ ಎಂದು ಘೋಷಣೆ ಕೂಗುತ್ತಾ ಸಂಭ್ರಮಿಸುತ್ತಾ ನೆಚ್ಚಿನ ನಟನನ್ನು ಭೇಟಿಯಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದರೆ, ಮತ್ತೊಂದೆಡೆ ದರ್ಶನ್ ಗ್ರೀನ್ ಸಿಗ್ನಲ್ ನೀಡಿರುವ ಮುಂದಿನ ಸಿನಿಮಾಗಳ ನಿರ್ಮಾಪಕರು ಹುಟ್ಟುಹಬ್ಬದ ಪ್ರಯುಕ್ತ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿ ದರ್ಶನ್ ನಟನೆಯ ಮುಂದಿನ ಸಿನಿಮಾಗಳು ಯಾವುವು ಎಂಬುದನ್ನು ತಿಳಿಸಿದ್ದಾರೆ.

ಇನ್ನು ಕನ್ನಡದಲ್ಲಿ ಹಲವು ನಿರ್ಮಾಪಕ ಹಾಗೂ ನಿರ್ದೇಶಕರು ದರ್ಶನ್ ಜತೆ ಸಿನಿಮಾ ಮಾಡುತ್ತಿರುವುದನ್ನು ಘೋಷಿಸಿದ್ದು, ತರುಣ್ ಸುಧೀರ್ ನಿರ್ದೇಶಿಸುತ್ತಿರುವ ಕಾಟೇರ ಚಿತ್ರದ ಘೋಷಣೆ ಹಾಗೂ ಮಿಲನ ಪ್ರಕಾಶ್ ನಿರ್ದೇಶನದ ಚಿತ್ರ ಘೋಷಣೆಯಾಗಿರುವುದು ಹೆಚ್ಚಿನ ಕುತೂಹಲ ಮೂಡಿಸಿದೆ. ಇದರ ಜತೆಗೆ ದರ್ಶನ್ ಹುಟ್ಟುಹಬ್ಬಕ್ಕೆ ತೆಲುಗು ಪ್ರೊಡಕ್ಷನ್ ಹೌಸ್‌ಗಳು ಶುಭಾಶಯ ಕೋರಿರುವುದು ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ದರ್ಶನ್ ಹುಟ್ಟುಹಬ್ಬಕ್ಕೆ ಸರಿಲೇರು ನೀಕೆವ್ವರು ನಿರ್ಮಾಪಕರ ವಿಶ್

ದರ್ಶನ್ ಹುಟ್ಟುಹಬ್ಬಕ್ಕೆ ಸರಿಲೇರು ನೀಕೆವ್ವರು ನಿರ್ಮಾಪಕರ ವಿಶ್

ಮಹೇಶ್ ಬಾಬು ನಟನೆಯ ಸರಿಲೇರು ನೀಕೆವ್ವರು ಸೇರಿದಂತೆ ಚಾಣಕ್ಯ, ಸೀತ, ಕಿರ್ರಾಕ್ ಪಾರ್ಟಿ ರೀತಿಯ ಹಲವು ತೆಲುಗಿನ ಸ್ಟಾರ್ ಚಿತ್ರಗಳಿಗೆ ಬಂಡವಾಳ ಹೂಡಿರುವ ಎ ಕೆ ಎಂಟರ್‌ಟೈನ್‌ಮೆಂಟ್ಸ್ ದರ್ಶನ್ ಹುಟ್ಟಿಹಬ್ಬದ ಅಂಗವಾಗಿ ಶುಭಾಶಯವನ್ನು ಕೋರಿದೆ. ತೆರೆ ಹಿಂದೆ ಸಿಕ್ಕಾಪಟ್ಟೆ ಹಂಬಲ್ ಆಗಿರುವ ಹಾಗೂ ತೆರೆಮೇಲೆ ಚಾಲೆಂಜಿಂಗ್ ಸ್ಟಾರ್ ಆಗಿರುವ ಡಿ ಬಾಸ್ ದರ್ಶನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದುಕೊಂಡು ಟ್ವೀಟ್ ಮಾಡಿದೆ ಎಕೆ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್.

ಅತ್ತಾರಿಂಟಿಕಿ ದಾರೇದಿ ನಿರ್ಮಾಪಕರಿಂದಲೂ ವಿಶ್

ಅತ್ತಾರಿಂಟಿಕಿ ದಾರೇದಿ ನಿರ್ಮಾಪಕರಿಂದಲೂ ವಿಶ್

ಇನ್ನು ಪವನ್ ಕಲ್ಯಾಣ್ ಸಿನಿ ಕೆರಿಯರ್‌ನ ಅತಿದೊಡ್ಡ ಹಿಟ್ ಚಿತ್ರವಾದ ಅತ್ತಾರಿಂಟಿಕಿ ದಾರೇದಿ ಸಿನಿಮಾಗೆ ಬಂಡವಾಳ ಹೂಡಿದ್ದ ನಿರ್ಮಾಪಕ ಬಿ ವಿ ಎಸ್ ಎನ್ ಪ್ರಸಾದ್ ಒಡೆತನದ ಶ್ರಿ ವೆಂಕಟೇಶ್ವರ ಸಿನಿ ಚಿತ್ರ ಪ್ರೊಡಕ್ಸನ್ ಹೌಸ್ ಸಹ ದರ್ಶನ್ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಈ ಪ್ರೊಡಕ್ಷನ್ ಹೌಸ್ ನಮ್ಮ ಪ್ರೀತಿಯ ಹೀರೊ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದೆ.

ದರ್ಶನ್‌ಗೆ ಬಂಡವಾಳ ಹೂಡುತ್ತಿವೆಯಾ ಈ ಸಂಸ್ಥೆಗಳು?

ದರ್ಶನ್‌ಗೆ ಬಂಡವಾಳ ಹೂಡುತ್ತಿವೆಯಾ ಈ ಸಂಸ್ಥೆಗಳು?

ಸದ್ಯ ತೆಲುಗಿನ ಎಕೆ ಎಂಟರ್‌ಟೈನ್‌ಮೆಂಟ್ಸ್ ಹಾಗೂ ಶ್ರೀ ವೆಂಕಟೇಶ್ವ ಸಿನಿ ಚಿತ್ರ ಈ ಎರಡೂ ಪ್ರೊಡಕ್ಷನ್ ಹೌಸ್‌ಗಳು ದರ್ಶನ್ ಹುಟ್ಟುಹಬ್ಬಕ್ಕೆ ಶುಭಕೋರಿರುವುದನ್ನು ಕಂಡ ಸಿನಿ ರಸಿಕರು ಈ ಎರಡೂ ಸಂಸ್ಥೆಗಳು ದರ್ಶನ್ ನಟನೆಯ ಚಿತ್ರಗಳಿಗೆ ಬಂಡವಾಳ ಹೂಡಲಿವೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ದರ್ಶನ್ ಸಿನಿಮಾಗೆ ಬಂಡವಾಳ ಹೂಡುತ್ತಿರುವುದರಿಂದಲೇ ಈ ರೀತಿ ಪೋಸ್ಟರ್ ಬಿಡುಗಡೆ ಮಾಡಿವೆ ಎಂಬ ಅಭಿಪ್ರಾಯವೂ ಸಹ ಇದೆ.

More from Filmibeat

English summary
Telugu industry biggest producion houses AK Entertainments and SVCC wished Darshan on his birthday. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X