ಸಮಂತಾ- ನಾಗಚೈತನ್ಯ ವಿಚ್ಚೇದನಕ್ಕೆ ಟೆಲಿಫೋನ್ ಕದ್ದಾಲಿಕೆ ಕಾರಣವೇ? ತೆಲುಗು ಪತ್ರಕರ್ತನ ವಾದವೇನು?
ಸಮಂತಾ- ನಾಗಚೈತನ್ಯ ವಿಚ್ಛೇದನದ ಬಗ್ಗೆ ಚರ್ಚೆ ಇನ್ನೂ ನಿಂತಿಲ್ಲ. ಅವರಿಬ್ಬರೇ ತಮ್ಮ ಹಾದಿ ಹಿಡಿದು ಹೊರಟಿದ್ದರೂ, ಈ ಜೋಡಿಯ ಡಿವೋರ್ಸ್‌ಗೆ ಕಾರಣ ಹುಡುಕುವ ಪ್ರಯತ್ನ ಮಾತ್ರ ಇನ್ನೂ ನಿಂತಿಲ್ಲ. ಬಹುಶ: ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ ಅತೀ ಹೆಚ್ಚು ಕಾಲ ಚರ್ಚೆಗೆ ಒಳಪಟ್ಟ ವಿಷಯ ಇರಬಹುದೇನೋ.
ಟಾಲಿವುಡ್‌ನ ಮುದ್ದಾದ ಜೋಡಿ ಎಂದೇ ಹೊಗಳುತ್ತಿದ್ದವರೇ ಮರೆತು ಸುಮ್ಮನಿರುವಾಗ ಇವರ ವಿಚ್ಛೇದನದ ಬಗ್ಗೆ ಮತ್ತೊಂದು ಸುದ್ದಿ ಎದ್ದಿದೆ. ಇತ್ತೀಚೆಗೆ ತೆಲಂಗಾಣದಲ್ಲಿ ಟೆಲಿಫೋನ್ ಕದ್ದಾಲಿಕೆ ಪ್ರಕರಣ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಈ ಹಿಂದೆ ಕೆ ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಸರ್ಕಾರವಿದ್ದಾಗ, ತೆಲಂಗಾಣದ ಗುಪ್ತಚರ ಬ್ಯುರೋದ ಮಾಜಿ ಮುಖ್ಯಸ್ಥ ಟಿ ಪ್ರಭಾಕರ್ ರಾವ್ ಅವರ ಆದೇಶದ ಮೇಲೆ ಗಣ್ಯರ ಟೆಲಿಫೋನ್ ಅನ್ನು ಕದ್ದಾಲಿಕೆ ಮಾಡಲಾಗಿತ್ತು ಎಂಬ ಆರೋಪ ಕೇಳಿ ಬರುತ್ತಿದೆ.

ವಿರೋಧ ಪಕ್ಷದ ನಾಯಕರು, ಉದ್ಯಮಿಗಳು, ಚಿತ್ರರಂಗದ ತಾರೆಯರ ಪೋನ್‌ಗಳನ್ನು ಕದ್ದಾಲಿಕೆ ಮಾಡಲಾಗಿದೆ ಎಂಬ ಆರೋಪದ ಮೇಲೆ ಕೆಲವರನ್ನು ಈಗಾಗಲೇ ಬಂಧಿಸಲಾಗಿದೆ. ಈ ಕದ್ದಾಲಿಕೆ ಪ್ರಕರಣ ಹೊರ ಬೀಳುತ್ತಿದ್ದಂತೆ ಸಿನಿಮಾರಂಗದ ತಾರೆಯರು ಎದೆಯಲ್ಲಿ ನಡುಕ ಉಂಟಾಗಿದೆ. ಈಗಾಗಲೇ ಬಂಧಿಸಲಾಗಿರುವ ಅಧಿಕಾರಿಯೊಬ್ಬರು ಸ್ಟಾರ್ ಹೀರೊಯಿಣ್ ಫೋನ್ ಅನ್ನು ಕದ್ದಾಲಿಕೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆಂದು ಕೆಲವು ತೆಲುಗು ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಫೋನ್ ಕದ್ದಾಲಿಕೆ ಪ್ರಕರಣದಲ್ಲಿರುವ ಸ್ಟಾರ್ ಹೀರೋಯಿನ್ ಯಾರು ಎಂಬುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಾಯಕಿ ಜೊತೆ ಸ್ಟಾರ್ ಹೀರೋ ಯಾರು? ಅನ್ನೋದು ಸಿನಿವಲಯದಲ್ಲಿ ಹಲ್‌ಚಲ್ ಎಬ್ಬಿಸಿದೆ. ಈ ಎಲ್ಲಾ ವದಂತಿಗಳು ಓಡಾಡುತ್ತಿರುವಾಗ ಪತಿಗೆ ವಿಚ್ಛೇದನ ನೀಡಲು ಫೋನ್ ಕದ್ದಾಲಿಕೆ ಮಾಡಲಾಗಿತ್ತು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಇದೇ ವಿಚಾರವಾಗಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ ತೆಲುಗಿನ ಪತ್ರಕರ್ತರೊಬ್ಬರು ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. ಸಮಂತಾ ರುಥ್ ಪ್ರಭು ಮತ್ತು ನಾಗ ಚೈತನ್ಯ ಅಕ್ಕಿನೇನಿ ಬ್ರೇಕಪ್ ಕೂಡ ಫೋನ್ ಕದ್ದಾಲಿಕೆ ಕಾರಣ ಇರಬಹುದು ಎಂದು ಸುದ್ದಿಯಾಗಿದೆ. ಇಷ್ಟೇ ಅಲ್ಲದೆ, ಈ ಬಗ್ಗೆ ಇನ್ನಷ್ಟು ಮಾಹಿತಿ ಪಡೆದು ಸತ್ಯಾಂಶದೊಂದಿಗೆ ವಿಡಿಯೋ ಮಾಡುತ್ತೇನೆಂದು ಅವರು ಹೇಳಿಕೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ಸಮಂತಾ ಹಾಗೂ ನಾಗಚೈತನ್ಯ ವಿಚ್ಚೇದನಕ್ಕೆ ಟೆಲಿಫೋನ್ ಟ್ಯಾಪಿಂಗ್ ಕಾರಣವೇ? ಇಲ್ಲ ಇಬ್ಬರ ನಡುವಿನ ಭಿನ್ನಾಭಿಪ್ರಾಯ ಕಾರಣವೇ? ಎಂಬುದು ಹೊರಬೀಳಬಹುದು. ಆ ದೊಡ್ಡ ಸಂಚಲನವನ್ನೇ ಸೃಷ್ಟಿಸಬಹುದು. ಸದ್ಯ ತೆಲುಗು ಪತ್ರಕರ್ತನ ಹೇಳಿಕೆ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆಯಂತೂ ನಡೆಯುತ್ತಿದೆ.
ಸದ್ಯ ತೆಲಂಗಾಣದ ಟೆಲಿಫೋನ್ ಕದ್ದಾಲಿಕೆ ಪ್ರಕರಣ ತೆಲುಗು ಮಂದಿಯನ್ನು ಬೆಚ್ಚಿಬೀಳಿಸಿದೆ. ಇದು ಇನ್ಯಾವ ಹಂತಕ್ಕೆ ಹೋಗಿ ನಿಲ್ಲುತ್ತೋ? ಮತ್ತೆ ಯಾರೆಲ್ಲ ಹೆಸರು ಹೊರಬರುತ್ತೋ ಆತಂಕ ಅಲ್ಲಿನ ಜನರಲ್ಲಿ ಹೆಚ್ಚಾಗಿದೆ. ಸದ್ಯ ಈ ಫೋನ್ ಕದ್ದಾಲಿಕೆ ಪ್ರಕರಣದ ಬಗ್ಗೆ ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.


Click it and Unblock the Notifications











