For Quick Alerts
  ALLOW NOTIFICATIONS  
  For Daily Alerts

  ದುಬಾರಿ 'ಲ್ಯಾಂಬೋರ್ಗಿನಿ' ಕಾರು ಖರೀದಿಸಿದ ಸ್ಟಾರ್ ನಟ

  |

  ಸೆಲೆಬ್ರಿಟಿಗಳು ದುಬಾರಿ ಕಾರು ಬಳಸುವುದು ಸಾಮಾನ್ಯ. ತಾವು ಇಷ್ಟ ಪಟ್ಟ ಕಾರುಗಳೆಲ್ಲವೂ ತಮ್ಮ ಮನೆಯಂಗಳದಲ್ಲಿರಬೇಕು ಎನ್ನುವ ಕಲಾವಿದರು ತುಂಬಾ ಜನರಿದ್ದಾರೆ. ಯಾವುದೇ ಸ್ಟಾರ್ ನಟ-ನಟಿಯ ಮನೆಗೆ ಹೋದರೂ ಎರಡಕ್ಕಿಂತ ಹೆಚ್ಚು ಕಾರುಗಳು ಇರ್ತಾವೆ. ಕೆಲವು ಸ್ಟಾರ್‌ಗಳಂತೂ ವಿದೇಶದಿಂದ ಕಾರುಗಳನ್ನು ಆಮದು ಮಾಡಿಕೊಂಡಿರ್ತಾರೆ.

  ಸದ್ಯ ಭಾರತೀಯ ಸಿನಿಮಾರಂಗದಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವ ಕಾರು ಲ್ಯಾಂಬೋರ್ಗಿನಿ. ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಈಗಾಗಲೇ ಹಲವು ಸೆಲೆಬ್ರಿಟಿಗಳು ಲ್ಯಾಂಬೋರ್ಗಿನಿ ಕಾರು ಹೊಂದಿದ್ದಾರೆ. ಈಗ ಅವರ ಪಟ್ಟಿಗೆ ಜೂನಿಯರ್ ಎನ್‌ಟಿಆರ್ ಸೇರಿದ್ದಾರೆ.

  ದರ್ಶನ್ ಮನೆಗೆ ಮತ್ತೊಂದು ಕಾಸ್ಟ್ಲಿ ಕಾರ್: ಇನ್ನೊಬ್ಬ ನಟನ ಬಳಿಯೂ ಇದೆ ಈ ಕಾರು.!ದರ್ಶನ್ ಮನೆಗೆ ಮತ್ತೊಂದು ಕಾಸ್ಟ್ಲಿ ಕಾರ್: ಇನ್ನೊಬ್ಬ ನಟನ ಬಳಿಯೂ ಇದೆ ಈ ಕಾರು.!

  ಟಾಲಿವುಡ್ ಯಂಗ್ ಟೈಗರ್ ಎನ್‌ಟಿಆರ್ ಲ್ಯಾಂಬೋರ್ಗಿನಿ ಉರುಸ್ ಕಾರು ಖರೀದಿಸಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚಿಗಷ್ಟೆ ಭಾರತದಲ್ಲಿ ಲಾಂಚ್ ಆದ 'ಲ್ಯಾಂಬೋರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್' ಕಾರಿಗೆ ಎನ್‌ಟಿಆರ್ ಮಾಲೀಕರಾಗಿದ್ದಾರೆ. ಈ ಮೂಲಕ ಭಾರತದಲ್ಲಿ ಈ ಕಾರು ಖರೀದಿಸಿದ ಮೊದಲ ನಟ ಎಂದು ಎನಿಸಿಕೊಂಡಿದ್ದಾರೆ. ಮುಂದೆ ಓದಿ...

  ಹೊಸ ಕಾರಿನ ಬೆಲೆ 3.16 ಕೋಟಿ

  ಹೊಸ ಕಾರಿನ ಬೆಲೆ 3.16 ಕೋಟಿ

  ಸೋಮವಾರವಷ್ಟೆ ಭಾರತದಲ್ಲಿ ಲ್ಯಾಂಬೋರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಕಾರು ಲಾಂಚ್ ಆಗಿತ್ತು. ಕಪ್ಪು ಬಣ್ಣದ ಮ್ಯಾಟ್ ಫಿನಿಶ್ ಕಾರಿನ ಬೆಲೆ 3.16 ಕೋಟಿ (ex-showroom) ಎಂದು ವರದಿಯಾಗಿದೆ. ತಾರಕ್ ಮನೆಗೆ ಹೊಸ ಕಾರು ಬಂದಿರುವ ವಿಚಾರ ತಿಳಿದ ಅಭಿಮಾನಿಗಳು, ತಮ್ಮ ಮನೆಗೆ ಕಾರು ಬಂದಷ್ಟು ಸಂತಸ ವ್ಯಕ್ತಪಡಿಸುತ್ತಿದ್ದಾರೆ. 'ದೇಶದ ಮೊದಲ ಲ್ಯಾಂಬೋರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಕಾರು ಹೈದರಾಬಾದ್‌ನಲ್ಲಿ ತನ್ನ ಮನೆ ಕಂಡುಕೊಂಡಿದೆ' ಎಂದು ಸಾಮಾಜಿಕ ಜಾಲತಾಣದ ಫ್ಯಾನ್ಸ್ ಖಾತೆಗಳಲ್ಲಿ ಫೋಟೋಗಳು ವೈರಲ್ ಆಗಿದೆ.

  ರಷ್ಯಾದಿಂದ ವಾಪಸ್ ಆದ ತಾರಕ್

  ರಷ್ಯಾದಿಂದ ವಾಪಸ್ ಆದ ತಾರಕ್

  ಎಸ್‌ಎಸ್‌ ರಾಜಮೌಳಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಆರ್‌ಆರ್‌ಆರ್ ಸಿನಿಮಾ ಚಿತ್ರೀಕರಣಕ್ಕಾಗಿ ರಷ್ಯಾಗೆ ಹೋಗಿದ್ದ ಎನ್‌ಟಿಆರ್ ಹೈದರಾಬಾದ್‌ಗೆ ಬಂದಿಳಿದಿದ್ದಾರೆ. ನಟ ರಾಮ್ ಚರಣ್ ತೇಜ, ನಿರ್ದೇಶಕ ರಾಜಮೌಳಿ ಸೇರಿದಂತೆ ತಂತ್ರಜ್ಞರು ಆಗಸ್ಟ್ 2 ರಂದು ವಿದೇಶಕ್ಕೆ ಹಾರಿದ್ದರು. ಹಾಡಿನ ಚಿತ್ರೀಕರಣದ ಜೊತೆಗೆ ಕೆಲವು ಮಾತಿನ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ರಷ್ಯಾ ಶೆಡ್ಯೂಲ್ ಮುಗಿಸಿ ಭಾರತಕ್ಕೆ ವಾಪಸ್ ಆಗಿದ್ದಾರೆ.

  ಇತ್ತೀಚಿಗೆ ದರ್ಶನ್ ಖರೀದಿಸಿದ್ದ ದುಬಾರಿ ಕಾರ್ ಯಾವುದು.?ಇತ್ತೀಚಿಗೆ ದರ್ಶನ್ ಖರೀದಿಸಿದ್ದ ದುಬಾರಿ ಕಾರ್ ಯಾವುದು.?

  'ದೋಸ್ತಿ' ಹಾಡು ಸೂಪರ್ ಹಿಟ್

  'ದೋಸ್ತಿ' ಹಾಡು ಸೂಪರ್ ಹಿಟ್

  ಸ್ನೇಹಿತರ ದಿನಾಚರಣೆ ವಿಶೇಷವಾಗಿ 'ದೋಸ್ತಿ' ಹಾಡನ್ನು ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಈ ಹಾಡು 5 ಭಾಷೆಯಲ್ಲಿ ರಿಲೀಸ್ ಆಗಿದ್ದು, ಐದು ಭಾಷೆಯಲ್ಲಿ ಹಾಡಿದ ಗಾಯಕರು ಕಾಣಿಸಿಕೊಂಡಿದ್ದಾರೆ. ಜೊತೆಗೆ ಖ್ಯಾತ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಮತ್ತು ರಾಮ್ ಚರಣ್ ಹಾಗೂ ಜೂ. ಎನ್ ಟಿ ಆರ್ ಕೊನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಯೂಟ್ಯೂಬ್‌ನಲ್ಲಿ ಈ ಹಾಡು ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದುಕೊಂಡಿದೆ.

  ಕನ್ನಡ ನಟರ ಬಳಿಯೂ ಇದೆ ಲ್ಯಾಂಬೋರ್ಗಿನಿ

  ಕನ್ನಡ ನಟರ ಬಳಿಯೂ ಇದೆ ಲ್ಯಾಂಬೋರ್ಗಿನಿ

  ಲ್ಯಾಂಬೋರ್ಗಿನಿ ಕಾರಿನ ವಿಚಾರಕ್ಕೆ ಬಂದ್ರೆ ಸ್ಯಾಂಡಲ್‌ವುಡ್‌ನಲ್ಲಿ ಮೂರು ಜನ ನಟರು ಈ ಕಂಪನಿಯ ಕಾರು ಹೊಂದಿದ್ದಾರೆ. ನಟ ದರ್ಶನ್ ಬಳಿ ಎರಡು ಲ್ಯಾಂಬೋರ್ಗಿನಿ ಕಾರಿದೆ, ಪುನೀತ್ ರಾಜ್ ಕುಮಾರ್ ಹಾಗೂ ನಿಖಿಲ್ ಕುಮಾರ್ ಬಳಿಯೂ ಲ್ಯಾಂಬೋರ್ಗಿನಿ ಕಾರಿದೆ. ಅದ್ರೆ, ಈಗ ಎನ್‌ಟಿಆರ್ ಖರೀದಿ ಮಾಡಿರುವ ಲ್ಯಾಂಬೋರ್ಗಿನಿ ಕಾರು ಹೊಸ ಮಾಡೆಲ್. ಹಾಗಾಗಿ, ಈ ಮಾಡೆಲ್ ಕಾರು ಪಡೆದ ಭಾರತದ ಮೊದಲ ನಟ ಎನಿಸಿಕೊಂಡಿದ್ದಾರೆ.

  450 ಕೋಟಿ ಬಜೆಟ್‌ನಲ್ಲಿ ಸಿನಿಮಾ

  450 ಕೋಟಿ ಬಜೆಟ್‌ನಲ್ಲಿ ಸಿನಿಮಾ

  ಡಿವಿವಿ ದಾನಯ್ಯ ಆರ್‌ಆರ್‌ಆರ್ ಸಿನಿಮಾ ನಿರ್ಮಿಸುತ್ತಿದ್ದು, ಸುಮಾರು 450 ಕೋಟಿಗೂ ಹೆಚ್ಚು ಬಜೆಟ್ ಅಂದಾಜಿಸಲಾಗಿದೆಯಂತೆ. ರಾಮ್ ಚರಣ್ ತೇಜ, ಜೂನಿಯರ್ ಎನ್‌ಟಿಆರ್, ಅಜಯ್ ದೇವಗನ್, ಆಲಿಯಾ ಭಟ್ ಸೇರಿದಂತೆ ಹಾಲಿವುಡ್‌ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದ ಸಂಗ್ರಾಮದಲ್ಲಿ ವೀರಮರಣವನ್ನಪ್ಪಿದ ಅಲ್ಲುರಿ ಸೀತಾರಾಮ ರಾಜು ಹಾಗೂ ಕೊಮ್ಮರಂ ಭೀಮ್ ಪಾತ್ರಗಳಲ್ಲಿ ರಾಮ್ ಚರಣ್-ಎನ್‌ಟಿಆರ್ ಅಭಿನಯಿಸುತ್ತಿದ್ದಾರೆ. ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 13ಕ್ಕೆ ಸಿನಿಮಾ ತೆರೆಗೆ ಬರಲಿದೆ ಎಂದು ಚಿತ್ರತಂಡ ಘೋಷಿಸಿದೆ. ಕೋವಿಡ್ ಮೂರನೇ ಅಲೆ ಭೀತಿ ಇಲ್ಲದಿದ್ದರೇ ಅದೇ ದಿನಕ್ಕೆ ರಾಜಮೌಳಿಯ ಮೆಗಾ ಸಿನಿಮಾ ತೆರೆಗೆ ಬರಲಿದೆ.

  English summary
  Telugu Jr Ntr Purchased Lamborghini Urus Car. this car is priced at a whopping ₹3.16 cr (ex-showroom).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X