For Quick Alerts
  ALLOW NOTIFICATIONS  
  For Daily Alerts

  ತೀವ್ರ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ತೆಲುಗು ಹಾಸ್ಯ ನಟ

  |

  ತೆಲುಗು ಸಿನಿಉದ್ಯಮದ ಖ್ಯಾತ ಹಾಸ್ಯ ನಟರಲ್ಲೊಬ್ಬರಾದ ಪೃಥ್ವಿರಾಜ್ ತೀವ್ರ ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

  ಎಸ್ ಪಿ ಬಾಲಸುಬ್ರಹ್ಮಣ್ಯಂ ತಗುಲಿದ ಕರೋನ ಸೋಂಕು | Filmibeat Kannada

  ಪೃಥ್ವಿರಾಜ್ ಅವರಿಗೆ ಕಳೆದ ಹತ್ತು ದಿನಗಳಿಂದಲೂ ಅನಾರೋಗ್ಯ ಕಾಡಿದ್ದು, ಉಸಿರಾಟದ ತೊಂದರೆ ಸಹ ಎದುರಾಗಿದೆ. ಹಾಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಿಂದಲೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಜನರ ಹಾರೈಕೆ ಬೇಕೆಂದು ಮನವಿ ಮಾಡಿದ್ದಾರೆ.

  ಪೃಥ್ವಿರಾಜ್ ಅವರಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿದೆ. ಆದರೆ ಅವರಿಗೆ ನೆಗೆಟಿವ್ ವರದಿ ಬಂದಿದ್ದು, ಆದರೂ ಸಹ ಅವರು ಆಸ್ಪತ್ರೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ.

  ಪೃಥ್ವಿರಾಜ್ ಅವರು ಉಸಿರಾಟ ಸಮಸ್ಯೆ ಎದುರಿಸುತ್ತಿದ್ದು, ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ನೆಗೆಟಿವ್ ಬಂದ ಕಾರಣ ಇನ್ನೂ ಕೆಲವು ಪರೀಕ್ಷೆಗಳನ್ನು ಮಾಡಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.

  English summary
  Telugu actor, comedian Prudhvi Raj hospitalized due to serious illness. He was tested coronavirus negative.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X