For Quick Alerts
  ALLOW NOTIFICATIONS  
  For Daily Alerts

  ತೆಲುಗಿನ ಖ್ಯಾತ ನಿರ್ದೇಶಕ ಸಾಯಿ ಬಾಲಾಜಿ ಕೋವಿಡ್‌ಗೆ ಬಲಿ

  |

  ತೆಲುಗಿನ ಖ್ಯಾತ ಸಿನಿಮಾ ನಿರ್ದೇಶಕ ಸಾಯಿ ಬಾಲಾಜಿ ಅವರು ಕೋವಿಡ್‌ಗೆ ಬಲಿಯಾಗಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು.

  ಸಾಯಿ ಬಾಲಾಜಿ ಅವರಿಗೆ ಒಂದು ವಾರದ ಹಿಂದೆ ಕೋವಿಡ್ ದೃಢವಾಗಿತ್ತು. ಬಾಲಾಜಿ ಅವರು ಹೈದರಾಬಾದ್‌ನ ಗಚ್ಚಿಬೌಲಿ ಬಳಿಯ ಟಿಐಎಂಎಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಏಪ್ರಿಲ್ 26 ರ ರಾತ್ರಿ ಬಾಲಾಜಿ ಕೊನೆ ಉಸಿರೆಳೆದಿದ್ದಾರೆ.

  ಚಿತ್ರಕತೆ ಬರಹಗಾರರಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟ ಸಾಯಿ ಬಾಲಾಜಿ, ಚಿರಂಜೀವಿ ನಟಿಸಿದ ಸೂಪರ್ ಹಿಟ್ ಸಿನಿಮಾ 'ಬಾವುಗಾರು ಬಾಗುನ್ನಾರ' ಸಿನಿಮಾಕ್ಕೆ ಚಿತ್ರಕತೆ ಬರೆದಿದ್ದರು. ನಿರ್ದೇಶಕ ರವಿ ರಾಜ ಪನಿಶೆಟ್ಟಿ ಅವರ ಬಳಿ ಬಹುಕಾಲ ಸಹಾಯಕ ನಿರ್ದೇಶಕರಾಗಿ ದುಡಿದಿದ್ದು ಸಾಯಿ ಬಾಲಾಜಿ ಆ ನಂತರ 'ಒರೆ ತಮ್ಮುಡು', ತೆಲುಗಿನ 'ಶಿವಾಜಿ' ಇನ್ನೂ ಕೆಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು.

  ಸಿನಿಮಾಗಳು ಮಾತ್ರವೇ ಅಲ್ಲದೆ ಟಿವಿ ಧಾರಾವಾಹಿಗಳನ್ನು ಸಹ ನಿರ್ದೇಶಿಸಿದ್ದರು ಸಾಯಿ ಬಾಲಾಜಿ. ಅವರು ನಿರ್ದೇಶಿಸಿದ್ದ 'ಸಿರಿ', 'ಹಾಲಾಹಲಂ' 'ಅಪರಂಜಿ' ಧಾರಾವಾಹಿಗಳು ತೆಲುಗು ಪ್ರೇಕ್ಷಕರನ್ನು ಸೆಳೆದಿದ್ದವು. ಸಾಯಿ ಬಾಲಾಜಿ ನಿರ್ದೇಶಿಸಿದ ಕೊನೆಯ ಸಿನಿಮಾ ದಿವಂಗತ ಯುವ ನಟ ಉದಯ್ ಕಿರಣ್ ನಟಿಸಿದ್ದ 'ಜೈ ಶ್ರೀರಾಮ್'.

  ಎರಡು ಮಕ್ಕಳಾದ್ಮೇಲೂ ಫಿಟ್ ನೆಸ್ ಗಾಗಿ ಕರೀನಾ ಏನ್ ಮಾಡ್ತಿದ್ದಾರೆ ನೋಡಿ | Filmibeat Kannada

  ಹಲವು ಮಂದಿ ಸಿನಿಮಾ ನಟರು, ತಂತ್ರಜ್ಞರು ಕೋವಿಡ್‌ನಿಂದಾಗಿ ಮರಣಿಸುತ್ತಿದ್ದಾರೆ. ಕನ್ನಡದ ಖ್ಯಾತ ನಿರ್ಮಾಪಕ ರಾಮು ಅವರು ನಿನ್ನೆಯಷ್ಟೆ ಕೋವಿಡ್‌ಗೆ ಬಲಿಯಾಗಿದ್ದಾರೆ. ಹಿಂದಿಯ ಹಿರಿಯ ನಟ, ನಿರ್ದೇಶಕ ಲಲಿತ್ ಬೇಲ್, ಖ್ಯಾತ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್, ಕನ್ನಡ ಸಿನಿರಂಗದಲ್ಲಿ ತಮ್ಮ ಭಿನ್ನ ಪೋಸ್ಟರ್‌ ಡಿಸೈನ್‌ಗಳಿಂದ ಹೆಸರಾಗಿದ್ದ ಮಸ್ತಾನ್, ಹಿರಿಯ ನಟ ಕಿಶೋರ್ ನಂದಲಸ್ಕರ್ ಹಾಗೂ ಇನ್ನೂ ಕೆಲವರು ಕಳೆದ ಒಂದು ವಾರದ ಅಂತರದಲ್ಲಿ ಕೋವಿಡ್‌ಗೆ ಬಲಿಯಾಗಿದ್ದಾರೆ.

  English summary
  Telugu movie director Sai Balaji died of coronavirus on April 26. He was 57 years of age.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X