ತೆಲುಗು ಚಿತ್ರರಂಗದಲ್ಲಿ ನಟಿಯರ ಬಳಕೆ ಬಗ್ಗೆ ನಟಿ ಅಮಲಾ ಪೌಲ್ ಅಸಮಾಧಾನ

ತೆಲುಗು ಚಿತ್ರರಂಗದವರು ನಾಯಕ ನಟಿಯರನ್ನು ಬಳಸಿಕೊಳ್ಳುವ ರೀತಿಯ ಬಗ್ಗೆ ನಟಿ ಅಮಲಾ ಪೌಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡದ 'ಹೆಬ್ಬುಲಿ' ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿಯೂ ನಟಿಸಿರುವ ಅಮಲಾ ಪೌಲ್‌ಗೆ ಹಲವು ಚಿತ್ರರಂಗಗಳ ಪರಿಚಯವಿದೆ. ಆದರೆ ದಕ್ಷಿಣ ಭಾರತದ ಎಲ್ಲ ಚಿತ್ರರಂಗಗಳ ಪೈಕಿ ತೆಲುಗು ಚಿತ್ರರಂಗದ ಬಗ್ಗೆ ಅಮಲಾಗೆ ಅಸಮಾಧಾನ ಇದೆಯಂತೆ.

2011 ರಿಂದ 2015 ರವರೆಗೆ ನಾಲ್ಕು ತೆಲುಗು ಸಿನಿಮಾಗಳಲ್ಲಿ ನಟಿಸಿದ ಅಮಲಾ ಪೌಲ್ ಆ ಬಳಿಕ ತೆಲುಗು ಚಿತ್ರರಂಗದಿಂದ ಬಂದ ಆಫರ್‌ಗಳನ್ನು ನಿರಾಕರಿಸಿದ್ದಾಗಿ ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಬೆಜವಾಡ' ಸಿನಿಮಾ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ ಅಮಲಾ ಪೌಲ್, ಬಳಿಕ ರಾಮ್ ಚರಣ್ ಎದುರು 'ನಾಯಕ್' ಅಲ್ಲು ಅರ್ಜುನ್ ಜೊತೆ 'ಇದ್ದರಮ್ಮಾಯಿಲತೊ', ನಾನಿ ಜೊತೆ 'ಜೆಂಡ ಪೈ ಕಪಿರಾಜು' ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಳಿಕ ಇನ್ನಾವ ತೆಲುಗು ಸಿನಿಮಾಗಳಲ್ಲಿಯೂ ನಟಿಸಿಲ್ಲ.

Telugu Movie Industry Uses Actress Only For Love Scenes And Songs: Amala Paul

ಒಳ್ಳೆಯ ನಟನೆ ನೀಡಿಯೂ ಸಹ ತೆಲುಗು ಜನರ ಮನಸ್ಸಿನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಹೀಗಾಗಿ ತಾವು ತೆಲುಗು ಚಿತ್ರಗಳನ್ನು ಒಪ್ಪಿಕೊಳ್ಳುವುದನ್ನು ನಿಲ್ಲಿಸಿದ್ದಾಗಿ ಅಮಲಾ ಹೇಳಿದ್ದಾರೆ.

ನಾನು ತೆಲುಗು ಚಿತ್ರರಂಗ ಪ್ರವೇಶಿಸಿದ ಮೇಲೆ ತಿಳಿದುಕೊಂಡಿದ್ದೆಂದರೆ ಆ ಚಿತ್ರರಂಗ ಕೆಲವು ಕುಟುಂಬಗಳು ಹಾಗೂ ಅವರ ಅಭಿಮಾನಿಗಳ ಹಿಡಿತದಲ್ಲಿದೆ. ಆ ಸಮಯದಲ್ಲಿ ಅವರು ಮಾಡುತ್ತಿದ್ದ ಸಿನಿಮಾಗಳು ಬೇರೆ ರೀತಿಯದ್ದಾಗಿದ್ದವು, ಪ್ರತಿ ಸಿನಿಮಾದಲ್ಲಿಯೂ ಇಬ್ಬರು ನಾಯಕಿಯರು ಇರುತ್ತಿದ್ದರು. ಇಬ್ಬರೂ ನಾಯಕಿಯರನ್ನು ಹಾಡು, ಲವ್ ಸೀನ್‌ಗಾಗಿ ಮಾತ್ರವೇ ಬಳಸಿಕೊಳ್ಳಲಾಗುತ್ತಿತ್ತು. ಮತ್ತು ನಾಯಕಿಯರನ್ನು ಬಹಳ ಗ್ಲಾಮರಸ್ ಆಗಿ ತೋರಿಸಲಾಗುತ್ತಿತ್ತು. ಬಹಳ ಕಮರ್ಷಿಯಲ್ ಆಗಿರುತ್ತಿತ್ತು ಅವರ ಸಿನಿಮಾಗಳು. ನನಗೆ ಆ ಉದ್ಯಮದ ಜೊತೆ ಕನೆಕ್ಟ್ ಮಾಡಿಕೊಳ್ಳಲಾಗಲಿಲ್ಲ. ಹಾಗಾಗಿ ಕೆಲವು ಸಿನಿಮಾಗಳನ್ನಷ್ಟೆ ಅಲ್ಲಿ ಮಾಡಿದೆ'' ಎಂದಿದ್ದಾರೆ ಅಮಲಾ ಪೌಲ್.

ಆದರೆ 2015 ರ ಬಳಿಕ ಆರು ವರ್ಷಗಳ ಗ್ಯಾಪ್ ತೆಗೆದುಕೊಂಡು ಹೊಸ ಸಿನಿಮಾ ಜೊತೆಗೆ ತೆಲುಗು ಸಿನಿಮಾ ರಂಗಕ್ಕೆ ಅಮಲಾ ಪೌಲ್ ಕಾಲಿಟ್ಟರು. ಜಗಪತಿ ಬಾಬು ಜೊತೆಗೆ 'ಪಿಟ್ಟ ಕಥಲು' ಅಂಥಾಲಜಿ ಸಿನಿಮಾದಲ್ಲಿ ಅಮಲಾ ಪೌಲ್ ಕಾಣಿಸಿಕೊಂಡರು. ಇತ್ತೀಚೆಗೆ ಹೆಚ್ಚು ಮಲಯಾಳಂ ಸಿನಿಮಾಗಳಲ್ಲಿ ನಟಿಸುತ್ತಿರುವ ಅಮಲಾ, 'ಟೀಚರ್', 'ಆಡುಜೀವಿತಂ', 'ಕ್ರಿಸ್ಟೋಫರ್' ಹೆಸರಿನ ಮಲಯಾಳಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Actress Amala Paul said Telugu movie industry using heroines only for love scenes and songs. She said she turned down opportunities from Telugu industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X