ತೆಲುಗಿನಲ್ಲಿ 'ಕವಲುದಾರಿ' ರೆಡಿ: ಒಟಿಟಿಯಲ್ಲಿ ಬಿಡುಗಡೆ
2018ರ ಕನ್ನಡ ಸಿನಿಮಾ 'ಕವಲುದಾರಿ' ತೆಲುಗು ಮತ್ತು ತಮಿಳಿನಲ್ಲಿ ರೀಮೇಕ್ ಆಗುತ್ತಿದೆ. ತೆಲುಗು ಈ ಸಿನಿಮಾ ಸಂಪೂರ್ಣವಾಗಿ ತಯಾರಾಗಿದ್ದು, ಈಗ ಬಿಡುಗಡೆಗೆ ಸಜ್ಜಾಗಿದೆ.
Recommended Video
'ಕಪಟದಾರಿ' ಎಂಬ ಹೆಸರಿನಲ್ಲಿ ತೆಲುಗು ಸಿನಿಮಾ ರಿಲೀಸ್ ಆಗುತ್ತಿದ್ದು, ಅಕ್ಟೋಬರ್ 29ರಂದು ಟೀಸರ್ ಬಿಡುಗಡೆಯಾಗಿದೆ. ಕನ್ನಡದಲ್ಲಿ ರಿಷಿ ಮಾಡಿದ್ದ ಪಾತ್ರದಲ್ಲಿ ತೆಲುಗಿನಲ್ಲಿ ಸುಮಂತ್ ಅಕ್ಕಿನೇನಿ ಕಾಣಿಸಿಕೊಂಡಿದ್ದಾರೆ.
ಅನಂತ್ ನಾಗ್ ನಿರ್ವಹಿಸಿದ್ದ ಪಾತ್ರವನ್ನು ಹಿರಿಯ ನಟ ನಾಸಿರ್ ಮಾಡಿದ್ದಾರೆ. ಸುಮನ್ ರಂಗನಾಥ್ ಪಾತ್ರವನ್ನು ತೆಲುಗಿನಲ್ಲೂ ಅವರೇ ಮಾಡಿದ್ದಾರೆ. ನಂದಿತಾ ಶ್ವೇತಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಪ್ರದೀಪ್ ಕೃಷ್ಣಮೂರ್ತಿ ನಿರ್ದೇಶನದ ಈ ಚಿತ್ರಕ್ಕೆ ಸೈಮನ್ ಕಿಂಗ್ ಸಂಗೀತ ನೀಡಿದ್ದಾರೆ. ತಮಿಳಿನಲ್ಲೂ ಈ ಸಿನಿಮಾ ಸಿದ್ಧವಾಗಿದ್ದು, ಸಿಬಿ ಸತ್ಯರಾಜ್ ನಟಿಸಿದ್ದಾರೆ. ಇನ್ನುಳಿದಂತೆ ತೆಲುಗಿನಲ್ಲಿ ಕಾಣಿಸಿಕೊಂಡವರೆ ತಮಿಳಿನಲ್ಲೂ ಇದ್ದಾರೆ.
'ಕಪಟದಾರಿ' ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗುವುದು ಅನುಮಾನ. ಸದ್ಯದ ಮಾಹಿತಿ ಪ್ರಕಾರ, ಒಟಿಟಿಯಲ್ಲಿ ಈ ಸಿನಿಮಾ ರಿಲೀಸ್ ಆಗಬಹುದು.


Click it and Unblock the Notifications











