ದರ್ಶನ್ ಜತೆ ಇದೇ ವರ್ಷ ಸಿನಿಮಾ ಎಂದ ತೆಲುಗು ನಿರ್ಮಾಪಕ; ಈ ಹಿಂದೆ ಪುನೀತ್‌ ಜತೆ ಸೆಂಚುರಿ ಬಾರಿಸಿದ್ರು!

ನಿನ್ನೆ ( ಫೆಬ್ರವರಿ 16 ) ಚಾಲೆಂಜಿಂಗ್ ಸ್ಟಾರ್, ಚಂದನವನದ ಬಾಕ್ಸ್ ಆಫೀಸ್ ಸುಲ್ತಾನ ಎಂದೇ ಖ್ಯಾತಿಯನ್ನು ಪಡೆದಿರುವ ನಟ ದರ್ಶನ್ ಅವರ 46ನೇ ಹುಟ್ಟುಹಬ್ಬವಿತ್ತು. ಕಳೆದೆರಡು ವರ್ಷಗಳಲ್ಲಿ ವಿವಿಧ ಕಾರಣಗಳಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳದೇ ತಮ್ಮ ಕೈಗೆ ಸಿಗದಿದ್ದ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ದರ್ಶನ್ ಅಭಿಮಾನಿಗಳು ಈ ಬಾರಿ ಅದ್ದೂರಿಯಾಗಿಯೇ ಆಚರಿಸಿದ್ದಾರೆ.

ಹುಟ್ಟುಹಬ್ಬದ ಹಿಂದಿನ ದಿನದ ರಾತ್ರಿಯೇ ದರ್ಶನ್ ಮನೆ ಮುಂದೆ ಜಮಾಯಿಸಿದ ದರ್ಶನ್ ಅಭಿಮಾನಿಗಳು ನೆಚ್ಚಿನ ನಟನಿಗಾಗಿ ಹಲವು ಬಗೆಯ ಉಡುಗೊರೆಗಳನ್ನು ಹೊತ್ತು ತಂದಿದ್ದರು. ಇನ್ನು ತನಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲು ಬಂದ ಪ್ರತಿಯೊಬ್ಬ ಅಭಿಮಾನಿಗೂ ಸಹ ಕೈಕುಲುಕುವ ಮೂಲಕ ಪ್ರೀತಿ ತೋರಿಸಿದರು ದರ್ಶನ್.

ಒಂದೆಡೆ ಮನೆ ಮುಂದೆ ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ಸಂಭ್ರಮಾಚರಣೆ ನಡೆದರೆ, ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ನಟನೆಯ ಮುಂದಿನ ಚಿತ್ರಗಳನ್ನು ಆಯಾ ಸಿನಿಮಾಗಳಿಗೆ ಬಂಡವಾಳ ಹೂಡಲಿರುವ ನಿರ್ಮಾಪಕರು ಘೋಷಿಸಿದರು. ಇದರಲ್ಲಿ ಮುಖ್ಯವಾಗಿ ಈಗಾಗಲೇ ಘೋಷಣೆಯಾಗಿದ್ದ ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಶನ್‌ ಚಿತ್ರದ ಟೈಟಲ್ ರಿವೀಲ್ ಆದದ್ದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಚಿತ್ರಕ್ಕೆ ಕಾಟೇರ ಎಂಬ ಶೀರ್ಷಿಕೆ ಇಡಲಾಗಿದ್ದು, ಇದಾದ ಬಳಿಕ ದರ್ಶನ್ ನಟಿಸಲಿರುವ ಚಿತ್ರಗಳು ಯಾವುವು ಎಂಬ ಮಾಹಿತಿಯೂ ಸಹ ಅಭಿಮಾನಿಗಳಿಗೆ ಸಿಕ್ಕಂತಾಗಿದೆ. ಈ ಪೈಕಿ ತೆಲುಗು ನಿರ್ಮಾಪಕರೊಬ್ಬರು ಸಿನಿಮಾ ಘೋಷಿಸಿರುವುದು ಸದ್ಯ ದರ್ಶನ್ ಅಭಿಮಾನಿಗಳ ಕುತೂಹಲ ಕೆರಳಿಸಿದೆ.

ದರ್ಶನ್‌ಗೆ ಬಂಡವಾಳ ಹೂಡಲು ಅನಿಲ್ ಸುಂಕರ ಸಿದ್ಧ, ಇದೇ ವರ್ಷ ಸಿನಿಮಾ

ದರ್ಶನ್‌ಗೆ ಬಂಡವಾಳ ಹೂಡಲು ಅನಿಲ್ ಸುಂಕರ ಸಿದ್ಧ, ಇದೇ ವರ್ಷ ಸಿನಿಮಾ

ಚಾಲೆಂಜಿಂಗ್ ಸ್ಟಾರ್‌ಗೆ ಬಂಡವಾಳ ಹೂಡಲು ಸಿದ್ಧರಾಗಿರುವುದು ತೆಲುಗಿನ ಖ್ಯಾತ ನಿರ್ಮಾಪಕ ಅನಿಲ್ ಸುಂಕರ. ಇವರು ಆಹಾ ನಾ ಪೆಲ್ಲಂಟ, ಮಹೇಶ್ ಬಾಬು ಸಿನಿಮಾಗಳಾದ ದೂಕುಡು, ಆಗಡು, ನೇನೊಕ್ಕಡಿನೆ, ಸರಿಲೇರು ನೀಕೆವ್ವರು, ನಾನಿ ನಟನೆಯ ಕೃಷ್ಣ ಗಾಡಿ ವೀರ ಪ್ರೇಮ ಗಾಥ ಚಿತ್ರಗಳು ಸೇರಿದಂತೆ ಸುಮಾರು ಮೂವತ್ತಕ್ಕೂ ಹೆಚ್ಚಿನ ತೆಲುಗು ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ. ಸದ್ಯ ಎಕೆ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನ ನಿರ್ಮಾಪಕನಾಗಿರುವ ಅನಿಲ್ ಸುಂಕರ ಇದೇ ಬ್ಯಾನರ್ ಅಡಿಯಲ್ಲಿ ದರ್ಶನ್ ಸಿನಿಮಾ ನಿರ್ಮಿಸುವುದಾಗಿ ಘೋಷಿಸಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು ಇದೇ ವರ್ಷ ಸಿನಿಮಾ ಎಂದೂ ಸಹ ಬರೆದುಕೊಂಡಿದ್ದಾರೆ. ಸದ್ಯ ಮೆಗಾಸ್ಟಾರ್ ಚಿರಂಜೀವಿ ನಟನೆಯ ಭೋಲಾ ಶಂಕರ್ ಹಾಗೂ ಅಖಿಲ್ ಅಕ್ಕಿನೇನಿ ನಟನೆಯ ಏಜೆಂಟ್ ಚಿತ್ರಗಳನ್ನು ಇವರು ನಿರ್ಮಿಸುತ್ತಿದ್ದಾರೆ.

ಈ ಹಿಂದೆ ಪುನೀತ್ ಜತೆ ಸಿನಿಮಾ

ಈ ಹಿಂದೆ ಪುನೀತ್ ಜತೆ ಸಿನಿಮಾ

ಇನ್ನು ಅನಿಲ್ ಸುಂಕರ ನಿರ್ಮಿಸಲಿರುವ ಎರಡನೇ ಕನ್ನಡ ಸಿನಿಮಾ ಇದಾಗಲಿದ್ದು, ಈ ಹಿಂದೆ 2014ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಪವರ್ ಸಿನಿಮಾಗೆ ಇವರು ಬಂಡವಾಳ ಹೂಡಿದ್ರು. ಪವರ್ ಸಿನಿಮಾಗೆ ತೆಲುಗಿನ ಖ್ಯಾತ 14 ರೀಲ್ಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡಿದ್ದ ಮೂವರು ನಿರ್ಮಾಪಕರಲ್ಲಿ ಅನಿಲ್ ಸುಂಕರ ಸಹ ಓರ್ವರಾಗಿದ್ದರು. ಆಗಿನ ಕಾಲಕ್ಕೆ ಪವರ್ 22 ಕೋಟಿ ಗಳಿಕೆ ಮಾಡಿತ್ತು. ಮೊದಲ ವಾರದ ಕಲೆಕ್ಷನ್‌ನಲ್ಲಿ ಎಲ್ಲಾ ಚಿತ್ರಗಳ ದಾಖಲೆಯನ್ನು ಹಿಂದಿಕ್ಕಿದ್ದ ಪವರ್ ಶತದಿನೋತ್ಸವವನ್ನೂ ಸಹ ಆಚರಿಸಿಕೊಂಡಿತ್ತು. ಪುನೀತ್‌ ರಾಜ್‌ಕುಮಾರ್ ಈ ಸಿನಿಮಾ ಮೂಲಕ ಕಮ್‌ಬ್ಯಾಕ್ ಮಾಡಿದ್ದರು. ಇದು ತೆಲುಗಿನ ಮಹೇಶ್ ಬಾಬು ನಟನೆಯ ದೂಕುಡು ಸಿನಿಮಾದ ರಿಮೇಕ್ ಆಗಿತ್ತು.

ದರ್ಶನ್ ಜತೆ ಮತ್ತೊಂದು ತೆಲುಗು ಬ್ಯಾನರ್ ಸಿನಿಮಾ?

ದರ್ಶನ್ ಜತೆ ಮತ್ತೊಂದು ತೆಲುಗು ಬ್ಯಾನರ್ ಸಿನಿಮಾ?

ಅನಿಲ್ ಸುಂಕರ ಮಾತ್ರವಲ್ಲದೇ ತೆಲುಗಿನ ಮತ್ತೋರ್ವ ನಿರ್ಮಾಪಕರೂ ಸಹ ದರ್ಶನ್ ಸಿನಿಮಾಗೆ ಬಂಡವಾಳ ಹೂಡುವ ಸಾಧ್ಯತೆ ಇದೆ. ಶ್ರೀ ವೆಂಕಟೇಶ್ವರ ಸಿನಿ ಚಿತ್ರ ಎಂಬ ಪ್ರಸಿದ್ಧ ಬ್ಯಾನರ್ ದರ್ಶನ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದು, ಸಿನಿಮಾ ಮಾಡುವ ಮುನ್ಸೂಚನೆ ನೀಡಿದೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಈ ಪ್ರೊಡಕ್ಷನ್ ಹೌಸ್ ನಮ್ಮ ಪ್ರೀತಿಯ ಹೀರೊ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದೆ.

More from Filmibeat

English summary
Telugu producer Anil Sunkara to produce a kannada film for Darshan after Puneeth Rajkumar. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X