52 ವರ್ಷದ ಟಾಲಿವುಡ್‌ನ ಈ ಸ್ಟಾರ್ ನಿರ್ಮಾಪಕ 9 ತಿಂಗಳ ಮಗನಿಗೆ ತಂದೆ.. 6 ವರ್ಷದ ಮೊಮ್ಮನಿಗೆ ಅಜ್ಜ!

By ಫಿಲ್ಮಿಬೀಟ್ ಡೆಸ್ಕ್

ಟಾಲಿವುಡ್‌ನ ಸ್ಟಾರ್ ನಿರ್ಮಾಪಕ ದಿಲ್‌ ರಾಜು. ಸಿನಿಮಾ ಬಿಡುಗಡೆ ವಿಚಾರದಲ್ಲಿ ದಿಲ್‌ ರಾಜು ಲೆಕ್ಕನೇ ಲೆಕ್ಕ. ಸ್ಮಾಲ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿ ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಹಣ ದೋಚುವ ನಿರ್ಮಾಪಕ. ಇದ್ದಿದ್ದು ಇದ್ದಂಗೆ ನೇರವಾಗಿ ಹೇಳಿಬಿಡುವ ವ್ಯಕ್ತಿತ್ವ.

ಇತ್ತೀಚೆಗೆ ದಳಪತಿ ವಿಜಯ್ ನಟನೆಯ ಸಿನಿಮಾ 'ವಾರಿಸು' ನಿರ್ಮಾಣ ಮಾಡಿ ಗೆದ್ದಿದ್ದಾರೆ. ಅಲ್ಲದೆ, ಪ್ಯಾನ್ ಇಂಡಿಯಾ ಡೈರೆಕ್ಟರ್ ಶಂಕರ್ ನಿರ್ದೇಶಿಸುತ್ತಿರುವ 'ಗೇಮ್ ಚೇಂಜರ್' ಸಿನಿಮಾದ ನಿರ್ಮಾಪಕ ಕೂಡ ಇವರೇನೆ.

ದಿಲ್ ರಾಜು ಕೇವಲ ಸಿನಿಮಾ ಫೀಲ್ಡ್‌ನಲ್ಲಷ್ಟೇ ಸಕ್ಸಸ್‌ಪುಲ್ ಅಲ್ಲ. ಬದಲಾಗಿ, ಫ್ಯಾಮಿಲಿ ಲೈಫ್‌ನಲ್ಲೂ ಸಕ್ಸಸ್‌ಫುಲ್. ವಿತರಕನಾಗಿ ಗೆದ್ದ ದಿಲ್ ರಾಜು ನಿರ್ಮಾಪಕನಾಗಿಯೂ ಯಶಸ್ಸು ಕಂಡಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾರಂಗದಲ್ಲಿ ಎರಡು ದಶಕಗಳನ್ನು ಪೂರೈಸಿದ್ದಾರೆ.

ಸಿನಿಮಾರಂಗದಲ್ಲಿ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನಷ್ಟೇ ಕೊಟ್ಟಿಲ್ಲ. ಬದಲಾಗಿ, ಪ್ರತಿಭಾವಂತ ನಿರ್ದೇಶಕರು, ತಂತ್ರಜ್ಞರು, ನಟರನ್ನು ಚಿತ್ರರಂಗಕ್ಕೆ ಪರಿಚಯ ಮಾಡಿಕೊಟ್ಟಿದ್ದಾರೆ. ಈಗ ಕೌಟುಂಬಿಕ ಜೀವನದಲ್ಲೂ ಯಶಸ್ಸು ಕಂಡಿದ್ದಾರೆ.

ದಿಲ್‌ ರಾಜುಗೆ ಈಗ 52 ವರ್ಷ. ಕೆಲವೇ ವರ್ಷಗಳ ಹಿಂದಷ್ಟೇ ದಿಲ್ ರಾಜು ಪತ್ನಿ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದರು. ಆಗ ಬಳಿಕ ದಿಲ್ ರಾಜ್‌ ಎರಡನೇ ಮದುವೆ ಆಗಿದ್ದರು. ಸ್ವತ: ಮಗಳೇ ಮುಂದೆ ನಿಂತು ತಂದೆಗೆ ಎರಡನೇ ಮದುವೆ ಮಾಡಿಸಿದ್ದರು. ಈಗ ದಿಲ್‌ರಾಜು 9 ತಿಂಗಳ ಗಂಡು ಮಗುವಿನ ತಂದೆಯಾಗಿದ್ದಾರೆ.

Telugu Producer Dil Raju Balancing father And grandfather role

ವಿಶೇಷ ಇರೋದೇ ಇಲ್ಲಿ. ದಿಲ್ ರಾಜು ಮಗಳಿಗೂ ಗಂಡು ಮಗುವಿದ್ದಾನೆ. ಆ ಮಗುವಿಗೆ 6 ವರ್ಷ. ಒಂದ್ಕಡೆ 6 ವರ್ಷದ ಮೊಮ್ಮಗನಿಗೆ ಅಜ್ಜನಾಗಿದ್ದಾರೆ. ಇನ್ನೊಂದು ಕಡೆ 9 ತಿಂಗಳ ಮಗನ ತಂದೆನೂ ಆಗಿದ್ದಾರೆ. ತಂದೆ ಹಾಗೂ ಅಜ್ಜನ ಪಾತ್ರವನ್ನು ಮನೆಯಲ್ಲಿ ನಿಭಾಯಿಸುತ್ತಿರುವ ಬಗ್ಗೆ ದಿಲ್‌ರಾಜು ಹೀಗಂದಿದ್ದಾರೆ.

"ನನ್ನ ಮಗನಿಗೆ 9 ತಿಂಗಳು, ನನ್ನ ಮೊಮ್ಮಗನಿಗೆ 6 ವರ್ಷ. ನಾನು ಇಬ್ಬರೊಂದಿಗೂ ಕಾಲ ಕಳೆಯುತ್ತೇನೆ. ನಾನು ನನ್ನ ಮೊಮ್ಮಗನನ್ನು ಭೇಟಿ ಮಾಡಿದಾಗ ಅಜ್ಜನಾಗಿ ಇರುತ್ತೇನೆ. ಅದೇ ನನ್ನ ಮಗನೊಂದಿಗೆ ಇರುವಾಗ ತಂದೆಯಾಗುತ್ತೇನೆ." ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ.

ದಿಲ್ ರಾಜು ಎರಡನೇ ಪತ್ನಿ ಸಾಕಷ್ಟು ಬಾರಿ ತಂದೆ ಹಾಗೂ ಅಜ್ಜ ಈ ಎರಡೂ ಪಾತ್ರವನ್ನು ಹೇಗೆ ನಿಭಾಯಿಸುತ್ತೀರಾ ಎಂದು ಕೇಳುತ್ತಾರಂತೆ. ಅದಕ್ಕೆ ದಿಲ್ ರಾಜು "ಇದು ನನಗೆ ತುಂಬಾನೇ ಸುಲಭ. ನಾನು ಸಿನಿಮಾ ಹಾಗೂ ಫ್ಯಾಮಿಲಿ ಲೈಫ್‌ಗೆ ಹೇಗೆ ಬದಲಾಗುತ್ತೇನೋ ಹಾಗೇ ಮೊಮ್ಮಗನನ್ನು ಭೇಟಿ ಮಾಡಿದಾಗ ಹಾಗೂ ಮಗನೊಂದಿಗೆ ಇದ್ದಾಗ ಬದಲಾಗುತ್ತೇನೆ" ಎಂದು ಹೇಳುತ್ತಾರಂತೆ.

ದಿಲ್ ರಾಜು ಸ್ಯಾಂಡಲ್‌ವುಡ್‌ನ ರಾಕಿಂಗ್‌ ಸ್ಟಾರ್ ಯಶ್ ಜೊತೆನೂ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ. ಸದ್ಯ ಸೂಪರ್‌ಸ್ಟಾರ್‌ಗಳ ಜೊತೆ ಸಿನಿಮಾ ಮಾಡುತ್ತಿರುವ ನಿರ್ಮಾಪಕ ಫ್ಯಾಮಿಲಿ ಲೈಫ್‌ನಲ್ಲಿ ಡಬಲ್ ರೋಲ್ ನಿಭಾಯಿಸುತ್ತಿದ್ದಾರೆ.

More from Filmibeat

English summary
Telugu Producer Dil Raju Balancing father And grandfather role together, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X