ತೆಲುಗು ನಟಿ ಸಮಂತಾಗೆ ಫಾರ್ಮ್‌ ಹೌಸ್ ಗಿಫ್ಟ್ ಕೊಟ್ಟ ನಿರ್ಮಾಪಕ ಯಾರು?

ಸ್ಟಾರ್ ನಟ-ನಟಿಯರು ಕೋಟಿ ಕೋಟಿ ಸಂಭಾವನೆ ಪಡೆಯುವ ಕಾಲ ಇದು. ಕೆಲವರು ಹಣದ ರೂಪದಲ್ಲಿ ಪಡೆದರೆ ಮತ್ತೆ ಕೆಲವರು ಬೇರೆ ಬೇರೆ ರೀತಿ ಪಡೆಯುತ್ತಾರೆ. ತೆಲುಗು ನಟಿ ಸಮಂತಾ ಕ್ರೇಜ್ ಬಗ್ಗೆ ಬಿಡಿಸಿ ಹೇಳುವುದು ಬೇಕಾಗಿಲ್ಲ. ಇವತ್ತಿಗೂ ಸ್ಯಾಮ್ ಬಹುಬೇಡಿಕೆಯ ನಟಿಯಾಗಿ ಮೆರೆಯುತ್ತಿದ್ದಾರೆ.

ಮಯೋಸೈಟಿಸ್ ಸಮಸ್ಯೆಯಿಂದ ನಟಿ ಸಮಂತಾ ಬಳಲುತ್ತಿದ್ದಾರೆ. ಅದರ ವಿರುದ್ಧ ಹೋರಾಡುತ್ತಲೇ 'ಖುಷಿ' ಸಿನಿಮಾ ಹಾಗೂ 'ಸಿಟಾಡೆಲ್' ವೆಬ್‌ ಸೀರಿಸ್‌ ಶೂಟಿಂಗ್ ಮುಗಿಸಿದ್ದರು. ಬಳಿಕ ದೊಡ್ಡದಾಗಿ ಯಾವುದೇ ಪ್ರಾಜೆಕ್ಟ್ ಒಪ್ಪಿಕೊಳ್ಳಲಿಲ್ಲ. ಸಾಧ್ಯವಾದಷ್ಟು ವಿಶ್ರಾಂತಿ ಪಡೆಯುತ್ತಿದ್ದಾರೆ. 'ಸಿಟಾಡೆಲ್' ವೆಬ್ ಸೀರಿಸ್ ಪ್ರಚಾರದಲ್ಲಿ ಇತ್ತೀಚೆಗೆ ಬ್ಯುಸಿಯಾಗಿದ್ದರು.

Telugu Producer Gifted Farmhouse to Actress Samantha Ruth Prabhu

ಸಮಂತಾ- ನಾಗಚೈತನ್ಯ ಡಿವೋರ್ಸ್ ಪಡೆದು ದೂರಾಗಿದ್ದಾರೆ. ಇನ್ನು ಇತ್ತೀಚೆಗೆ ನಾಗಚೈತನ್ಯ ಎರಡನೇ ಮದುವೆ ಕೂಡ ಅದ್ಧೂರಿಯಾಗಿ ನೆರವೇರಿದೆ. ಈ ಬಗ್ಗೆ ಪರೋಕ್ಷವಾಗಿ ಸಮಂತಾ ಪ್ರತಿಕ್ರಿಯಿಸಿದ್ದರು. ಚೈತು ಜೊತೆಗಿನ ಲವ್, ಮದುವೆ ಬಗ್ಗೆಯೂ ಆಗಾಗ್ಗೆ ಮಾತನಾಡುವ ಪ್ರಯತ್ನ ಮಾಡಿದ್ದರು.

ಸದ್ಯ ಸಮಂತಾಗೆ ನಿರ್ಮಾಪಕರೊಬ್ಬರು ಫಾರ್ಮ್‌ ಹೌಸ್ ಉಡುಗೊರೆಯಾಗಿ ಕೊಟ್ಟಿದ್ದರು ಎನ್ನುವ ಚರ್ಚೆ ಜೋರಾಗಿದೆ. ಬಹಳ ಹಿಂದೆಯೇ ಇಂತಹದೊಂದು ಗುಸುಗುಸು ಕೇಳಿಬಂದಿತ್ತು. ಇದೀಗ ಆ ನಿರ್ಮಾಪಕರು ಸಂದರ್ಶನವೊಂದರಲ್ಲಿ ಪರೋಕ್ಷವಾಗಿ ಆ ಬಗ್ಗೆ ಮಾತನಾಡಿದ್ದಾರೆ. ಹಾಗಾಗಿ ಮತ್ತೆ ಆ ವಿಚಾರ ಚರ್ಚೆಗೆ ಬಂದಿದೆ.

Telugu Producer Gifted Farmhouse to Actress Samantha Ruth Prabhu

ದಶಕದ ಹಿಂದೆ ನಟಿ ಸಮಂತಾ ಕ್ರೇಜ್ ಜೋರಾಗಿತ್ತು. ತೆಲುಗಿನ 'ಯೇ ಮಾಯಾ ಚೇಸಾವೆ' ಚಿತ್ರದ ಮೂಲಕ ಸ್ಯಾಮ್ ಬಣ್ಣದಲೋಕಕ್ಕೆ ಕಾಲಿಟ್ಟಿದ್ದರು. ಬಳಿಕ 'ದೂಕುಡು', 'ಈಗ', 'ಅತ್ತಾರಿಂಟಿಕಿ ದಾರೇದಿ' ರೀತಿಯ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ನಟಿಸಿ ಗೆದ್ದರು. ಇದೇ ಸಮಯದಲ್ಲಿ ಒಂದು ಚಿತ್ರಕ್ಕೆ ನಾಯಕಿಯಾಗಿ ನಟಿಸಲು ಭಾರೀ ಸಂಭಾವನೆಯನ್ನು ಸಮಂತಾ ಪಡೆದಿದ್ದರು.

ಚಿತ್ರೀಕರಣದ ನಡುವೆಯೇ ಸಮಂತಾ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲಿದ್ದರು. ಆಗ ಆಕೆಯ ಚಿಕಿತ್ಸೆಗೆ 25 ಲಕ್ಷ ರೂ. ನಿರ್ಮಾಪಕರು ಕೊಟ್ಟಿದ್ದರು. ಬಳಿಕ ಅದನ್ನು ಸಂಭಾವನೆಯಲ್ಲಿ ಸರಿದೂಗಿಸಿಕೊಂಡಿದ್ದರು. ನಿರ್ಮಾಪಕರು ಸಹಾಯ ಮಾಡಿದ್ದನ್ನು ಸಮಂತಾ ವೇದಿಕೆಯಲ್ಲೇ ಒಪ್ಪಿಕೊಂಡಿದ್ದರು. ಅಂದಹಾಗೆ ಸಮಂತಾಗೆ ಹೀಗೆ ಸಹಾಯ ಮಾಡಿದ್ದು ತೆಲುಗಿನ ಖ್ಯಾತ ನಿರ್ಮಾಪಕ ಬೆಲ್ಲಂಕೊಂಡ ಸುರೇಶ್.

ತೆಲುಗಿನಲ್ಲಿ ಬೆಲ್ಲಂಕೊಂಡ ಸುರೇಶ್ ಹಲವು ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. 2014ರಲ್ಲಿ ತಮ್ಮ ಮಗ ಶ್ರೀನಿವಾಸ್‌ನನ್ನು ಚಿತ್ರರಂಗಕ್ಕೆ ಪರಿಚಯಿಸಲು ಮುಂದಾಗಿದ್ದರು. ದೊಡ್ಡಮಟ್ಟದಲ್ಲೇ ಸಿನಿಮಾ ಮಾಡಿ ಗ್ರ್ಯಾಂಡ್ ಲಾಂಚ್ ಮಾಡಲು ಮನಸ್ಸು ಮಾಡಿದ್ದರು. ವಿ. ವಿ ವಿನಾಯಕ್ ನಿರ್ದೇಶನದಲ್ಲಿ 'ಅಲ್ಲುಡು ಸೀನು' ಚಿತ್ರ ನಿರ್ಮಿಸಿದ್ದರು. ಅವತ್ತಿನ ಕಾಲಕ್ಕೆ 38 ಕೋಟಿ ರೂ. ಖರ್ಚು ಮಾಡಿ ಸಿನಿಮಾ ಮಾಡಿದ್ದರು. ಈ ವಿಚಾರವನ್ನು ಇತ್ತೀಚೆಗೆ M9 ನ್ಯೂಸ್ ಸಂದರ್ಶನದಲ್ಲಿ ಸುರೇಶ್ ಹೇಳಿದ್ದಾರೆ.

'ಅಲ್ಲುಡು ಸೀನು' ಚಿತ್ರಕ್ಕೆ ಆಗ ಬಹುಬೇಡಿಕೆಯ ನಟಿಯಾಗಿದ್ದ ಸಮಂತಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದರು. ಮಿಲ್ಕಿ ಬ್ಯೂಟಿ ತಮನ್ನಾ ಐಟಂ ಸಾಂಗ್ ಕೂಡ ಚಿತ್ರದಲ್ಲಿ ಇತ್ತು. ತಕ್ಕ ಮಟ್ಟಿಗೆ ಸಿನಿಮಾ ಸದ್ದು ಮಾಡಿತ್ತು. ಚಿತ್ರಕ್ಕಾಗಿ ಹಾಕಿದ್ದ ಹಣವೆಲ್ಲಾ ವಾಪಸ್ ಬಂದಿತ್ತು ಎಂದು ಬೆಲ್ಲಂಕೊಂಡ ಸುರೇಶ್ ಹೇಳಿದ್ದಾರೆ.

ಸಮಂತಾಗೆ ಫಾರ್ಮ್‌ ಹೌಸ್ ಉಡುಗೊರೆ ಕೊಟ್ಟಿದ್ದು ನಿಜಾನಾ? ಎನ್ನುವ ಪ್ರಶ್ನೆಗೆ ಸುರೇಶ್ ಉತ್ತರಿಸಿದ್ದಾರೆ. "ಫಾರ್ಮ್‌ ಹೌಸ್ ಕೊಟ್ಟಿದ್ದು ನಂತರದ ವಿಚಾರ. ಮೊದಲು ಆಕೆಗೆ ಸಮಸ್ಯೆ ಆಗಿದ್ದಾಗ 25 ಲಕ್ಷ ರೂ. ಸಹಾಯ ಮಾಡಿದ್ದೆ. ಬಳಿಕ ಅದನ್ನು ಸಂಭಾವನೆಯಲ್ಲಿ ಅಡ್ಜೆಸ್ಟ್ ಮಾಡಿಕೊಂಡಿದ್ದೆವು. ಆಕೆ ಆ ಕೃತಜ್ಞತೆ ಉಳಿಸಿಕೊಂಡಿದ್ದಾಳೆ. ಬಳಿಕ ನಮ್ಮ ಬ್ಯಾನರ್‌ನಲ್ಲಿ 3 ಸಿನಿಮಾ ಮಾಡಿದಳು. ಇವತ್ತಿಗೂ ಉತ್ತಮ ಒಡನಾಟವಿದೆ" ಎಂದು ಹೇಳಿದ್ದಾರೆ.

ಸಮಂತಾಗೆ ಫಾರ್ಮ್‌ ಹೌಸ್ ಗಿಫ್ಟ್ ಕೊಟ್ಟ ವಿಚಾರವನ್ನು ನಿರ್ಮಾಪಕ ಬೆಲ್ಲಂಕೊಂಡ ಸುರೇಶ್ ಅಲ್ಲಗಳೆಯಲಿಲ್ಲ. ಹಾಗಾಗಿ ಆ ವಿಚಾರ ನಿಜ ಇರಬಹುದು, ಆಗ ಕೇಳಿಬಂದ ವದಂತಿ ನಿಜವೇ ಎಂದು ಈಗ ಟಾಲಿವುಡ್ ಅಂಗಳದಲ್ಲಿ ಚರ್ಚೆ ಆಗುತ್ತಿದೆ. ಅಂದಹಾಗೆ ಆಗ ಆ ಫಾರ್ಮ್‌ಹೌಸ್ ಬೆಲೆ 2 ಕೋಟಿ ರೂ. ಎನ್ನಲಾಗಿತ್ತು.

More from Filmibeat

English summary
Is Famous film Producer gifted Farmhouse worth Rs. 2 cr to Samantha?;
Read more about: samantha telugu tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X