ಅಯ್ಯೋ 'ಸಪ್ತಸಾಗರದಾಚೆ ಎಲ್ಲೋ' ಬಹಳ ಗೋಳಿನ ಸಿನ್ಮಾ ಅಂದ್ರು.. ಅದ್ಕೆ ನಾನು ನೋಡ್ಲಿಲ್ಲ": ನಿರ್ಮಾಪಕ ನಾಗವಂಶಿ
ಹೇಮಂತ್ ರಾವ್ ನಿರ್ದೇಶನದ 'ಸಪ್ತಸಾಗರದಾಚೆ ಎಲ್ಲೋ' ಸರಣಿ ಸಿನಿಮಾಗಳು ರಿಲೀಸ್ ಆಗಿ ಪ್ರೇಕ್ಷಕರ ಮನಗೆದ್ದಿದೆ. ಪರಭಾಷಿಕರು ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಸೈಡ್ B ಏಕಕಾಲಕ್ಕೆ ಪರಭಾಷೆಗಳಲ್ಲೂ ತೆರೆಕಂಡಿದೆ. 2ನೇ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಕೆಲವರಿಗೆ 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾ ಬಹಳ ಇಷ್ಟವಾದರೆ ಮತ್ತೆ ಕೆಲವರಿಗೆ ಇಷ್ಟವಾಗಿಲ್ಲ. ಕೆಲವರು ಸೈಡ್ A ನೋಡಿ ಸೈಡ್ B ನೋಡಲು ಹಿಂದೇಟು ಹಾಕ್ತಿರೋದು ಇದೆ. ಆದರೆ ಕೆಲವರು ಮಾತ್ರ ಪದೇ ಪದೇ ಸಿನಿಮಾ ನೋಡುತ್ತಿದ್ದಾರೆ. ಮನು, ಪ್ರಿಯಾ ಲವ್ ಸ್ಟೋರಿ ಅಷ್ಟರಮಟ್ಟಿಗೆ ಮೋಡಿ ಮಾಡ್ತಿದೆ. ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಚೈತ್ರಾ ಆಚಾರ್ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ತೆಲುಗು ನಿರ್ದೇಶಕಿ ನಂದಿನಿ ರೆಡ್ಡಿ ಸೇರಿದಂತೆ ತೆಲುಗು ಫಿಲ್ಮ್ ಮೇಕರ್ಸ್ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಸೈಡ್ A ಕನ್ನಡದಲ್ಲಿ ರಿಲೀಸ್ ಸಕ್ಸಸ್ ಆದ ಬಳಿಕ ತೆಲುಗಿಗೆ ಡಬ್ ಆಗಿ ತೆರೆಕಂಡಿತ್ತು. ಬಳಿಕ ಎಲ್ಲಾ ಭಾಷೆಗಳಲ್ಲಿ ಓಟಿಟಿಗೆ ಬಂತು. ಆದರೆ ಸೀಕ್ವೆಲ್ ಏಕಕಾಲಕ್ಕೆ 4 ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಸೀಕ್ವೆಲ್ ಕೂಡ ಪರಭಾಷಿಕರಿಗೆ ಇಷ್ಟವಾಗಿದೆ.
ತೆಲುಗು ಸಿನಿಮಾ ನಿರ್ಮಾಪಕರು, ನಿರ್ದೇಶಕರು ಹಾಗೂ ಕಲಾವಿದರ ರೌಂಡ್ ಟೇಬಲ್ ಚರ್ಚೆಯಲ್ಲಿ 'ಸಪ್ತಸಾಗರದಾಚೆ ಎಲ್ಲೋ' ಟಾಪಿಕ್ ಬಂದಿದೆ. ಈ ವೇಳೆ ನಿರ್ಮಾಪಕ ನಾಗವಂಶಿ ರಕ್ಷಿತ್ ಶೆಟ್ಟಿ ಸಿನಿಮಾ ಬಗ್ಗೆ ಮಾಡಿರೋ ಕಾಮೆಂಟ್ ವೈರಲ್ ಆಗುತ್ತಿದೆ. ಚಿತ್ರದ ಬಗ್ಗೆ ವ್ಯಂಗ್ಯಭರಿತವಾಗಿ ನಾಗವಂಶಿ ಮಾತನಾಡಿದ್ದಾರೆ. 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾ ಬಹಳ ಗೋಳು ಅಂದ್ರು ಅದ್ಕೆ ನಾನು ನೋಡಿಲ್ಲ ಎಂದಿದ್ದಾರೆ.
ಫಿಲ್ಮ್ ಕಂಪಾನಿಯನ್ ಸೌತ್ ಯೂಟ್ಯೂಬ್ ಚಾನಲ್ ರೌಂಡ್ ಟೇಬಲ್ ಸಂದರ್ಶನದಲ್ಲಿ ತೆಲುಗು ಚಿತ್ರ ನಿರ್ಮಾಪಕರಾದ ನಾಗವಂಶಿ, ಶೋಬು ಯರ್ಲಾಗಡ್ಡ, ನಿರ್ದೇಶಕರಾದ ಕಾರ್ತಿಕ್ ದಂಡು, ನಟಿ ಸ್ವಾತಿ ಹಾಗೂ ನಟ ಪ್ರಿಯದರ್ಶಿ ಭಾಗಿ ಆಗಿದ್ದರು. ತೆಲುಗು ಸಿನಿಮಾಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದ್ದಾರೆ. ಓಟಿಟಿ, ಥಿಯೇಟರ್ ಬಗ್ಗೆಯೂ ಹೆಚ್ಚಿನ ಚರ್ಚೆ ನಡೆದಿದೆ.

ನಿರ್ದೇಶಕ ಕಾರ್ತಿಕ್ ದಂಡು ಮಾತನಾಡುತ್ತಾ, ನನಗೆ 'ಸಪ್ತಸಾಗರಾಲು ದಾಟಿ' ಸಿನಿಮಾ ಇಷ್ಟ ಆಯ್ತು. ಸೈಡ್ A, ಸೈಡ್ B ಇನ್ನು ನೋಡಿಲ್ಲ ಎಂದಿದ್ದಾರೆ. ಕೂಡಲೇ ನಿರ್ಮಾಪಕ ನಾಗವಂಶಿ "ನನಗೆ ಯಾರೋ ಹೇಳಿದರು ಅದು ಬಹಳ ಗೋಳಿನ ಸಿನ್ಮಾ ಅಂತ. ಅದ್ಕೆ ಭಯವಾಗಿ ನಾನು ನೋಡಲಿಲ್ಲ" ಎಂದಿದ್ದಾರೆ. ನಿರೂಪಕ ಇಲ್ಲ ಸೈಡ್ A ಕೊಂಚ ಗೋಳು, ಸೈಡ್ B ಪರವಾಗಿಲ್ಲ ಎಂದಿದ್ದಾರೆ.
ಕೂಡಲೇ ನಾಗವಂಶಿ "ಬಹಳ ಗೋಳಿನ ಸಿನಿಮಾ ಅಂತಾರೆ ಅದ್ಕೆ ಯಾವ ಪಾರ್ಟ್ ಸಹ ನೋಡಲಿಲ್ಲ. ಅಷ್ಟೊಂದು ಗೋಳು ಅಂತಾರೆ. ಮ್ಮ ಜೀವನದಲ್ಲಿರುವ ಗೋಳು ಸಾಲದಾ? ದಿನ ಇರೋ ಟೆನ್ಷನ್ ಸಾಲದು ಅಂತ ಥಿಯೇಟರ್‌ಗೆ ಹೋಗಿ ಸಂಕಟಪಡುವುದು ಯಾಕೆ? ಎಂದಿದ್ದಾರೆ.
ನಟಿ ಸ್ವಾತಿ ರೆಡ್ಡಿ "ನಿಮಗ್ಯಾಕೆ ಅಷ್ಟು ಭಯ" ಎಂದು ಕೇಳಿದ್ದಕ್ಕೆ, ನಾಗವಂಶಿ "ಭಯ ಅಲ್ಲ.. ದುಡ್ಡು ಕೊಟ್ಟು ಟಿಕೆಟ್ ತಗೊಂಡು ಹೋಗಿ ಥಿಯೇಟರ್ ಒಳಗೆ ಕೂತು ನೋವು ಅನುಭವಿಸುವುದು ಯಾಕೆ? ಎಂದಿದ್ದಾರೆ. ಸಿನಿಮಾ ನೋಡಿದಾಗ ಹೊಸ ದೃಷ್ಟಿಕೋನ ಬರುತ್ತದೆ ಅಲ್ವಾ? ಅಂದ್ರೆ, ಅಯ್ಯೋ ಅಂತಹ ದೃಷ್ಟಿಕೋನ ಬೇಡವೇ ಬೇಡ ಎಂದು ಎಲ್ಲರೂ ನಕ್ಕಿದ್ದಾರೆ. "2 ಗಂಟೆ ಎಲ್ಲಾ ಮರೆತು ಸಿನಿಮಾ ನೋಡಿ ನಗುವುದಕ್ಕೆ ಥಿಯೇಟರ್‌ಗೆ ಹೋಗ್ತಾರೆ. ನಾನು ನಿಜಜೀವನದಲ್ಲಿ ಮಾಡೋಕೆ ಆಗದ್ದನ್ನು ಹೀರೊ ಮಾಡಿದಾಗ ನೋಡಿ ಚಪ್ಪಾಳೆ ಹೊಡೆಯುವುದಕ್ಕೆ" ಎಂದು ನಾಗವಂಶಿ ಮಾತು ಮುಗಿಸಿದ್ದಾರೆ.


Click it and Unblock the Notifications











