For Quick Alerts
  ALLOW NOTIFICATIONS  
  For Daily Alerts

  ಮಲ್ಪಿಫ್ಲೆಕ್ಸ್ ಪ್ರತಿನಿಧಿಗಳ ಭೇಟಿ ಮಾಡಿದ ನಿರ್ಮಾಪಕರು, ಪಾಪ್‌ಕಾರ್ನ್ ಬೆಲೆ ಇಳಿಕೆ!?

  |

  ತೆಲುಗು ನಿರ್ಮಾಪಕರು ತಮ್ಮೆಲ್ಲ ಸಿನಿಮಾಗಳ ಚಿತ್ರೀಕರಣವನ್ನು ಬಂದ್ ಮಾಡಿದ್ದು, ತೆಲುಗು ಚಿತ್ರರಂಗದ ಪ್ರಗತಿಗೆ ಅಗತ್ಯವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ ಜಾರಿಗೆ ತರಲು ಮುಂದಾಗಿದ್ದಾರೆ.

  ಚಿತ್ರಮಂದಿರಗಳಿಗೆ, ಮಲ್ಟಿಫ್ಲೆಕ್ಸ್‌ಗಳಿಗೆ ಜನ ಬರುತ್ತಿಲ್ಲದೇ ಇರುವ ಬಗ್ಗೆ ಚರ್ಚಿಸಿರುವ ನಿರ್ಮಾಪಕರು, ಮಲ್ಟಿಫ್ಲೆಕ್ಸ್‌ಗಳಲ್ಲಿ ದುಬಾರಿಯಾಗಿರುವ ತಿಂಡಿ ತಿನಿಸುಗಳ ಬೆಲೆಯೂ ಕಾರಣವೆಂದು ಗುರುತಿಸಿದ್ದು, ಈ ಬಗ್ಗೆ ಚರ್ಚಿಸಲು ಮಲ್ಟಿಫ್ಲೆಕ್ಸ್‌ಗಳ ಪ್ರತಿನಿಧಿಗಳನ್ನು ಭೇಟಿಯಾಗಿದ್ದಾರೆ.

  ಚಿತ್ರಮಂದಿರ, ಚಿತ್ರರಂಗದ ಮೇಲೆ ಹಿಡಿತ ಸಾಧಿಸುವ ಸಿಎಂ ಜಗನ್ ಯೋಜನೆಗೆ ಆರಂಭಿಕ ಹಿನ್ನಡೆ!ಚಿತ್ರಮಂದಿರ, ಚಿತ್ರರಂಗದ ಮೇಲೆ ಹಿಡಿತ ಸಾಧಿಸುವ ಸಿಎಂ ಜಗನ್ ಯೋಜನೆಗೆ ಆರಂಭಿಕ ಹಿನ್ನಡೆ!

  ಹಲವು ಮಲ್ಟಿಫ್ಲೆಕ್ಸ್‌ಗಳಲ್ಲಿ ಟಿಕೆಟ್ ದರಕ್ಕಿಂತಲೂ ಹೆಚ್ಚಿನ ದರ ಪಾಪ್‌ಕಾರ್ನ್, ಕೂಲ್‌ಡ್ರಿಂಕ್ಸ್‌ಗಳಿಗೆ ಇರುವುದು ತೀರ ಸಾಮಾನ್ಯ ಎಂಬಂತಾಗಿದೆ. ಹಿಂದೆ ಕುಟುಂಬ ಸಮೇತ ಚಿತ್ರಮಂದಿರಕ್ಕೆ ಬಂದು ಚಿಪ್ಸ್, ಕೂಲ್‌ಡ್ರಿಂಕ್ಸ್ ಖರೀದಿಸಿ ಸೇವಿಸಿದ್ದ ಮಂದಿ ಈಗ ಮಲ್ಟಿಫ್ಲೆಕ್ಸ್‌ಗೆ ಬಂದು ಪಾಪ್‌ಕಾರ್ನ್ ತಿನ್ನಲಾಗದಂತಾಗಿದ್ದಾರೆ.

  ಮಲ್ಟಿಫ್ಲೆಕ್ಸ್‌ ಪ್ರತಿನಿಧಿಗಳನ್ನು ಭೇಟಿ ಮಾಡಿರುವ ನಿರ್ಮಾಪಕರು ಮಲ್ಟಿಫ್ಲೆಕ್ಸ್‌ಗಳಲ್ಲಿ ಮಾರಾಟ ಮಾಡಲಾಗುವ ತಿಂಡಿ-ತಿನಿಸುಗಳ ಬೆಲೆ ಇಳಿಕೆಗೆ ಬೇಡಿಕೆ ಇಟ್ಟಿದ್ದಾರೆ. ಜೊತೆಗೆ ನಿರ್ಮಾಪಕ ಹಾಗೂ ಮಲ್ಟಿಫ್ಲೆಕ್ಸ್‌ಗಳ ನಡುವಿನ ಲಾಭ ಹಂಚಿಕೆ ವಿಷಯವಾಗಿಯೂ ಇದೇ ಸಮಯದಲ್ಲಿ ಚರ್ಚಿಸಲಾಗಿದೆ.

  ಮಲ್ಟಿಫ್ಲೆಕ್ಸ್‌ಗಳಲ್ಲಿ ಮಾರಾಟ ಮಾಡಲಾಗುವ ತಿನಿಸುಗಳ ಕ್ವಾಂಟೆಟಿ ತಗ್ಗಿಸಿ ಅದಕ್ಕೆ ತಕ್ಕಂತೆ ಬೆಲೆಗಳನ್ನೂ ತಗ್ಗಿಸಬಹುದು ಇದರಿಂದ ಮಲ್ಟಿಫ್ಲೆಕ್ಸ್‌ಗಳಿಗೆ ನಷ್ಟವಾಗುವುದಿಲ್ಲ. ಇರುವ ಬೆಲೆಗೇ ತಿನಿಸುಗಳನ್ನು ಮಾರಿದಂತಾಗುತ್ತದೆ ಎಂಬ ಸಲಹೆಯನ್ನು ಸಹ ನಿರ್ಮಾಪಕರು ಮಲ್ಟಿಫ್ಲೆಕ್ಸ್‌ ಪ್ರತಿನಿಧಿಗಳಿಗೆ ನೀಡಿದ್ದಾರೆ. ಮತ್ತೆ ಆಗಸ್ಟ್ 10 ರಂದು ಮಲ್ಟಿಫ್ಲೆಕ್ಸ್ ಪ್ರತಿನಿಧಿಗಳು ಹಾಗೂ ನಿರ್ಮಾಪಕರ ಸಭೆ ನಡೆಯಲಿದೆ.

  ಆಗಸ್ಟ್ 1 ರಿಂದ ತೆಲುಗು ಚಿತ್ರರಂಗದಲ್ಲಿ ಎಲ್ಲ ಸಿನಿಮಾಗಳ ಚಿತ್ರೀಕರಣಗಳು ಬಂದ್ ಆಗಿವೆ. ಚಿತ್ರಮಂದಿರಗಳಿಗೆ ಜನರು ಬರುವುದು ಕಡಿಮೆ ಆಗಿರುವ ಕಾರಣ ಹಾಗೂ ತೆಲುಗು ಸಿನಿಮಾ ನಿರ್ಮಾಪಕರಿಗೆ ಬರುವ ಲಾಭದ ಪ್ರಮಾಣದಲ್ಲಿ ಇಳಿಕೆಯಾಗಿರುವುದರ ಬಗ್ಗೆ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸಲು ನಿರ್ಮಾpಕರು ಚಿತ್ರೀಕರಣ ಬಂದ್‌ ನಿರ್ಣಯ ತೆಗೆದುಕೊಂಡಿದ್ದಾರೆ.

  ತೆಲುಗಿನ ಸ್ಟಾರ್ ನಟರ ಸಂಭಾವನೆ ಇಳಿಕೆ ಬಗ್ಗೆಯೂ ಚರ್ಚೆಯಾಗುತ್ತಿದ್ದು, ದಿಲ್ ರಾಜು ನೇತೃತ್ವದ ನಿರ್ಮಾಪಕರ ಗಿಲ್ಡ್ ಈಗಾಗಲೇ ಕೆಲವು ಸ್ಟಾರ್ ನಟರ ಬಳಿ ಚರ್ಚಿಸಿ ಸಂಭಾವನೆ ಇಳಿಸಿಕೊಳ್ಳುವಂತೆ ಮನವಿ ಮಾಡಿದೆ. ಅಂತೆಯೇ ನಟ ಚಿರಂಜೀವಿ ಸೇರಿದಂತೆ ಕೆಲವು ನಿರ್ಮಾಪಕರು ಸಂಭಾವನೆ ಇಳಿಸಿಕೊಳ್ಳಲು ಸಿದ್ಧವಾಗಿದ್ದಾರೆ.

  Telugu movie producers met Multiplex representatives and discuss about revenue sharing and other things.
  English summary
  Telugu movie producers met Multiplex representatives and discuss about revenue sharing and other things.
  Friday, August 5, 2022, 17:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X