ಶೂಟಿಂಗ್ ಆರಂಭಕ್ಕೂ ಮುನ್ನವೇ 400 ಕೋಟಿ ಆಫರ್ ಪಡೆದ 'ಪುಷ್ಪ 2'!
ಪುಷ್ಪ' ಸಿನಿಮಾ ಸೂಪರ್ ಹಿಟ್ ಆಗಿದೆ. ಸಿನಿಮಾ ಬಿಡುಗಡೆ ಆದ ಕೇವಲ 20 ದಿನಕ್ಕೆ ಒಟಿಟಿಯಲ್ಲಿ ಬಿಡುಗಡೆ ಕೂಡ ಆಗಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಚಿತ್ರ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಬಾಕ್ಸಾಫೀಸ್‌ನಲ್ಲಿ ಪುಷ್ಪ ಎಲ್ಲಿಲ್ಲದ ಸದ್ದು ಮಾಡುತ್ತಿದೆ. ಗಳಿಕೆಯಲ್ಲಿ ಒಂದೊಂದೇ ದಾಖಲೆಗಳನ್ನು ಬ್ರೇಕ್ ಮಾಡಿಕೊಂಡು ಬಂದಿತ್ತು. ಇದೀಗ ಒಟಿಟಿ ನಲ್ಲೂ ಸಖತ್ ಸೌಂಡ್ ಮಾಡುತ್ತಿದೆ. 'ಪುಷ್ಪ' ಚಿತ್ರದಲ್ಲಿರುವ ಹಾಡುಗಳು ಕೂಡ ಸಾಕಷ್ಟು ಜನಪ್ರಿಯವಾಗಿವೆ.
ಪುಷ್ಪ ಸಿನಿಮಾವನ್ನು ಮೆಚ್ಚಿಕೊಂಡ ಅದೆಷ್ಟೋ ಅಭಿಮಾನಿಗಳು ಇದೀಗ ಪುಷ್ಪ ಪಾರ್ಟ್ 2 ಗಾಗಿ ಎದುರು ನೋಡುತ್ತಿದ್ದಾರೆ. ಪುಷ್ಪ 2 ಸಿನಿಮಾ ಹೇಗೆ ಇರಲಿದೆ, ಯಾವ ರೀತಿ ಮೂಡಿ ಬರಲಿದೆ, ಪುಷ್ಪರಾಜ್ ಹೇಗೆ ಕಾಣಿಸಿಕೊಳ್ಳಲಿದ್ದಾನೆ ಎಂಬ ಬಗ್ಗೆ ಹಲವು ಕುತೂಹಲಗಳನ್ನು ಇಟ್ಟುಕೊಂಡು ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಸಿನಿಮಾ ರಿಲೀಸ್ ಆಗೋಕು ಮುಂಚಿತವಾಗಿಯೇ ಪುಷ್ಪ 2 ಚಿತ್ರಕ್ಕೆ ಇದೀಗ ಬೇಡಿಕೆ ಹೆಚ್ಚಾಗುತ್ತಿದೆ. ಪುಷ್ಪ ಪಾರ್ಟ್ 1 ಮಾಡಿದ ಕಮಾಲ್‌ಗೆ ಬೆರಗಾಗಿರುವ ಸಿನಿಮಾ ಮಂದಿ ಪುಷ್ಪ 2 ನಿಂದ ಉತ್ತಮ ಲಾಭ ಮಾಡಿಕೊಳ್ಳಲು ಕಾಯುತ್ತಿದ್ದಾರೆ. ಇದೇ ಕಾರಣಕ್ಕೆ ಪುಷ್ಪ 2 ರಿಲೀಸ್‌ಗು ಮುಂಚೆಯೇ ಕೋಟಿ ಕೋಟಿ ಬೇಡಿಕೆ ಸಿಗುತ್ತಿದೆ. ಶೂಟಿಂಗ್ ಆರಂಭಕ್ಕೆ ಮುನ್ನವೇ 400 ಕೋಟಿ ಆಫರ್ ಪುಷ್ಪ 2 ಬಳಿ ಇದೆ.
ಹೌದು ಪುಷ್ಪ 2 ಇನ್ನು ಶೂಟಿಂಗ್ ಆರಂಭ ವಾಗಿಲ್ಲ. ರಿಲೀಸ್ ಯಾವಾಗ ಎಂಬುದರ ಬಗ್ಗೆಯೇ ಇನ್ನು ಗೊತ್ತಿಲ್ಲ. ಹೀಗಿರುವಾಗಲೇ ಪುಷ್ಪ 2 ಚಿತ್ರಕ್ಕೆ ಭಾರೀ ಬೇಡಿಕೆ ಹೆಚ್ಚಾಗುತ್ತಿದೆ. ಸಿನಿಮಾ ರಿಲೀಸ್‌ಗು ಮುನ್ನ ಓಟಿಟಿಗಳು ಸಿನಿಮಾ ಖರೀದಿಗೆ ಅಡ್ವಾನ್ಸ ಬುಕ್ ಮಾಡಿಕೊಳ್ಳುತ್ತವೆ. ಆದರೇ ಪುಷ್ಪ 2ಗೆ ಓಟಿಟಿ ಕಡೆಯಿಂದ 400 ಕೋಟಿ ಆಫರ್ ಬಂದಿಲ್ಲ. ಬದಲಾಗಿ ಪುಷ್ಪ 2 ಚಿತ್ರದ ಚಿತ್ರಮಂದಿರದ ಹಕ್ಕಿಗೆ 400 ಕೋಟಿ ಆಫರ್ ಬಂದಿದೆ ಅನ್ನೋ ವಿಚಾರವನ್ನು ಖಾಸಗೀ ಮ್ಯಾಗಝೀನ್ ಒಂದು ವರದಿ ಮಾಡಿದೆ.

ಪುಷ್ಪ ಸಿನಿಮಾ ಈಗಾಗಲೇ ರಿಲೀಸ್ ಆಗಿ ಥಿಯೇಟರ್ ಕಲೆಕ್ಷನ್ ಮತ್ತು ಓಟಿಟಿಯಲ್ಲಿ ಉತ್ತಮ ಪ್ರದರ್ಶನ ಕಾಣುವುದರ ಜೊತೆಗೆ ಗಳಿಕೆಯಲ್ಲೂ ಸಾಕಷ್ಟು ರೆಕಾರ್ಡ್‌ಗಳನ್ನು ಬ್ರೇಕ್ ಮಾಡಿದೆ. ಹೀಗೆ ರಿಲೀಸ್ ಆಗಿ ಕೋರೊನಾ ನಡುವೆಯೂ ಗಲ್ಲಾಪೆಟ್ಟಿಗೆ ಉಡೀಸ್ ಮಾಡಿರುವ ಚಿತ್ರದ ಪಾರ್ಟ್ 2 ಬರುತ್ತಿದೆ ಅಂದರೆ ಹೀಗೆ ಆಫರ್‌ಗಳು ಬರುವುದು ಸಹಜ. ಸದ್ಯ ಈ ವಿಚಾರದ ಬಗ್ಗೆ ಪುಷ್ಪ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಆದರೆ 400 ಕೋಟಿ ಆಫರ್ ಬಂದಿರೋದು ನಿಜ ಎನ್ನುತ್ತಿವೆ ಕೆಲ ಮೂಲಗಳು. ಆದರೇ ಈ ವಿಚಾರದ ಬಗ್ಗೆ ಪುಷ್ಪ ನಿರ್ಮಾಣ ಸಂಸ್ಥೆ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಅನ್ನೋದನ್ನ ನೋಡಬೇಕಿದೆ.
ರಕ್ತ ಚಂದನದ ಕಳ್ಳ ಸಾಗಾಣಿಕೆಯ ಕಥಾ ಹಂದರದ ಪುಷ್ಪ ಸಿನಿಮಾದಲ್ಲಿ ಟಾಲಿವುಡ್‌ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಪುಷ್ಪ ಮೊದಲ ಭಾಗದ ಸಿನಿಮಾ ಭರ್ಜರಿ ಯಶಸ್ಸನ್ನು ಕಂಡ ಬೆನ್ನಲ್ಲೇ ಸಿನಿಮಾದ ಮುಂದುವರೆದ ಭಾಗವನ್ನು ಇನ್ನಷ್ಟು ಒತ್ತು ಕೊಟ್ಟು ನಿರ್ಮಾಣ ಮಾಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದ್ದು, ಶೀಘ್ರದಲ್ಲೇ ಪುಷ್ಪ ಎರಡನೇ ಭಾಗದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂಬ ಸುದ್ದಿ ಕೂಡ ಕೇಳಿಬರುತ್ತಿದೆ. ಪುಷ್ಪ ಚಿತ್ರದಲ್ಲಿ ದೊಡ್ಡ ದೊಡ್ಡ ತಾರಾಬಳಗವೇ ಇದ್ದು, ಜಗಪತಿ ಬಾಬು, ಅನಸೂಯಾ ಭಾರದ್ವಾಜ್, ವೆನ್ನೆಲಾ ಕಿಶೋರ್ ಪೋಷಕ ಪಾತ್ರಗಳಲ್ಲಿ ನಟಿಸಿ ಜನ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಮಲಯಾಳಂ ನಟ ಫಹದ್ ಫಾಸಿಲ್ ಎದುರಾಳಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಮತ್ತು ಮುತ್ತಮ್ಸೆಟ್ಟಿ ಮೀಡಿಯಾ ಜಂಟಿಯಾಗಿ ನಿರ್ಮಿಸಿವೆ.


Click it and Unblock the Notifications










