For Quick Alerts
  ALLOW NOTIFICATIONS  
  For Daily Alerts

  ಶಿವನ ಸ್ತುತಿಸಿದ 'ಮಂಗ್ಲಿ': 'ರಾಬರ್ಟ್' ಗಾಯಕಿ ಮೊದಲ ಕನ್ನಡ ಆಲ್ಬಮ್ ಸಾಂಗ್ ರಿಲೀಸ್

  |

  'ಕಣ್ಣೆ ಅದಿರಿಂದಿ' ಎಂದು 'ರಾಬರ್ಟ್' ಚಿತ್ರದ ತೆಲುಗು ಹಾಡು ಹಾಡಿ ಮಂಗ್ಲಿ ಕಮಾಲ್ ಮಾಡಿದ್ದರು. ತೆಲುಗು ಹಾಡು ಆದರೂ ಕನ್ನಡ ಸಿನಿರಸಿಕರು ಆಕೆಯ ಕಂಠಕ್ಕೆ ಮಾರು ಹೋಗಿದ್ದರು. ಸೂಪರ್ ಹಿಟ್ ಗೀತೆಗಳ ಮೂಲಕ ಸಂಗೀತ ಕ್ಷೇತ್ರದಲ್ಲಿ ಗಮನ ಸೆಳೆದಿರುವ ತೆಲುಗು ಗಾಯಕಿ ಆಲ್ಬಮ್‌ ಸಾಂಗ್ಸ್‌ ಕೂಡ ಹಾಡುತ್ತಿರುತ್ತಾರೆ. ತಾವು ಹಾಡಿದ ಆಲ್ಬಮ್‌ ಸಾಂಗ್‌ನಲ್ಲಿ ಸ್ವತಃ ಹೆಜ್ಜೆ ಹಾಕುತ್ತಾರೆ. ಮಂಗ್ಲಿ ಹಾಡಿ ಕುಣಿದಿರುವ ಮೊದಲ ಕನ್ನಡ ಆಲ್ಬಮ್ ಸಾಂಗ್ ರಿಲೀಸ್ ಆಗಿ ಸದ್ದು ಮಾಡುತ್ತಿದೆ.

  ಮಂಗ್ಲಿ ಆಲ್ಬಮ್‌ಗೆ ಭಕ್ತಿ ಗೀತೆಗಳನ್ನು ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಾರೆ. ಬಡ ಬಂಜಾರ ಕುಟುಂಬದಲ್ಲಿ ಹುಟ್ಟಿ ಬೆಳೆದ ಮಂಗ್ಲಿ ಜಾನಪದ ಹಾಡುಗಳನ್ನು ಹಾಡುವ ಮೂಲಕ ಜನಪ್ರಿಯತೆ ಗಳಿಸಿದವರು. 'ಬೆಳ್ಳಿ ಬೆಟ್ಟವನಾಳೋನೆ' ಎನ್ನುವ ಶಿವನ ಭಕ್ತಿ ಗೀತೆಯನ್ನು ಮಂಗ್ಲಿ ಹಾಡಿ ಕುಣಿದಿದ್ದು, ಗಣೇಶ ಹಬ್ಬ ಸಂಭ್ರಮದಲ್ಲಿ ಸಾಂಗ್ ರಿಲೀಸ್ ಆಗಿದೆ. ವರದರಾಜ್ ಸಾಹಿತ್ಯ ಬರೆದಿರುವ ಹಾಡಿಗೆ ಸಂಗೀತ ನಿರ್ದೇಶಕ ಬಾಜಿ ಟ್ಯೂನ್ ಹಾಕಿದ್ದಾರೆ. ಶಿವನ ದೇವಸ್ಥಾನಗಳ ಮುಂದೆ ಹಾಡಿಗೆ ಮಂಗ್ಲಿ ಹೆಜ್ಜೆ ಹಾಕಿದ್ದಾರೆ.

  "ನಾನು, ರಮ್ಯಾಕೃಷ್ಣ ಒಟ್ಟಿಗಿಲ್ಲ.. ಮಗ ಕ್ರಾಸ್‌ಬೀಡ್": ಡೈವೋರ್ಸ್ ಬಗ್ಗೆ ಕೃಷ್ಣವಂಶಿ ಮಾತು

  ಕೆಲ ದಿನಗಳ ಹಿಂದೆ ಇದೇ ಹಾಡನ್ನು ತೆಲುಗಿನಲ್ಲಿ ಮಂಗ್ಲಿ ಹಾಡಿದ್ದರು. ಕನ್ನಡ ಸಿನಿರಸಿಕರು ಕನ್ನಡ ಭಕ್ತಿ ಗೀತೆ ಹಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದರು. ಕೊನೆಗೂ ಕನ್ನಡದಲ್ಲಿ ಭಕ್ತಿ ಗೀತೆ ಹಾಡಿ ತೆಲಂಗಾಣ ಗಾಯಕಿ ಸಕ್ಸಸ್ ಕಂಡಿದ್ದಾರೆ. ತಮ್ಮದೇ ಯೂಟ್ಯೂಬ್‌ ಚಾನಲ್‌ನಲ್ಲಿ ಸಾಂಗ್ ಅಪ್‌ಲೋಡ್ ಮಾಡಿದ್ದು, 30 ಸಾವಿರಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿದೆ. ಲೈಕ್ಸ್, ಕಾಮೆಂಟ್ ಮೂಲಕ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

  ಮಂಗ್ಲಿ ಕನ್ನಡ ಸಾಂಗ್ಸ್ ಹಿಟ್

  ಮಂಗ್ಲಿ ಕನ್ನಡ ಸಾಂಗ್ಸ್ ಹಿಟ್

  'ರಾಬರ್ಟ್' ಚಿತ್ರದ 'ಕಣ್ಣು ಹೊಡಿಯಾಕ' ಹಾಡು ಕನ್ನಡಕ್ಕಿಂತ ತೆಲುಗಿನಲ್ಲಿ ಹೆಚ್ಚು ಕಿಕ್ ಕೊಟ್ಟಿತ್ತು. ಆ ನಂತರ ಅರ್ಜುನ್ ಜನ್ಯಾ 'ಏಕ್‌ ಲವ್‌ಯಾ' ಚಿತ್ರದ 'ಎಣ್ಣೆಗೂ ಹೆಣ್ಣಿಗೂ' ಎಂದು ಹಾಡಿಸಿ ಗೆದ್ದರು. ಇನ್ನು 'ಪುಷ್ಪ' ಚಿತ್ರದ ಕನ್ನಡ ವರ್ಷನ್ ಐಟಂ ಸಾಂಗ್ ಹಾಡಿದ್ದು ಕೂಡ ಇದೇ ಮಂಗ್ಲಿ. ಹೀಗೆ ಸೂಪರ್ ಹಿಟ್ ಗೀತೆಗಳ ಮೂಲಕ ತೆಲುಗು ಗಾಯಕಿ ಕನ್ನಡ ಸಿನಿರಸಿಕರ ಮೆಚ್ಚುಗೆ ಗಳಿಸಿದ್ದಾರೆ.

  ಪಂಜಾಬ್‌, ಗುಜರಾತ್‌ನಲ್ಲಿ ಪವನ್ ಕಲ್ಯಾಣ್ ಅಬ್ಬರ: 'ಜಲ್ಸಾ' ಹೊಡೆತಕ್ಕೆ, 'ಪೋಕಿರಿ' ದಾಖಲೆ ಧೂಳಿಪಟಪಂಜಾಬ್‌, ಗುಜರಾತ್‌ನಲ್ಲಿ ಪವನ್ ಕಲ್ಯಾಣ್ ಅಬ್ಬರ: 'ಜಲ್ಸಾ' ಹೊಡೆತಕ್ಕೆ, 'ಪೋಕಿರಿ' ದಾಖಲೆ ಧೂಳಿಪಟ

  ಸತ್ಯವತಿ ಗಾಯಕಿ ಮಂಗ್ಲಿ ಆಗಿದ್ದು ಹೇಗೆ?

  ಸತ್ಯವತಿ ಗಾಯಕಿ ಮಂಗ್ಲಿ ಆಗಿದ್ದು ಹೇಗೆ?

  ತೆಲುಗು ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಹಾಡಲು ಹೋಗಿದ್ದ ಗಾಯಕಿ ಸತ್ಯವತಿಗೆ ಮುಂದೆ ಅದೇ ವಾಹಿನಿಯಲ್ಲಿ ನಿರೂಪಕಿಯಾಗುವ ಅವಕಾಶ ಸಿಗುತ್ತದೆ. ಸತ್ಯವತಿ ಬದಲು ಬೇರೆ ಯಾವುದಾದರು ಹೆಸರು ಇಟ್ಟುಕೊಳ್ಳಲು ಹೇಳಿದಾಗ ತಮ್ಮ ಮಂಗ್ಲಿ ಹೆಸರನ್ನು ಇಟ್ಟುಕೊಳ್ಳುತ್ತಾರೆ. ಒಂದಷ್ಟು ದಿನ ನಿರೂಪಕಿಯಾಗಿ ಕೆಲಸ ಮಾಡಿದ ಗಾಯಕಿಗೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುವ ಹಂಬಲ ಇತ್ತು. ಹಾಗಾಗಿ ನಿರೂಪಕಿ ಕೆಲಸ ಬಿಟ್ಟು ಯೂಟ್ಯೂಬ್ ಚಾನಲ್ ಸೇರುತ್ತಾರೆ. ತೆಲಂಗಾಣ ಆರ್ವಿಭಾವ ಸಭೆಯಲ್ಲಿ ಹಾಡಿದ 'ರೇಲಾ ರೇಲಾ ರೇ' ಹಾಡು ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತದೆ. ಅಲ್ಲಿಂದ ಮುಂದೆ ಸಿನಿಮಾಗಳಲ್ಲಿ ಹಾಡುವ ಅವಕಾಶ ಸಿಗುತ್ತದೆ.

  'ರಾಮುಲೋ ರಾಮುಲೋ' ಸೂಪರ್ ಹಿಟ್

  'ರಾಮುಲೋ ರಾಮುಲೋ' ಸೂಪರ್ ಹಿಟ್

  ಅಲ್ಲು ಅರ್ಜುನ್ ನಟನೆಯ ಸೂಪರ್ ಹಿಟ್ ಸಿನಿಮಾ 'ಅಲಾ ವೈಕುಂಟಪುರಂಲೊ'. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಈ ಚಿತ್ರಕ್ಕೆ ತಮನ್ ಟ್ಯೂನ್ ಹಾಕಿದ್ದರು. ಚಿತ್ರದ ಎಲ್ಲಾ ಸಾಂಗ್ ಸೂಪರ್ ಆಗಿತ್ತು. ಆದರೆ 'ರಾಮುಲೋ ರಾಮುಲೋ' ಎಲ್ಲಕ್ಕಿಂತ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಇಂತಾದೊಂದು ಬಿಂದಾಸ್ ಸಾಂಗ್‌ ಹಾಡಿದ್ದು ಇದೇ ಮಂಗ್ಲಿ. 'ರಾಮುಲೋ ರಾಮುಲೋ' ಹಿಟ್ ಆದಮೇಲೆ ಮಂಗ್ಲಿ ಹಿಂತಿರುಗಿ ನೋಡಲೇಯಿಲ್ಲ.

  ಮತ್ತೆ ಕನ್ನಡದಲ್ಲಿ ಮಂಗ್ಲಿ ಗಾಯನ

  ಮತ್ತೆ ಕನ್ನಡದಲ್ಲಿ ಮಂಗ್ಲಿ ಗಾಯನ

  ಸದ್ಯ 'ಬೆಳ್ಳಿ ಬೆಟ್ಟವನಾಳೋನೆ' ಆಲ್ಬಮ್ ಸಾಂಗ್‌ನಿಂದ ಮಂಗ್ಲಿ ಸದ್ದು ಮಾಡುತ್ತಿದ್ದಾರೆ. ಕನ್ನಡದಲ್ಲಿ ಈಕೆಯ ಗಾಯನಕ್ಕೆ ಭಾರೀ ಕ್ರೇಜ್ ಇದೆ. ಸಾಕಷ್ಟು ಸಂಗೀತ ನಿರ್ದೇಶಕರು ಮಂಗ್ಲಿಯಿಂದ ಮತ್ತಷ್ಟು ಹಾಡುಗಳನ್ನು ಹಾಡಿಸಲು ಮನಸ್ಸು ಮಾಡಿದ್ದಾರೆ. ಆಕೆಯ ಹಸ್ಕಿ ವಾಯ್ಸ್‌ಗೆ ಹೊಂದುವಂತಹ ಗೀತೆಗಳು ಆಕೆಯನ್ನು ಹುಡುಕಿಕೊಂಡು ಹೋಗಲಿದೆ.

  English summary
  Telugu Singer Mangli First Kannada Album Song Released. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X