'ರಾಧೆ ಶ್ಯಾಮ್' ಚಿತ್ರವನ್ನು ರೀ-ಶೂಟ್ ಮಾಡುತ್ತಿರುವ ಪ್ರಭಾಸ್: ಕಾರಣವೇನು?

By ಫಿಲ್ಮಿಬೀಟ್ ಡೆಸ್ಕ್

ಟಾಲಿವುಡ್ ಸ್ಟಾರ್, ಪ್ಯಾನ್ ಇಂಡಿಯಾ ಹೀರೋ ಪ್ರಭಾಸ್ ನಟನೆಯ ಬಹುನಿರೀಕ್ಷೆಯ ರಾಧೆ ಶ್ಯಾಮ್ ಸಿನಿಮಾದ ಚಿತ್ರೀಕರಣ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸ ಕೂಡ ಬಹುತೇಕ ಮುಕ್ತಾಯವಾಗಿದೆ. ಅಲ್ಲದೆ ಇತ್ತೀಚಿಗಷ್ಟೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಸಹ ಸಿನಿಮಾತಂಡ ಘೋಷಣೆ ಮಾಡಿ ಅಭಿಮಾನಿಗಳಲ್ಲಿ ಥ್ರಿಲ್ ಹೆಚ್ಚಿಸಿದೆ.

ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಚಿತ್ರೀಕರಣ ತಡವಾದ ಕಾರಣ ಬಿಡುಗಡೆ ಕೂಡ ತಡವಾಗಿದೆ. ಇನ್ನೇನು ಸಿನಿಮಾದ ಕೆಲಸ ಎಲ್ಲಾ ಮುಗಿಯಿತು ಎನ್ನುವಷ್ಟೊತ್ತಿಗೆ ಮತ್ತೆ ಚಿತ್ರೀಕರಣಕ್ಕಿಳಿದಿದೆ ರಾಧೆ ಶ್ಯಾಮ್ ತಂಡ. ಚಿತ್ರದ ಕೆಲವು ದೃಶ್ಯಗಳನ್ನು ರೀ-ಶೂಟ್ ಮಾಡಲು ಮುಂದಾಗಿದೆ ರಾಧೆ ಶ್ಯಾಮ್ ತಂಡ.

ರಾಧೆ ಶ್ಯಾಮ್ ಯೂರೋಪ್ ಹಿನ್ನಲೆಯ ವಿಂಟೇಜ್ ಪ್ರೇಮ ಕಥೆಯ ಸಿನಿಮಾ. ಚಿತ್ರದಲ್ಲಿ ಪ್ರಭಾಸ್ ಗೆ ಜೋಡಿಯಾಗಿ ನಟಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಚಿತ್ರದ ಬಹುತೇಕ ಭಾಗವನ್ನು ಯೂರೋಪ್ ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಅಂದಹಾಗೆ ಚಿತ್ರಕ್ಕೆ ನಿರ್ದೇಶಕ ರಾಧ ಕೃಷ್ಣ ಆಕ್ಷನ್ ಹೇಳಿದ್ದಾರೆ. ಇದೀಗ ಕೆಲವು ದೃಶ್ಯಗಳು ಚಿತ್ರತಂಡಕ್ಕೆ ಸಮಾಧಾನ ತರದ ಕಾರಣ ಮತ್ತೆ ಶೂಟ್ ಮಾಡಲು ಮುಂದಾಗಿದ್ದು, ಈಗಾಗಲೇ ರೀ-ಶೂಟ್ ಮಾಡಲಾಗುತ್ತಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

Telugu star Prabhas reshoot few scenes from most expected movie Radhe Shyam

ಇನ್ನು ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಚಿತ್ರವನ್ನು ರೀ-ಶೂಟ್ ಮಾಡುವ ಕಾರಣಕ್ಕೆ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎನ್ನಲಾಗುತ್ತಿದೆ. ಬಹುನಿರೀಕ್ಷೆಯ ಸಿನಿಮಾ ಮುಂದಿನ ವರ್ಷ ಸಂಕ್ರಾಂತಿಗೆ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ಧವಾಗಿದ್ದ ಸಿನಿಮಾದ ಬಿಡುಗಡೆ ದಿನಾಂಕ ಮುಂದಿನ ವರ್ಷ ಅಂದಾಗ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತ್ತು. ಇದೀಗ ಅಸಲಿ ವಿಚಾರ ಬಹಿರಂಗವಾಗಿದೆ.

ಇತ್ತೀಚಿಗಷ್ಟೆ ರಾಧೆ ಶ್ಯಾಮ್ ಸಿನಿಮಾದ ಬಹುಮುಖ್ಯ ದೃಶ್ಯವನ್ನು ಕಡಪದಲ್ಲಿ ರೀ ಶೂಟ್ ಮಾಡಲಾಗಿದೆ. ನಟ ಸತ್ಯ ರಾಜ್ ಸೇರಿದಂತೆ ಅನೇಕ ಕಲಾವಿದರು ಭಾಗಿಯಾಗಿದ್ದರು. ರೀ-ಶೂಟ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪ್ರಭಾಸ್ ಸದ್ಯ ಸೂಪರ್ ಹಿಟ್ ಗಾಗಿ ಕಾಯುತ್ತಿದ್ದಾರೆ. ಬಾಹುಬಲಿ ಬಳಿಕ ಬಿಡುಗಡೆಯಾದ ಸಾಹೋ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಾಣಲಿಲ್ಲ. ಹಾಗಾಗಿ ಹಿಟ್ ಸಿನಿಮಾ ನೀಡುವ ಒತ್ತಡದಲ್ಲಿದ್ದಾರೆ ಪ್ರಭಾಸ್.

ರಾಧೆ ಶ್ಯಾಮ್ ಮೇಲೆ ಪ್ರಭಾಸ್ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಯಾವುದೇ ರಿಸ್ಟ್ ತೆಗೆದುಕೊಳ್ಳಲು ಪ್ರಭಾಸ್ ಸಿದ್ಧರಾಗಿದ್ದಾರೆ. ಹಾಗಾಗಿ ಬಜೆಟ್ ಲೆಕ್ಕಿಸದೆ ಮತ್ತೆ ರೀ ಶೂಟ್ ಮಾಡಲು ಮುಂದಾಗಿದ್ದಾರೆ. ಸಿನಿಮಾ ಮುಂದಕ್ಕೆ ಹೋದರು ಪರವಾಗಿಲ್ಲ ಉತ್ತಮ ಸಿನಿಮಾ ನೀಡಬೇಕೆನ್ನುವ ಯೋಚನೆಯಲ್ಲಿರುವ ಪ್ರಭಾಸ್ ಮತ್ತೆ ರೀ-ಶೂಟ್ ಮಾಡುತ್ತಿದ್ದಾರೆ.

ಅಂದಹಾಗೆ ಪ್ರಭಾಸ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಧೆ ಶ್ಯಾಮ್ ರೀ-ಶೂಟ್ ಜೊತೆಗೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಸಲಾರ್ ಮತ್ತು ಬಾಲಿವುಡ್ ನಿರ್ದೇಶಕ ಓಂ ರಾವತ್ ನಿರ್ದೇಶನದ ಆದಿಪುರುಷ್ ಸಿನಿಮಾಗಳಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದಾರೆ. ಸಲಾರ್ ಮತ್ತು ಆದಿಪುರುಷ್ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದ್ದು ಇತ್ತೀಚಿಗಷ್ಟೆ ಸಲಾರ್ ಚಿತ್ರದ 2ನೇ ಹಂತದ ಚಿತ್ರೀಕರಣ ಮುಗಿಸಿ ಪ್ರಭಾಸ್ ಆದಿಪುರುಷ್ ಚಿತ್ರೀಕರಣಕ್ಕೆ ಹಾಜರಾಗಿದ್ದರು. ಆದಿಪುರುಷ್ ಚಿತ್ರೀಕರಣ ಮುಂಬೈನಲ್ಲಿ ನಡೆಯುತ್ತಿದೆ.

ಈ ಎರಡು ಸಿನಿಮಾಗಳ ಜೊತೆಗೆ ಮಹಾನಟಿ ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ಸಿನಿಮಾ ಕೂಡ ಪ್ರಭಾಸ್ ಕೈಯಲ್ಲಿದೆ. ಇತ್ತೀಚಿಗಷ್ಟೆ ಈ ಸಿನಿಮಾದ ಮುಹೂರ್ತ ನೆರವೇರಿದ್ದು, ಸದ್ಯದಲ್ಲೇ ಸಿನಿಮಾ ಪ್ರಾರಂಭ ಮಾಡಲಿದ್ದಾರೆ. ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಇನ್ನು ಹೆಸರಿಡದ ಈ ಸಿನಿಮಾದಲ್ಲಿ ಪ್ರಭಾಸ್ ಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ಖ್ಯಾತ ನಟ ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Telugu star Prabhas reshoot a few scenes from most expected movie Radhe Shyam.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X