'ಟೈಗರ್ ನಾಗೇಶ್ವರ್ ರಾವ್' ಅವತಾರವೆತ್ತಿ 'ದಸರಾ'ಗೆ ಅಬ್ಬರಿಸಲಿರೋ ಮಾಸ್ ಮಹಾರಾಜ
ಟಾಲಿವುಡ್‌ನ ಮಾಸ್ ಮಹಾರಾಜ ಎಂದೇ ಜನಪ್ರಿಯರಾಗಿರೋ ರವಿತೇಜ ಹೊಸ ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಅದುವೇ 'ಟೈಗರ್ ನಾಗೇಶ್ವರ್ ರಾವ್'. ಈ ಸಿನಿಮಾದ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಲಾಗಿದೆ.
'ಟೈಗರ್ ನಾಗೇಶ್ವರ್ ರಾವ್' ಇದು ರವಿತೇಜ ನಟಿಸುತ್ತಿರುವ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಹೀಗಾಗಿ ರಿಲೀಸ್ ಡೇಟ್ ಅನ್ನು ಹಬ್ಬದ ಸಂಭ್ರಮದಲ್ಲಿಯೇ ಲಾಕ್ ಮಾಡಲಾಗಿದೆ. ದಸರಾ ಹಬ್ಬಕ್ಕೆ ಸಿನಿಮಾ ರಿಲೀಸ್ ಮಾಡುವುದಕ್ಕೆ ಚಿತ್ರತಂಡ ನಿರ್ಧರಿಸಿದೆ.
ಅಂದ್ಹಾಗೆ ಮಾಸ್ ಮಹಾರಾಜ ಅಕ್ಟೋಬರ್ 22ರಂದು ವಿಶ್ವದಾದ್ಯಂತ ಅಬ್ಬರಿಸಲಿದ್ದಾರೆ. ಅಂದು 'ಟೈಗರ್ ನಾಗೇಶ್ವರ್ ರಾವ್' ಬಾಕ್ಸಾಫೀಸ್ ಬೇಟೆಗಿಳಿಯೋದು ನಿಗದಿಯಾಗಿದೆ. ದಸರಾ ಹಬ್ಬದ ಹಾಗೂ ರಜೆ ಎರಡನ್ನೂ ಪ್ಲಾನ್ ಮಾಡಿಕೊಂಡು ಸಿನಿಮಾ ರಿಲೀಸ್ ಮಾಡಲಾಗುತ್ತಿದೆ.

'ಟೈಗರ್ ನಾಗೇಶ್ವರ್ ರಾವ್' ಸಿನಿಮಾವನ್ನು ವಂಶಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾವನ್ನು 'ಕಾಶ್ಮೀರ್ ಫೈಲ್ಸ್' ಹಾಗೂ 'ಕಾರ್ತಿಕೇಯ-2' ಅಂತಹ ಎರಡು ಬ್ಲಾಕ್ ಬಸ್ಟರ್ ಹಿಟ್ ಚಿತ್ರ ನಿರ್ಮಿಸಿರುವ ಅಭಿಷೇಕ್ ಅರ್ಗವಾಲ್ ನಿರ್ಮಾಣ ಮಾಡುತ್ತಿದ್ದಾರೆ.
ಅಭಿಷೇಕ್ ಅಗವಾಲ್ ಅದ್ಧೂರಿಯಾಗಿ ನಿರ್ಮಿಸುತ್ತಿರುವ 'ಟೈಗರ್ ನಾಗೇಶ್ವರ್ ರಾವ್' ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿದೆ. ಇದಕ್ಕೆ ಪ್ರತ್ಯಕ್ಷ ಉದಾಹರಣೆ ಎಂದರೆ, ಈ ಸಿನಿಮಾವನ್ನು ಸುಮಾರು ಐದು ಎಕರೆ ಜಾಗದಲ್ಲಿ ಹಳ್ಳಿಯೊಂದನ್ನು ಕೋಟ್ಯಾತರ ರೂಪಾಯಿ ಬಜೆಟ್‌ನಲ್ಲಿ ಸೆಟ್ ಸೃಷ್ಟಿ ಮಾಡಲಾಗಿದ್ದು, ಅಲ್ಲಿಯೇ ಶೂಟಿಂಗ್ ಮಾಡಲಾಗಿದೆ.
70ರ ಕಾಲಘಟ್ಟದ ಹೈದ್ರಾಬಾದ್‌ನ ಸ್ಟುವರ್ಟ್ ಪುರಂ ಹಳ್ಳಿಯೊಂದರ ಕುಖ್ಯಾತ ಕಳ್ಳನ ಜೀವನಾಧಾರಿತ ಸಿನಿಮಾ ಇದಾಗಿದೆ. ಈ ಹಿಂದಿನ ರವಿತೇಜ ಸಿನಿಮಾಗಳಿಗಿಂತ ಈ ಸಿನಿಮಾ ವಿಭಿನ್ನವಾಗಿರಲಿದೆಯಂತೆ. ಅದರಲ್ಲೂ ರವಿತೇಜ ಗೆಟಪ್, ಬಾಡಿ ಲಾಗ್ವೇಜ್ ಸಂಪೂರ್ಣವಾಗಿ ವಿಭಿನ್ನವಾಗಿರುತ್ತೆ ಎನ್ನಲಾಗುತ್ತಿದೆ.
ನೂಪುರ್ ಸನೋನ್ ಮತ್ತು ಗಾಯತ್ರಿ ಭಾರದ್ವಾಜ್ ಮಾಸ್ ಮಹಾರಾಜ ರವಿತೇಜಗೆ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ಆರ್ ಮಧಿ ಛಾಯಾಗ್ರಹಣ, ಶ್ರೀಕಾಂತ್ ವೀಸಾ ಡೈಲಾಗ್, ಜಿ ವಿ ಪ್ರಕಾಶ್ ಕುಮಾರ್ ಮ್ಯೂಸಿಕ್ ಕೊಟ್ಟಿದ್ದಾರೆ.
ಮಾಸ್ ಮಹಾರಾಜ ಸಿನಿಮಾ ಅಂದ್ರೆ, ಪಕ್ಕಾ ಎಂಟರ್‌ಟೈನ್ಮೆಂಟ್ ಇದ್ದೇ ಇರುತ್ತೆ. ಹಾಡು, ಆಕ್ಷನ್, ಡೈಲಾಗ್‌ಗಳಿಗೇನು ಕಮ್ಮಿ ಇರೋದಿಲ್ಲ. ಆದರೆ, ಇತ್ತೀಚೆಗೆ ಮಾಸ್ ಮಹಾರಾಜನ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗುತ್ತಿವೆ. ಹೀಗಾಗಿ ವಿಭಿನ್ನ ಕಥೆಯನ್ನು ಹುಡುಕುತ್ತಿದ್ದ ರವಿತೇಜಗೆ ತಮ್ಮ ಕರಿಯರ್‌ನಲ್ಲೇ ವಿಭಿನ್ನ ಸಿನಿಮಾ ಸಿಕ್ಕಿದೆ.
ಹೀಗಾಗಿಯೇ ರವಿತೇಜ ಕೂಡ ಈ ಸಿನಿಮಾ ಮೇಲೆ ಸಿಕ್ಕಾಪಟ್ಟೆ ಹೋಪ್ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಇತ್ತ ನಿರ್ಮಾಣ ಸಂಸ್ಥೆ ಕೂಡ ದಸರಾ ರಜೆಯಲ್ಲಿಯೇ ಸಿನಿಮಾ ರಿಲೀಸ್ ಮಾಡಿ, ಬಾಕ್ಸಾಫೀಸ್ ದಾಖಲೆಯನ್ನು ಬರೆಯುವುದಕ್ಕೆ ಮುಂದಾಗಿದೆ.


Click it and Unblock the Notifications











