ಎಸ್‌ಪಿಬಿ ಅಗಲಿಕೆಗೆ ಕಂಬನಿ ಮಿಡಿದ ಚಿರಂಜೀವಿ, ಮಹೇಶ್ ಬಾಬು, ಎನ್‌ಟಿಆರ್

ಎಸ್‌ಪಿ ಬಾಲಸುಬ್ರಹ್ಮಣ್ಯಂ ಕೇವಲ ಒಂದು ಸಿನಿ ಇಂಡಸ್ಟ್ರಿಯ ಆಸ್ತಿಯಲ್ಲ. ಎಲ್ಲ ಚಿತ್ರರಂಗಕ್ಕೂ ನಮ್ಮವರೇ ಆಗಿದ್ದರು. ಅದರಲ್ಲೂ ತೆಲುಗು ಸಿನಿ ಲೋಕಕ್ಕೆ ಎಸ್‌ಪಿಬಿ ಬಹಳ ಹತ್ತಿರ. ಏಕಂದ್ರೆ, ಎಸ್‌ಪಿಬಿ ಮೂಲತಃ ಆಂಧ್ರಪ್ರದೇಶದ ನೆಲ್ಲೂರಿನವರು.

ಮೊದಲ ಹಾಡು ಸಹ ತೆಲುಗಿನಲ್ಲೇ ಹಾಡಿದ್ದರು. ದಿಗ್ಗಜ ಗಾಯಕನ ಅಗಲಿಕೆ ಟಾಲಿವುಡ್‌ ಇಂಡಸ್ಟ್ರಿಗೆ ಸ್ವಲ್ಪ ಹೆಚ್ಚು ನೋವು ತಂದಿದೆ ಎನ್ನಬಹುದು. ಮೆಗಾಸ್ಟಾರ್ ಚಿರಂಜೀವಿ ಈ ಕುರಿತು ಟ್ವೀಟ್ ಮಾಡಿದ್ದು ''ಸಂಗೀತ ಲೋಕಕ್ಕೆ ಇಂದು ಕರಾಳ ದಿನ'' ಎಂದು ಬಣ್ಣಿಸಿದ್ದಾರೆ. ಮುಂದೆ ಓದಿ...

ಹೃದಯ ಚೂರಾಗಿದೆ- ಚಿರಂಜೀವಿ

ಹೃದಯ ಚೂರಾಗಿದೆ- ಚಿರಂಜೀವಿ

''ಸಂಗೀತದ ಜಗತ್ತಿಗೆ ಕರಾಳ ದಿನ ಇದು. ಎಸ್‌ಪಿಬಿ ಎಂಬ ಸಾಟಿಯಿಲ್ಲದ ಸಂಗೀತ ಪ್ರತಿಭೆ ಹಾದುಹೋಗುವುದರೊಂದಿಗೆ ಒಂದು ಯುಗವು ಅಂತ್ಯಗೊಂಡಿದೆ. ವೈಯಕ್ತಿಕವಾಗಿ ನನ್ನ ಯಶಸ್ಸಿಗೆ ಬಾಲು ಅವರ ಧ್ವನಿಯ ಪಾತ್ರ ಹೆಚ್ಚಿದೆ. ಅದಕ್ಕಾಗಿ ನಾನು ತುಂಬಾ ಋಣಿಯಾಗಿದ್ದೇನೆ'' ಎಂದು ಚಿರಂಜೀವಿ ಸಂತಾಪ ಸೂಚಿಸಿದ್ದಾರೆ.

ಎಸ್‌ಪಿಬಿ ಇಲ್ಲ ಎಂದು ಊಹಿಸಲು ಸಾಧ್ಯವಿಲ್ಲ

ಎಸ್‌ಪಿಬಿ ಇಲ್ಲ ಎಂದು ಊಹಿಸಲು ಸಾಧ್ಯವಿಲ್ಲ

''ಎಸ್‌ಪಿ ಬಾಲಸುಬ್ರಮಣ್ಯಂ ಅವರು ಇನ್ನು ಮುಂದೆ ಇಲ್ಲ ಎಂಬ ಅಂಶವನ್ನು ಸ್ಮರಿಸಿಕೊಳ್ಳಲು ಸಾಧ್ಯವಿಲ್ಲ. ಅವರ ಭಾವಪೂರ್ಣ ಧ್ವನಿಯ ಹತ್ತಿರ ಬೇರೆ ಯಾವುದು ಬರುವುದಿಲ್ಲ. ನಿಮ್ಮ ಪರಂಪರೆ ಉದ್ದಕ್ಕೂ ನೀವು ಜೀವಂತವಾಗಿರುತ್ತದೆ. ನಿಮ್ಮ ಕುಟುಂಬಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲಿ'' ಎಂದು ಮಹೇಶ್ ಬಾಬು ಟ್ವೀಟ್ ಮಾಡಿದ್ದಾರೆ.

ತೆಲುಗು ಆರಾಧ್ಯ ಧ್ವನಿ ಮೂಕವಾಗಿದೆ

ತೆಲುಗು ಆರಾಧ್ಯ ಧ್ವನಿ ಮೂಕವಾಗಿದೆ

''ತೆಲುಗು ಅವರ ಆರಾಧ್ಯ ಧ್ವನಿ ಮೂಕವಾಗಿದೆ. ಭಾರತೀಯ ಸಂಗೀತವು ತನ್ನ ಮುದ್ದು ಮಗುವನ್ನು ಕಳೆದುಕೊಂಡಿದೆ. ಐದು ದಶಕಗಳಿಗಿಂತಲೂ ಹೆಚ್ಚು ಕಾಲ 16 ಭಾಷೆಗಳಲ್ಲಿ 40,000 ಕ್ಕೂ ಹೆಚ್ಚು ಹಾಡುಗಳಿಗೆ ಜೀವ ತುಂಬಿದ ಗಂಧರ್ವ ಮತ್ತು ಪದ್ಮಭೂಷಣ ಎಸ್.ಪಿ.ಬಾಲಸುಬ್ರಮಣ್ಯಂ ಅವರು ಇಲ್ಲ ಎಂಬ ಸುದ್ದಿ ಕೋಲಾಹಲಕ್ಕೆ ಕಾರಣವಾಗಿದೆ. ಈ ಭೂಮಿಯಲ್ಲಿ ಸಂಗೀತ ಇರುವವರೆಗೂ ನೀವು ಅಮರರಾಗುತ್ತೀರಿ'' ಎಂದು ಜೂನಿಯರ್ ಎನ್‌ಟಿಆರ್ ನೋವು ಹಂಚಿಕೊಂಡಿದ್ದಾರೆ.

ತೆಲುಗು ನಟ ನಾನಿ

ತೆಲುಗು ನಟ ನಾನಿ

ಎಸ್‌ಬಿ ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ತೆಲುಗು ನಟ ನಾನಿ, ತನ್ನ ಪತ್ನಿ ಮತ್ತು ಮಗು ಜೊತೆ ಬಾಲು ಫೋಟೋ ಕ್ಲಿಕ್ಕಿಸಿಕೊಂಡ ಕ್ಷಣವನ್ನು ಸ್ಮರಿಸಿ ಫೋಟೋ ಹಂಚಿಕೊಂಡಿದ್ದಾರೆ.

Recommended Video

ಕೊನೆಯ ಬಾರಿಗೆ ಫೇಸ್ಬುಕ್ ಲೈವ್ ಬಂದ SPB ಹೇಳಿದ್ದೇನು ಗೊತ್ತಾ..? | SPB Last Social media LIVE | Filmibeat
ರಾಘವೇಂದ್ರ ರಾವ್ ಸಂತಾಪ

ರಾಘವೇಂದ್ರ ರಾವ್ ಸಂತಾಪ

''ನನ್ನ ಪ್ರೀತಿಯ ಬಾಲು, ಸಂಗೀತ ಜಗತ್ತಿನಲ್ಲಿ ಮೌನ ಆವರಿಸಿದೆ.. !! ಎಲ್ಲಾ ಸಮಾನರು ಕಣ್ಣೀರು ಸುರಿಸುತ್ತಿದ್ದಾರೆ .. !! ಎಲ್ಲಾ ರಾಗಗಳು ಮೂಕವಾಗಿದೆ .. !! ನೀನಿಲ್ಲ ಎಂಬ ಕೊರತೆ ಕಾಡುತ್ತಿದೆ .. !!'' ಎಂದು ಖ್ಯಾತ ನಿರ್ಮಾಪಕ ರಾಘವೇಂದ್ರ ರಾವ್ ಟ್ವೀಟ್ ಮಾಡಿದ್ದಾರೆ.

More from Filmibeat

English summary
SP Balasubramanyam Passes Away: Chiranjeevi, Mahesh babu, Jr Ntr, Nani Condolences Pour In for veteran singer demise.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X