ಪುನೀತ್ ನಿಧನಕ್ಕೆ ಕಂಬನಿ ಮಿಡಿದ ತೆಲುಗು ಸಿನಿಮಾರಂಗದ ತಾರೆಯರು

ನಟ ಪುನೀತ್‌ ರಾಜ್‌ಕುಮಾರ್‌ ಸಾವು ದೊಡ್ಡ ಮಟ್ಟದ ಅಘಾತ ತಂದಿದೆ. ಯಾರಿಗೂ ಕೂಡ ಈ ಸುದ್ದಿಯನ್ನು ಅರಗಿಸಿಕೊಳ್ಳವುದು ಸುಲಭವಲ್ಲ. ಪುನೀತ್‌ ರಾಜ್‌ಕುಮಾರ್‌ಗೆ ಎಲ್ಲಾ ಚಿತ್ರರಂಗದಲ್ಲೂ ಅಪಾರ ಸ್ನೇಹಿತರು ಇದ್ದಾರೆ. ಅದರಲ್ಲೂ ತೆಲುಗು ಸಿನಿಮಾರಂಗದಲ್ಲಿ ಪುನೀತ್‌ ರಾಜ್‌ಕುಮಾರ್‌ಗೆ ಆಪ್ತ ಬಳಗ ಇದೆ. ಈ ವಿಚಾರ ಗೊತ್ತಾಗುತ್ತ ಇದ್ದಂತೆಯೇ ಟಾಲಿವುಡ್‌ನ ಅನೇಕರು ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದಾರೆ.

Recommended Video

Appu ಬಗ್ಗೆ ಮಾತನಾಡಿದ ಮೆಗಾಸ್ಟಾರ್ ಚಿರಂಜೀವಿ

ಪುನೀತ್ ರಾಜ್‌ಕುಮಾರ್ ಅವರ ನಿಧನದ ದುರಂತ ಸುದ್ದಿಯಿಂದ ಆಘಾತ ಮತ್ತು ತೀವ್ರ ದುಃಖವಾಗಿದೆ. ನಾನು ಭೇಟಿಯಾದ ಮತ್ತು ಸಂವಾದ ನಡೆಸಿದ ಅತ್ಯಂತ ವಿನಮ್ರ ವ್ಯಕ್ತಿಗಳಲ್ಲಿ ಒಬ್ಬರು. ಅವರ ಕುಟುಂಬ ಮತ್ತು ಪ್ರೀತಿ ಪಾತ್ರರಿಗೆ ಹೃದಯಪೂರ್ವಕ ಸಂತಾಪಗಳು - ನಟ ಮಹೇಶ್‌ ಬಾಬು

ಹೃದಯ ಚಿತ್ರವಾಗಿದೆ, ನೀನು ಇಷ್ಟು ಬೇಗ ಹೋಗಿ ಬಿಟ್ಟೆ ನಂಬಲು ಸಾಧ್ಯವಾಗುತ್ತಿಲ್ಲ - ನಟ ಜೂನಿಯರ್‌ ಎನ್‌ಟಿಆರ್

Telugu stars Deeply condolence to Puneeth Rajkumar Death

ಆಘಾತಕಾರಿ, ಹೃದಯ ವಿದ್ರಾವಕ, ಸಂಗತಿ ಪುನೀತ್‌ ರಾಜ್‌ಕುಮಾರ್‌ ತುಂಬಾ ಬೇಗ ಹೋಗಿ ಬಿಟ್ಟೆ.. ಆತ್ಮಕ್ಕೆ ಶಾಂತಿ ಸಿಗಲಿ.. ನನ್ನ ಹೃದಯಸ್ಪರ್ಶಿ, ಕಣ್ಣೀರಿಗ ಭಾವಪೂರ್ಣ ಶ್ರದ್ಧಾಂಜಲಿ. ಕುಟುಂಬಕ್ಕೆ ದುಖಃ ತಾಳುವ ಶಕ್ತಿ ಸಿಗಲಿ. ಇದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ - ನಟ ಮೆಗಾ ಸ್ಟಾರ್ ಚಿರಂಜೀವಿ

ಪುನೀತ್ ರಾಜ್‌ಕುಮಾರ್‌ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ಚಿಕ್ಕ ವಯಸ್ಸಿನ ಯುವಕ, ಒಳ್ಳೆಯ ವ್ಯಕ್ತಿತ್ವ ಇಷ್ಟು ಬೇಗ ಕಣ್ಮರೆಯಾಯಿತು. ಅವರನ್ನು ಕೇವಲ ಒಂದೆರಡು ಬಾರಿ ಭೇಟಿಯಾಗಿದ್ದೆ. ಆದರೆ ಅವರ ಆತಿಥ್ಯ, ವಿನಮ್ರತೆ ಮತ್ತು ಡೌನ್ ಟು ಅರ್ಥ್ ಸ್ವಭಾವವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಕುಟುಂಬ ಮತ್ತು ಪ್ರೀತಿ ಪಾತ್ರರಿಗೆ ಇದನ್ನು ತಡೆಯುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ - ನಿರ್ದೇಶಕ ರಾಜಮೌಳಿ

ನಾನು ಭೇಟಿ ಮಾಡಿದ ಅತ್ಯಂತ ಸ್ಪೂರ್ತಿದಾಯಕರಲ್ಲಿ ಪುನೀತ್‌ ರಾಜ್‌ಕುಮಾರ್‌ ಕೂಡ ಒಬ್ಬರು. ತುಂಬಾ ಬೇಗ ಹೋಗಿ ಬಿಟ್ಟಿರಿ, ಸೂಪರ್‌ ಸ್ಟಾರ್ - ನಟ ಸಿದ್ಧಾರ್ಥ್

ಇದು ಹೇಳಿಕೊಳ್ಳಲಾರದ ನೋವು. ಏನನ್ನು ಹೇಳಿಕೊಳ್ಳಲು ಸಾಧ್ಯವಿಲ್ಲ- ನಟಿ ಪಾರ್ವತಿ ಮೆನನ್

ಹೃದಯ ವಿದ್ರಾವಕ ಘಟನೆ, ಪುನೀತ್‌ ಅವರು ಅತ್ಯಂತ ಸರಳ ವ್ಯಕ್ತಿತ್ವ ಉಳ್ಳ ಉತ್ತಮ ಕುಟುಂಬದ ವ್ಯಕ್ತಿ, ನನ್ನ ಸಂಗೀತವನ್ನ ಎಷ್ಟು ಪ್ರೀತಿಸುತ್ತಾರೆ ಅನ್ನೋದನ್ನ ಸದಾ ಹೇಳುತ್ತಿದ್ದರು, ಅವರಂತಹ ಒಳ್ಳೆಯ ವ್ಯಕ್ತಿಗಳಿಗೆ ಯಾಕೆ ಈ ರೀತಿ ಆಗುತ್ತದೆ. ಭಾವಪೂರ್ಣ ಶ್ರದ್ಧಾಂಜಲಿ - ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್

ಆಘಾತಕಾರಿ, ಬೇಸರ ಸಂಗತಿ ಮತ್ತು ಮಾತನಾಡಲು ಪದಗಳೇ ಇಲ್ಲ - ನಟಿ ತಮನ್ನಾ ಭಾಟಿಯ

ಇದು ತೆಲುಗು ಸಿನಿಮಾರಂಗದ ತಾರೆಯರ ಮನಮಿಡಿತ. ಈ ಸುದ್ದಿ ಎಲ್ಲರಿಗೂ ಅತೀವ ದುಃಖ ತಂದಿದೆ. ಇದು ನಂಬಲು ಸಾಧ್ಯವೆ ಆಗುತ್ತಿಲ್ಲ ಎಂದುವ ಭಾವನೆಯನ್ನ ಹೊರ ಹಾಕಿದ್ದಾರೆ. ಇನ್ನೂ ಈ ಎಲ್ಲರ ಮಾತಲ್ಲಿ ಕೇಳಿ ಬಂದಿದ್ದು ಒಂದೇ ವಿಚಾರ. ಅಪ್ಪು ಒಬ್ಬ ವಿನಮ್ರ ಮತ್ತು ಡೌನ್‌ ಟು ಅರ್ಥ್ ವ್ಯಕ್ತಿತ್ವ ಉಳ್ಳವರು ಎನ್ನುವ ಅಭಿಪ್ರಾಯ.

More from Filmibeat

English summary
Chiranjeevi, Mahesh Babu, Jr Ntr pays condolence To Puneeth Rajkumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X