ಹಿಂದಿಗೆ ರಿಮೇಕ್ ಆಗಲಿದೆ ತೆಲುಗಿನ ಸೂಪರ್ ಹಿಟ್ 'ಬೇಬಿ': ಯಾವ ಸ್ಟಾರ್ ಕಿಡ್‌ಗೆ ಸಿಗಲಿದೆ ಅದೃಷ್ಟ..?

ಈ 2023 ರ ತೆಲುಗು ಸೂಪರ್ ಹಿಟ್ ಸಿನಿಮಾಗಲ ಸಾಲಿನಲ್ಲಿ 'ಬೇಬಿ'ಗೂ ಒಳ್ಳೆ ಸ್ಥಾನ ಸಿಗಲಿದೆ. ಹೊಸ ಪ್ರತಿಭೆಗಳ 'ಬೇಬಿ' ಸಿನಿಮಾ ಇಡೀ ತೆಲುಗು ಚಿತ್ರರಂಗವನ್ನು ಒಮ್ಮೆ ಹಿಂತಿರುಗಿ ನೋಡುವಂತೆ ಮಾಡಿತ್ತು. ಸಾಯಿ ರಾಜೇಶ್ ನೀಲಂ ನಿರ್ದೇಶನದ 'ಬೇಬಿ' ಎಲ್ಲಾ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ.

ಒಂದು ತ್ರಿಕೋನ ಪ್ರೇಮಕಥೆ, ಎರಡು ಸ್ವಭಾವದ ಯುವತಿ... ಅರ್ಧ ಹೊಸಬರು ಮತ್ತು ಹಳಬರನ್ನು ಒಳಗೊಂಡಿದ್ದ 'ಬೇಬಿ' ಸಿನಿಮಾ ಅಂದಾಜು 15 ಕೋಟಿ ಬಜೆಟ್‌ನಲ್ಲಿ ತಯಾರಾಗಿತ್ತು. ಈ ಸಿನಿಮಾ ಇದುವರೆಗೆ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 100 ಕೋಟಿ ರೂಪಾಯಿ ಗಳಿಸಿದೆ. ಸಣ್ಣ ಬಜೆಟ್‌ನಲ್ಲಿ ನಿರ್ಮಾಣವಾಗಿ ನೂರು ಕೋಟಿ ಗಳಿಸಿದ ದೊಡ್ಡ ಸಿನಿಮಾವಾಗಿ ಇದು ಖ್ಯಾತಿಗಳಿಸಿದೆ.

Telugu super hit film Baby to remake in Hindi and Tamil

ಹಿಂದಿಗೆ 'ಬೇಬಿ' ರಿಮೇಕ್

ತೆಲುಗಿನಲ್ಲಿ ಸೂಪರ್ ಹಿಟ್ ಆದ ಸಿನಿಮಾ, ಹಿಂದಿಗೆ ರಿಮೇಕ್ ಆಗುತ್ತಿದೆ ಎಂಬ ವರದಿಗಳು ಕೆಲ ದಿನಗಳಿಂದ ಹರಿದಾಡುತ್ತಿವೆ. 'ಜೂಮ್‌' ಕೂಡ ಅದೇ ವಿಷಯವನ್ನು ದೃಢಪಡಿಸಿದೆ. ತೆಲುಗು ಇಂಡಸ್ಟ್ರಿಯಲ್ಲಿ ಎಸ್‌ಕೆಎನ್ ಎಂದು ಖ್ಯಾತರಾಗಿರುವ ಚಿತ್ರದ ನಿರ್ಮಾಪಕ ಶ್ರೀನಿವಾಸ ಕುಮಾರ್ ನಾಯ್ಡು, "ಹೌದು, ಬೇಬಿ ಹಿಂದಿಯಲ್ಲಿ ಮಾತ್ರವಲ್ಲದೆ ತಮಿಳಿನಲ್ಲಿಯೂ ರಿಮೇಕ್ ಆಗುತ್ತಿದೆ. ಎರಡೂ ಭಾಷೆಗಳಲ್ಲಿ, ಹೊಸಬರು ಅಥವಾ ಅರೆ ಹೊಸಬರು ಅಲ್ಲದಿದ್ದರೂ ಸ್ಟಾರ್ ಕಾಸ್ಟ್ ನಟಿಸಲಿದ್ದಾರೆ" ಎಂದು ಹೇಳಿದ್ದಾರೆ.

ಬೇಬಿ ಸಿನಿಮಾದ ಪಾತ್ರವರ್ಗಈ ಕಡಿಮೆ ಜನರಿಗೆ ತಿಳಿದಿತ್ತು. ನಟ ವಿಜಯ್ ದೇವರಕೊಂಡ ಅವರ ತಮ್ಮ ಆನಂದ್ ದೇವರಕೊಂಡ ಮತ್ತು ವೈಷ್ಣವಿ ಚೈತನ್ಯ ಇಬ್ಬರೂ ಹೆಚ್ಚು ಕಡಿಮೆ ಅಪರಿಚಿತ ಮುಖಗಳಾಗಿದ್ದರು. ಈ ಹಿಂದೆ ಕೂಡ ಅವರು ಸಿನಿಮಾ ಮಾಡಿದ್ದರೂ ಕೂಡ ಜನರಿಗೆ ಅಷ್ಟು ನೆನಪಿನಲ್ಲಿ ಇರಲಿಲ್ಲ.

ಆನಂದ್ ದೇವರಕೊಂಡ ಅವರನ್ನು ವಿಜಯ್ ದೇವರಕೊಂಡ ಅವರ ತಮ್ಮ ಎಂದೇ ಗುರುತಿಸಲಾಗಿತ್ತು. ನಟಿ ವೈಷ್ಣವಿ ಕೆಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದರೂ ಕೂಡ ಅಷ್ಟು ಜನಪ್ರಿಯರಾಗಿರಲಿಲ್ಲ.

Telugu super hit film Baby to remake in Hindi and Tamil

ಹಿಂದಿಯಲ್ಲಿ ಸ್ಟಾರ್ ಕಿಡ್‌ಗಳ ನಟನೆ!

ಬೇಬಿ ಸಿನಿಮಾದ ಹಿಂದಿ ರಿಮೇಕ್‌ನಲ್ಲಿ ನಾವು ಇನ್ನೂ ಜನರಿಗೆ ಪರಿಚಯ ಇರದವರನ್ನು ಆಯ್ಕೆ ಮಾಡುತ್ತೇವೆ. ಹೊಸ ಮುಖಗಳನ್ನು ಪರಿಚಯಿಸಲು ಬಯಸುತ್ತೇವೆ. ನಿಮಗೆ ನಿಜ ಹೇಳಬೇಕೆಂದರೆ, ಬಾಲಿವುಡ್‌ನ ಕೆಲವು ದೊಡ್ಡ ಸ್ಟಾರ್ ಕಿಡ್‌ಗಳು ಬೇಬಿಯ ಹಿಂದಿ ರಿಮೇಕ್ ಮಾಡಲು ಬಯಸಿದ್ದಾರೆ ಎಂದು ಶ್ರೀನಿವಾಸ ಕುಮಾರ್ ನಾಯ್ಡು ಹೇಳಿದ್ದಾರೆ.

ರಿಮೇಕ್ ಹಕ್ಕುಗಳಿಗಾಗಿ ಕೆಲವು ದೊಡ್ಡ ನಿರ್ಮಾಪಕರು ಎಸ್‌ಕೆಎನ್ ಅವರನ್ನು ಸಂಪರ್ಕಿಸಿದ್ದಾರೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಅದು ಸರಿ. ನಮ್ಮ ಸಣ್ಣ ಚಿತ್ರವು ಇಷ್ಟು ದೊಡ್ಡದಾಗಲಿದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ದೊಡ್ಡ ನಿರ್ಮಾಪಕರ ಹೆಸರುಗಳನ್ನು ಕೇಳಿದರೆ ನೀವು ಆಶ್ಚರ್ಯಚಕಿತರಾಗುತ್ತೀರಿ. ಇದೆಲ್ಲವೂ ಅದೃಷ್ಟ. ಬೇಬಿ ದಾಖಲೆಗಳನ್ನು ಮುರಿದಿರುವುದು ಒಂದು ಪವಾಡ" ಎಂದು ಖುಷಿ ಹಂಚಿಕೊಂಡಿದ್ದಾರೆ.

ಉತ್ತಮ ನಿರ್ಮಾಪಕರ ಕೈಗೆ 'ಬೇಬಿ' ರಿಮೇಕ್

ರಿಮೇಕ್ ಹಕ್ಕುಗಳನ್ನು ನೀಡುವ ಬಗ್ಗೆ ಮಾತನಾಡಿರುವ ಅವರು, "ಇದು ಕೇವಲ ಹಣದ ಬಗ್ಗೆ ಅಲ್ಲ. ಇದು ನನ್ನ ಬೇಬಿ ಚಿತ್ರವನ್ನು ಸುರಕ್ಷಿತ ಕೈಯಲ್ಲಿ ಇಡುವ ಬಗ್ಗೆಯೂ ಆಗಿದೆ. ಬೇಬಿಯ ಹಿಂದಿ ರಿಮೇಕ್ ಮಾಡುತ್ತಿರುವ ನಿರ್ಮಾಪಕರು ಉತ್ತಮ ಸಿನಿಮಾಗಳನ್ನು ಮಾಡಿರುವನ ದಾಖಲೆಯನ್ನು ಹೊಂದಿದ್ದಾರೆ. ಅವರು ಬೇಬಿಗೆ ಸಂಪೂರ್ಣ ನ್ಯಾಯ ಒದಗಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ನಾನು ಇನ್ನೂ ನಿರ್ಮಾಪಕರ ಹೆಸರನ್ನು ಬಹಿರಂಗಪಡಿಸಲು ಸಿದ್ಧವಾಗಿಲ್ಲದಿದ್ದಕ್ಕಾಗಿ ಕ್ಷಮಿಸಿ" ಎಂದು ತಿಳಿಸಿದ್ದಾರೆ.

More from Filmibeat

English summary
Anand Deverakonda starrer Baby to remake in Hindi and Tamil.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X