ಕಿರುತೆರೆ ನಟಿ ನಿಗೂಢ ಸಾವು, ಮೊಬೈಲಿನಲ್ಲಿ ಸುಳಿವಿಗಾಗಿ ಪೊಲೀಸರು ಸರ್ಚಿಂಗ್!

By ಜೇಮ್ಸ್ ಮಾರ್ಟಿನ್

ತೆಲುಗು ಚಿತ್ರರಂಗ ಹಾಗೂ ಟಿವಿ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದ ಈ ನಟಿ ಕಳೆದ ಹಲವು ದಿನಗಳಿಂದ ತನ್ನ ಅಪಾರ್ಟ್ಮೆಂಟ್ ನಿಂದ ಹೊರಗಡೆ ಕಾಣಿಸಿಕೊಂಡಿರಲಿಲ್ಲ. ಲಾಕ್ ಡೌನ್ ಕಾರಣದಿಂದ ಹೊರಗೆ ಬಂದಿಲ್ಲದರಬಹುದು ಎಂದು ನೆರೆಮನೆಯವರು ಸುಮ್ಮನಾಗಿದ್ದರು. ಆದರೆ, ಗುರುವಾರದಂದು ಆಕೆ ತಾಯಿ ಕರೆ ಮಾಡಿದರೂ ಉತ್ತರಿಸಿರಲಿಲ್ಲ. ಅನುಮಾನ ಬಂದು ವಾಚ್ಮನ್ ವಿಷಯವನ್ನು ನೆರೆಮನೆಯವರಿಗೆ ತಿಳಿಸಿದ್ದಾನೆ. ನಂತರ ಪೊಲೀಸರಿಗೆ ವಿಷಯ ಮುಟ್ಟಿದೆ. ಹೈದರಾಬಾದಿನ ಯೆಲ್ಲಾರೆಡ್ಡಿಗುಡಾದ ಇಂಜಿನಿಯರ್ಸ್ ಕಾಲೋನಿಯ ಅಪಾರ್ಟ್ಮೆಂಟ್ ನಲ್ಲಿ ನಟಿ ಶಾಂತಿ ಅಲಿಯಾಸ್ ವಿಶ್ವಶಾಂತಿ ಶವವಾಗಿ ಮಲಗಿರುವುದು ಕಂಡು ಬಂದಿದೆ.

ಘಟನಾ ಸ್ಥಳದ ಮಹಜರು ಮಾಡಿದ ಎಸ್ ಆರ್ ನಗರ ಪೊಲೀಸರು, ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪ್ರಾಥಮಿಕ ತನಿಖೆಯಂತೆ ಶಾಂತಿ ಮದ್ಯಪಾನ ಮಾಡಿರುವುದು ಕಂಡು ಬಂದಿದೆ. ಅತಿಯಾಗಿ ಮದ್ಯ ಸೇವಿಸಿ ಹಾಸಿಗೆಯಿಂದ ಕೆಳಗೆ ನೆಲದ ಮೇಲೆ ಬಿದ್ದಿರಬಹುದು ಎಂದು ಊಹಿಸಲಾಗಿದೆ. ಶವವನ್ನು ಮೊದಲು ಕಂಡ ಪ್ರತ್ಯಕ್ಷದರ್ಶಿಗಳು ಇದೇ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಶಾಂತಿ ಸಾವಿಗೆ ನೈಜ ಕಾರಣ ಏನು ಎಂಬುದು ಇನ್ನೂ ಪತ್ತೆಯಾಗಿಲ್ಲ.

ಘಟನಾ ಸ್ಥಳದಲ್ಲಿ ಸಿಕ್ಕಿರುವ ಮದ್ಯದ ಬಾಟಲಿಗಳು, ಆಕೆ ಅತಿಯಾಗಿ ಮದ್ಯ ಸೇವಿಸಿರಬಹುದು ಎಂಬ ಸಂದೇಹ ಮೂಡುವಂತೆ ಮಾಡಿದೆ. ಪೊಲೀಸರು ಕೂಡಾ ಇದೇ ಅನುಮಾನದಿಂದ ಈ ಪ್ರಕರಣವನ್ನು ನೋಡುತ್ತಿದ್ದಾರೆ.

 ಮದ್ಯವ್ಯಸನಿಯಾಗಿದ್ದರೇ ಶಾಂತಿ?

ಮದ್ಯವ್ಯಸನಿಯಾಗಿದ್ದರೇ ಶಾಂತಿ?

ಪ್ರಾಥಮಿಕ ತನಿಖಾ ವರದಿಯಂತೆ ಶಾಂತಿ ಸಾಯುವುದಕ್ಕೂ ಮುನ್ನ ಮದ್ಯಪಾನ ಮಾಡಿದ್ದಾರೆ. ಆದರೆ, ಶಾಂತಿ ದೇಹದಲ್ಲಿರುವ ಆಲ್ಕೋಹಾಲ್ ಅಂಶ ಮಿತಿ ಮೀರಿತ್ತೇ? ಪ್ರಜ್ಞೆ ತಪ್ಪಿ ನೆಲಕ್ಕೆ ತಲೆ ಬಡಿದು ಕೊನೆಯುಸಿರೆಳೆದಿರಬಹುದೇ? ಎಂಬ ನಿಟ್ಟಿನಲ್ಲಿ ತನಿಖೆ ಸಾಗಿದೆ. ಮರಣೋತ್ತರ ಪರೀಕ್ಷೆ ನಂತರ ದೇಹದಲ್ಲಿರುವ ಆಲ್ಕೋಹಾಲ್ ಅಂಶ, ವಿಷಪ್ರಾಶನವಾಗಿದೆಯೇ? ವಿಸೇರಾದಲ್ಲಿ ಏನಿದೆ? ತಲೆ ಅಥವಾ ದೇಹದ ಇತರೆ ಭಾಗಕ್ಕೆ ಮಾರಾಣಾಂತಿಕ ಪೆಟ್ಟು ಬಿದ್ದಿದೆಯೆ? ಎಂಬುದು ತಿಳಿದು ಬರಲಿದೆ.

 ನೆರೆಮನೆಯವರ ಹೇಳಿಕೆ

ನೆರೆಮನೆಯವರ ಹೇಳಿಕೆ

32 ವರ್ಷ ವಯಸ್ಸಿನ ನಟಿ ಶಾಂತಿ ಬಗ್ಗೆ ನೆರೆಮನೆಯವರು ಒಳ್ಳೆಯ ಮಾತುಗಳನ್ನಾಡಿದ್ದಾರೆ. ಆಕೆ ಹೆಚ್ಚು ಮಾತನಾಡುತ್ತಿರಲಿಲ್ಲ. ಆದರೆ, ನೋಡಿದಾಗ ಸ್ಮೈಲ್ ಮಾಡುತ್ತಿದ್ದರು. ಕಳೆದ ಕೆಲ ದಿನಗಳಿಂದ ಹೊರಗಡೆ ಬಂದಿರಲಿಲ್ಲ. ಹೀಗಾಗಿ ಅನುಮಾನ ಮೂಡಿ, ಅಪಾರ್ಟ್ಮೆಂಟ್ ಅಸೋಸಿಯೇಷನ್ ಮುಖ್ಯಸ್ಥರಿಗೆ ತಿಳಿಸಿದೆವು. ಆಕೆ ಮದ್ಯವ್ಯಸನಿಯಾಗಿದ್ದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಮದ್ಯ ಸೇವಿಸಿ ರಾದ್ಧಾಂತ ಮಾಡಿದ ಯಾವುದೇ ಘಟನೆ ನಡೆದಿಲ್ಲ ಎಂದಿದ್ದಾರೆ.

 ಘಟನಾ ಸ್ಥಳದಲ್ಲಿ ಸಿಕ್ಕಿರುವ ಮೊಬೈಲ್ ಫೋನ್

ಘಟನಾ ಸ್ಥಳದಲ್ಲಿ ಸಿಕ್ಕಿರುವ ಮೊಬೈಲ್ ಫೋನ್

ಶಾಂತಿ ನೆಲೆಸಿದ್ದ ಅಪಾರ್ಟ್ಮೆಂಟ್ ಗೆ ಬೇರೆ ಯಾರೂ ಬಂದು ಹೋಗಿರುವ ಮಾಹಿತಿಯಿಲ್ಲ. ಶವ ಸಿಕ್ಕ ಸ್ಥಳದಲ್ಲಿ ಒಂದು ಮೊಬೈಲ್ ಫೋನ್ ಸಿಕ್ಕಿದೆ. ಅಪಾರ್ಟ್ಮೆಂಟ್ ಹಾಗೂ ಸುತ್ತಮುತ್ತ ಪ್ರದೇಶದ ಸಿಸಿಟಿವಿ ಫುಟೇಜ್ ಕೂಡಾ ಪರಿಶೀಲಿಸಲಾಗುತ್ತಿದೆ. ಸಿಆರ್ ಪಿಸಿ ಸೆಕ್ಷನ್ 174 ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೊಬೈಲ್ ಫೋನ್ ಸದ್ಯ ಲಾಕ್ ಆಗಿದ್ದು, ಸೈಬರ್ ಕ್ರೈಂ ವಿಭಾಗದ ನೆರವು ಪಡೆದು ಅದರಲ್ಲಿರುವ ಡೇಟಾದಲ್ಲಿ ಏನಾದರೂ ಸುಳಿವು ಸಿಗುವುದೋ ಎಂದು ಪೊಲೀಸರು ನೋಡುತ್ತಿದ್ದಾರೆ.

 ವಿಶಾಖಪಟ್ಟಣಂ ಮೂಲದ ನಟಿ ಶಾಂತಿ

ವಿಶಾಖಪಟ್ಟಣಂ ಮೂಲದ ನಟಿ ಶಾಂತಿ

ಶಾಂತಿ ಸಾವಿನ ಬಗ್ಗೆ ಆಕೆಯ ಪೋಷಕರಿಗೆ ಪೊಲೀಸರು ತಿಳಿಸಿದ್ದಾರೆ. ಇಂಜಿನಿಯರ್ಸ್ ಕಾಲೋನಿಯ ಅಪಾರ್ಟ್ಮೆಂಟ್ ನ ಐದನೇ ಮಹಡಿಯಲ್ಲಿ ಬಂಧು ಮಿತ್ರ ರೋದನ ಮುಗಿಲು ಮುಟ್ಟಿದೆ. ಕೆಲವು ಟಿವಿ ಶೋ, ಟಿವಿ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಶಾಂತಿ ತಮ್ಮ ಊರು ವಿಶಾಖಪಟ್ಟಣಂಗೆ ಬಿಡುವುದ್ದಾಗ ಮಾತ್ರ ಹೋಗಿ ಬರುತ್ತಿದ್ದರು ಎಂದು ತಿಳಿದು ಬಂದಿದೆ. ಲಾಕ್ ಡೌನ್ ಸಂದರ್ಭದಲ್ಲಿ ಮದ್ಯ ಸಿಗದೆ ನಿದ್ದೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿರುವ ನಟ, ಗಾಯಕಿ ಭೂಪತಿ(ದಿವಂಗತ ನಟಿ ಮನೋರಮಾ ಪುತ್ರ) ಪ್ರಕರಣ ಕಣ್ಮುಂದೆ ಇರುವಾಗ ಈ ಘಟನೆ ಸಿನಿಮಾರಂಗವನ್ನು ಬೆಚ್ಚಿ ಬೀಳಿಸಿದೆ.

More from Filmibeat

English summary
Telugu TV serial actress Shanti found dead at her residence at Yellareddyguda's Engineers Colony in Hyderabad. Also known as Viswashanthi in her circle, the actress took her last breath on Thursday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X