'ಸಾಕ್ಷಾತ್ಕಾರ' ಸಿನಿಮಾ ಖ್ಯಾತಿಯ ನಟಿ ಜಮುನಾ ವಿಧಿವಶ

ಬಹುಭಾಷಾ ನಟಿ ಜಮುನಾ(86) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಹೈದರಾಬಾದ್‌ನ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. 1953ರಲ್ಲಿ ತೆಲುಗಿನ 'ಪುಟ್ಟಿಲ್ಲು' ಸಿನಿಮಾ ಮೂಲಕ ಬಣ್ಣದ ಲೋಕ ಪ್ರವೇಶಿಸಿದ ನಟಿ ಜಮುನಾ ಮುಂದೆ ನೂರಾರು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದರು. ಪ್ರಮುಖವಾಗಿ ಅವರು ತೆಲುಗು ಸಿನಿಮಾಗಳಲ್ಲಿ ನಟಿಸಿದರೂ ಕನ್ನಡ, ತಮಿಳು, ಹಿಂದಿ ಸಿನಿಮಾಗಳನ್ನೂ ನಟಿಸಿ ಮೋಡಿ ಮಾಡಿದ್ದರು. ಕನ್ನಡದಲ್ಲಿ 'ಭೂ ಕೈಲಾಸ', 'ಸಾಕ್ಷಾತ್ಕಾರ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ಮಿಂಚಿದ್ದರು. ಬರೀ ಚಿತ್ರರಂಗದಲ್ಲಿ ಮಾತ್ರವಲ್ಲದೇ ಜಮುನಾ ರಾಜಕೀಯರಂಗದಲ್ಲೂ ಗುರ್ತಿಸಿಕೊಂಡಿದ್ದರು.

1936ರಲ್ಲಿ ಹಂಪಿಯಲ್ಲಿ ಜನಿಸಿದ ಜಮುನಾ ಗುಂಟೂರಿನ ದುಗ್ಗಿರಾಲದಲ್ಲಿ ಬಾಲ್ಯವನ್ನು ಕಳೆದರು. ಎನ್‌ಟಿಆರ್, ನಾಗೇಶ್ವರ ರಾವ್, ಜಗ್ಗಯ್ಯ ಸೇರಿದಂತೆ ಆ ಕಾಲದ ತೆಲುಗಿನ ಸೂಪರ್ ಸ್ಟಾರ್‌ಗಳ ಜೊತೆಗೆ ಜಮುನಾ ನಟಿಸಿ ಗೆದ್ದರು. ಚಿಕ್ಕಂದಿನಿಂದಲೇ ನಾಟಕಗಳಲ್ಲಿ ನಟಿಸುತ್ತಿದ್ದ ಜಮುನಾ ಮುಂದೆ ಚಿತ್ರರಂಗಕ್ಕೆ ಬರುವುದು ಕಷ್ಟವಾಗಲಿಲ್ಲ. ಒಟ್ಟು 190ಕ್ಕೂ ಅಧಿಕ ಸಿನಿಮಾಗಳಲ್ಲಿ ಜಮುನಾ ನಟಿಸಿದ್ದಾರೆ. 'ಬಂಗಾರು ಪಾಪ', 'ದೊಂಗ ರಾಮುಡು', 'ಮಿಸ್ಸಮ್ಮ', 'ತೆನಾಲಿ ರಾಮಕೃಷ್ಣ', 'ಮಾ ಇಂಟಿ ಮಹಾಲಕ್ಷ್ಮಿ', 'ಗುಂಡಮ್ಮ ಕಥ', 'ಶ್ರೀಕೃಷ್ಣ ತುಲಾಭಾರಂ' ಹೀಗೆ ಹಲವು ಹಿಟ್ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.

telugu-veteran-actress-jamuna-passed-away

'ಶ್ರೀಕೃಷ್ಣ ತುಲಾಭಾರಂ' ಚಿತ್ರದಲ್ಲಿ ಸತ್ಯಭಾಮೆ ಪಾತ್ರದಲ್ಲಿ ಆಕೆಯ ನಟನೆ ಮೋಡಿ ಮಾಡಿತ್ತು. ಹಾಗಾಗಿ ತೆಲುಗು ಪ್ರೇಕ್ಷಕರ ಮನದಲ್ಲಿ ಸತ್ಯಭಾಮೆ ಆಗಿಯೇ ಶಾಶ್ವತ ಸ್ಥಾನ ಸಂಪಾದಿಸಿಕೊಂಡಿದ್ದರು. 1980ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದರು. 1989ರಲ್ಲಿ ರಾಜಮಂಡ್ರಿ ಎಂಪಿ ಆಗಿ ಆಯ್ಕೆ ಆಗಿದ್ದರು. 1990ರಲ್ಲಿ ಜನತಾ ಪಕ್ಷದ ಪರ ಪ್ರಚಾರ ಮಾಡಿದ್ದರು. ಇನ್ನು ಕನ್ನಡ ಚಿತ್ರರಂಗರಂಗದಲ್ಲೂ ಜಮುನಾ ತಮ್ಮ ಛಾಪು ಮೂಡಿಸಿದ್ದರು. ಡಾ. ರಾಜ್‌ಕುಮಾರ್ ನಟನೆಯ 'ಭೂಕೈಲಾಸ', 'ಸಾಕ್ಷಾತ್ಕಾರ' ಸಿನಿಮಾಗಳಲ್ಲಿ ನಟಿಸಿ ಕನ್ನಡ ಸಿನಿರಸಿಕರ ಮನಗೆದ್ದಿದ್ದರು. 'ಸಾಕ್ಷಾತ್ಕಾರ' ಚಿತ್ರದ ಉಮಾ ಪಾತ್ರದಲ್ಲಿ ಜಮುನಾ ನಟನೆ ಇನ್ನು ಪ್ರೇಕ್ಷಕರ ಕಣ್ಣ ಮುಂದಿದೆ. ಪುಟ್ಟಣ್ಣ ಕಣಗಾಲ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು.

'ರತ್ನಗಿರಿ ರಹಸ್ಯ', 'ಆದರ್ಶ ಸತಿ', 'ಮಾಯೆಯ ಮುಸುಕು', 'ಪೊಲೀಸ್ ಮತ್ತು ದಾದಾ' ಸೇರಿದಂತೆ ಒಂದಷ್ಟು ಕನ್ನಡ ಸಿನಿಮಾಗಳಲ್ಲಿ ಜಮುನಾ ನಟಿಸಿದ್ದರು. ಜಮುನಾ ಅಗಲಿಕೆಯಿಂದ ತೆಲುಗು ಚಿತ್ರರಂಗಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಕೃಷ್ಣಂರಾಜು, ಸೂಪರ್ ಸ್ಟಾರ್ ಕೃಷ್ಣ, ಕೈಕಾಲ ಸತ್ಯನಾರಾಯಣ, ಚಲಪತಿ ಹೀಗೆ ಹೀಗೆ ಹಲವು ಖ್ಯಾತ ಕಲಾವಿದರು ಇತ್ತೀಚಿನ ದಿನಗಳಲ್ಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

More from Filmibeat

English summary
Telugu Veteran actress Jamuna Passed away. Jamuna mainly appeared in Telugu films. But She Also Acted In Kannada Movies Like Bhookailasa, Bhookailasa, Rathnagiri Rahasya and many more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X