CCL 2025: ಕರ್ನಾಟಕ ಬುಲ್ಡೋಜರ್ಸ್ ಮೊದಲ ಎದುರಾಳಿ ತೆಲುಗು ವಾರಿಯರ್ಸ್ ಎಷ್ಟು ಬಲಿಷ್ಠ ಗೊತ್ತಾ?

ಸಿಸಿಎಲ್ 11ನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಾಳೆ(ಫೆಬ್ರವರಿ 8) ಈ ಬಾರಿ ಟೂರ್ನಿ ಲಾಂಚ್ ಆಗುತ್ತಿದೆ. ಮೊದಲ ದಿನವೇ ಎರಡು ಪಂದ್ಯಗಳು ನಡೆಯಲಿದ್ದು ಮೊದಲ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ತಂಡವನ್ನು ಚೆನ್ನೈ ರೈನೋಸ್ ತಂಡ ಎದುರಿಸಲಿದೆ.

ಎರಡನೇ ಪಂದ್ಯದಲ್ಲಿ 4 ಬಾರಿ ಚಾಂಪಿಯನ್ ಆಗಿರುವ ತೆಲುಗು ವಾರಿಯರ್ಸ್ ತಂಡ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಸವಾಲು ಹಾಕಲಿದೆ. ಐಪಿಎಲ್‌ನಲ್ಲಿ ಆರ್‌ಸಿಬಿ ರೀತಿಯಲ್ಲಿ ಬಹಳ ಕ್ರೇಜ್ ಇರುವ ತಂಡ ಕರ್ನಾಟಕ ಬುಲ್ಡೋಜರ್ಸ್. ಈ ಬಾರಿ ಕಿಚ್ಚ ಸುದೀಪ್ ತಂಡವನ್ನು ಮುನ್ನಡೆಸಲಿದ್ದಾರೆ. ಈಗಾಗಲೇ ತಂಡ ಕಠಿಣ ತಾಲೀಮು ನಡೆಸುತ್ತಿದೆ. ಈ ಹಿಂದೆ ಅಂತಿಮ ಪಂದ್ಯಗಳಲ್ಲಿ ಸೋತು ತಂಡ ನಿರಾಸೆ ಅನುಭವಿಸಿತ್ತು. ಈ ಬಾರಿ ಆ ತಪ್ಪು ಆಗಬಾರದು ಎಂದು ಕಿಚ್ಚನ ನೇತೃತ್ವದ ತಂಡ ನಿರ್ಧರಿಸಿದೆ.

Telugu Warriors full squad for CCL 2025 Players List and Overview

ತೆರೆಮೇಲೆ ನೋಡುತ್ತಿದ್ದ ಕಲಾವಿದರನ್ನು ಕ್ರಿಕೆಟ್ ಮೈದಾನದಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಟಿವಿಯಲ್ಲಿ ಸಿನಿಮಾ, ಹಾಡು ನೋಡುತ್ತಿದ್ದರು ತಾರೆಯರ ಕ್ರಿಕೆಟ್ ಕಲರವ ವೀಕ್ಷಿಸಲು ಸಿದ್ಧರಾಗಿದ್ದಾರೆ. ತೆಲುಗು ವಾರಿಯರ್ಸ್ ಕೂಡ ಬಹಳ ಪ್ರಬಲ ತಂಡ. ಈಗಾಗಲೇ ತಂಡದ ಆಟಗಾರರ ಪಟ್ಟಿ ಕೂಡ ಬಿಡುಗಡೆಯಾಗಿದೆ. ನಟ ಅಖಿಲ್ ಅಕ್ಕಿನೇನಿ ಈ ಬಾರಿ ಕೂಡ ತಂಡವನ್ನು ಮುನ್ನಡೆಸಲಿದ್ದಾರೆ.

ಆಲ್‌ರೌಂಡರ್ ಆಗಿರುವ ಅಖಿಲ್ ತಂಡದ ಪ್ರಮುಖ ಆಟಗಾರ. ಕ್ರಿಕೆಟ್ ತರಬೇತಿಯನ್ನು ಅಖಿಲ್ ಪಡೆದಿದ್ದು ಬಹಳ ಸೊಗಸಾಗಿ ಆಡುತ್ತಾರೆ. ಇನ್ನು ತಂಡದ ಮಾಲೀಕರು ಆಗಿರು ಸಚಿನ್ ಜೋಶಿ ಕೂಡ ಆಲ್‌ರೌಂಡರ್ ಆಗಿದ್ದಾರೆ. ನಟ ಆದರ್ಶ್ ತಂಡದ ಮತ್ತೊಬ್ಬ ಆಧಾರಸ್ತಂಭ. ಆಲ್‌ರೌಂಡರ್ ಆಗಿರುವ ಆದರ್ಶ್ ತಮ್ಮ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಿಂದ ತಂಡಕ್ಕೆ ಒಳ್ಳೆ ಬೆಂಬಲ ನೀಡುತ್ತಾ ಬರುತ್ತಿದ್ದಾರೆ.

2013ರಲ್ಲಿ ಕರ್ನಾಟಕ ಬುಲ್ಡೋಜರ್ಸ್ ಜೊತೆ ತೆಲುಗು ವಾರಿಯರ್ಸ್ ಫೈನಲ್ ಪ್ರವೇಶಿಸಿತ್ತು. ಅಂದು ಕಿಚ್ಚನ ಹುಡುಗರು ಟ್ರೋಫಿ ಎತ್ತಿ ಹಿಡಿದಿದ್ದರು. ರನ್ನರ್ ಅಪ್ ಆಗಿದ್ದ ತೆಲುಗು ವಾರಿಯರ್ಸ್ ತಂಡ 2016ರಲ್ಲಿ ಸೇಡು ತೀರಿಸಿಕೊಂಡಿತ್ತು. 2015ರಲ್ಲಿ ಮೊದಲ ಬಾರಿ ಚಾಂಪಿಯನ್ ಆಗಿದ್ದ ತೆಲುಗು ವಾರಿಯರ್ಸ್ ಮರುವರ್ಷ ಕರ್ನಾಟಕ ಬುಲ್ಡೋಜರ್ಸ್ ವಿರುದ್ಧವೇ ಫೈನಲ್ ಪಂದ್ಯದಲ್ಲಿ ಗೆದ್ದು ಬೀಗಿತ್ತು. 2017 ಹಾಗೂ 2013 ರಲ್ಲಿ ಮತ್ತೆ ಗೆದ್ದು ದಾಖಲೆ ಬರೆದಿತ್ತು. 4 ಬಾರಿ ಟ್ರೋಫಿ ಗೆದ್ದು ಟೂರ್ನಿಯಲ್ಲಿ ಅತಿಹೆಚ್ಚು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡ ಎನಿಸಿಕೊಂಡಿದೆ.

ಅಖಿಲ್ ಸವಾಲು

ಇತ್ತೀಚೆಗೆ ತೆಲುಗು ವಾರಿಯರ್ಸ್ ತಂಡದ ಜರ್ಸಿ ಅನಾವರಣ ಕಾರ್ಯಕ್ರಮ ನಡೀತು. ಈ ವೇಳೆ ಮಾತನಾಡಿದ ತಂಡದ ನಾಯಕ ಅಖಿಲ್ ಅಕ್ಕಿನೇನಿ ಮತ್ತೊಮ್ಮೆ ಗೆದ್ದು ತೋರಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ. 5 ಬಾರಿ ಕೂಡ ಟ್ರೋಫಿ ಗೆಲ್ಲುತ್ತೇವೆ, ಆಟದ ಜೊತೆಗೆ ಎಲ್ಲರನ್ನು ರಂಜಿಸಬೇಕು ಎಂದುಕೊಂಡಿದ್ದೇವೆ ಎಂದಿದ್ದಾರೆ.

ಟಿಕೆಟ್ ಸೋಲ್ಡ್‌ಔಟ್

ಪಂದ್ಯಕ್ಕಿಂತ ಎರಡು ದಿನ ಮುನ್ನ ಟಿಕೆಟ್‌ ಸೋಲ್ಡೌಟ್ ಆಗಿದೆ. ವರ್ಷದಿಂದ ವರ್ಷಕ್ಕೆ ಸಿಸಿಎಲ್ ಕ್ರೇಜ್ ಹೆಚ್ಚಾಗುತ್ತಿದೆ. ಸಿನಿಮಾ ತಾರೆಯರು ಅದ್ಭುತ ಆಟದ ಮೂಲಕ ನೋಡುಗರನ್ನು ರಂಜಿಸುತ್ತಿದ್ದಾರೆ. ವೃತ್ತಿಪರ ಆಟಗಾರರಂತೆ ಬೌಂಡರಿ, ಸಿಕ್ಸರ್‌ ಸಿಡಿಸಿ ಪ್ರೇಕ್ಷಕರು ಕ್ರಿಕೆಟ್ ಪ್ರೇಮಿಗಳು ಸಂಭ್ರಮಿಸುವಂತೆ ಮಾಡುತ್ತಿದ್ದಾರೆ. ತಮ್ಮ ನೆಚ್ಚಿನ ತಾರೆಯರನ್ನು ಹತ್ತಿರದಿಂದ ನೋಡಬಹುದು ಎಂದು ಸಾಕಷ್ಟು ಜನ ಟಿಕೆಟ್ ಬುಕ್ ಮಾಡಿಕೊಂಡಿದ್ದಾರೆ.

ತೆಲುಗು ವಾರಿಯರ್ಸ್ ತಂಡ

ಅಖಿಲ್ ಅಕ್ಕಿನೇನಿ (ಆಲ್ ರೌಂಡರ್) (ಕ್ಯಾಪ್ಟನ್)
ಆದರ್ಶ್ (ಆಲ್ ರೌಂಡರ್)
ನಿಖಿಲ್ (ಆಲ್-ರೌಂಡರ್)
ರಘು (ಆಲ್-ರೌಂಡರ್)
ತಾರಕ ರತ್ನ (ಆಲ್-ರೌಂಡರ್)
ಸಚಿನ್ ಜೋಶಿ (ಆಲ್ ರೌಂಡರ್)
ಅಶ್ವಿನ್ ಬಾಬು (ಆಲ್-ರೌಂಡರ್)
ಧರಮ್ (ಆಲ್-ರೌಂಡರ್)
ತರುಣ್ (ಆಲ್-ರೌಂಡರ್)
ಹರೀಶ್ (ಆಲ್-ರೌಂಡರ್)
ನಂದ ಕಿಶೋರ್ (ಬೌಲರ್)
ಸಾಮ್ರಾಟ್ (ಬೌಲರ್)
ವಿಶ್ವ (ಆಲ್-ರೌಂಡರ್)
ಪ್ರಿನ್ಸ್ (ಆಲ್-ರೌಂಡರ್)
ಸುಶಾಂತ್ (ಆಲ್-ರೌಂಡರ್)
ಖಯ್ಯೂಮ್ (ಆಲ್-ರೌಂಡರ್)

More from Filmibeat

English summary
CCL 2025 Karnataka Bulldozers vs Telugu Warriors; key players, where to watch, match details;
Read more about: telugu ccl tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X