For Quick Alerts
  ALLOW NOTIFICATIONS  
  For Daily Alerts

  ಅಪ್ರಾಪ್ತೆ ಮೇಲೆ ಅತ್ಯಾಚಾರ: ಖ್ಯಾತ ಯೂಟ್ಯೂಬರ್ ಬಂಧನ

  |

  'ಓ ಮೈ ಗಾಡ್.. ಓ ಮೈ ಗಾಡ್' ಎಂದು ಹುಡುಗಿಯೊಬ್ಬಳು ಹೇಳುವ ತಮಾಷೆ ವಿಡಿಯೋವನ್ನು ಬಹುತೇಕರು ನೋಡಿರುತ್ತಾರೆ ಆ ವಿಡಿಯೋದಲ್ಲಿ ಹುಡುಗಿಯ ಜೊತೆಗೆ ಸಾಮಾನ್ಯವಾಗಿ ಒಬ್ಬ ಯುವಕ ಕಾಣಿಸಿಕೊಳ್ಳುತ್ತಿದ್ದ ಆತನ ಹೆಸರು ಭಾರ್ಗವ್. ಕೆಲವೇ ಸಮಯದಲ್ಲಿ ಯೂಟ್ಯೂಬ್, ಟಿಕ್‌-ಟಾಕ್‌, ಇನ್‌ಸ್ಟಾಗ್ರಾಂನಲ್ಲಿ ತನ್ನ ಫನ್ನಿ ವಿಡಿಯೋಗಳಿಂದ ಜನಪ್ರಿಯನಾಗಿದ್ದ. ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದ ಭಾರ್ಗವ್ ಈಗ ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾನೆ.

  'ಫನ್ ಬಕೆಟ್' ಹೆಸರಿನ ಯೂಟ್ಯೂಬ್ ಚಾನೆಲ್ ಹೊಂದಿದ್ದ ಭಾರ್ಗವ್ ತೆಲುಗು ರಾಜ್ಯಗಳಲ್ಲಿ ಸೆಲೆಬ್ರಿಟಿ ಯೂಟ್ಯೂಬರ್ ಆಗಿ ಗುರುತಿಸಿಕೊಂಡಿದ್ದ. ಆತನನ್ನು ಇತ್ತೀಚೆಗೆ ವಿಶಾಖಪಟ್ಟಣಂ ಪೊಲೀಸರು ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಿದ್ದಾರೆ.

  14 ವರ್ಷ ವಯಸ್ಸಿನ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಭಾರ್ಗವ್ ಅನ್ನು ಬಂಧಿಸಲಾಗಿದೆ. ಸಂತ್ರಸ್ಥೆಯ ತಾಯಿಯೇ ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.

  ಭಾರ್ಗವ್‌ ವಿಡಿಯೋಗಳನ್ನು ನೋಡಿ ಮೆಚ್ಚಿ ಸಾಮಾಜಿಕ ಜಾಲತಾಣದಲ್ಲಿ ಆತನಿಗೆ ಸಂದೇಶ ಕಳಿಸಿದ್ದಳು 14 ವರ್ಷದ ಯುವತಿ. ಆಕೆಯೊಂದಿಗೆ ಸಾಮಾಜಿಕ ಜಾಲತಾಣ ಮೂಲಕ ಸಂಪರ್ಕ ಬೆಳೆಸಿಕೊಂಡ ಭಾರ್ಗವ್ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಸಂತ್ರಸ್ತೆಯ ತಾಯಿ ದೂರು ನೀಡಿದ್ದಾರೆ.

  ಚೆನ್ನಾಗಿ ಸಾಯೋಣ ಹೆದರಿಕೊಂಡು ಸಾಯೋದು ಬೇಡ ಅಂದ್ರು Sanjana Galrani | Filmibeat Kannada

  ಯೂಟ್ಯೂಬರ್ ಭಾರ್ಗವ್ ಅನ್ನು ಪೊಲೀಸರು ಬಂಧಿಸಿ ಕರೆದೊಯ್ಯುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವು ಯೂಟ್ಯೂಬರ್‌ಗಳು ಸಹ ಭಾರ್ಗವ್ ಬಂಧನ ಕುರಿತು ಮಾತನಾಡಿದ್ದು, 'ಆತನಿಗೆ ತಕ್ಕ ಶಾಸ್ತಿಯೇ ಆಗಿದೆ' ಎಂದಿದ್ದಾರೆ.

  English summary
  Telugu famous YouTuber Bhargav arrested in rape case. Police arrested him for raping a minor girl.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X