Leo: ವಿಜಯ್ ಅಭಿನಯದ ಬಹುನಿರೀಕ್ಷಿತ ಲಿಯೋ ಸಿನಿಮಾದ ತೆಲುಗು ಪೋಸ್ಟರ್ ಔಟ್

ಈ ವರ್ಷದ ಬಹುನಿರೀಕ್ಷಿತ ಲೋಕೇಶ್ ಕನಕರಾಜ್ ನಿರ್ದೇಶನದ ದಳಪತಿ ವಿಜಯ್ ಅಭಿನಯದ ಲಿಯೋ ಚಿತ್ರದ ತೆಲುಗು ಪೋಸ್ಟರ್ ಭಾನುವಾರ ಅನಾವರಣಗೊಂಡಿದೆ. ಸೆಪ್ಟೆಂಬರ್ 17ಕ್ಕೆ ಲಿಯೋ ಬಗ್ಗೆ ಅಪ್‌ಡೇಟ್ ನೀಡಲಾಗುವುದು ಎಂದು ನಿರ್ದೇಶಕರು ಈಗಾಗಲೇ ಸೂಚಿಸಿದ್ದರು. ಆದರೆ, ಯಾವುದರ ಅಪ್‌ಡೇಟ್ ಎಂದು ಅಭಿಮಾನಿಗಳಿಗೆ ಯಾವುದೇ ಸುಳಿವು ಇರಲಿಲ್ಲ.

ಸೆಪ್ಟೆಂಬರ್ 17ಕ್ಕೆ ಲಿಯೋ ಚಿತ್ರದ ತೆಲುಗು ಲೋಕೇಶ್ ಕನಕರಾಜ್ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಫೋಸ್ಟ್ ಮಾಡಿದ್ದಾರೆ. ಬಿಡುಗಡೆಯಾದ ಹೊಸ ಪೋಸ್ಟರ್‌ನಲ್ಲಿ, ಅತ್ಯಂತ ಗಮನ ಸೆಳೆಯುವುದು ಅದರ ಶೀರ್ಷಿಕೆ. "ಶಾಂತವಾಗಿರಿ ಮತ್ತು ಯುದ್ಧವನ್ನು ತಪ್ಪಿಸಿ" ಎಂಬ ಶೀರ್ಷಿಕೆ ಫೋಸ್ಟರ್‌ನಲ್ಲಿಯೂ ಇದೆ.

Thalapathy Vijays Leo Telugu poster out

ಹೊಸ ತೆಲುಗು ಪೋಸ್ಟರ್ ಅನಾವರಣಗೊಂಡಾಗಿನಿಂದ, ಅಭಿಮಾನಿಗಳು ಅದರಲ್ಲಿ ಉಲ್ಲೇಖಿಸಲಾದ ಶೀರ್ಷಿಕೆಯನ್ನು ಹೊಡೆದು ನೋಡಲು ಪ್ರಯತ್ನಿಸುತ್ತಿದ್ದಾರೆ. ಲಿಯೋ ಚಿತ್ರದ ದಳಪತಿ ವಿಜಯ್ ಅವರ ಫಸ್ಟ್ ಲುಕ್ ಪೋಸ್ಟರ್ ಕೂಡ ತೆಲುಗು ಪೋಸ್ಟರ್‌ನಂತೆಯೇ ಗಮನ ಸೆಳೆಯುವ ಶೀರ್ಷಿಕೆಯನ್ನು ಹೊಂದಿತ್ತು. ಇದನ್ನೇ ಎರಡನೇ ಪೋಸ್ಟರ್ ಕೂಡ ಮಾಡಿದೆ.

ಪೋಸ್ಟರ್ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಈಗಾಗಲೇ ಒಂದು ಮಿಲಿಯನ್ ಲೈಕ್‌ಗಳನ್ನು ಪಡೆದುಕೊಂಡಿದೆ. ಇದು ಲೋಕೇಶ್ ಕನಕರಾಜ್ ನಿರ್ದೇಶನದ ಚಿತ್ರಕ್ಕೆ ಅಭಿಮಾನಿಗಳಲ್ಲಿ ಇರುವ ಹೈಪ್ ಅನ್ನು ತೋರಿಸುತ್ತದೆ. ಇನ್ನು ನಟ ವಿಜಯ್ ಕೂಡ ಪೋಸ್ಟರ್ ಅನ್ನು ಶೇರ್ ಮಾಡಿದ್ದಾರೆ. ಈಗಾಗಲೇ ಫೋಸ್ಟರ್‌ಗೆ ಎರಡೂವರೆ ಮಿಲಿಯನ್ ಲೈಕ್ ಮತ್ತು 77 ಸಾವಿರ ಮಂದಿ ಕಾಮೆಂಟ್ ಮಾಡಿದ್ದಾರೆ.

ದಳಪತಿ ವಿಜಯ್ ಅಭಿನಯದ ಲಿಯೋ ಚಿತ್ರ ಅಕ್ಟೋಬರ್ 19 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಈ ವರ್ಷ ತಮಿಳು ಚಿತ್ರರಂಗ ಒಳ್ಳೆಯ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದು, ಮಾಸ್ಟರ್ ನಂತರ ದಳಪತಿ ವಿಜಯ್ ಅವರೊಂದಿಗೆ ಲೋಕೇಶ್ ಕನಗರಾಜ್ ಎರಡನೇ ಬಾರಿ ಕೈಜೋಡಿಸಿರುವುದು ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

Thalapathy Vijays Leo Telugu poster out

ಲಿಯೋ ಸಿನಿಮಾವನ್ನು ಸೆವೆನ್ ಸ್ಕ್ರೀನ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಎಸ್ ಎಸ್ ಲಲಿತ್ ಕುಮಾರ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ದಳಪತಿ ವಿಜಯ್, ತ್ರಿಶಾ, ಸಂಜಯ್ ದತ್, ಅರ್ಜುನ್ ಸರ್ಜಾ, ಗೌತಮ್ ವಾಸುದೇವ್ ಮೆನನ್, ಮನ್ಸೂರ್ ಅಲಿ ಖಾನ್ ಮತ್ತು ಮಿಸ್ಕಿನ್ ಒಳಗೊಂಡಿರುವ ಬೃಹತ್ ತಾರಾ ಬಣವಿದೆ.

ಇದರ ಜೊತೆಗೆ ಇತರ ಹಲವು ದೊಡ್ಡ ದೊಡ್ಡ ನಟರು ಸಿನಿಮಾದಲ್ಲಿ ನಟಿಸಿದ್ದಾರೆ ಎಂದು ವದಂತಿಗಳಿವೆ. ಆದರೆ, ಈ ಬಗ್ಗೆ ಲಿಯೋ ತಂಡ ಗೌಪ್ಯತೆ ಕಾಪಾಡುತ್ತಿದೆ. ಈ ಚಿತ್ರವು ವಿಜಯ್ ಅವರ ನಾಯಕನಾಗಿ 67 ನೇ ಚಿತ್ರವಾಗಿದೆ. ನಿರ್ದೇಶಕ ಲೋಕೇಶ್ ಕನಕರಾಜ್ ಅವರ ಐದನೇ ಚಿತ್ರವಾಗಿದೆ.

ಇನ್ನು, ಲೋಕೇಶ್ ಕನಕರಾಜ್ ಅವರು ಈ ಬಾರಿಯ ನಿರೀಕ್ಷೆಯನ್ನು ಹೆಚ್ಚಾಗಿಸಿದ್ದಾರೆ. ವೃತ್ತಿಜೀವನದಲ್ಲಿ ಒಂದು ಫ್ಲಾಪ್ ನೀಡದ ನಿರ್ದೇಶಕನ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಇರುವುದು ಸಾಮಾನ್ಯ. ಈ ಬಾರಿ ಕೂಡ ಅವರು ತಮ್ಮ ಗೆಲುವಿನ ನಾಗಾಲೋಟ ಮುಂದುವರೆಸುವ ಸಾಧ್ಯತೆಯಿದೆ. ಲೋಕೇಶ್ ಕನಕರಾಜ್ ಈ ಹಿಂದೆ ಮಾನಗರಂ, ಕೈತಿ, ಮಾಸ್ಟರ್, ಬೀಸ್ಟ್ ಮತ್ತು ವಿಕ್ರಮ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

More from Filmibeat

English summary
Leo: Thalapathy Vijay's Leo Telugu poster out.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X