Thandel’ Twitter Review ; ಹೇಗಿದೆ ನಾಗಚೈತನ್ಯ, ಸಾಯಿಪಲ್ಲವಿ ಅಭಿನಯದ ಕಡಲ ತೀರದ ಪ್ರೇಮಯಾನ ತಾಂಡೇಲ್ ?

ಲವ್ ಸ್ಟೋರಿ ಚಿತ್ರದ ನಂತರ ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ಅಭಿನಯಿಸಿರುವ ಸಿನಿಮಾ ತಾಂಡೇಲ್. ಆರಂಭದಿಂದಲೂ ನಿರೀಕ್ಷೆಯನ್ನು ಮೂಡಿಸಿದ್ದ ಚಿತ್ರ ಇದು. ಇದಕ್ಕೆ ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ಈ ಚಿತ್ರದ ಮೂಲಕ ಎರಡನೇ ಬಾರಿ ಒಂದಾಗುತ್ತಿದ್ದಾರೆ ಎನ್ನುವ ವಿಚಾರ ಒಂದು ಕಾರಣವಾದರೆ 'ಕಾರ್ತಿಕೇಯ' ಚಿತ್ರದ ನಿರ್ದೇಶಕ ಚಂದೂ ಮೊಂಡೇಟಿ ಈ ಚಿತ್ರವನ್ನು ನಿರ್ದೇಶಿಸಿರುವುದು ಮತ್ತೊಂದು ಕಾರಣ.

ಇನ್ನು ಹಾಡು, ಟೀಸರ್ ಮತ್ತು ಟ್ರೇಲರ್ ಮೂಲಕ ಎಲ್ಲರ ಗಮನ ಸೆಳೆಯುವಲ್ಲಿ ತಾಂಡೇಲ್ ಯಶಸ್ವಿಯಾಗಿತ್ತು. ಪ್ರೇಕ್ಷಕರ ವರ್ಗ ಕೂಡ ಚಿತ್ರವನ್ನು ನೋಡಲು ಕಾತುರದಿಂದ ಕಾಯುತ್ತಿತ್ತು. ಇದಕ್ಕೆ ಕೈಗನ್ನಡಿ ಎನ್ನುವಂತೆ ಇಂದು ಬಿಡುಗಡೆಯಾದ ಮೀನುಗಾರರ ಬದುಕಿನ ಸುತ್ತ ಮುತ್ತ ಸುತ್ತುವ ಈ ಚಿತ್ರ ನೋಡಲು ಪ್ರೇಕ್ಷಕರ ದಂಡು ಚಿತ್ರಮಂದಿರದತ್ತ ಹರಿದು ಬಂದಿದೆ. ಮೊದಲ ದಿನ ತಾಂಡೇಲ್ ಚಿತ್ರಕ್ಕೆ ಉತ್ತಮವಾದ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಹಾಗಿದ್ದರೆ ತಾಂಡೇಲ್ ಚಿತ್ರದ ಕಥೆ ಏನು ? ಚಿತ್ರವನ್ನು ನೋಡಿದ ಅಭಿಮಾನಿಗಳು ಚಿತ್ರದ ಬಗ್ಗೆ ಹೇಳಿದ್ದೇನು ? ಎಂದು ತಿಳಿಯಲು ಮುಂದೆ ಓದಿ

Thandel Twitter reviews See what netizens are saying about Naga Chaitanya s film

ನಾಗಚೈತನ್ಯ ಕಂಬ್ಯಾಕ್ ಸಿನಿಮಾ

ಈಗಷ್ಟೇ ನಾನು ತಾಂಡೇಲ್ ನೋಡಿ ಮುಗಿಸಿದೆ. ಈ ಚಿತ್ರದ ಮೂಲಕ ನಾಗಚೈತನ್ಯ ಕಂ ಬ್ಯಾಕ್ ಮಾಡಿದ್ದಾರೆ. ಮಜಿಲಿ ಮತ್ತು ಯೇ ಮಾಯಾ ಚೇಸಾವೆ ನಂತರ ನಾಗಚೈತನ್ಯ ವೃತ್ತಿ ಜೀವನದ ಅತ್ಯುತ್ತಮ ಚಿತ್ರ ಇದು. ಫಸ್ಟ್ ಹಾಫ್ ಡಿಸೆಂಟ್ ಆಗಿದೆ. ಸೆಕೆಂಡ್ ಹಾಫ್ ಉತ್ತಮವಾಗಿದೆ. ದೇವಿಶ್ರೀ ಪ್ರಸಾದ್ ಮತ್ತೊಮ್ಮೆ ತಮ್ಮ ಸಂಗೀತದಿಂದ ಮನ ಗೆಲ್ಲುತ್ತಾರೆ ಎಂದು ಚಿತ್ರ ಪ್ರೇಮಿಯೊಬ್ಬರು ತಮ್ಮ ವಿಮರ್ಶೆಯನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ಭಾವನಾತ್ಮಕ ಚಿತ್ರ

ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ಅವರ ಅಭಿನಯದಿಂದ ರೊಮ್ಯಾಂಟಿಕ್ ಆಕ್ಷನ್ ಡ್ರಾಮಾ ತಾಂಡೇಲ್ ಗಮನ ಸೆಳೆಯುತ್ತೆ. ಡಿಎಸ್‌ಪಿ ಅವರ ಸಂಗೀತ ಮತ್ತು ಸೊಗಸಾದ ದೃಶ್ಯವಳಿಗಳು ಚಿತ್ರದ ತೂಕವನ್ನು ಹೆಚ್ಚಿಸುತ್ತವೆ. ಭಾವನಾತ್ಮಕವಾಗಿ ಚಿತ್ರ ಸೆಳೆಯುತ್ತೆ ಎಂದು ಐದರಲ್ಲಿ ನಾಲ್ಕು ಅಂಕಗಳನ್ನು ವ್ಯಕ್ತಿಯೊಬ್ಬರು ತಾಂಡೇಲ್ ಚಿತ್ರಕ್ಕೆ ನೀಡಿದ್ಧಾರೆ.

ನೈಜ ಕಥೆಯಾಧರಿಸಿದ ಚಿತ್ರ

ನೈಜ ಕಥೆಯನ್ನು ಆಧರಿಸಿದ ಚಿತ್ರ ಇದು. ಚಿತ್ರದ ಚಿತ್ರಕಥೆ ಮತ್ತು ಪಾತ್ರಗಳ ವಿನ್ಯಾಸ ಚೆನ್ನಾಗಿದೆ. ಮನಸಿಗೆ ಮುದ ನೀಡುವ ಸಿನಿಮಾ ಇದು. ನಿಮ್ಮ ಮನೆ ಮಂದಿಯನ್ನೆಲ್ಲ ಕರೆದುಕೊಂಡು ಹೋಗಿ ಆರಾಮಾಗಿ ಚಿತ್ರವನ್ನು ನೋಡಿ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ

ಸುಂದರ ಹಾಡುಗಳು

ಸುಂದರವಾದ ಪ್ರೇಮಗೀತೆ, ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನದಲ್ಲಿನ ಸುಮಧುರ ಹಾಡುಗಳು, ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ಅಭಿನಯ, ಕುಟುಂಬದ ಜೊತೆ ನೋಡಬಹುದಾದ ಒಂದೊಳ್ಳೇ ಸಿನಿಮಾ ಎಂದು ಬರೆದುಕೊಂಡಿರುವ ಇನ್ನೊಬ್ಬರು ಚಿತ್ರಕ್ಕೆ ಮೂರು ಸ್ಟಾರ್‌ಗಳನ್ನು ನೀಡಿದ್ದಾರೆ. ಐದು ವರ್ಷದ ನಂತರ ನಾಗಚೈತನ್ಯ ಕಂ ಬ್ಯಾಕ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಸುಂದರವಾದ ಪ್ರೇಮ ಕಥೆ

ನೈಜ ಕಥೆಯನ್ನು ಅತ್ಯುತ್ತಮವಾಗಿ ತೆರೆಗೆ ತರಲಾಗಿದೆ. ಡಿಎಸ್‌ಪಿ ಅವರ ಸಂಗೀತದಲ್ಲಿ ಮಾಧುರ್ಯ ಇದೆ.ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ಅಭಿನಯ ಸೊಗಸಾಗಿದೆ. ಸ್ವಚ್ಚವಾದ ಪ್ರೇಮಕಥೆಯಲ್ಲಿ ದೇಶಭಕ್ತಿಯ ಎಳೆ ಕೂಡ ಇದೆ. ಕೆಲವರಿಗೆ ಅಲ್ಲಲ್ಲಿ ಬೋರ್ ಅನಿಸಬಹುದು ಆದರೆ ಕಡೆಗಣಿಸಿ ಎಂದು ಮತ್ತೊಬ್ಬರು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಹೀಗೆ ಚಿತ್ರ ನೋಡಿದ ಅನೇಕರು ದೇವಿಶ್ರೀ ಪ್ರಸಾದ್ ಅವರ ಸಂಗೀತ ನಿರ್ದೇಶನ ಮತ್ತು ನಾಗಚೈತನ್ಯ-ಸಾಯಿಪಲ್ಲವಿ ಅವರ ಅಭಿನಯಕ್ಕೆ ಮನ ಸೋತಿದ್ದಾರೆ. ಚಿತ್ರ ಚೆನ್ನಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವ್ಯಕ್ತವಾಗುತ್ತಿರುವ ಈ ಅಭಿಪ್ರಾಯಗಳು ಚಿತ್ರದ ಗಳಿಕೆಗೆ ಎಷ್ಟು ಸಹಕಾರಿಯಾಗಲಿವೆ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

More from Filmibeat

Read more about: review naga chaitanya sai pallavi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X