For Quick Alerts
  ALLOW NOTIFICATIONS  
  For Daily Alerts

  ಅವಕಾಶಕ್ಕೆ ಧನ್ಯವಾದ, ನಿರೀಕ್ಷೆ ಹುಸಿಗೊಳಿಸಲ್ಲ: ಪ್ರಶಾಂತ್ ನೀಲ್

  |

  ಕೆಜಿಎಫ್ ಸಿನಿಮಾದ ನಂತರ ನಿರ್ದೇಶಕ ಪ್ರಶಾಂತ್ ನೀಲ್ ಗೆ ಬಹು ಬೇಡಿಕೆ ಬಂದಿದೆ. ದಕ್ಷಿಣದ ಟಾಪ್ ನಿರ್ದೇಶಕರಲ್ಲಿ ಒಬ್ಬರಾಗಿಬಿಟ್ಟಿದ್ದಾರೆ ಪ್ರಶಾಂತ್ ನೀಲ್.

  ಪ್ರತಿಭಾವಂತ ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ ಕತೆಗೆ ತಲೆದೂಗಿ ಸ್ಟಾರ್ ನಟ ಪ್ರಭಾಸ್ ಸಹ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. ಪ್ರಭಾಸ್ ಜೊತೆ ಸಿನಿಮಾ ಮೂಲಕ ಪ್ರಶಾಂತ್ ನೀಲ್, ಖ್ಯಾತಿಯ ಇನ್ನೊಂದು ಮೆಟ್ಟಿಲು ಮೇಲೆ ಹೋಗಿದ್ದಾರೆ.

  ಪ್ರಶಾಂತ್ ನೀಲ್ ನಿರ್ದೇಶಿಸಿ ಪ್ರಭಾಸ್ ನಟಿಸುತ್ತಿರುವ 'ಸಲಾರ್' ಸಿನಿಮಾದ ಮುಹೂರ್ತ ಕಾರ್ಯಕ್ರಮ ಇಂದು ಹೈದರಾಬಾದ್‌ನಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ನಟ ಯಶ್, ರಾಜ್ಯದ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರುಗಳು ಭಾಗವಹಿಸಿದ್ದರು.

  ಕಾರ್ಯಕ್ರಮದ ನಂತರ ಟ್ವೀಟ್ ಮಾಡಿರುವ ಪ್ರಶಾಂತ್ ನೀಲ್, 'ಅವಕಾಶ ಕೊಟ್ಟಿದ್ದಕ್ಕೆ ವಿಜಯ್ ಕಿರಗಂದೂರು, ಪ್ರಭಾಸ್ ಅವರಿಗೆ ಧನ್ಯವಾದಗಳು, ನಮ್ಮ ಜೊತೆ ಇದ್ದಿದ್ದಕ್ಕೆ ಯಶ್‌ ಗೆ ಧನ್ಯವಾದ. ಹರಿದುಬರುತ್ತಿರುವ, ಪ್ರೀತಿ, ಶುಭಾಶಯಗಳಿಗೆ ಧನ್ಯವಾದ. ನಿಮ್ಮ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ' ಎಂದಿದ್ದಾರೆ ಪ್ರಶಾಂತ್ ನೀಲ್.

  ಟ್ವೀಟ್‌ ಜೊತೆಗೆ ಮುಹೂರ್ತದ ಕೆಲವು ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ ಪ್ರಶಾಂತ್ ನೀಲ್.

  ರಾಜಮೌಳಿ ತಂದೆ ಗರಡಿಯಲ್ಲಿ ತಯಾರಾಗಿದೆ 'ಕಬ್ಜ'ದ ಕಥೆ | Filmibeat Kannada

  ಸಲಾರ್ ಸಿನಿಮಾವನ್ನು ಹೊಂಬಾಳೆ ಫಿಲಮ್ಸ್ ನಿರ್ಮಿಸುತ್ತಿದೆ. ಸಿನಿಮಾದಲ್ಲಿ ಮಲಯಾಳಂ ನಟ ಮೋಹನ್‌ಲಾಲ್ ಸಹ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಚಿತ್ರೀಕರಣವು ಇದೇ ತಿಂಗಳ ಅಂತ್ಯದಲ್ಲಿ ಪ್ರಾರಂಭಗೊಳ್ಳಲಿದೆ. ಸಿನಿಮಾಕ್ಕೆ ನಾಯಕಿಯನ್ನು ಇನ್ನೂ ನಿರ್ಧರಿಸಲಾಗಿಲ್ಲ. ಕಿಯಾರಾ ಅಡ್ವಾಣಿ ಅಥವಾ ಸಾರಾ ಅಲಿ ಖಾನ್ ನಾಯಕಿಯಾಗಿ ನಟಿಸುವ ಸಾಧ್ಯತೆ ಇದೆ.

  English summary
  KGF director Prashanth Neel said thanks for the opportunity will not let you all down.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X