34ರ ಹರೆಯದ ನಟಿಯನ್ನು 54ನೇ ವಯಸ್ಸಿನಲ್ಲಿ ಮದುವೆಯಾಗಲು ರೆಡಿಯಾದ ಶಿವಣ್ಣ ಜೊತೆ ತೆರೆಹಂಚಿಕೊಂಡಿದ್ದ ನಟ..!

ಪ್ರೀತಿಯೇ ಸರ್ವಸ್ವವಲ್ಲ. ಆದರೆ ಬದುಕಿನ ಈ ಬಹುಮುಖ್ಯ ಅಧ್ಯಾಯವನ್ನು ಅಷ್ಟೇ ಜತನದಿಂದ, ಅದಕ್ಕಿರುವ ಆಳ- ಅರ್ಥವನ್ನೊಮ್ಮೆ ಮನಗಂಡ, ಆಲೋಚಿಸಿ, ಅಭ್ಯಸಿಸಿ ಆಯ್ದುಕೊಳ್ಳುವ ಪ್ರವೃತ್ತಿಪ್ರೀತಿಗೆ ಹೊಸ ಅರ್ಥವನ್ನು ತುಂಬಿದೆ. ಅದು ಕೇವಲ ಭಾವೋದ್ವೇಗದ ಭ್ರಮಾಲೋಕವಾಗಿ ಉಳಿದಿಲ್ಲ. ವಾಸ್ತವದ ಭೂತಗನ್ನಡಿಯಲ್ಲಿಟ್ಟು ಪರೀಕ್ಷಿಸಿ, ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಜಮಾನಾ ಈಗಿನದು. ಇದಕ್ಕೆ ಶ್ರೀಕಾಂತ್ ಅಯ್ಯಂಗಾರ್ ಮತ್ತು ಜ್ಯೋತಿ ಸದ್ಯದ ಉದಾಹರಣೆ.

ಹೌದು, ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಚಿತ್ರಗಳಲ್ಲಿ ಸಾಮಾನ್ಯವಾಗಿ ಕಾಣಿಸುವವರು ಶ್ರೀಕಾಂತ್ ಅಯ್ಯಂಗಾರ್. ತೆಲುಗು ಚಿತ್ರರಂಗದಲ್ಲಿ ಒಂದಿಲ್ಲೊಂದು ವಿವಾದಗಳ ಮೂಲಕ ಸದ್ದು ಮಾಡುತ್ತಾನೇ ಬರುವ ಶ್ರೀಕಾಂತ್ ಅಯ್ಯಂಗಾರ್ ಡಾ.ಶಿವರಾಜ್ ಕುಮಾರ್ ಅಭಿನಯದ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಕಿಲ್ಲಿಂಗ್ ವೀರಪ್ಪನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇಷ್ಟೇ ಅಲ್ಲ ಶಿವಣ್ಣ ಅಭಿನಯದ ಮತ್ತೊಂದು ಚಿತ್ರ ಕವಚದಲ್ಲಿ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಇಂಥಾ ಶ್ರೀಕಾಂತ್ ಅಯ್ಯಂಗಾರ್ ಈಗ ತಮ್ಮ 54ನೇ ವಯಸ್ಸಿನಲ್ಲಿ ಮದುವೆಗೆ ಸಿದ್ಧರಾಗಿದ್ಧಾರೆ. ಅದು ತಮಗಿಂತ 20 ವರ್ಷ ಚಿಕ್ಕವಳ ಜೊತೆ ಅನ್ನುವುದು ವಿಶೇಷ.

The 54 year old actor Srikanth Iyengar is set to marry actress and Bigg Boss contestant Jyothi

ಹೌದು, ಹಂಗಾಮ, ಪೆಲ್ಲಂ ಊರೆಳಿತೆ, ಎವಡಿ ಗೋಳ ವಾಡಿ, ಗುಡುಂಬಾ ಶಂಕರ್, ಮಹಾತ್ಮ, ಗೋಲಾ ಗೋಲಾ ಹೀಗೆ ಅನೇಕ ಚಿತ್ರಗಳನ್ನು ಮಾಡಿರುವ ಜ್ಯೋತಿ ಅವರ ಜೊತೆ ಶ್ರೀಕಾಂತ್ ಅಯ್ಯಂಗಾರ್ ಸದ್ಯ ಪ್ರೇಮದ ಅಮಲನ್ನೇರಿಸಿಕೊಂಡಿದ್ದಾರೆ. ಜ್ಯೋತಿ ಅವರಿಂದ ಸಿಹಿ ಮುತ್ತು ಪಡೆದು ಆ ಫೋಟೊವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮದುವೆಯ ಸುದ್ದಿಯನ್ನು ಕೂಡ ಹೇಳಿದ್ದಾರೆ.

ಸದ್ಯಕ್ಕೆ ಶ್ರೀಕಾಂತ್ ಅಯ್ಯಂಗಾರ್ ಮತ್ತು ಜ್ಯೋತಿ ಅವರ ಈ ಚುಂಬನ ಸೋಶಿಯಲ್ ಮೀಡಿಯಾದಲ್ಲಿ ಕಂಪನಕ್ಕೆ ಕಾರಣವಾಗಿದೆ. ಪರ-ವಿರೋಧ ಚರ್ಚೆಯನ್ನು ಹುಟ್ಟು ಹಾಕಿದೆ. ಕೆಲವರು ಶ್ರೀಕಾಂತ್ ಅಯ್ಯಂಗಾರ್ ಮತ್ತು ಜ್ಯೋತಿ ಅವರ ಪ್ರೀತಿಯನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದರೆ, ಇನ್ನೂ ಕೆಲವರು ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ ಹೀಗಾಗಿ ಮದುವೆಯಾಗುವುದರಲ್ಲಿ ತಪ್ಪಿಲ್ಲ ಎನ್ನುತ್ತಿದ್ದಾರೆ. ಕೊನೆವರೆಗೆ ಈ ಸಂಬಂಧವನ್ನು ಉಳಿಸಿಕೊಳ್ಳಿ ಎಂದು ಕೂಡ ಕೆಲವರು ಹೇಳುತ್ತಿದ್ದಾರೆ.

the-54-year-old-actor-srikanth-iyengar-is-set-to-marry-actress-and-bigg-boss-contestant-jyothi

ಅಂದ್ಹಾಗೇ ಶ್ರೀಕಾಂತ್ ಅಯ್ಯಂಗಾರ್ ಕೆಲ ದಿನಗಳ ಹಿಂದೆಯಷ್ಟೇ ಶ್ರೀಕಾಂತ್ ಅಯ್ಯಂಗಾರ್ ತಮ್ಮ ಫೋಟೆಲ್ ಚಿತ್ರದ ಬಿಡುಗಡೆ ಸಮಯದಲ್ಲಿ ತೆಲುಗು ಚಿತ್ರರಂಗದ ಪತ್ರಕರ್ತರನ್ನು ಮತ್ತು ವಿಮರ್ಷಕರನ್ನು ನಿಂದಿಸಿದ್ದರು. ಆ ನಂತರ ಕ್ಷಮೆ ಕೇಳಿದ್ದರು. ಇನ್ನು ಜ್ಯೋತಿ ತೆಲುಗು ಕಿರುತೆರೆಯಲ್ಲಿ ಪ್ರಸಾರವಾದ ಬಿಗ್ ಬಾಸ್ ಸೀಸನ್‌ 1ರಲ್ಲಿ ಸ್ಫರ್ಧಿಯಾಗಿ ಭಾಗವಹಿಸಿದ್ದರು. ಕೇವಲ ಒಂದು ವಾರದ ನಂತರ ಮನೆಯಾಚೆ ಬಂದಿದ್ದರು.

ಇನ್ನೂ ಕೆಲ ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಜ್ಯೋತಿ ನನಗೂ ಒಬ್ಬ ಬಾಯ್‌ಫ್ರೆಂಡ್ ಬೇಕು ಎಂದಿದ್ದರು. ವಿಜಯ್ ದೇವರಕೊಂಡ ಜೊತೆ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಬೇಕೆನ್ನುವ ಬಹುದೊಡ್ಡ ಕನಸು ನನ್ನದು ಎಂದು ಹೇಳಿದ್ದರು. ಈಗಾಗಲೇ ಮದುವೆಯಾಗಿ ಸಂಸಾರದ ಸುಖ ಸಿಗದ ಹಿನ್ನೆಲೆ ವಿಚ್ಛೇದನ ಪಡೆದಿದ್ದೇನೆ ಈ ಕಾರಣಕ್ಕೆ ಮತ್ತೆ ಮದುವೆಯಾಗಲ್ಲ ಆದರೆ ಅವಕಾಶ ಸಿಕ್ಕರೆ ಡೇಟಿಂಗ್ ಮಾಡುತ್ತೇನೆ ಎಂದು ಕೂಡ ಜ್ಯೋತಿ ಹೇಳಿದ್ದರು.

ಇನ್ನುಳಿದಂತೆ ಶ್ರೀಕಾಂತ್ ಅಯ್ಯಂಗಾರ್ ಅವರಿಗೂ ಕೂಡ ಇದು ಎರಡನೇ ಮದುವೆ. 2008ರಲ್ಲಿ ತಮ್ಮ ಪತ್ನಿಯಿಂದ ಶ್ರೀಕಾಂತ್ ಅಯ್ಯಂಗಾರ್ ದೂರವಾಗಿದ್ದರು. ಇನ್ನು, ಮೊದಲ ಮದುವೆಯಿಂದ ಇವರಿಗೆ ಇಬ್ಬರು ಮಕ್ಕಳಿದ್ದು ಮಕ್ಕಳ ಜೊತೆ ಶ್ರೀಕಾಂತ್ ಅಯ್ಯಂಗಾರ್ ಅವರಿಗೆ ಈಗ ಸಂಪರ್ಕ ಇಲ್ಲ. ಅಮೆರಿಕಾದಲ್ಲಿರುವ ಮಕ್ಕಳನ್ನು ನಾನು ಭೇಟಿಯಾಗಿಲ್ಲ ಎಂದು ಹಿಂದೊಮ್ಮೆ ಸಂದರ್ಶನದಲ್ಲಿ ಶ್ರೀಕಾಂತ್ ಹೇಳಿದ್ದರು. ಎರಡನೇ ಮದುವೆ ಕುರಿತು ಯೋಚನೆ ಮಾಡಿಲ್ಲ ಎಂದು ಕೂಡ ಹೇಳಿದ್ದರು. ಈಗ ಎರಡನೇ ಮದುವೆಗೆ ಸಿದ್ಧರಾಗಿದ್ದಾರೆ.

More from Filmibeat

Read more about: love affair tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X