CCL 2025 ; ಅಖಿಲ್ ಅಕ್ಕಿನೇನಿ ಆಕರ್ಷಕ 90 ರನ್ ಸಿಡಿಸಿದರೂ ಬೆಂಗಾಲ್ ಟೈಗರ್ಸ್‌ಗೆ ಶರಣಾದ ತೆಲುಗು ವಾರಿಯರ್ಸ್..!
ಇಂದು ತೆಲುಗು ವಾರಿಯರ್ಸ್ ಮತ್ತು ಬೆಂಗಾಲ್ ನಡುವೆ ಸೂರತ್‌ನಲ್ಲಿ ಪಂದ್ಯ ನಡೆಯಿತು. ತೆಲುಗು ವಾರಿಯರ್ಸ್ ವಿರುದ್ದ ಬೆಂಗಾಲ್ ಟೈಗರ್ಸ್ ಟಾಸ್ ಗೆದ್ದು. ಮೊದಲು ಬ್ಯಾಟಿಂಗ್‌ನ ಆಯ್ಕೆ ಮಾಡಿಕೊಂಡಿತು.ಜ್ಯಾಮಿ ಮತ್ತು ಬೋನಿ ಬೆಂಗಾಲ್ ತಂಡದ ಪರ ಇನಿಂಗ್ಸ್ ಆರಂಭಿಸಿದರು.
ಆರಂಭಿಕ ಬ್ಯಾಟ್ಸಮನ್ ಆಗಿ ಬಂದ ಜಾಮಿ ತೆಲುಗು ವಾರಿಯರ್ಸ್ ಬೌಲರಿಗಳ ಬೆವರಿಳಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಕೇವಲ 35 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 78 ರನ್ ಗಳಿಸಿದರು. ಜಾಮಿ ಅವರ ಈ ಆಕ್ರಮಣಕಾರಿ ಆಟದಿಂದ ಬೆಂಗಾಲ್ ಮೊದಲ ಇನಿಂಗ್ಸ್‌ನಲ್ಲಿ ಹತ್ತು ಓವರ್‌ಗಳಲ್ಲಿ 106 ರನ್ ಗಳಿಸುವಲ್ಲಿ ಯಶಸ್ವಿಯಾಯ್ತು.

ಬೆಂಗಾಲ್ ತಂಡ ನೀಡಿದ 106 ರನ್‌ಗಳ ಗುರಿಯನ್ನು ಬೆನ್ನತ್ತಿರುವ ತೆಲುಗು ವಾರಿಯರ್ಸ್ ಮೊದಲ ಓವರ್‌ನಲ್ಲಿಯೇ ನಾಯಕ ಅಖಿಲ್ ಅಕ್ಕಿನೇನಿ ಅವರ ವಿಕೆಟ್ ಕಳೆದುಕೊಂಡಿತು. ಅಖಿಲ್ ವಿಕೆಟ್ ಕಳೆದುಕೊಂಡ ನಿಧಾನವಾಗಿ ಆಡಲು ಶುರು ಮಾಡಿದ ತೆಲುಗು ವಾರಿಯರ್ಸ್ ತನ್ನ ಮೊದಲ ಇನಿಂಗ್ಸ್ ನಲ್ಲಿ 87 ರನ್ ಗಳನ್ನು ಮಾತ್ರ ಗಳಿಸಿತು. ಈ ಮೂಲಕ 19 ರನ್ ಗಳ ಹಿನ್ನಡೆ ಅನುಭವಿಸಿತು. ತೆಲುಗು ತಂಡದ ಪರ ಅಶ್ವಿನ್ ಬಾಬು ಅತ್ಯಧಿಕ 31 ರನ್ ಗಳಿಸಿದರು.
ಬೆಂಗಾಲ್ ಟೈಗರ್ಸ್ ತಂಡಕ್ಕೆ ಎರಡನೇ ಇನಿಂಗ್ಸ್‌ನಲ್ಲಿ ಜಾಮಿ ಮತ್ತೆ ನೆರವಾದರು. ಮೈದಾನದ ನಾಲ್ಕು ದಿಕ್ಕಿನಲ್ಲಿಯೂ ಬೌಂಡಿರಿಗಳನ್ನು ಸಿಡಿಸಿದ ಜಾಮಿ 20 ಎಸೆತಗಳಲ್ಲಿ ಜಾಮಿ 54 ರನ್ ಗಳಿಸಿದರೆ ಯುಸೂಫ್ 15 ಎಸೆತಗಳಲ್ಲಿ 31 ರನ್ ಗಳಿಸಿ ನಾಟೌಟ್ ಆಗಿ ಉಳಿದರು. ಜಾಮಿ ಮತ್ತು ಯುಸೂಫ್ ಅವರ ಆಕ್ರಮಣಕಾರಿ ಆಟದಿಂದ ಬೆಂಗಾಲ್ ಟೈಗರ್ಸ್ ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿತು. ಈ ಮೂಲಕ 147 ರನ್‌ಗಳ ಗುರಿಯನ್ನು ತೆಲುಗು ವಾರಿಯರ್ಸ್ ತಂಡಕ್ಕೆ ಬೆಂಗಾಲ್ ಟೈಗರ್ಸ್ ನೀಡಿತು.
ಕೊನೆಯ ಪಂದ್ಯದಲ್ಲಾದರೂ ಗೆಲ್ಲಬೇಕೆಂದು ತೆಲುಗು ವಾರಿಯರ್ಸ್ ನಾಯಕ ಅಖಿಲ್ ಅಕ್ಕಿನೇನಿ ಎರಡನೇ ಇನಿಂಗ್ಸ್‌ನಲ್ಲಿ ಪ್ರಯತ್ನ ಮಾಡಿದರು .ಬೆಂಗಾಲ್ ಟೈಗರ್ಸ್ ವಿರುದ್ದ ಏಕಾಂಗಿ ಹೋರಾಟವನ್ನು ಮಾಡಿದರು. 36 ಎಸೆತಗಳಲ್ಲಿ 90 ರನ್ ಗಳನ್ನು ಅಖಿಲ್ ಹೊಡೆದರೂ ಆದರೂ ಕೂಡ ಬೇರೆಯವರು ಅಖಿಲ್‌ಗೆ ಸಾಥ್ ನೀಡಲಿಲ್ಲ.
ಅಂತಿಮವಾಗಿ ತೆಲುಗು ವಾರಿಯರ್ಸ್ ತಂಡ ಹತ್ತು ಓವರ್‌ಗಳಲ್ಲಿ 08 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತು. ಈ ಮೂಲಕ ಹದಿನಾರು ರನ್‌ಗಳಿಂದ ಸೋಲನ್ನು ಕಂಡಿತು. ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ತೆಲುಗು ವಾರಿಯರ್ಸ್ ಸೋತಿದ್ದು ಕಳೆದ ಬಾರಿಯ ಚಾಂಪಿಯನ್ ಬೆಂಗಾಲ್ ಟೈಗರ್ಸ್ ಒಂದು ಪಂದ್ಯವನ್ನು ಸೋಲದೇ ಅಜೇಯವಾಗಿ ಉಳಿದಿದೆ. ಸದ್ಯ ಬೆಂಗಾಲ್ ತಂಡ ಸೆಮೆಫೈನಲ್ ಪ್ರವೇಶ ಮಾಡಿದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಮಾರ್ಚ್ ಒಂದರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು ಭೋಜ್‌ಪುರಿ ದಬಾಂಗ್ಸ್, ತೆಲುಗು ವಾರಿಯರ್ಸ್, ಮತ್ತು ಮುಂಬೈ ಹೀರೋಸ್ ಪಂದ್ಯಾವಳಿಯಿಂದ ಹೊರ ಬಿದ್ದಿವೆ.


Click it and Unblock the Notifications










