'ಅರೆಬೆತ್ತಲೆ'ಯಾಗಿ 'ಅಭ್ಯಾಸ' ಮಾಡಿದ ಖ್ಯಾತ ನಟಿ, ಬಿಟ್ಟ ಕಣ್ಣು ಬಿಟ್ಟಂತೆ ಚಿತ್ತ ನೆಟ್ಟು ಕುಂತ ಫ್ಯಾನ್ಸ್.

ಹೇಳಿ ಕೇಳಿ ಇದು ಕಲರ್‌ಫುಲ್ ಲೋಕ. ಈ ಲೋಕದಲ್ಲಿ ಎಲ್ಲವೂ ರಂಗು ರಂಗಾಗಿರಬೇಕು. ಇಂತಹ ಪ್ರಪಂಚದಲ್ಲಿ ಭದ್ರವಾಗಿ ನೆಲೆಯೂರಬೇಕು ಅಂದರೆ, ಸಾಧ್ಯವಾದಷ್ಟು ಕಡಿಮೆ ಬಟ್ಟೆಯನ್ನು ಧರಿಸಬೇಕು, ಮೈಮಾಟವನ್ನು ಪ್ರದರ್ಶನಕ್ಕೆ ಇಡಬೇಕು ಅನ್ನುವ ಕಲ್ಪನೆ ಅನೇಕ ನಾಯಕಿಯರಲ್ಲಿದೆ. ಇನ್ನೂ ಇದು ಸೊಶಿಯಲ್ ಮೀಡಿಯಾ ಕಾಲ. ಈ ''5G'' ಕಾಲದಲ್ಲಿ ಬಟ್ಟೆ ಬಿಚ್ಚುವುದು.. ಫೋಟೊಗೆ ಪೋಸು ಕೊಡುವುದು.. ಈಗೀಗ ತೀರಾ ಕಾಮನ್ ಆಗಿ ಬಿಟ್ಟಿದೆ.

ಎಲ್ಲವೂ ಶೀಘ್ರವಾಗಿಯೇ ಆಗಬೇಕೆಂಬ ಹುಂಬತನದಲ್ಲಿ ಜನ ಕೂಡ ತಮ್ಮ ''ಬೆತ್ತಲೆ'' ರೂಪ ನೋಡಲು ಬಯಸುತ್ತಾರೆ ಎಂದು ತಪ್ಪು ತಿಳಿದುಕೊಳ್ಳುವ ಸಾಕಷ್ಟು ಮಂದಿ ಇಂತಹ ಕುಕೃತ್ಯಗಳನ್ನು ಎಗ್ಗಿಲ್ಲದೇ ಸಿಗ್ಗಿಲ್ಲದೇ ಮಾಡುತ್ತಲೇ ಇರುತ್ತಾರೆ. ಇದಕ್ಕೆ ''ಶಾಲಿನಿ ಪಾಂಡೆ'' ಸದ್ಯದ ಉದಾಹರಣೆ.

The Book That Broke The Internet Shalini Pandey Goes Top-less While Reading Book Watch Viral Video

ಹೌದು, ಶಾಲಿನಿ ಪಾಂಡೆ.. ''ಅರ್ಜುನ್ ರೆಡ್ಡಿ''ಯ ಪ್ರೇಯಸಿ. ಮೊದಲ ಚಿತ್ರದಲ್ಲಯೇ ಅತ್ಯದ್ಭುತ ಗೆಲುವು ಇವರಿಗೆ ಸಿಕ್ಕಿತ್ತು. ಆದರೆ.. ಇದರ ಬೆನ್ನಲ್ಲೇ ದುರಾದೃಷ್ಟ ಕೂಡ ಬೆನ್ನು ಹತ್ತಿತ್ತು. ತೆಲುಗು ಸೇರಿ ಹಿಂದಿ ಮತ್ತು ತಮಿಳಿನಲ್ಲಿ ಚಿತ್ರವನ್ನು ಮಾಡಿದರೂ ಕೂಡ ಗೆಲುವೆನ್ನುವುದು ಇವರಿಗೆ ಆ ನಂತರ ದಕ್ಕಲೇ ಇಲ್ಲ. ಎಷ್ಟೇ ತಿಪ್ಪರಲಾಗ ಹಾಕಿದರೂ ಚಿತ್ರ ಗೆಲ್ಲಲಿಲ್ಲ.

ಹೀಗಾಗಿಯೇ ''ಮೈ'' ಪ್ರದರ್ಶನ ಮಾಡುವುದು, ಪಡ್ಡೆಗಳನ್ನು ಕೆರಳಿಸುವಂತ ಕಾಸ್ಟೂಮ್‌ಗಳನ್ನು ಹಾಕಿಕೊಳ್ಳುವುದನ್ನೇ ಸದ್ಯ ಫುಲ್ ಟೈಮ್ ಉದ್ಯೋಗವನ್ನಾಗಿಸಿಕೊಂಡ ಶಾಲಿನಿ ಸದ್ಯ ಮೀತಿ ಮೀರಿದ್ದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ''ಅರೆಬೆತ್ತಲೆ'' ಫೋಟೊವನ್ನು ಹಂಚಿಕೊಂಡಿದ್ದಾರೆ. ತಮ್ಮ 2.2 ಮಿಲಿಯನ್ ಫಾಲೋವರ್ಸ್‌ಗಳಿಗೆ ತಮ್ಮ ದೇಹಸಿರಿ ಕಣ್ತುಂಬಿಕೊಳ್ಳುವ ಅವಕಾಶವನ್ನು ಈ ಮೂಲಕ ನೀಡಿದ್ದಾರೆ.

ಒಂದು ವಿಡಿಯೋದಲ್ಲಿ ತಮ್ಮ ದೇಹದ ಮೇಲ್ಭಾಗವನ್ನು ತಮ್ಮ ಕೂದಲಿಂದ ಮರೆ ಮಾಡಿಕೊಂಡು ನೋಟ್‌ಬುಕ್‌ನಲ್ಲಿ ತಮ್ಮ ಮನದ ಮಾತುಗಳಿಗೆ ಅಕ್ಷರದ ರೂಪ ನೀಡುತ್ತಾ ಕುಂತಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಒಳ ಉಡುಪು ಧರಿಸದೆ ಕೇವಲ ಸೊಂಟದ ಕೆಳಗೆ ಟವಲ್ ಸುತ್ತಿಕೊಂಡು ಸೋಪಾದ ಮೇಲೆ ಬೋರಲು ಬಿದ್ದು ಪುಸ್ತಕ ಓದುತ್ತಿದ್ದಾರೆ.

ಸದ್ಯ ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕೇವಲ 24 ಗಂಟೆಗಳಲ್ಲಿ 85,000ಕ್ಕೂ ಅಧಿಕ ಜನ ಶಾಲಿನಿ ಹಂಚಿಕೊಂಡ ಆಲ್ಬಂನ ಮೆಚ್ಚಿಕೊಂಡಿದ್ದಾರೆ. 118ಕ್ಕೂ ಅಧಿಕ ರೀ ಶೇರ್‌ಗಳಾಗಿದ್ದು 450ಕ್ಕೂ ಅಧಿಕ ಜನ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಆ ಕಾಮೆಂಟ್‌ಗಳು ಹೇಗಿರಬಹುದು ಎನ್ನುವುದು ನೀವೆ ಊಹಿಸಿ.

The Book That Broke The Internet Shalini Pandey Goes Top-less While Reading Book Watch Viral Video

ಮತ್ತೊಂದು ಕಡೆ ಶಾಳಿನಿ ಪಾಂಡೆ ಈ ಅವತಾರದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಕೂಡ ನಡೆಯುತ್ತಿದೆ. ಪ್ರಚಾರ ಪಡೆಯಲು, ಸದಾ ಸುದ್ದಿಯಲ್ಲಿರಲು, ಅಭಿಮಾನಿಗಳ ಗಮನವನ್ನು ಸೆಳೆಯಲು, ಇಷ್ಟೊಂದು ಕೀಳು ಮಟ್ಟಕ್ಕಿಳಿಯುವ ಅವಶ್ಯಕತೆ ಇದೆಯಾ ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಮಡಿವಂತರು ಶಾಲಿನಿ ಪಾಂಡೆಗೆ ಛೀಮಾರಿಯನ್ನು ಹಾಕುತ್ತಿದ್ದಾರೆ.

ಅಂದ್ಹಾಗೇ ಸದ್ಯ ಅರೆಬೆತ್ತಲೆ ವಿಡಿಯೋ ಹಂಚಿಕೊಂಡಿರುವ ಶಾಲಿನಿ ಪಾಂಡೆ ಈಗ ಕೆಲ ದಿನಗಳ ಹಿಂದೆ ಬಿಳಿ ಬಣ್ಣದ ಬಟ್ಟೆ ಧರಿಸಿ, ಮಳೆಯಲ್ಲಿ ಮಿಂದ ಜಲಕನ್ಯೆಯಂತೆ ಕ್ಯಾಮರಾಗೆ ಫೋಸ್ ನೀಡಿದ್ದರು. ಮಾದಕ ಲುಕ್‌ಗಳಿಂದ ಪಡ್ಡೆಗಳ ಕಿಕ್ಕೇರಿಸಿದ್ದರು. ಈ ಫೋಟೊಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ಇದಕ್ಕೂ ಮುನ್ನ ತಮ್ಮ ಕಾಸ್ಟಿಂಗ್ ಕೌಚ್ ಅನುಭವ ಹಂಚಿಕೊಂಡಿದ್ದ ಶಾಲಿನಿ ಪಾಂಡೆ, ನಾನು ಬಟ್ಟೆ ಬದಲಿಸುತ್ತಿದ್ದಾಗ ನಿರ್ದೇಶಕರೊಬ್ಬರು ನನಗೆ ಹೇಳದೇ ಕೇಳದೇ ಸೀದಾ ನನ್ನ ಕ್ಯಾರಾವ್ಯಾನ್‌ಗೆ ನುಗ್ಗಿದ್ದರು ಎಂದು ಹೇಳಿದ್ದರು. ಅವತ್ತು ನಾನು ಬೆಚ್ಚಿ ಬಿದ್ದಿದ್ದೆ ಎಂದು ಹೇಳಿದ್ದರು.

ಇನ್ನುಳಿದಂತೆ ಸದ್ಯ ಶಾಲಿನಿ ಪಾಂಡೆ ಧನುಷ್ ಅಭಿನಯದ 'ಇಡ್ಲಿ ಕಡೈ' ಮತ್ತು ಹಿಂದಿಯ 'ರಾಹು ಕೇತು' ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಎರಡು ಚಿತ್ರಗಳಾದರೂ ಗೆಲ್ತಾವಾ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Why is everyone talking about a book? Shalini Pandey's latest Instagram post, a "top-less" video of her reading, is raising eyebrows and breaking the internet,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X