2 ವರ್ಷವಾದರೂ ಬರಲೇ ಇಲ್ಲ ಸಲಾರ್ 2 ; ಖಾನ್ಸಾರ್ ಸಾಮ್ರಾಜ್ಯದ ಹೆಬ್ಬಾಗಿಲು ಮತ್ತೆ ತೆರೆಯುತ್ತಾ?ಇಲ್ವಾ? ಉತ್ತರ ಇಲ್ಲಿದೆ

ಮೊದಲು ಒಂದು ಚಿತ್ರದ ಕಥೆ ಹೆಣೆದು ತಮ್ಮ ಕಲ್ಪನೆಗೆ ಅನುಗುಣವಾಗಿ ಚಿತ್ರವನ್ನು ನಿರ್ದೇಶಕರು ಬೆಳ್ಳಿತೆರೆಯ ಮೇಲೆ ಅನಾವರಣ ಮಾಡುತ್ತಿದ್ದರು. ತಮ್ಮ ಕಥೆಗೆ ಕೊನೆಯಲ್ಲಿ ಶುಭಂ ಹಾಡುತ್ತಿದ್ದರು. ಆದರೆ.. ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಸಿಕ್ವೆಲ್‌ಗಳ ಹವಾ ಜೋರಾಗಿದೆ. ಕಥೆ ಕೇವಲ ಒಂದು ಭಾಗಕ್ಕೆ ಮುಕ್ತಾಯವಾಗುವುದಿಲ್ಲ. ''ಬಾಹುಬಲಿ''ಯಿಂದ ಹಿಡಿದು ''ಕೆಜಿಎಫ್‌''ವರೆಗೆ.. ''ಪುಷ್ಪ''ದಿಂದ ಹಿಡಿದು ''ಕಾಂತಾರ 1'' ವರೆಗೆ ..

ಈಗ ಕೇವಲ ಕಥೆ ಹೇಳುವುದು ಮಾತ್ರ ಮುಖ್ಯವಾಗಿಲ್ಲ. ಬದಲಿಗೆ ಪ್ರೇಕ್ಷಕರನ್ನು ವಿಶೇಷ-ವಿಶಿಷ್ಠವಾದ ಲೋಕಕ್ಕೆ ಪ್ರೇಕ್ಷಕರನ್ನು ಕರೆದೊಯ್ಯುವ ಪ್ರಯತ್ನವನ್ನು ಹಲವಾರು ನಿರ್ದೇಶಕರು ಮಾಡುತ್ತಿದ್ದಾರೆ. ಪ್ರೇಕ್ಷಕರಿಗೆ ಕೂಡ ಈ ಪ್ರಯತ್ನ ಇಷ್ಟವಾಗುತ್ತಿದೆ.

the-dinosaur-awakens-salaar-2-officially-on-makers-drop-update-to-celebrate-2-years-of-dominance

ಆದರೆ.. ಇದೇ ಸಮಯದಲ್ಲಿ ಪ್ರೇಕ್ಷಕರ ತಾಳ್ಮೆಯ ಪರೀಕ್ಷೆಯನ್ನು ಕೂಡ ಮಾಡಲಾಗುತ್ತಿದೆ. ಯಾಕೆಂದರೆ ಸೀಕ್ವೆಲ್ ಮಾಡುವುದು ಸುಲಭದ ಮಾತಲ್ಲ. ಮೊದಲ ಭಾಗಕ್ಕೆ ಸಿಕ್ಕ ಗೆಲುವು ನಿರ್ದೇಶಕರ ಮೇಲಿನ ಜವಾಬ್ಧಾರಿ ಮತ್ತು ಒತ್ತಡ ಹೆಚ್ಚಿಸಿರುತ್ತೆ. ಇನ್ನು ಇದು ಪ್ಯಾನ್ ಇಂಡಿಯಾ ಯುಗ. ಎಲ್ಲ ಭಾಷೆಗೆ ಸಲ್ಲುವಂತಹ .. ಎಲ್ಲ ಭಾಷೆಯಲ್ಲಿ ಹೆಸರು ಮಾಡಿರುವಂತಹ.. ಸ್ಟಾರ್‌ಗಳನ್ನು ಮತ್ತು ಕಲಾವಿದರನ್ನು ಹುಡುಕಿ ಸಿನಿಮಾ ಮಾಡಲಾಗುತ್ತದೆ.

ಆದರೆ, ಮೊದಲ ಭಾಗದ ಮುಕ್ತಾಯದ ನಂತರ ಎರಡನೇ ಭಾಗಕ್ಕೆ ಮತ್ತೆ ಇವರನ್ನೆಲ್ಲಾ ಕಡೆ ಸೇರಿಸಿ ಗುಡ್ಡೆ ಹಾಕುವುದು ಕೂಡ ಸವಾಲಿನ ಕೆಲಸ. ಇದರ ನಡುವೆ ವಿಎಫ್‌ಎಕ್ಸ್‌ನ ತಲೆ ನೋವು ಬೇರೆ. ಈ ಎಲ್ಲಾ ಕಾರಣಗಳಿಂದ ಎರಡನೇ ಭಾಗ ತೆರೆಗೆ ಬರಲು ಸಾಕಷ್ಟು ಸಮಯ ಹಿಡಿಯುತ್ತೆ. ಆದರೆ, ಅಷ್ಟರಲ್ಲಿ ಪ್ರೇಕ್ಷಕರ ತಾಳ್ಮೆ ನಶಿಸಿ ಹೋಗಿರುತ್ತೆ. ಎರಡನೇ ಭಾಗ ನಿಂತು ಹೋಯ್ತು ಎಂಬ ಪುಕಾರು ಹಬ್ಬುತ್ತೆ. ಇದರಿಂದ ಸಹಜವಾಗಿ ಆಸೆಕಂಗಳಿಂದ ಚಿತ್ರಕ್ಕೆ ಎದುರು ನೋಡುತ್ತಿರುವ ಪ್ರೇಕ್ಷಕರಿಗೆ ಕೋಪ ಬರುವದರ ಜೊತೆ ನಿರಾಸೆ ಕೂಡ ಆಗುತ್ತೆ. ''ಸಲಾರ್ 2'' ವಿಚಾರದಲ್ಲಿ ಕೂಡ ಇದೇ ಆಗಿದ್ದು ಇದೇ.

ಹೌದು, ''ಸಲಾರ್'' ತೆರೆಗೆ ಬಂದು ಇಂದಿಗೆ ( ಡಿಸೆಂಬರ್ 22 ) ಎರಡು ವರ್ಷವಾಗಿವೆ. ಆದರೆ.. ಈ ಎರಡು ವರ್ಷ ಎರಡನೇ ಭಾಗಕ್ಕೆ ಬರೀ ಕಾದಿದ್ದೇ ಬಂತು. ಡೈನೋಸರ್‌ನ ಘರ್ಜನೆ ''ಖಾನ್ಸಾರ್'' ಸಾಮ್ರಾಜ್ಯದಲ್ಲಿ ಕೇಳಿಸಲೇ ಇಲ್ಲ. ಹೀಗಾಗಿ ಹಲವರು ''ಸಲಾರ್'' ಚಿತ್ರದ ಎರಡನೇ ಭಾಗ ನಿಂತು ಹೋಯ್ತು ಎಂದು ಅಂದುಕೊಂಡಿದ್ದರು. ಪ್ರಭಾಸ್ ಅಭಿಮಾನಿಗಳು ನಿರಾಸೆಗೊಂಡಿದ್ದರು.

ಆದರೆ ಇಂದು (ಡಿಸೆಂಬರ್ 22) ''ಸಲಾರ್'' ಚಿತ್ರಕ್ಕೆ ಎರಡು ವಸಂತ ತುಂಬಿದ ಹಿನ್ನೆಲೆ ಆಸೆ ಮತ್ತೆ ಚಿಗುರೊಡೆದಿದೆ. ಯಾಕೆಂದರೆ ''ಸಲಾರ್ 2'' ನಿಂತಿಲ್ಲ ಎನ್ನುವ ಸುಳಿವನ್ನು ಚಿತ್ರದ ನಿರ್ಮಾಣ ಸಂಸ್ಥೆ ''ಹೊಂಬಾಳೆ'' ನೀಡಿದೆ. ''ಸಲಾರ್'' ಎರಡು ವರ್ಷ ಪೂರೈಸಿದ ಹಿನ್ನೆಲೆ ವಿಶೇಷವಾದ ವಿಡಿಯೋ ಹಂಚಿಕೊಂಡಿರುವ ''ಹೊಂಬಾಳೆ'' ಸಂಸ್ಥೆ ಎರಡು ವರ್ಷಗಳ ಹಿಂದೆ ಬಿರುಗಾಳಿ ಎದ್ದಿತ್ತು. ಇಡೀ ಜಗತ್ತು ''ಸಲಾರ್‌''ನತ್ತ ತಿರುಗಿ ನೋಡಿತ್ತು. ನಿಮ್ಮೆಲ್ಲರ ಪ್ರೀತಿಯಿಂದ ಈ ಪ್ರಯಾಣ ಮುಂದುವರೆಯುತ್ತೆ. ''ಶೌರ್ಯಾಂಗ ಪರ್ವಂ''ನೊಂದಿಗೆ ಯುದ್ಧ ಮತ್ತೆ ಶೀಘ್ರದಲ್ಲಿಯೇ ಆರಂಭವಾಗುತ್ತೆ. ನಿಮ್ಮೆಲ್ಲರ ಪ್ರೀತಿಗೆ ಶಾಶ್ವತವಾಗಿ ನಾವು ಕೃತಜ್ಞರಾಗಿರುತ್ತೇವೆ ಎಂದು ಬರೆದುಕೊಂಡಿದೆ.

ಸಹಜವಾಗಿ ಈ ಸುದ್ದಿ ಕೇಳಿ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಅವರ ಅಭಿಮಾನಿಗಳು ಖುಷಿಯಾಗಿದ್ಧಾರೆ. ಸೋಶಿಯಲ್ ಮೀಡಿಯಾದಲ್ಲಿ ಸಲಾರ್ 2 ಟಾಪಿಕ್ ಟ್ರೆಂಡ್ ಮಾಡುತ್ತಿದ್ದಾರೆ. ಅಂದ್ಹಾಗೇ ''ಸಲಾರ್ 2'' ಬರುತ್ತೆ ಎಂದು ನಿರ್ಮಾಣ ಸಂಸ್ಥೆ ಹೊಂಬಾಳೆ ಹೇಳಿದೆ. ಆದರೆ, ಯಾವ ಕಾಲಕ್ಕೆ ..? ಎನ್ನುವುದನ್ನು ಹೇಳಿಲ್ಲ. ಸದ್ಯ ಪ್ರಭಾಸ್ ತಮ್ಮೆದುರು ಕೆಲ ಚಿತ್ರಗಳನ್ನು ಹರವಿಕೊಂಡು ಕುಂತಿದ್ದಾರೆ. ಪ್ರಶಾಂತ್ ನೀಲ್ ಮತ್ತೊಂದು ಕಡೆ ಜ್ಯೂ ಎನ್‌ಟಿಆರ್‌ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ ''ಸಲಾರ್-2'' ಬಿಡುಗಡೆಯ ಬಗ್ಗೆ ಈಗಲೇ ಭವಿಷ್ಯ ಹೇಳಲು ಸಾಧ್ಯ ಇಲ್ಲ. ಕಾಯದೇ ಅಭಿಮಾನಿಗಳಿಗೆ ಬೇರೆ ವಿಧಿಯೂ ಇಲ್ಲ.

More from Filmibeat

English summary
Witness the return of Deva and Varadha! Salaar: Part 2 – Shouryaanga Parvam is officially on track. See the explosive new poster and anniversary details inside.
Read more about: salaar prabhas tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X