ಪಾತ್ರಕ್ಕಾಗಿ ನಮ್ಮ ಜೊತೆ ಮಲಗು ಎಂದು ಇಲ್ಲಿ ಯಾರೂ ಹೇಳಲ್ಲ ; ನಿಮ್ಮ ನಡವಳಿಕೆ ಸರಿ ಇರಬೇಕು- ಚಿರಂಜೀವಿ

ಪುರುಷ ಪ್ರಧಾನ ಚಿತ್ರರಂಗದಲ್ಲಿ ಅನೇಕ ಹೆಣ್ಣು ಮಕ್ಕಳು ನಾನಾ ರೀತಿಯಲ್ಲಿ ನರಳಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ.. ಬಣ್ಣದ ಬಣ್ಣದ ಈ ಪ್ರಪಂಚದಲ್ಲಿ ನಡೆದ ಬಗೆ ಬಗೆಯ ಲೈಂ*ಗಿಕ ಪ್ರಕರಣ, ಕಿರುಕುಳ, ದೌರ್ಜನ್ಯ ಕುರಿತ ಸುದ್ದಿಗಳನ್ನೂ ನಾವೆಲ್ಲರೂ ಕೇಳುತ್ತಲೇ ಇರುತ್ತೇವೆ. ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೇವೆ. ಆದರೆ ಹೀಗೆ ನಡೆದ ಸಾಕಷ್ಟು ಲೈಂ*ಗಿಕ ಪ್ರಕರಣಗಳು ಹೇಳ ಹೆಸರಿಲ್ಲದೇ ಕಾಣದಂತಾಗುತ್ತವೆ.

ಇನ್ನೂ ಕೆಲವೊಮ್ಮೆ ಪ್ರಜ್ಞಾವಂತ ನಾಯಕಿಯರು ತಮ್ಮ ಛಲದಿಂದ ತೆರೆಮರೆಯ ಕಳ್ಳಾಟ ಬಹಿರಂಗ ಪಡಿಸಿದ್ದಾರೆ. ಕಾಮುಕರ ಮುಖವಾಡ ಕಳಚಿದ್ದಾರೆ. ಒಂದರ್ಥದಲ್ಲಿ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ಬಟ್ಟೆ ಬದಲಿಸಿದಷ್ಟೇ ಸಾಮಾನ್ಯವಾಗಿದೆ. ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ.

The Industry is a Mirror Chiranjeevi s Cure for Casting Couch Ignites Victim-Blaming Row

ಇನ್ನು ಮಲಯಾಳಂ ಚಿತ್ರರಂಗದಲ್ಲಿನ ಕಾ*ಮಕಾಂಡದ ಕುರಿತು ''ಹೇಮಾ ಆಯೋಗ'' ವರದಿ ಈ ಪಾತ್ರಕ್ಕಾಗಿ ಪಲ್ಲಂಗದ ಸಂಸ್ಕ್ರತಿಗೆ ಕೈಗನ್ನಡಿ ಹಿಡಿದಿದೆ. ಕೇವಲ ಮಲಯಾಳಂನಲ್ಲಿ ಅಷ್ಟೇ ಅಲ್ಲ ಭಾರತದ ಬೇರೆ ಬೇರೆ ಭಾ‍ಷೆಯಲ್ಲಿ ಕೂಡ ಕಾ*ಮುಕರು ತುಂಬಿ ತುಳುಕುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

ಇದಕ್ಕೆ ಪೂರಕವಾಗಿ ಬೇರೆ ಬೇರೆ ಭಾಷೆಯಲ್ಲಿನ ನಟಿಯರು ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಬಿಕ್ಕಿದ್ದಾರೆ. ಪಾತ್ರದ ಹೆಸರಿನಲ್ಲಿ ತಮ್ಮನ್ನು ಮಂಚಕ್ಕೆ ಕರೆದ ವ್ಯಕ್ತಿಗಳ ಜನ್ಮವನ್ನೂ ಜಾಲಾಡಿದ್ದಾರೆ. ಆದರೂ ಕೂಡ ಕೆಲವರು ಚಿತ್ರರಂಗದಲ್ಲಿ ಪಾತ್ರಕ್ಕಾಗಿ ಪಲ್ಲಂಗದ ಸಂಸ್ಕ್ರತಿ ಇದೆ ಎನ್ನುವುದನ್ನು ಒಪ್ಪುವುದಿಲ್ಲ. ಬದಲಿಗೆ ಎರಡು ಕೈ ಸೇರಿದರೆ ಚಪ್ಪಾಳೆ ಎಂಬ ವಾದ ಮಾಡುತ್ತಾರೆ. ಚಿತ್ರರಂಗ ತುಂಬಾನೇ ಪರಿಶುದ್ಧವಾದ ರಂಗ ಎಂದು ಹೇಳುತ್ತಾರೆ. ಉದಾಹರಣೆಗೆ ಚಿರಂಜೀವಿ.

ಹೌದು, ಅನೇಕರಿಗೆ ಈಗಾಗಲೇ ಗೊತ್ತಿರುವಂತೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ತೆರೆಗೆ ಬಂದ ಚಿರಂಜೀವಿ ಅಭಿನಯದ ''ಮನ ಶಂಕರ ವರಪ್ರಸಾದ್ ಗಾರು'' ಬಾಕ್ಸಾಫೀಸ್‌ನಲ್ಲಿ ಗೆದ್ದಿದೆ. ಈ ಮೂಲಕ ಚಿರಂಜೀವಿಯ ಸೋಲಿನ ಸರಪಳಿ ಕಳಚಿದೆ. ಹಲವು ವರ್ಷಗಳ ನಂತರ ಗೆಲುವು ಸಿಕ್ಕಿದೆ.

ಈ ಹಿನ್ನೆಲೆಯಲ್ಲಿ ಸದ್ಯ ಸಂಭ್ರಮದ ಅಲೆಯಲ್ಲಿ ತೇಲುತ್ತಿರುವ ತೆಲುಗಿನ ಮೆಗಾಸ್ಟಾರ್ ತಮ್ಮ ತಂಡದ ಜೊತೆ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಇದೇ ಸಮಯದಲ್ಲಿ ಕಾಸ್ಟಿಂಗ್ ಕೌಚ್ ಕುರಿತು ಮಾತನಾಡಿ ವಿವಾದಕ್ಕೆ ಮುನ್ನುಡಿ ಬರೆದಿದ್ದಾರೆ.

The Industry is a Mirror Chiranjeevi s Cure for Casting Couch Ignites Victim-Blaming Row

ಈ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿರುವ ಚಿರಂಜೀವಿ ನೀವು ಹೇಗೆ ಇರುತ್ತಿರೋ ಹಾಗೇ ಆಗುತ್ತೆ ಎಂದು ಹೇಳಿದ್ದಾರೆ. ಚಿತ್ರರಂಗ ನಿಮ್ಮನ್ನು ಪ್ರತಿಬಿಂಬಿಸುತ್ತೆ ಅದನ್ನೇ ನಿಮಗೆ ಮರಳಿ ನೀಡುತ್ತೆ ಎಂದು ಹೇಳಿರುವ ಚಿರಂಜೀವಿ ಇಲ್ಲಿ ಕಾಸ್ಟಿಂಗ್ ಕೌಚ್ ಎಂಬ ಸಂಸ್ಕ್ರತಿ ಇಲ್ಲ ಎಂದಿದ್ದಾರೆ. ಎಲ್ಲವೂ ವ್ಯಕ್ತಿಯ ನಡೆ ಮತ್ತು ನುಡಿಯ ಮೇಲೆ ಅವಲಂಬಿತವಾಗಿರುತ್ತೆ ಎಂದು ಹೇಳಿರುವ ಚಿರಂಜೀವಿ ಯಾರಾದರೂ ಇಲ್ಲಿ ಶೋಷಣೆಗೆ ಒಳಗಾದರೆ ಅದು ಚಿತ್ರರಂಗದ ತಪ್ಪಲ್ಲ ಬದಲಿಗೆ ಇಲ್ಲಿ ಬರುವ ಆ ಕಲಾವಿದರ ನಡುವಳಿಕೆಯ ಪ್ರತಿಫಲ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.

ವೃತ್ತಿಪರವಾಗಿ ವರ್ತಿಸಿದರೆ, ಶಿಶ್ತು ನಿಮ್ಮಲ್ಲಿದ್ದರೆ, ಯಾರೂ ನಿಮ್ಮನ್ನು ದುರುಪಯೋಗ ಪಡಿಸಿಕೊಳ್ಳಲು ಸಾಧ್ಯ ಇಲ್ಲ ಎನ್ನುವ ವಾದ ಮಂಡಿಸಿರುವ ಚಿರಂಜೀವಿ ನೀವು ಚೆಲ್ಲು ಚೆಲ್ಲಾಗಿ ವರ್ತಿಸಿದರೆ ಎದುರುಗಡೆ ಇರುವ ವ್ಯಕ್ತಿ ಕೂಡ ಹಾಗೇ ವರ್ತಿಸುತ್ತಾನೆ ಎಂದು ಹೇಳಿದ್ದಾರೆ. ಕನ್ನಡಿಗೆ ಹೋಲಿಸಿದ್ದಾರೆ.

ಮುಂದುವರೆದು ತಮ್ಮ ಪುತ್ರಿ ಸುಷ್ಮಿತಾ ಕೊನಿಡೇಲ ಅವರನ್ನು ಉದಾಹರಣೆಯನ್ನಾಗಿ ನೀಡಿದ ಚಿರಂಜೀವಿ, ಸುಷ್ಮಿತಾ ಕಾಸ್ಟ್ಯೂಮ್ ಡಿಸೈನರ್ ಮತ್ತು ನಿರ್ಮಾಪಕಿಯಾಗಿ ಯಶಸ್ವಿಯಾಗಿದ್ದಾರೆ. ಅವರು ತಮ್ಮ ವೃತ್ತಿಪರತೆಯಿಂದಾಗಿ ಎಲ್ಲೂ ಅವರಿಗೆ ಕಹಿ ಅನುಭವಗಳಾಗಿಲ್ಲ ಎಂದು ಹೇಳಿದ್ದಾರೆ.

ಸದ್ಯ ಚಿರಂಜೀವಿ ಅವರಾಡಿದ ಈ ಮಾತುಗಳು ವಿವಾದಕ್ಕೆ ಕಾರಣವಾಗಿವೆ. ಸಾಮಾಜಿಕ ಜಾಲತಾಣದಲ್ಲಿ ಹಲವರು ಚಿರಂಜೀವಿ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಕೇವಲ ನಿಮ್ಮ ಕುಟುಂಬಕ್ಕೆ ಅಥವಾ ನಿಮಗೆ ಇಂತಹ ಅನುಭವವಾಗಿಲ್ಲ ಎಂದ ಮಾತ್ರಕ್ಕೆ ಉದ್ಯಮದಲ್ಲಿ ಅನ್ಯಾಯವೇ ನಡೆಯುತ್ತಿಲ್ಲ ಎನ್ನುವುದು ಎಷ್ಟು ಸರಿ? ಎಂಬ ಪ್ರಶ್ನೆಯನ್ನು ಮಾಡುತ್ತಿರುವ ಹಲವರು ಅಧಿಕಾರ ಮತ್ತು ಪ್ರಭಾವ ಹೊಂದಿರುವ ವ್ಯಕ್ತಿಗಳು ಮಾಡುವ ಶೋಷಣೆಯನ್ನು ಕೇವಲ 'ವೃತ್ತಿಪರತೆ'ಯಿಂದ ತಡೆಯಲು ಸಾಧ್ಯವೇ ಎಂದು ಕೂಡ ಕೇಳುತ್ತಿದ್ದಾರೆ. ಮೆಗಾಸ್ಟಾರ್ ಮಗಳಿಗೆ ಇರುವ ರಕ್ಷಣೆ ಮತ್ತು ಗೌರವ ಯಾವುದೇ ಹಿನ್ನೆಲೆಯಿಲ್ಲದೆ ಬರುವ ಸಾಮಾನ್ಯ ಹುಡುಗಿಗೆ ಸಿಗುವುದಿಲ್ಲ ಎಂಬ ವಾಸ್ತವವನ್ನು ಮರೆತ ನಿಮಗೆ ಇನ್ನೂ ಏನು ಹೇಳಲು ಸಾಧ್ಯ ಎನ್ನುತ್ತಿದ್ದಾರೆ.

More from Filmibeat

English summary
Is professionalism the answer? Chiranjeevi faces heat for suggesting women’s choices lead to "bitter experiences" in the film industry. Dive into the controversy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X