'ಲೈಗರ್' ಚಿತ್ರದ ಲಿರಿಕಲ್ ವಿಡಿಯೋ ರಿಲೀಸ್‌, ವಿಜಯ ದೇವರಕೊಂಡ ಹೊಸ ಗೆಟಪ್‌ಗೆ ಫ್ಯಾನ್ಸ್ ಫಿದಾ

ನಟ ವಿಜಯ ದೇವರಕೊಂಡ ಇಂದು ಬರ್ತಡೇ ಸಂಭ್ರಮದಲ್ಲಿದ್ದಾರೆ. ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚು ಮಾಡಲು 'ಲೈಗರ್' ಸಿನಿಮಾ ತಂಡ ವಿಜಯ ದೇವರಕೊಂಡ ಬರ್ತಡೇ ದಿನವೇ ಸಿನಿಮಾದ ಲಿರಿಕಲ್ ವಿಡಿಯೋ ರಿಲೀಸ್ ಮಾಡಿದ್ದಾರೆ. ಪ್ಯಾನ್‌ ಇಂಡಿಯಾ ಸಿನಿಮಾವಾಗಿದ್ದು, 'ಲೈಗರ್‌ ಸಿನಿಮಾದಲ್ಲಿ ವಿಜಯ್ ಬೇರೆಯದೇ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಮೊದಲು 'ಲೈಗರ್' ಸಿನಿಮಾ ತಂಡ ಗ್ಲಿಂಪ್ಸ್‌ ವಿಡಿಯೋವನ್ನು ಬಿಡುಗಡೆ ಮಾಡಿತ್ತು. ಆ ವಿಡಿಯೋ ಕೋಟಿ ಕೋಟಿ ವೀವ್ಸ್ ಪಡೆದುಕೊಂಡಿತ್ತು. ಈಗ ಬರ್ತಡೇ ಪ್ರಯುಕ್ತ ಸಿನಿಮಾದ ಲಿರಿಕಲ್ ವಿಡಿಯೋ 'ಲೈಗರ್' ಹಂಟ್ ಹೆಸರಿನಲ್ಲಿ ಬಿಡುಗಡೆಯಾಗಿದ್ದು, ವಿಡಿಯೋ ನೋಡಿದ ಅಭಿಮಾನಿಗಳು ಟೀಸರ್‌ಗೆ ಫಿದಾ ಆಗಿದ್ದಾರೆ.

The Liger Hunt Theme Teaser released on Vijay Deverakondas birthday

'ಲೈಗರ್' ಸಿನಿಮಾವನ್ನು ಪುರಿ ಜಗನ್ನಾಥ್ ನಿರ್ದೇಶನ ಮಾಡುತ್ತಿದ್ದು, ಸಿನಿಮಾದಲ್ಲಿ ವಿಜಯ್ ದೇವರಕೊಂಡಗೆ ಅನನ್ಯಾ ಪಾಂಡೆ ಜೋಡಿಯಾಗಿ ನಟಿಸುತ್ತಿದ್ದಾರೆ. ಇನ್ನು ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಬಾಕ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ಇಂದು ರಿಲೀಸ್ ಆಗಿರುವ ಲಿರಿಕಲ್ ವಿಡಿಯೋದಲ್ಲೂ ಸಹ ಪಾತ್ರದ ಒಂದು ಝಲಕ್‌ನ್ನು ತೋರಿಸಿದೆ. ವಿಡಿಯೋದಲ್ಲಿ ವಿಜಯ್ ದೇವರಕೊಂಡ ಕಟ್ಟುಮಸ್ತಾದ ಪೈಲ್ವಾನ್ ರೀತಿ ಕಾಣಿಸಿಕೊಂಡಿದ್ದಾರೆ. ಇನ್ನು ಬಿಡುಗಡೆಯಾದ ಕೆಲವೇ ಹೊತ್ತಿಗೆ ವಿಡಿಯೋಗೆ ಸಾವಿರಾರು ವೀವ್ಸ್ ಬಂದಿದೆ.

ಈ ಚಿತ್ರವನ್ನು ಕರಣ್ ಜೋಹರ್‌ ನಿರ್ಮಾಣ ಮಾಡುತ್ತಿದ್ದಾರೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ವಿಶ್ವ ವಿಖ್ಯಾತ ಬಾಕ್ಸರ್ ಮೈಕ್ ಟೈಸನ್ ಕೂಡ ಅಭಿನಯಿಸಿದ್ದಾರೆ. 2022 ಆಗಸ್ಟ್‌ 25 ಕ್ಕೆ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಸುಮಾರು 125 ಕೋಟಿ ರೂಪಾಯಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಗೊಳ್ಳಲಿದೆ. 'ಅರ್ಜುನ್ ರೆಡ್ಡಿ', 'ಗೀತ ಗೋವಿಂದಂ', 'ಡಿಯರ್ ಕಾಮ್ರೇಡ್', ಮೊದಲಾದ ಸಿನಿಮಾಗಳು ವಿಜಯ ದೇವರಕೊಂಡಗೆ ಭಾರೀ ಯಶಸ್ಸು ತಂದು ಕೊಟ್ಟಿದ್ದವು. 'ಲೈಗರ್‌' ಸಿನಿಮಾ ಕೂಡ ಪ್ಯಾನ್‌ ಇಂಡಿಯಾ ಸಿನಿಮಾವಾಗಿದ್ದು, ಇದು ಕೂಡ 'ಕೆಜಿಎಫ್‌ 2', ಹಾಗೂ 'RRR' ಸಿನಿಮಾಗಳ ರೀತಿ ಬಾಕ್ಸಾಫೀಸ್ ಕಲೆಕ್ಷನ್ ಧೂಳೆಬ್ಬಿಸುತ್ತಾ ಕಾದು ನೋಡಬೇಕಿದೆ.

More from Filmibeat

English summary
The Liger Hunt Theme was released on the occasion of Actor Vijay Deverakonda's 33rd birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X