ಜಾತಕ, ಜೋತಿಷ್ಯ ನಂಬದ ಪ್ರಭಾಸ್ 'ಸಲಾರ್' ಬಳಿಕ ತಮ್ಮ ಹೆಸರು ಬದಲಿಸಿಕೊಂಡಿದ್ದು ನಿಜವೇ?

ಚಿತ್ರರಂಗದಲ್ಲಿ ಗೆಲ್ಲೋಕೆ ಅದೃಷ್ಟ ಬೇಕು ಎನ್ನುವ ಮಾತು ಪದೇ ಪದೆ ಕೇಳಿಬರುತ್ತಿರುತ್ತದೆ. ಸಾಕಷ್ಟು ಜನರಿಗೆ ಪ್ರತಿಭೆ ಇದ್ದರೂ ಅದೃಷ್ಟ ಇಲ್ಲದೇ ಚಿತ್ರರಂಗದಲ್ಲಿ ಮೂಲೆ ಗುಂಪಾಗುತ್ತಾರೆ ಎನ್ನುವ ಚರ್ಚೆ ಕೆಲವೊಮ್ಮೆ ಕೇಳಿಬರುತ್ತದೆ. ಸ್ಟಾರ್ ನಟ, ನಟಿಯರು, ಫಿಲ್ಮ್ ಮೇಕರ್ಸ್ ಜೋತಿಷ್ಯ, ಜಾತಕ, ಸಂಖ್ಯಾಶಾಸ್ತ್ರ ನಂಬುತ್ತಾರೆ.

ಸತತ ಸೋಲು, ಒತ್ತಡ ಎಂತಹವರು ಎಲ್ಲವನ್ನು ಒಪ್ಪುವಂತೆ ಮಾಡಿಬಿಡುತ್ತದೆ. ಆದರೆ ಕೆಲವರು ಮಾತ್ರ ತಮ್ಮ ನಂಬಿಕೆಯನ್ನು ಬಿಡುವುದಿಲ್ಲ. ಇಷ್ಟೆಲ್ಲಾ ಮಾತು ಯಾಕೆ ಅಂದ್ರೆ ತೆಲುಗು ನಟ ಪ್ರಭಾಸ್ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಅದೇನು ಅಂತಹ ದೊಡ್ಡ ಬದಲಾವಣೆಯಲ್ಲ. ಇಂಗ್ಲೀಷ್‌ನಲ್ಲಿ ತಮ್ಮ ಹೆಸರಿಗೆ ಒಂದು 'ಎಸ್' ಅಕ್ಷರ ಹೆಚ್ಚಾಗಿದೆ.

The Raja Saab: Is actor Prabhas changed his name according to numerology?

ಅಷ್ಟಕ್ಕೂ ಪ್ರಭಾಸ್ ಹೆಸರು ಬದಲಿಸಿಕೊಂಡಿದ್ದಾರೆ ಎನ್ನುವ ಚರ್ಚೆ ಹೊಸ ಸಿನಿಮಾ ಪೋಸ್ಟರ್‌ನಿಂದ ಶುರುವಾಗಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಪ್ರಭಾಸ್ ನಟನೆಯ ಹೊಸ ಸಿನಿಮಾ ಟೈಟಲ್ ಪೋಸ್ಟರ್ ರಿಲೀಸ್ ಆಗಿದೆ. 'ಸಲಾರ್' ಬಳಿಕ ಪ್ರಭಾಸ್ 'ದಿ ರಾಜಾ ಸಾಬ್' ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಾರುತಿ ಎಂಬುವವರು ಈ ಹಾರರ್ ಕಾಮಿಡಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಲುಂಗಿ ಉಟ್ಟು ಪ್ರಭಾಸ್ ಬಿಂದಾಸ್ ಆಗಿ ನಡೆದು ಬರುತ್ತಿರುವ ಪೋಸ್ಟರ್ ಸಮೇತ ಸಿನಿಮಾ ಟೈಟಲ್ ರಿವೀಲ್ ಮಾಡಲಾಗಿದೆ. ಬಹಳ ಹಿಂದೆಯೇ ಈ ಸಿನಿಮಾ ಚಿತ್ರೀಕರಣ ಶುರುವಾಗಿತ್ತು. ಆದರೆ ರಸಹಸ್ಯವಾಗಿಯೇ ಚಿತ್ರೀಕರಣ ಮಾಡುತ್ತಾ ಬರ್ತಿದೆ ಚಿತ್ರತಂಡ. 'ರಾಜಾ ಡೀಲಕ್ಸ್' ಟೈಟಲ್‌ನಲ್ಲಿ ಸಿನಿಮಾ ಬರುತ್ತೆ ಎನ್ನಲಾಗಿತ್ತು. ಆದರೆ ಅದನ್ನೇ ಕೊಂಚ ಬದಲಿಸಿ 'ದಿ ರಾಜಾ ಸಾಬ್' ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ.

'ದಿ ರಾಜಾ ಸಾಬ್' ಟೈಟಲ್ ಪೋಸ್ಟರ್‌ನಲ್ಲಿ Prabhass ಎಂದು ಎಂದು ನಮೂದಿಸಲಾಗಿದೆ. ಸಂಖ್ಯಾಶಾಸ್ತ್ರದ ಪ್ರಕಾರ ಪ್ರಭಾಸ್ ತಮ್ಮ ಹೆಸರಿನಲ್ಲಿ ಮತ್ತೊಂದು ಅಕ್ಷರ ಸೇರಿಸಿಕೊಂಡಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಆದರೆ ಪ್ರಭಾಸ್ ಜಾತಕ, ಜ್ಯೋತಿಷ್ಯ ಯಾವುದನ್ನು ನಂಬುವುದಿಲ್ಲ ಎನ್ನುವ ಮಾತಿದೆ. ಹಾಗಿರುವಾಗ ಹೆಸರು ಬದಲಿಸಿಕೊಂಡಿದ್ದು ನಿಜಾನಾ? ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ.

The Raja Saab: Is actor Prabhas changed his name according to numerology?

ಪೋಸ್ಟರ್‌ ಪ್ರಿಂಟ್ ಮಾಡುವಾಗ ತಪ್ಪಾಗಿ ಒಂದು 'ಎಸ್' ಅಕ್ಷರ ಹೆಚ್ಚಾಗಿದೆ. ಪ್ರಭಾಸ್ ತಮ್ಮ ಹೆಸರನ್ನು ಬದಲಿಸಿಕೊಂಡಿಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ. ಕೆಲವರು ಪೋಸ್ಟರ್ ಬಗ್ಗೆಯೂ ಬೇಸರ ವ್ಯಕ್ತಪಡಿಸುತ್ತಿದ್ದಾರೆ. AI ಪೋಸ್ಟರ್ ರೀತಿ ಕಾಣುತ್ತಿದೆ ಎಂದು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಕಾರ್ತಿಕ್ ಪಳನಿ ಛಾಯಾಗ್ರಹಣ, ತಮನ್ ಸಂಗೀತ ಚಿತ್ರಕ್ಕಿದೆ.

ಮಾಳವಿಕಾ ಮೋಹನನ್, ನಿಧಿ ಅಗರ್‌ವಾಲ್, ರಿದ್ದಿ ಕುಮಾರ್ 'ದಿ ರಾಜಾ ಸಾಬ್' ಚಿತ್ರದ ತಾರಾಗಣದಲ್ಲಿದ್ದಾರೆ. 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ. 'ಬುಜ್ಜಿಗಾಡು' ಬಳಿಕ ಪ್ರಭಾಸ್ ಈ ರೀತಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳು ಬಹಳ ಕುತೂಹಲದಿಂದ 'ದಿ ರಾಜಾ ಸಾಬ್' ಚಿತ್ರಕ್ಕಾಗಿ ಕಾಯುತ್ತಿದ್ದಾರೆ.

ಸ್ಟಾರ್ ನಟ, ನಟಿಯರು ಈ ರೀತಿ ಹೆಸರು ಬದಲಿಸಿಕೊಂಡಿರುವ ಸಾಕಷ್ಟು ಉದಾಹರಣೆಗಳಿವೆ. ಸಂಖ್ಯಾಶಾಸ್ತ್ರದ ಪ್ರಕಾರ ಕನ್ನಡದಲ್ಲಿ ಶ್ರೀಮುರಳಿ, ಅಜಯ್ ರಾವ್ ಪದೇ ಪದೆ ಹೆಸರು ಬದಲಿಸಿಕೊಂಡಿದ್ದರು. ಆದರೆ ಪ್ರಭಾಸ್ ಮಾತ್ರ ಹೆಸರು ಬದಲಿಸಿಕೊಂಡಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಸದ್ಯ 'ಸಲಾರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲುವಿನ ಓಟ ಮುಂದುವರೆಸಿದೆ.

ನಾಗರ್ ಅಶ್ವಿನ್ ನಿರ್ದೇಶನದಲ್ಲಿ ಪ್ರಭಾಸ್ ನಟನೆಯ 'ಕಲ್ಕಿ 2898 AD' ರಿಲೀಸ್ ಡೇಟ್ ಘೋಷಣೆ ಆಗಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸೈನ್ಸ್ ಫಿಕ್ಷನ್ ಸಿನಿಮಾ ಮೇ 9ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ. ಬಳಿಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದಲ್ಲಿ 'ಸ್ಪಿರಿಟ್' ಎನ್ನುವ ಚಿತ್ರದಲ್ಲಿ ನಟಿಸಬೇಕಿದೆ. 'ಸಲಾರ್' ಸೀಕ್ವೆಲ್‌ಗಾಗಿ ಮತ್ತೆ ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲ್ಮ್ಸ್ ಜೊತೆ ಕೈಜೋಡಿಸಲಿದ್ದಾರೆ.

More from Filmibeat

English summary
Reason behind Prabhas changed in The Raja Saab poster
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X