ತಾತನ ವೇಷದಲ್ಲಿ ಹೆದರಿಸಲು ಬಂದ ಪ್ರಭಾಸ್; ಯಾಕೀ ಹೊಸ ಅವತಾರ

ತೆಲುಗು ನಟ ಪ್ರಭಾಸ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು, ಆಪ್ತರು ಟಾಲಿವುಡ್ ಯಂಗ್ ರೆಬಲ್ ಸ್ಟಾರ್‌ಗೆ ಶುಭಾಶಯ ಕೋರುತ್ತಿದ್ದಾರೆ. 'ಸಲಾರ್' ಹಾಗೂ 'ಕಲ್ಕಿ 2898AD' ರೀತಿಯ ಬ್ಲಾಕ್‌ಬಸ್ಟರ್ ಹಿಟ್ ಚಿತ್ರಗಳನ್ನು ಪ್ರಭಾಸ್ ಕೊಟ್ಟಿದ್ದಾರೆ. ಮುಂದೆ ಮತ್ತಷ್ಟು ದೊಡ್ಡ ಚಿತ್ರಗಳು ಅವರ ಕೈಯಲ್ಲಿದೆ.

ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಭಾಸ್ ನಟನೆಯ 'ದಿ ರಾಜಾಸಾಬ್' ಸಿನಿಮಾ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಸಿಂಹಾಸನ ಏರಿ ಖಡಕ್ ಲುಕ್‌ನಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಉದ್ದನೆಯ ಕೂದಲು, ಗಡ್ಡದಲ್ಲಿ ಬಿಟ್ಟು ಸಾಲ್ಟ್ ಅಂಡ್ ಪೆಪ್ಪರ್ ಲುಕ್‌ನಲ್ಲಿ ರಗಡ್ ಆಗಿ ದರ್ಶನ ಕೊಟ್ಟಿದ್ದಾರೆ. ಮಾರುತಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ದಿ ರಾಜಾಸಾಬ್' ಚಿತ್ರ ಮುಂದಿನ ವರ್ಷ ಏಪ್ರಿಲ್ 10ಕ್ಕೆ ತೆರೆಗೆ ಬರಲಿದೆ.

The Raja saab Motion Poster On Prabhas Birthday A Gift For Fans

ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್‌ ಅಡಿಯಲ್ಲಿ 'ದಿ ರಾಜಾಸಾಬ್' ಚಿತ್ರ ನಿರ್ಮಾಣವಾಗುತ್ತಿದೆ. ಮಾಳವಿಕಾ ಮೋಹನನ್, ನಿಧಿ ಅಗರ್‌ವಾಲ್ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಸಂಜಯ್ ದತ್, ಅನುಪಮ್ ಖೇರ್ ರೀತಿಯ ಬಾಲಿವುಡ್ ಕಲಾವಿದರು ಚಿತ್ರದಲ್ಲಿದ್ದಾರೆ. ಕಾರ್ತಿಕ್ ಪಳನಿ ಛಾಯಾಗ್ರಹಣ, ತಮನ್ ಸಂಗೀತ ಚಿತ್ರಕ್ಕಿದೆ.

ಬರೀ ಆಕ್ಷನ್ ಸಿನಿಮಾಗಳಲ್ಲೇ ನಟಿಸುತ್ತಿದ್ದ ಪ್ರಭಾಸ್ ಈ ಬಾರಿ ಕಾಮಿಡಿ ಹಾರರ್ ಜಾನರ್ ಟ್ರೈ ಮಾಡುತ್ತಿದ್ದಾರೆ. ಅಂದಾಜು 300 ಕೋಟಿ ರೂ. ಬಜೆಟ್‌ನಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ದಿ ರಾಜಾ ಸಾಬ್' ಸಿನಿಮಾ ತೆರೆಗೆ ಬರಲಿದೆ. ಒಂದೂವರೆ ವರ್ಷದ ಹಿಂದೆಯೇ ಸಿನಿಮಾ ಚಿತ್ರೀಕರಣ ಶುರುವಾಗಿದೆ. ಯಾವುದೇ ಅಧಿಕೃತ ಘೋಷಣೆ ಇಲ್ಲದೇ ತೆರೆಮರೆಯಲ್ಲಿ ಸಿನಿಮಾ ಚಿತ್ರೀಕರಣ ಆರಂಭವಾಗಿತ್ತು.

'ಮಹಾನುಭಾವುಡು', 'ಬಾಬು ಬಂಗಾರಂ', 'ಪಕ್ಕಾ ಕಮರ್ಷಿಯಲ್' ರೀತಿಯ ಚಿತ್ರಗಳನ್ನು ಮಾರುತಿ ಕಟ್ಟಿಕೊಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಪ್ರಭಾಸ್ ರೀತಿಯ ಪ್ಯಾನ್ ಇಂಡಿಯಾ ಸ್ಟಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. 'ದಿ ರಾಜಾ ಸಾಬ್' ಜೊತೆ ಜೊತೆಗೆ ಹನು ರಾಘವಪುಡಿ ನಿರ್ದೇಶನದ ಇನ್ನು ಹೆಸರಿಡದ ಚಿತ್ರವನ್ನು ಪ್ರಭಾಸ್ ಒಪ್ಪಿಕೊಂಡಿದ್ದಾರೆ. ಸದ್ಯ ಬಿಡುಗಡೆ ಆಗಿರುವ 'ದಿ ರಾಜಾ ಸಾಬ್' ಮೋಷನ್ ಪೋಸ್ಟರ್ ವೈರಲ್ ಆಗುತ್ತಿದೆ.

ಸಾಮಾನ್ಯವಾಗಿ ಹಾರರ್ ಚಿತ್ರಗಳಲ್ಲಿ ಇರುವಂತೆ ಇಲ್ಲಿ ಸಹ ಒಂದು ಭೂತ ಬಂಗಲೆ ಇದೆ. ಅಲ್ಲಿ ಭೂತ ಪ್ರೇತಗಳ ಹಾವಳಿ ಇದೆ. ಅದಕ್ಕೆ ಕಾರಣ ಏನು? ಈ ರಾಜಾ ಸಾಬ್ ಯಾರು? ಎನ್ನುವ ಪ್ರಶ್ನೆಗಳಿಗೆಲ್ಲಾ ಶೀಘ್ರದಲ್ಲೇ ಉತ್ತರ ಸಿಗಲಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಯುವಕನೊಬ್ಬ ಅದರಿಂದ ಪಾರಾಗಲೂ ತನ್ನ ಪೂರ್ವಜರ ಆಸ್ತಿಯ ಮೇಲೆ ಕಣ್ಣು ಹಾಕುತ್ತಾನಂತೆ. ಮುಂದೆ ಏನಾಗುತ್ತದೆ ಎನ್ನುವುದು ಚಿತ್ರದ ಒನ್‌ಲೈನ್ ಸ್ಟೋರಿ ಎನ್ನಲಾಗ್ತಿದೆ.

ಇನ್ನು ಪ್ರಭಾಸ್ ಹುಟ್ಟುಹಬ್ಬ ವಿಶೇಷವಾಗಿ 'ಈಶ್ವರ್' ಹಾಗೂ 'ಮಿ. ಪರ್ಫೆಕ್ಟ್' ಚಿತ್ರಗಳು ರೀ ರಿಲೀಸ್ ಆಗಿದೆ. ಇದೇ ಸಮಯದಲ್ಲಿ ಅವರ ಮುಂದಿನ ಸಿನಿಮಾಗಳು ಅನೌನ್ಸ್ ಆಗುವ ನಿರೀಕ್ಷೆಯಿತ್ತು. ಆದರೆ ಯಾವುದೇ ಹೊಸ ಸಿನಿಮಾ ಘೋಷಣೆ ಆಗಿಲ್ಲ.

ಪ್ರಭಾಸ್ 'ಸಲಾರ್-2' ಹಾಗೂ 'ಕಲ್ಕಿ 2898AD'-2 ಚಿತ್ರಗಳಲ್ಲಿ ನಟಿಸಬೇಕಿದೆ. 'ಅನಿಮಲ್' ಸಿನಿಮಾ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಸ್ಪಿರಿಟ್' ಚಿತ್ರದಲ್ಲಿ ಕೂಡ ನಟಿಸಬೇಕಿದೆ. ಆ ಸಿನಿಮಾ ಯಾವಾಗ ಸೆಟ್ಟೇರುತ್ತದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ.

More from Filmibeat

English summary
Prabhas starrer Horror comedy The Raja saab Motion Poster out now
Read more about: prabhas telugu tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X