ಅಪರೂಪದ ದಾಖಲೆ ಬರೆದ ಪವನ್ ಕಲ್ಯಾಣ್, ಆಂಧ್ರದ ಪವರ್ ಸ್ಟಾರ್ ಈಗ ಅಂತರಾಷ್ಟ್ರೀಯ ಸಮರ ವೀರ

ಪವನ್ ಕಲ್ಯಾಣ್ ಈಗ ಕೇವಲ ಆಕ್ಟರ್ ಅಲ್ಲ ಬದಲಿಗೆ ಫುಲ್ ಟೈಮ್ ರಾಜಕಾರಣಿ ಕೂಡ ಹೌದು. ಆಂಧ್ರದ ಉಪ ಮುಖ್ಯಮಂತ್ರಿಯಾಗಿ ಕಳೆದೊಂದು ವರ್ಷದಿಂದ ಸೇವೆಯನ್ನು ಮಾಡುತ್ತಾ ಬರುತ್ತಿರುವ ಜನಸೇನಾ ಪಕ್ಷದ ನಾಯಕ. ಇನ್ನೂ.. ಸಾಮಾನ್ಯವಾಗಿ ಸ್ಟಾರ್ ಆದವರು ರಾಜಕಾರಣದತ್ತ ಹೊರಳಿದರೆ ಅವರ.. ಚಿತ್ರರಂಗದ ಬದುಕು ಮುಗಿದಂತೆಯೇ. ಹಲವರು ರಾಜಕೀಯಕ್ಕೆ ಹೋದ ನಂತರ ನಿವೃತ್ತಿ ಪಡೆದಿದ್ದು ಇದೆ. ನಿವೃತ್ತಿಯನ್ನು ಮೊದಲ ಘೋಷಿಸಿ ರಾಜಕೀಯದ ಚದುರಂಗವಾಡಲು ಮುಂದಾಗಿದ್ದು ಇದೆ.

ಆದರೆ.. ಪವನ್ ಕಲ್ಯಾಣ್ ಇದಕ್ಕೆ ತದ್ವಿರುದ್ದ. ರಾಜಕಾರಣದಲ್ಲಿ ಕಳೆದು ಹೋಗಿದ್ದರು ಕೂಡ ಪವನ್ ಕಲ್ಯಾಣ್‌ಗೆ ಬಣ್ಣದ ಮೇಲಿನ ಮೋಹ ಕಡಿಮೆಯಾಗಿಲ್ಲ. ಇಷ್ಟೇ ಅಲ್ಲ ಇವತ್ತು ಕೂಡ ಆಂಧ್ರದ ಪವರ್ ಸ್ಟಾರ್‌ನ ಪವರ್ ಚಿತ್ರರಂಗದಲ್ಲಿಯೂ ಕಡಿಮೆಯಾಗಿಲ್ಲ. ಸಪ್ತಸಾಗರದಾಚೆ ಕೂಡ ಇವರ ಹವಾ ಕಡಿಮೆಯಾಗಿಲ್ಲ. ಇದಕ್ಕೆ ಕೈಗನ್ನಡಿಯೇ ಜಪಾನ್‌ನಲ್ಲಿ ಪವನ್ ಕಲ್ಯಾಣ್ ಅವರಿಗೆ ಸಿಕ್ಕಿರುವ ವಿಶೇ‍ಷವಾದ ಗೌರವ.

The Real-Life Samurai Pawan Kalyan Crowned Tiger of Martial Arts in Historic Global Induction

ಹೌದು, ಪವನ್ ಕಲ್ಯಾಣ್ ಮೊದಲಿಂದ ಸಮರ ಕಲೆಯಲ್ಲಿ ಪ್ರವೀಣ. ಬಾಲ್ಯದಲ್ಲಿಯೇ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದ ಪವನ್ ಕಲ್ಯಾಣ್ ಕೆಂಡೋ ಮತ್ತು ಕೆಂಜುಟ್ಸುವಿನಂತಹ ಕಠಿಣ ಕಲೆಗಳನ್ನು ಹನ್ಶಿ ಪ್ರೊಫೆಸರ್ ಡಾ. ಸಿದ್ದಿಕ್ ಮಹಮೂದಿ ಅವರ ಗರಡಿಯಲ್ಲಿ ಕಲಿತಿದ್ದಾರೆ.

ಇನ್ನೂ ಇವರ ಈ ಸಮರ ಕಲಾ ನೈಪುಣ್ಯತೆಯನ್ನು ನೀವು ''ಖುಷಿ''.. ''ತಮ್ಮುಡು''.. ''ಬದ್ರಿ''.. ''ಜಾನಿ''.. ''ಗುಡುಂಬ ಶಂಕರ್''.. ಚಿತ್ರಗಳಲ್ಲಿ ನೋಡಿರಬಹುದು. ತಾವೇ ಹಲವು ಚಿತ್ರಗಳಿಗೆ ಸಾಹಸ ನಿರ್ದೇಶನವನ್ನು ಪವನ್ ಕಲ್ಯಾಣ್ ಮಾಡಿದ್ದಾರೆ.


ಇಂಥಾ ಪವನ್ ಕಲ್ಯಾಣ್ ಅವರಿಗೆ ಸದ್ಯ ಜಪಾನಿನ ಪ್ರಾಚೀನ ಕತ್ತಿವರಸೆ ಕಲೆಯಾದ ಕೆಂಜುಟ್ಸುಗೆ ಸೇರಿಸಿಕೊಳ್ಳಲಾಗಿದೆ. ಜಪಾನಿನ ಸಮರಕಲೆಗಳ ಅತ್ಯುನ್ನತ ಸಂಸ್ಥೆಯಾದ ''ಸೊಗೊ ಬುಡೊ ಕನ್ರಿ ಕೈ'' ಆಂಧ್ರದ ಪವರ್ ಸ್ಟಾರ್ ಪವನ್ ಕಲ್ಯಾಣ್‌ಗೆ ಪ್ರತಿಷ್ಠಿತ ''ಫಿಫ್ತ್ ಡಾನ್'' (5th Dan) ಶ್ರೇಣಿಯನ್ನು ನೀಡಿ ಗೌರವಿಸಿದೆ. ಈ ಮೂಲಕ ಪವನ್ ಕಲ್ಯಾಣ್ ಬೆಳ್ಳಿತೆರೆಯಲ್ಲಿ ನಾಯಕನಾಗಿ ಮಾತ್ರವಲ್ಲದೆ, ರಾಜಕೀಯದಲ್ಲಿ ರಾಜಕಾರಣಿಯಾಗಿ ಹೆಸರು ಮಾಡಿದ್ದಲ್ಲದೇ, ಅಂತರಾಷ್ಟ್ರೀಯ ಮಟ್ಟದ ಉನ್ನತ ಶ್ರೇಣಿಯ ಮಾರ್ಷಲ್ ಆರ್ಟ್ಸ್ ಮಾಸ್ಟರ್ ಆಗಿ ಕೂಡ ಈಗ ಹೊರಹೊಮ್ಮಿದ್ದಾರೆ.

ಇನ್ನು ಪವನ್ ಕಲ್ಯಾಣ್ ಅವರ ಈ ಸಾಧನೆ ಕೇವಲ ದೈಹಿಕ ಶಕ್ತಿಯ ಪ್ರದರ್ಶನವಲ್ಲ, ಇದು ಅವರ ವೈಚಾರಿಕ ಮತ್ತು ಅಸ್ತಿತ್ವ, ಜ್ಞಾನ, ಮೌಲ್ಯದ ಪ್ರತಿಬಿಂಬವೂ ಹೌದು. ಜೀವನದ ಸವಾಲುಗಳನ್ನು ಎದುರಿಸಲು ಬೇಕಾದ ಸಂಯಮ ಮತ್ತು ಶಿಸ್ತನ್ನು ಈ ಸಮರಕಲೆಗಳು ನನಗೆ ಕಲಿಸಿವೆ ಎಂದು ಖುದ್ದು ಪವನ್ ಕಲ್ಯಾಣ್ ಅವರೇ ಈ ಹಿಂದೆ ಹಲವು ಬಾರಿ ಹೇಳಿದ್ದಾರೆ. ರಾಜಕೀಯ ಮತ್ತು ಸಮಾಜ ಸೇವೆಯಂತಹ ಒತ್ತಡದ ಕ್ಷೇತ್ರಗಳಲ್ಲಿ ಕೆಲಸ ಮಾಡುವಾಗ ಈ ಸಮುರಾಯ್ ಮನೋಭಾವವೇ ನನಗೆ ದಾರಿದೀಪವಾಗಿದೆ ಎಂದಿದ್ದಾರೆ.

ಈ ಐತಿಹಾಸಿಕ ಕ್ಷಣದ ಮತ್ತೊಂದು ವಿಶೇಷತೆಯೆಂದರೆ, ಜಪಾನ್ ದೇಶದ ಹೊರಗೆ ಪ್ರತಿಷ್ಠಿತ 'ಟಕೆಡಾ ಶಿಂಗೆನ್ ಕ್ಲಾನ್' (Takeda Shingen Clan) ಗೆ ಸೇರ್ಪಡೆಯಾದ ಮೊದಲ ತೆಲುಗು ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪವನ್ ಕಲ್ಯಾಣ್ ಪಾತ್ರರಾಗಿದ್ದಾರೆ. ಸೋಕೆ ಮುರಾಮಾಟ್ಸು ಸೆನ್ಸೆಯವರ ಮಾರ್ಗದರ್ಶನದಲ್ಲಿ ಈ ಗೌರವ ಅವರಿಗೆ ಲಭಿಸಿದೆ. ಗೋಲ್ಡನ್ ಡ್ರಾಗನ್ಸ್ ಸಂಸ್ಥೆಯಿಂದ ಪವನ್ ಕಲ್ಯಾಣ್ ಅವರಿಗೆ ''ಟೈಗರ್ ಆಫ್ ಮಾರ್ಷಲ್ ಆರ್ಟ್ಸ್'' ಎಂಬ ಬಿರುದನ್ನು ಕೂಡ ನೀಡಲಾಗಿದೆ.

ಒಟ್ನಲ್ಲಿ ಪವನ್ ಕಲ್ಯಾಣ್ ಅವರು ನಟ ಮತ್ತು ರಾಜಕಾರಣಿಯಾಗಿ ಮಾತ್ರವಲ್ಲದೆ, ಸಮರ ಕಲೆಯಲ್ಲಿ ಕೂಡ ಈಗ ಸಾಧನೆಯ ಮಾಡಿದ್ದಾರೆ. ಅಂತರಾಷ್ಟ್ರೀಯ ಮನ್ನಣೆ ಪಡೆದಿದ್ದಾರೆ. ಸಹಜವಾಗಿ ಪವನ್ ಕಲ್ಯಾಣ್ ಅವರ ಈ ಸಾಧನೆಯಿಂದ ತೆಲುಗು ಚಿತ್ರರಂಗ ಮತ್ತು ಪವನ್ ಕಲ್ಯಾಣ್ ಅವರ ಅಭಿಮಾನಿ ಬಳಗ ಖುಷಿಯಾಗಿದೆ.

More from Filmibeat

English summary
From Power Star to Global Warrior! Pawan Kalyan makes history with a rare 5th Dan honor and the ‘Tiger of Martial Arts’ crown. See how the actor-politician’s lifelong martial arts journey reached a monumental peak.
Read more about: pawan kalyan tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X