ರಾಮ್‌ಚರಣ್ ಮಗಳಿಗೆ ಪ್ರಭಾಸ್ ಸ್ಪೆಷಲ್ ಗಿಫ್ಟ್; ಕ್ಲಿಂಕಾರಳಿಗೆ ಸಿಕ್ತು ಪುಟಾಣಿ ಬುಜ್ಜಿ

ತೆಲುಗು ಚಿತ್ರರಂಗದಲ್ಲಿ ಪ್ರಭಾಸ್ ಹಾಗೂ ರಾಮ್‌ಚರಣ್ ನಡುವೆ ಆತ್ಮೀಯ ಒಡನಾಟವಿದೆ. ಇದೀಗ ಚರಣ್ ಮಗಳಿಗಾಗಿ ಪ್ರಭಾಸ್ ವಿಶೇಷ ಉಡುಗೊರೆ ಕಳುಹಿಸಿಕೊಟ್ಟಿದ್ದಾರೆ. ಈ ಬಗ್ಗೆ ಖುದ್ದು ಉಪಾಸನಾ ಕೋನಿದೇಲ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಒಂದ್ಕಡೆ ರಾಮ್‌ಚರಣ್ 'ಗೇಮ್‌ ಚೇಂಜರ್' ಸಿನಿಮಾ ಮುಗಿಸಿದ್ದಾರೆ. ಬುಚ್ಚಿಬಾಬು ನಿರ್ದೇಶನದ ಚಿತ್ರಕ್ಕೆ ಸಿದ್ಧತೆ ನಡೆಸಿದ್ದಾರೆ. ಸುಕುಮಾರ್ ಜೊತೆಗೂ ಒಂದು ಸಿನಿಮಾ ಘೋಷಿಸಿದ್ದಾರೆ. ಇನ್ನು ಪ್ರಭಾಸ್ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ನಟನೆಯ 'ಕಲ್ಕಿ 2898 AD' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ 'ಬುಜ್ಜಿ' ಕಾರ್ ಮೂಲಕ ಸಿನಿಮಾ ಪ್ರಮೋಷನ್ ಆರಂಭಿಸಲಾಗಿದೆ. ನಾಗ್‌ ಅಶ್ವಿನ್ ನಿರ್ದೇಶನದ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.

The team of Prabhas starrer Kalki 2898 AD sends bujji gift to Ram Charan s daughter Klin Kaara

6000 ವರ್ಷಗಳ ಅವಧಿಯಲ್ಲಿ ಒಂದು ಕಾಲ್ಪನಿಕ ಕಥೆಯನ್ನು 'ಕಲ್ಕಿ 2898 AD' ಚಿತ್ರದಲ್ಲಿ ಹೇಳಲಾಗುತ್ತಿದೆ. ದ್ವಾಪರಯುಗದಲ್ಲಿ ಶುರುವಾಗುವ ಕಥೆ ಕಲಿಯುಗದಲ್ಲಿ ಇನ್ನು ಹಲವು ವರ್ಷಗಳಿಗೆ ಮುಂದುವರೆಯಲಿದೆ. ಭೂತ, ವರ್ತಮಾನ ಹಾಗೂ ಭವಿಷ್ಯದ ಕಥೆ ಚಿತ್ರದಲ್ಲಿದೆ. ಚಿತ್ರದಲ್ಲಿ ಭೈರವ ಎನ್ನುವ ಪಾತ್ರದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಭೈರವನ ಜೊತೆ ಒಂದು ಚಿಕ್ಕ ರೋಬೊ ಬುಜ್ಜಿ ಇರಲಿದೆ.

ಬುಜ್ಜಿ ರೋಬೊಗೆ ಒಂದು ವಾಹನವೂ ಇದೆ. ಕಾರ್ ರೀತಿಯ ಡಿಸೈನರ್ ವಾಹನ ಇದು. 3 ಚಕ್ರಗಳ ಖ ವಾಹನದ ಒಳಗೆ ಒಬ್ಬರು ಮಾತ್ರ ಕೂರಲು ಅವಕಾಶವಿದೆ. ಬರೋಬ್ಬರಿ 7 ಕೋಟಿ ವೆಚ್ಚದಲ್ಲಿ ಈ ಕಾಲ್ಪನಿಕ ವಾಹನವನ್ನು ಸಿದ್ಧಪಡಿಸಿದ್ದಾರೆ ಎನ್ನಲಾಗ್ತಿದೆ. ಚಿತ್ರದಲ್ಲಿ ಈ ವಾಹನವೂ ಮುಖ್ಯ ಪಾತ್ರ ವಹಿಸಲಿದೆ. ಈಗಾಗಲೇ ಈ ಕಾರ್‌ ಏರಿ ನಾಗಚೈತನ್ಯಾ ಸುತ್ತಾಡಿದ್ದ ವಿಡಿಯೋ ವೈರಲ್ ಆಗಿತ್ತು. ಸದ್ಯ ಪ್ರಚಾರಕ್ಕಾಗಿ ಈ ಕಾರನ್ನು ಚೆನ್ನೈಗೆ ಕೊಂಡೊಯ್ಯಲಾಗಿದೆ.

ಬುಜ್ಜಿ ವಾಹನವನ್ನು ಹೋಲುವ ಚಿಕ್ಕ ಬೇಬಿ ರಾಕರ್ ಅನ್ನು ಚಿತ್ರತಂಡ ಕ್ಲಿಂಕಾರಳಿಗೆ ಉಡುಗೊರೆಯಾಗಿ ನೀಡಿದೆ. ಇದನ್ನು ಫೋಟೊ ಸಮೇತ ಉಪಾಸನಾ ಕೋನಿದೇಲ ರಿವೀಲ್ ಮಾಡಿದ್ದಾರೆ. ಬುಜ್ಜಿ ರಾಕರ್ ಜೊತೆ ಕ್ಲಿಂಕಾರ ಆಡುತ್ತಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಉಡುಗೊರೆ ಜೊತೆಗೆ ಒಂದು ಪತ್ರವನ್ನು ಕಳುಹಿಸಲಾಗಿದೆ. 'ಕಲ್ಕಿ 2898 AD' ಚಿತ್ರತಂಡದಿಂದ ಸಿಕ್ಕ ಉಡುಗೊರೆ ಬಗ್ಗೆ ಉಪಾಸನಾ ಸಂತಸ ವ್ಯಕ್ತಪಡಿಸಿ ಧನ್ಯವಾದ ತಿಳಿಸಿದ್ದಾರೆ.

The team of Prabhas starrer Kalki 2898 AD sends bujji gift to Ram Charan s daughter Klin Kaara

ಮದುವೆಯಾಗಿ 10 ವರ್ಷಗಳ ಬಳಿಕ ರಾಮ್‌ಚರಣ್‌- ಉಪಾಸನಾ ದಂಪತಿ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಿದ್ದರು. ಮೆಗಾ ಪ್ರಿನ್ಸೆನ್ಸ್‌ ಆಗಮನಕ್ಕೆ ಅಭಿಮಾನಿಗಳು ಖುಷಿಪಟ್ಟಿದ್ದರು. ಆಕೆಗೆ ಕ್ಲಿಂಕಾರ ಎಂದು ನಾಮಕರಣ ಮಾಡಿದ ವಿಚಾರವನ್ನು ಮೆಗಾ ಫ್ಯಾಮಿಲಿ ಹಂಚಿಕೊಂಡಿತ್ತು. ಆದರೆ ಆಕೆಯ ಮುಖವನ್ನು ರಿವೀಲ್ ಮಾಡದೇ ಚರಣ್- ಉಪಾಸನಾ ದಂಪತಿ ಆಗಾಗ್ಗೆ ಫೊಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇನ್ನು ಬುಜ್ಜಿ ಕಾರ್ ವಿಶೇಷಗಳ ಬಗ್ಗೆ ಹೇಳುವುದಾದರೆ ಮಹೀಂದ್ರಾ ಮತ್ತು ಜಯಮ್ ಆಟೋಮೋಟಿವ್ ಕಂಪನಿಗಳು ಜಂಟಿಯಾಗಿ ಇದನ್ನು ತಯಾರಿಸಿವೆ. ಇದು ವಿದ್ಯುತ್‌ ಚಾಲಿತ ವಾಹನವಾಗಿದ್ದು ತೂಕ 6 ಟನ್ ಎಂದು ತಿಳಿದುಬಂದಿದೆ. ವಾಹನ 6075 ಎಂಎಂ ಉದ್ದ, 3380 ಎಂಎಂ ಅಗಲ ಮತ್ತು 2186 ಎಂಎಂ ಎತ್ತರವಿದೆ. ಇನ್ನು 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಇನ್ನು ಚಿತ್ರದಲ್ಲಿ ಬುಜ್ಜಿಗೆ ನಟಿ ಕೀರ್ತಿ ಸುರೇಶ್ ಧ್ವನಿ ನೀಡಿದ್ದಾರೆ. ತೆಲುಗಿನಲ್ಲಿ ಆಕೆ ಧ್ವನಿ ನೀಡಿದ್ದು ಬೇರೆ ಭಾಷೆಗಳಲ್ಲಿ ಅಲ್ಲಿನ ಸ್ಟಾರ್ ನಟಿಯರು ಧ್ವನಿ ಆಗಲಿದ್ದಾರೆ. ಜೂನ್ 27ಕ್ಕೆ 'ಕಲ್ಕಿ 2898 AD' ಸಿನಿಮಾ ತೆರೆಗೆ ಬರಲಿದೆ. ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಟಾಣಿ ತಾರಾಗಣದಲ್ಲಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ.

More from Filmibeat

English summary
Prabhas gifts to Ramcharan- upasana konidela's daughter Klin Kaara
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X