08 ಗಂಟೆ ನಡೆಯಲಿದೆ ನಾಗಚೈತನ್ಯ ಮತ್ತು ಶೋಭಿತಾ ಮದುವೆ, ವಿವಾಹ ಮಹೋತ್ಸವದ ವಿಶೇಷತೆಗಳೇನು ?
ಪ್ರೀತಿ ಎನ್ನುವ ಈ ಎರಡಕ್ಷರ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿದೆ. ಅನೇಕರಿಗೆ ಜೀವನ ನೀಡಿದೆ. ಇನ್ನೂ ಹಲವರ ಜೀವನ ಕಸಿದುಕೊಂಡಿದೆ. ಖುಷಿ, ನೋವು, ಸ್ವಾರ್ಥ, ಜಗಳ, ನಗು, ಮಾತು, ಮೌನ, ಆಸೆ, ಅಭಿಲಾಸೆ, ವಿರಹ, ಹೀಗೆ ಎಲ್ಲವೂ ಕೂಡ ಪ್ರೀತಿ ಹುಟ್ಟಿದ ದಿನವೇ ಚಿಗುರೊಡೆದು ಮರವಾಗಿ ಬೆಳೆಯುತ್ತದೆ. ಕೆಲವೊಮ್ಮೆ ಅಷ್ಟೇ ಬೇಗ ಉಸಿರನ್ನು ಚೆಲ್ಲುತ್ತದೆ. ಇದಕ್ಕೆ ಸಮಂತಾ ಮತ್ತು ನಾಗಚೈತನ್ಯ ಅವರ ಮದುವೆ ಮತ್ತು ವಿಚ್ಛೇದನ ಒಂದು ಉದಾಹರಣೆ.
ಸದ್ಯ ಸಮಂತಾ ಅವರಿಂದ ದೂರವಾದ ನಂತರ ನಾಗಚೈತನ್ಯ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಶೋಭಿತಾ ಜೊತೆ ಮದುವೆಯಾಗಲು ಸಿದ್ಧರಾಗಿದ್ದಾರೆ.ಇದರ ನಡುವೆ ನಾಗಚೈತನ್ಯ ಮತ್ತು ಶೋಭಿತಾ ಮದುವೆ ಬರೋಬ್ಬರಿ 8 ಗಂಟೆ ನಡೆಯಲಿದೆ ಎಂಬ ಮಾತು ಆಂಧ್ರದೆಲ್ಲೆಡೆ ಕೇಳಿ ಬರುತ್ತಿದೆ.

ಹೌದು,ನಾಗಚೈತನ್ಯ ಜೊತೆ ಮದುವೆಯಾಗುತ್ತಿರುವ ಶೋಭಿತಾ ಮೊದಲಿಂದ ಆಧ್ಯಾತ್ಮಿಕ ಮನೋಭಾವದವರು. ಸಂಪ್ರದಾಯ-ಆಚರಣೆ-ಪದ್ದತಿಗಳಲ್ಲಿ ನಂಬಿಕೆಯನ್ನು ಹೊಂದಿರುವವರು. ತಮ್ಮ ಮದುವೆ ಸಾಂಪ್ರದಾಯಿಕವಾಗಿಯೇ ನಡೆಯಬೇಕು ಎನ್ನುವ ಕನಸನ್ನು ಮೊದಲಿಂದ ಕಂಡಿರುವ ಶೋಭಿತಾ ದೇವಾಲಯದ ಗಂಟೆ, ಹಿತ್ತಾಳೆ ದೀಪ, ಬಾಳೆ ಎಲೆ ಮತ್ತು ಹಸುವಿನ ಚಿತ್ರಣವನ್ನು ಹೊಂದಿರುವ ಸಾಂಪ್ರದಾಯಿಕ ಶೈಲಿಯ ನೀಲಿ ಬಣ್ಣದ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿದ್ದಾರೆ. ಎಲ್ಲ ತಾರೆಯರಂತೆ ಶೋಭಿತಾ ತಮ್ಮ ಮದುವೆಗೆ ಯಾವುದೇ ಡಿಸೈನರ್, ಸೈಲಿಸ್ಟ್‌ಗಳ ಮೊರೆ ಹೋಗದೇ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿರುವ ಜವಳಿ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿರುವ ಅಂಗಡಿಗಳಿಗೆ ತೆರಳಿ ಬಟ್ಟೆಗಳನ್ನು ಖರೀದಿ ಮಾಡುತ್ತಿದ್ದಾರೆ.
ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಶೋಭಿತಾ ತಮ್ಮ ಮದುವೆಯಲ್ಲಿ ತೆಲುಗು ಸಂಪ್ರದಾಯದಂತೆ ಎಲ್ಲ ಧಾರ್ಮಿಕ ವಿಧಿಗಳನ್ನು ಅನುಸರಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಮದುವೆ ನಡೆಯಲಿದ್ದು ಹೆಚ್ಚು ಕಡಿಮೆ 08 ಗಂಟೆಗಳ ಕಾಲ ವೈದಿಕ , ಸಾಂಪ್ರದಾಯಿಕ ಶ್ರೀಮಂತಿಕೆಯಿಂದ ವಿವಾಹ ನೆರವೇರಲಿದೆ, ಎಂದು ಶೋಭಿತಾ ಅವರ ಆಪ್ತರು ಆಂಧ್ರದ ಮಾಧ್ಯಮದವರಿಗೆ ಮಾಹಿತಿಯನ್ನು ನೀಡಿದ್ದಾರೆ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ.
ಇನ್ನೂ ಇದಕ್ಕೆ ಪೂರಕವಾಗಿ ಕೆಲ ದಿನಗಳ ಹಿಂದೆ ಮಗನ ಮದುವೆ ಕುರಿತು ಸಂದರ್ಶನದಲ್ಲಿ ಮಾತನಾಡಿದ್ದ ನಾಗಾರ್ಜುನ ಅದ್ಧೂರಿ ಮದುವೆ ಈ ಬಾರಿ ಬೇಡ ಎಂದುಕೊಂಡಿದ್ದೆವು ಆದರೆ ಶೋಭಿತಾ ಮತ್ತು ಅವರ ಪೋಷಕರು ಮದುವೆಯ ಎಲ್ಲ ಆಚರಣೆಯನ್ನು ಮಾಡಲು ಬಯಸಿದ್ದಾರೆ. ಇನ್ನೂ ನಾಗಚೈತನ್ಯ ಮತ್ತು ಶೋಭಿತಾ ಇಬ್ಬರು ತಮ್ಮ ಕುಟುಂಬಕ್ಕೆ ಮತ್ತು ಸ್ನೇಹಿತರಿಗೆ ಆದ್ಯತೆ ನೀಡಿದ್ದಾರೆ. ಹೀಗಾಗಿ ಅವರ ಆಸೆಯಂತೆ ಮದುವೆ ನಡೆಯಲಿದೆ, ಮದುವೆಯ ಎಲ್ಲ ಕೆಲಸಗಳನ್ನು ಜವಾಬ್ಧಾರಿಗಳನ್ನು ಅವರೇ ವಹಿಸಿಕೊಂಡಿದ್ದಾರೆ ಹೀಗಾಗಿ ನಾನು ನಿರಾಳನಾಗಿದ್ದೇನೆ ಎಂದು ಹೇಳಿದ್ದರು.
ಇನ್ನುಳಿದಂತೆ ಇದೇ ಡಿಸೆಂಬರ್ 04ರಂದು ನಾಗಾರ್ಜುನ ಒಡೆತನದ ಅನ್ನಪೂರ್ಣ ಸ್ಟುಡಿಯೋದಲ್ಲಿ ಇಬ್ಬರ ಮದುವೆ ನೆರವೇರಲಿದೆ. ತೆಲುಗು ಚಿತ್ರರಂಗದ ಖ್ಯಾತರೆಲ್ಲ ಮದುವೆ ಸಮಾರಂಭಕ್ಕೆ ಆಗಮಿಸುವ ಸಾಧ್ಯತೆ ಇದೆ. ಪರಭಾಷೆಗಳಿಂದ ಕೂಡ ಗಣ್ಯರು ಬಂದು ನವ ಜೋಡಿಗೆ ಶುಭ ಕೋರಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಸದ್ಯ ಮದುವೆಯ ತಯಾರಿಯ ನಡುವೆ ನಾಗಚೈತನ್ಯ ತಾಂಡೇಲ್ ಚಿತ್ರದ ಚಿತ್ರೀಕರಣವನ್ನು ಮಾಡುತ್ತಿದ್ದಾರೆ. ಸಾಯಿ ಪಲ್ಲವಿ ಈ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಶೋಭಿತಾ ತಮ್ಮ ಮದುವೆಯ ಸಂಪೂರ್ಣ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ.


Click it and Unblock the Notifications











