For Quick Alerts
  ALLOW NOTIFICATIONS  
  For Daily Alerts

  ನಟಿ ಅನುಷ್ಕಾ ಶೆಟ್ಟಿ ರಿಜೆಕ್ಟ್ ಮಾಡಿದ ಬಿಗ್ ಬಜೆಟ್ ಸಿನಿಮಾಗಳಿವು

  |

  ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಅಗ್ರಸ್ಥಾನದಲ್ಲಿ ಬರುವ ಹೆಸರು ಅನುಷ್ಕಾ ಶೆಟ್ಟಿ. 2005ರಲ್ಲಿ ತೆಲುಗು ಸಿನಿಮಾರಂಗದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ಅನುಷ್ಕಾ ತನ್ನ 15 ವರ್ಷದ ಸಿನಿ ಜೀವನದಲ್ಲಿ ಅದ್ಭುತ ಸಿನಿಮಾಗಳನ್ನು ನೀಡಿದ್ದಾರೆ.

  ಬಿಗ್ ಬಜೆಟ್ ನ ಬಿಗ್ ಸ್ಟಾರ್ ಸಿನಿಮಾಗಳಲ್ಲಿ ನಟಿಸಿರುವ ಅನುಷ್ಕಾ ಇದುವರೆಗೂ ತರಹೇವಾರಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾದ ದೇವಸೇನಾ ಪಾತ್ರ ಅನುಷ್ಕಾ ಸಿನಿ ಬದುಕನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ದಕ್ಷಿಣದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಅನುಷ್ಕಾ ಸಾಕಷ್ಟು ದೊಡ್ಡ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದಾರೆ.

  ಯುವ ನಾಯಕನ ಜೊತೆ ನಾಯಕಿಯಾಗಿ ಅನುಷ್ಕಾ ಶೆಟ್ಟಿಯುವ ನಾಯಕನ ಜೊತೆ ನಾಯಕಿಯಾಗಿ ಅನುಷ್ಕಾ ಶೆಟ್ಟಿ

  ಹಿಂದಿಯಲ್ಲಿ ನಟಿಸುವ ಅವಕಾಶ ಸಿಕ್ಕರೂ ಸಹ ಅನುಷ್ಕಾ ಬಾಲಿವುಡ್ ಚಿತ್ರರಂಗದ ಕಡೆ ತಲೆಹಾಕಿಲ್ಲ. ನಿರ್ಮಾಪಕ ಕರಣ್ ಜೋಹರ್ ಅನುಷ್ಕಾರನ್ನು ಹಿಂದಿಯಲ್ಲಿ ಲಾಂಚ್ ಮಾಡಲು ಪಟ್ಟ ಪ್ರಯತ್ನ ಸಹ ವಿಫಲವಾಯಿತು. ಮೂಲಗಳ ಪ್ರಕಾರ ಅನುಷ್ಕಾ ಬಾಲಿವುಡ್ ನ ತಮಾಷಾ, ಸಿಂಗಂ ಮತ್ತು ಗೋಲ್ಮಾಲ್ ಅಂತಹ ಸಿನಿಮಾಗಳಲ್ಲಿ ನಟಿಸುವ ಅವಕಾಶ ಕೈ ಚೆಲ್ಲಿದ್ದಾರೆ ಎನ್ನುವ ಸುದ್ದಿ ಇದೆ. ಇನ್ನು ದಕ್ಷಿಣ ಭಾರತದಲ್ಲಿ ಅನುಷ್ಕಾ ಇತ್ತೀಚಿನ ದಿನಗಳಲ್ಲಿ ತಿರಸ್ಕರಿಸಿದ ಸಿನಿಮಾಗಳ ಪಟ್ಟಿ ಹೀಗಿದೆ.

  ಪೊನ್ನಿಯನ್ ಸೆಲ್ವನ್

  ಪೊನ್ನಿಯನ್ ಸೆಲ್ವನ್

  ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ನಟಿಸುವ ಅವಕಾಶ ಅನುಷ್ಕಾಗೆ ಒಲಿದು ಬಂದಿತ್ತು. ಆದರೆ ಈ ಸಿನಿಮಾದ ಭಾಗವಾಗಲು ಅನುಷ್ಕಾ ತಿರಸ್ಕರಿಸಿದ್ದಾರೆ. ಅದೆ ಪಾತ್ರವನ್ನು ನಟಿ ತ್ರಿಷಾ ನಿಭಾಯಿಸುತ್ತಿದ್ದಾರೆ. ಚಿತ್ರದಲ್ಲಿ ನಟಿ ಐಶ್ವರ್ಯಾ ರೈ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜಯಂ ರವಿ, ಕಾರ್ತಿ, ವಿಕ್ರಮ್ ಸೇರಿದಂತೆ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ.

  ಅನುಷ್ಕಾ ಮೊದಲ ಆಡಿಷನ್ ಕಥೆ ಬಿಚ್ಚಿಟ್ಟ ಪೂರಿ ಜಗನ್ನಾಥ್: ಏನೂ ಗೊತ್ತಿಲ್ಲದ ಸ್ವೀಟಿಗೆ ಚಾನ್ಸ್ ಕೊಟ್ಟಿದ್ದೇಕೆ?ಅನುಷ್ಕಾ ಮೊದಲ ಆಡಿಷನ್ ಕಥೆ ಬಿಚ್ಚಿಟ್ಟ ಪೂರಿ ಜಗನ್ನಾಥ್: ಏನೂ ಗೊತ್ತಿಲ್ಲದ ಸ್ವೀಟಿಗೆ ಚಾನ್ಸ್ ಕೊಟ್ಟಿದ್ದೇಕೆ?

  ಕೊಚಾಡಿಯನ್ ಸಿನಿಮಾ

  ಕೊಚಾಡಿಯನ್ ಸಿನಿಮಾ

  ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಕೊಚಾಡಿಯನ್ ಚಿತ್ರದಲ್ಲಿ ಅನುಷ್ಕಾ ರಜನಿಕಾಂತ್‌ಗೆ ನಾಯಕಿಯಾಗಿ ನಟಿಸಬೇಕಿತ್ತು. ಆದರೆ ಈ ಪಾತ್ರವನ್ನು ಮಾಡಲು ಹಿಂದೇಟು ಹಾಕಿದರು. ಈ ಚಿತ್ರಕ್ಕೆ ಅನುಷ್ಕಾ ಮೊದಲ ಆಯ್ಕೆಯಾಗಿದ್ದರು. ಆದರೆ ಈ ಪಾತ್ರ ಮಾಡಲು ತಿರಸ್ಕರಿಸಿದ ಬಳಿಕ ದೀಪಿಕಾ ಪಡುಕೋಣೆ ನಟಿಸಿದ್ದಾರೆ.

  ಅಸುರನ್ ತೆಲುಗು ರಿಮೇಕ್

  ಅಸುರನ್ ತೆಲುಗು ರಿಮೇಕ್

  ಅಸುರನ್ ತೆಲುಗು ರಿಮೇಕ್‌ನಲ್ಲಿ ನಟಿಸುವ ಅವಕಾಶವನ್ನು ಅನುಷ್ಕಾ ದೂರ ತಳ್ಳಿದ್ದಾರೆ ಎನ್ನುವ ಸುದ್ದಿ ಇದೆ. ಈ ಮೊದಲು ಶ್ರೀಯಾ ಶರಣ್ ಅವರನ್ನು ಆಯ್ಕೆ ಮಾಡಲಾಗಿತ್ತು. ಶ್ರೀಯಾ ಒಪ್ಪದ ಬಳಿಕ ಈ ಪಾತ್ರ ಅನುಷ್ಕಾ ಬಳಿ ಬಂದಿದೆ. ಆದರೆ ಅನುಷ್ಕಾ ಶೆಟ್ಟಿ ರಿಜೆಕ್ಟ್ ಮಾಡಿದ್ದಾರಂತೆ.

  ಅರುಂಧತಿ-2

  ಅರುಂಧತಿ-2

  ಕೋಡಿ ರಾಮಕೃಷ್ಣ ಸಾರಥ್ಯದಲ್ಲಿ ಮೂಡಿಬಂದ ಅರುಂಧತಿ ಸಿನಿಮಾ ಅನುಷ್ಕಾ ಸಿನಿ ಬದುಕಿನ ಮತ್ತೊಂದು ಅದ್ಭುತ ಸಿನಿಮಾ. ಈ ಸಿನಿಮಾದಲ್ಲಿ ಅನುಷ್ಕಾ ಭಯಾನಕ ನಟನೆ ಅಭಿಮಾನಿಗಳ ನಿದ್ದೆಗೆಡಿಸಿತ್ತು. ಸಾಕಷ್ಟು ಪ್ರಶಸ್ತಿಗಳನ್ನು ಗೆದ್ದು ಬೀಗಿದ್ದ ಈ ಸಿನಿಮಾದ ಪಾರ್ಟ್-2 ಮಾಡಲು ನಿರ್ಧರಿಸಲಾಗಿದೆಯಂತೆ. ಪಾರ್ಟ್-2ಗೆ ಅನುಷ್ಕಾರನ್ನ ಕೇಳಿದ್ರೆ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರಂತೆ. ಈ ಪಾತ್ರದಲ್ಲಿ ಈಗ ಪಾಯಲ್ ರಜಪೂತ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

  ಅಂದಹಾಗೆ ಅನುಷ್ಕಾ ಸದ್ಯ ಯಾವ ಸಿನಿಮಾದಲ್ಲೂ ನಟಿಸಲುತ್ತಿಲ್ಲ. ನಿಶಬ್ದಂ ಸಿನಿಮಾ ನಂತರ ಅನುಷ್ಕಾ ಯಾವ ಸಿನಿಮಾಗೂ ಸಹಿ ಮಾಡಿಲ್ಲ. ಸದ್ಯ ಬ್ರೇಕ್ ಪಡೆದಿರುವ ಅನುಷ್ಕಾ ಮುಂದಿನ ಸಿನಿಮಾ ಯಾವುದು ಎನ್ನುವುದು ಅಭಿಮಾನಿಗಳ ಕುತೂಹಲ.

  ದಯವಿಟ್ಟು ನಿರ್ಬಂಧ ಹೇರಬೇಡಿ,ನಿಯಮ ಪಾಲಿಸ್ತೀವಿ ಎಂದ ದುನಿಯಾ ವಿಜಯ್ | Filmibeat Kannada
  English summary
  These big movies are rejected by Actress Anushka Shetty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X