ಪ್ರಕಾಶ್ ರಾಜ್‌ಗೆ ನಾನು ಪತ್ನಿಯಾಗಬೇಕಂದರೆ 5ಜನರ ಜೊತೆ ಹಾಸಿಗೆ ಹಂಚಿಕೊಳ್ಳಬೇಕಿತ್ತು-ಶಾಕಿಂಗ್ ಸತ್ಯ ಹೇಳಿದ ಖ್ಯಾತ ನಟಿ

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುವ ಮಾತು ಇದೆ. ಈ ಮಾತು ಚಿತ್ರರಂಗಕ್ಕೆ ಹೆಚ್ಚು ಸೂಕ್ತವಾಗುತ್ತೆ. ಯಾಕೆಂದರೆ.. ಹೊರಗಡೆಯಿಂದ ತುಂಬಾನೇ ಕಲರ್ ಫುಲ್ ಆಗಿ ಕಾಣುವ ಈ ಬಣ್ಣದ ಲೋಕದಲ್ಲಿ ನಾನಾ ಬಗೆಯ ವೇಷಭೂಷಣ ಹಾಕಿಕೊಂಡ ಹಲವಾರು ಜನ ಇದ್ದಾರೆ. ಅದರಲ್ಲಿಯೂ ನಾಯಕಿಯಾಗಿ ನೆಲೆಯೂರಬೇಕೆಂದು ಕನಸೊತ್ತು ಬರುವ ಹಲವರ ಪಾಲಿಗೆ ಚಿತ್ರರಂಗ ಕಲ್ಲು ಮುಳ್ಳಿನ ಹಾದಿಯೇ.

ಅಡಿಗಡಿಗೂ ಈ ಚಿತ್ರರಂಗದಲ್ಲಿ ಸವಾಲುಗಳಿಗೆ ಎದೆಯೊಡ್ಡಬೇಕಾಗುತ್ತದೆ. ಪಾತ್ರಕ್ಕೆ ಪಲ್ಲಂಗವೇರಬೇಕು ಎಂಬ ಷರತ್ತನ್ನು ಒಪ್ಪಿಕೊಂಡರೆ ಮಾತ್ರ ಇಲ್ಲಿ ಅವಕಾಶ ಎಂದು ದುಷ್ಟ ವ್ಯವಸ್ಥೆಯೊಂದು ಇವರಿಗೆ ಮಾನಸಿಕ ಕಿರಿಕಿರಿ ನೀಡುತ್ತದೆ. ಕೆಲವರು ಇಲ್ಲಿ ನೇರವಾಗಿಯೇ ತಮ್ಮ ಜೊತೆ ಮಲಗಬೇಕೆಂಬ ಬೇಡಿಕೆಯನ್ನು ಮುಂದಿಡುತ್ತಾರೆ. ಇನ್ನೂ ಕೆಲವರು ಅವಕಾಶ ನೀಡುವ ನೆಪದಲ್ಲಿ ಹತ್ತಿರವಾಗುವ ಪ್ರಯತ್ನ ಮಾಡುತ್ತಾರೆ. ಚೂರು ಯಾಮಾರಿದರೂ ಕೂಡ ಸ್ಥಳ ಯಾವುದೇ ಇರಲಿ, ಅಲ್ಲಿಯೇ ಬಲವಂತದಿಂದ ತಮ್ಮ ಕಾ*ಮದಾಹ ತೀರಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ.

They Demanded 5 Commitments Mirchi Madhavi Exposes The Dark Price of Fame in Tollywood

ಒಟ್ನಲ್ಲಿ ಚಿತ್ರರಂಗದಲ್ಲಿ ಇಂದು ಹೆಸರು ಮಾಡಿರುವವರು.. ಹೆಸರು ಮಾಡಲಾಗದೇ ಮನೆ ಸೇರಿದವರು.. ಒಂದಿಲ್ಲೊಂದು ದಿನ.. ಒಂದಿಲ್ಲೊಂದು ರೀತಿಯಲ್ಲಿ.. ಈ ಝಗಮಗ ಲೋಕದಲ್ಲಿನ ವಿಕೃತ ಲೋಕವನ್ನು ಕಂಡು ಬೆಚ್ಚಿ ಬಿದ್ದಿಯೇ ಬಿದ್ದಿರುತ್ತಾರೆ. ಉದಾಹರಣೆಗೆ ಮಿರ್ಚಿ ಮಾಧವಿ.

ಹೌದು, ಮಿರ್ಚಿ ಮಾಧವಿ. ಪಕ್ಕದ ತೆಲುಗು ಚಿತ್ರರಂಗದ ಪೋಷಕ ನಟಿ. 2007-08ರ ಆಸು ಪಾಸು ಚಿತ್ರರಂಗಕ್ಕೆ ಬಂದ ಮಿರ್ಚಿ ಮಾಧವಿ ಇಲ್ಲಿಯವರೆಗೆ ''ಪಲಾಸ್ 1978''.. ''ಅಲಾ ನಿನ್ನ ಚೆರಿ''.. ''F2''.. ''100 % ಲವ್''.. ಹೀಗೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕೇವಲ ಬೆಳ್ಳಿತೆರೆ ಮಾತ್ರ ಅಲ್ಲ ಕಿರುತೆರೆಯಲ್ಲಿ ಕೂಡ ಸಕ್ರಿಯವಾಗಿರುವ ಮಿರ್ಚಿ ಮಾಧವಿ 2013ರಲ್ಲಿ ತೆರೆಗೆ ಬಂದ ಪ್ರಭಾಸ್ ಅಭಿನಯದ ''ಮಿರ್ಚಿ'' ಚಿತ್ರದಲ್ಲಿ ಕೂಡ ಆಕ್ಟ್ ಮಾಡಿದ್ದರು. ಇಲ್ಲಿಂದ ತೆಲುಗು ಚಿತ್ರರಂಗದಲ್ಲಿ ಮಿರ್ಚಿ ಮಾಧವಿ ಎಂದೇ ಪ್ರಖ್ಯಾತರಾದರು.

ಇಂಥಾ ಮಿರ್ಚಿ ಮಾಧವಿ ಸದ್ಯ ತಮ್ಮ ಕಹಿ ಅನುಭವ ಹಂಚಿಕೊಂಡಿದ್ದಾರೆ. ಪ್ರಕಾಶ್ ರಾಜ್ ಜೊತೆ ತೆರೆ ಹಂಚಿಕೊಳ್ಳಲು 5 ಜನರ ಜೊತೆ ಮಲಗುವಂತೆ ನನ್ನನ್ನೂ ಕೇಳಲಾಗಿತ್ತು ಎಂದಿದ್ದಾರೆ. ಈ ಕುರಿತು ''iDream Mint''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮಿರ್ಚಿ ಮಾಧವಿ ಅದೊಂದು ದಿನ ವ್ಯಕ್ತಿಯೊಬ್ಬರು ನನಗೆ ಕರೆ ಮಾಡಿದ್ದರು. ಒಂದು ಸಿನಿಮಾ ಇದೆ, ಆ ಸಿನಿಮಾದಲ್ಲಿ ಪ್ರಕಾಶ್ ರಾಜ್ ಅವರ ಪತ್ನಿಯ ಪಾತ್ರ ನಿಮ್ಮದೇ ಎಂದು ನನಗೆ ಹೇಳಿದರು ಎಂದು ಹೇಳಿದ್ದಾರೆ.

ಆದರೆ ಆ ಪಾತ್ರ ನಿಮ್ಮದಾಗಬೇಕು ಅಂದರೆ ನೀವು ರಾಜಿ ಮಾಡಿಕೊಳ್ಳಬೇಕು ಎಂದು ಅವರು ನನಗೆ ಹೇಳಿದರು ಎಂದು ನೆನಪು ಮಾಡಿಕೊಂಡಿರುವ ಮಿರ್ಚಿ ಮಾಧವಿ ಆಗ ನಾನು ಅವರಿಗೆ ರಾಜಿ ಅಂದರೆ ಏನು..? ಎಂಬ ಪ್ರಶ್ನೆ ಕೇಳಿದೆ ಎಂದು ಹೇಳಿದ್ದಾರೆ.

They Demanded 5 Commitments Mirchi Madhavi Exposes The Dark Price of Fame in Tollywood

ನನ್ನ ಈ ಪ್ರಶ್ನೆಗೆ ನೀವು ''100% ಲವ್'' ಚಿತ್ರದಲ್ಲಿ ಅಭಿನಯಿಸಿದ್ದೀರಿ, ನಿಮ್ಮ ಬಗ್ಗೆ ನಮಗೆ ಚೆನ್ನಾಗಿಯೇ ಗೊತ್ತು ಎಂದು ಅವರು ಹೇಳಿದರು ಎಂದಿರುವ ಮಿರ್ಚಿ ಮಾಧವಿ ಒಂದು ವೇಳೆ ನಾನು ಆ ತರಹದ ವ್ಯಕ್ತಿಯಾಗಿದ್ದರೆ ಚಿತ್ರರಂಗಕ್ಕೆ ನಾನು ಬರುತ್ತಲೇ ಇರಲಿಲ್ಲ. ಸುಕುಮಾರ್ ಸರ್ ನನ್ನನ್ನು ಚಿನ್ನದಂತೆ ನೋಡಿಕೊಂಡಿದ್ದಾರೆ. ನಿಮ್ಮ ಈ ಆಫರ್ ಅವಶ್ಯಕತೆ ನನಗೆ ಇಲ್ಲ ಎಂದು ನಾನು ಹೇಳಿದೆ ಎಂದು ಹೇಳಿದ್ದಾರೆ.

ಆದರೂ ಸುಮ್ಮನಾಗದ ಆ ವ್ಯಕ್ತಿ ಒಳ್ಳೆಯ ಅವಕಾಶ ಮತ್ತೊಮ್ಮೆ ಯೋಚನೆ ಮಾಡಿ ಎಂದು ಒತ್ತಾಯ ಮಾಡಿದರು ಆಗಲೂ ಕೂಡ ನನ್ನ ಉತ್ತರ ಇಲ್ಲ ಎನ್ನುವುದೇ ಆಗಿತ್ತು ಎಂದಿದ್ದಾರೆ ಮಿರ್ಚಿ ಮಾಧವಿ.

ಸದ್ಯ ಮಿರ್ಚಿ ಮಾಧವಿ ಅವರ ಈ ಸಂದರ್ಶನದ ಕುರಿತು ತೆಲುಗು ನಾಡಿನಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಆ ಚಿತ್ರ ಯಾವುದು..? ಮಿರ್ಚಿ ಮಾಧವಿಗೆ ಕರೆ ಮಾಡಿ ಮಂಚಕ್ಕೆ ಕರೆದ ವ್ಯಕ್ತಿ ಯಾರು..? ಮಿರ್ಚಿ ಮಾಧವಿ ಅವರ ಜೊತೆ ಹಾಸಿಗೆ ಹಂಚಿಕೊಳ್ಳಲು ಬಯಸಿದ್ದ ಆ ಐವರು ಯಾರು..? ಎನ್ನುವ ಪ್ರಶ್ನೆಗಳು ಸದ್ಯ ಹಲವರನ್ನು ಕಾಡುತ್ತಿವೆ.

More from Filmibeat

English summary
The painful truth revealed. Mirchi Madhavi shares her sensational, pressure-filled experience with the casting couch, detailing the five specific commitments she refused.
Read more about: casting couch me too tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X