ತೆಲುಗಿಗೆ ಹೊರಟ 'ಹಾಸ್ಟೆಲ್ ಬಾಯ್ಸ್'.. ರಮ್ಯಾ ಹೋಗಲ್ಲ.. ಆಕೆ ಬದ್ಲು ಜಬರ್ದಸ್ತ್ ಲೇಡಿ ಎಂಟ್ರಿ

ಕನ್ನಡದಲ್ಲಿ ಸೂಪರ್ ಹಿಟ್ ಆಗಿರುವ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ತೆಲುಗಿಗೆ ಡಬ್ ಆಗ್ತಿದೆ. ಮುಂದಿನ ವಾರವೇ ಸಿನಿಮಾ ತೆಲುಗು ಪ್ರೇಕ್ಷಕರ ಮುಂದೆ ಹೋಗ್ತಿದೆ. ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ಚಿತ್ರದಲ್ಲಿ ನಟ ರಮ್ಯಾ ಸ್ಪೆಷಲ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ತೆಲುಗು ವರ್ಷನ್‌ನಲ್ಲಿ ಮತ್ತೊಬ್ಬ ನಟಿ ಆ ಜಾಗವನ್ನು ತುಂಬುತ್ತಿದ್ದಾರೆ.

ಬಹುತೇಕ ಹೊಸಬರೇ ಸೇರಿ ಮಾಡಿದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷ ಸೆನ್ಸೇಷನ್‌ ಕ್ರಿಯೇಟ್ ಮಾಡಿದೆ. ಕನ್ನಡ ಸಿನಿಮಾ ತಾರೆಯರು ಕೂಡ ಚಿತ್ರಕ್ಕೆ ಬೆಂಬಲ ಸೂಚಿಸಿದ್ದರು. ಒಂದು ಸಿಂಪಲ್ ಕಥೆಯನ್ನು ಬಹಳ ಸೊಗಸಾಗಿ ತೆರೆಗೆ ತಂದು ಚಿತ್ರತಂಡ ಗೆದ್ದಿತ್ತು. ಒಂದು ಶಾರ್ಟ್‌ ಫಿಲ್ಮ್ ಶೂಟ್ ಮಾಡುವುದನ್ನೇ ಸಿನಿಮಾ ಮಾಡಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಚಿತ್ರತಂಡ ಸಫಲವಾಗಿದೆ. ಸಿನಿಮಾ ಸೀಕ್ವೆಲ್ ಬಗ್ಗೆಯೂ ಚರ್ಚೆ ನಡೀತಿದೆ.

Boys-hostel- Ramya-Rashmi

ರಕ್ಷಿತ್ ಶೆಟ್ಟಿ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಮೆಚ್ಚು ಅರ್ಪಿಸಿದ್ದರು. ರಿಷಬ್ ಶೆಟ್ಟಿ, ಪವನ್ ಕುಮಾರ್, ದಿಗಂತ್ ಸಣ್ಣ ಸಣ್ಣ ಪಾತ್ರಗಳಲ್ಲಿ ಚಿತ್ರಕ್ಕೆ ಮೆರಗು ತಂದಿದ್ದರು. ಹೀರೊ, ಹೀರೊಯಿನ್ ಕಾನ್ಸೆಪ್ಟ್ ಬಿಟ್ಟು ಬರೀ ಹಾಸ್ಟೆಲ್‌ ಹುಡುಗರ ಹಾಡು ಪಾಡನ್ನು ತೆರೆಗೆ ತಂದು ಚಿತ್ರತಂಡ ಕಮಾಲ್ ಮಾಡಿದೆ. ಸಿನಿಮಾ 5ನೇ ವಾರಕ್ಕೆ ಕಾಲಿಟ್ಟಿದೆ. ಇದರೆ ಬೆನ್ನಲ್ಲೇ ತೆಲುಗಿಗೆ ಡಬ್ ಆಗಿ ರಿಲೀಸ್ ಆಗುತ್ತಿದೆ.

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರದಲ್ಲಿ ರಮ್ಯಾ ಲೆಕ್ಚರರ್ ದಿವ್ಯಾ ಸ್ಪಂದನಾ ಪಾತ್ರದಲ್ಲಿ ನಟಿಸಿದ್ದರು. ಚಿತ್ರದ ಆರಂಭದ ಸನ್ನಿವೇಶವೊಂದರಲ್ಲಿ ಕಾಣಿಸಿಕೊಳ್ಳುವ ಚೆಲುವೆ ಬಳಿಕ ಆಗಾಗ್ಗೆ ತೆರೆಮೇಲೆ ಬಂದು ನಗು ಬೀರಿ ಹೋಗಿದ್ದರು. ಆ ಪಾತ್ರದ ಬಗ್ಗೆ ಅಭಿಮಾನಿಗಳಿಗೂ ಬೇಸರವಿದೆ. ರಮ್ಯಾ ಅವರನ್ನು ಸರಿಯಾಗಿ ತೆರೆಮೇಲೆ ತೋರಿಸಲಿಲ್ಲ ಎನ್ನುವುದು ಕೆಲವರ ವಾದ. ಇನ್ನು ಇದೇ ಪಾತ್ರದ ವಿಚಾರವಾಗಿ ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ರಮ್ಯಾ ಚಿತ್ರತಂಡಕ್ಕೆ ಶಾಕ್ ಕೊಟ್ಟಿದ್ದರು. ತಂಡಕ್ಕೆ ಲೀಗಲ್ ನೋಟಿಸ್ ನೀಡಿದ್ದರು. ಆದರೆ ಅದೆಲ್ಲವನ್ನು ಮೀರಿ ಸಿನಿಮಾ ತೆರೆಕಂಡು ಹಿಟ್ ಆಗಿದೆ.

ಕೆಲ ತೆಲುಗು ಪ್ರೇಕ್ಷಕರು ಕೂಡ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ತೆಲುಗಿಗೆ ಡಬ್ ಮಾಡಿ ಬಿಡುವಂತೆ ಕೆಲವರು ಮನವಿ ಮಾಡಿದ್ದರು. ಸಿನಿಮಾ ಡೈಲಾಗ್ಸ್ ತುಂಬಾ ಸ್ಪೀಡ್ ಇದೆ. ಡಬ್ ಮಾಡುವುದು ಅಷ್ಟು ಸುಲಭ ಅಲ್ಲ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಇದೀಗ ಸಿನಿಮಾ ಡಬ್ಬಿಂಗ್ ಕೆಲಸ ಚಾಲ್ತಿಯಲ್ಲಿದೆ. 'ಹಾಸ್ಟೆಲ್ ಬಾಯ್ಸ್' ಹೆಸರಿನಲ್ಲಿ ಸಿನಿಮಾ ತೆಲುಗಿಗೆ ಡಬ್ ಆಗ್ತಿದೆ. ರಮ್ಯಾ ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ಬದಲಾಯಿಸಲಾಗುತ್ತಿದೆ. ಆಂಕರ್ ರಶ್ಮಿ ಆ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈಗಾಗಲೇ ನೆಲಮಂಗಲ ಬಳಿ ಆ ಸನ್ನಿವೇಶಗಳ ಚಿತ್ರೀಕರಣ ನಡೆಯುತ್ತಿದೆ. ತೆಲುಗಿನಲ್ಲಿ ಒಂದಷ್ಟು ಸಿನಿಮಾಗಳಲ್ಲಿ ರಶ್ಮಿ ನಟಿಸಿದ್ದಾರೆ. ಆದರೆ ಕಿರುತೆರೆಯ 'ಜಬರ್ದಸ್ತ್' ಕಾಮಿಡಿ ಶೋ ನಿರೂಪಕಿಯಾಗಿ ರಶ್ಮಿ ಗುರ್ತಿಸಿಕೊಂಡಿದ್ದಾರೆ. ಹಲವು ವರ್ಷಗಳಿಂದ ಈ ಶೋ ನಡೆಸಿಕೊಡುತ್ತಿದ್ದಾರೆ. ಈ ಶೋ ಮೂಲಕವೇ ಆಕೆ ತೆಲುಗು ಜನಕ್ಕೆ ಪರಿಚಿತರಾಗಿದ್ದಾರೆ. ಇದೀಗ 'ಬಾಯ್ಸ್ ಹಾಸ್ಟೆಲ್' ಚಿತ್ರದಲ್ಲಿ ರಶ್ಮಿ ಲೆಕ್ಚರರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

 This Actress Replaced Ramya in hostel hudugaru bekagiddare telugu version

ವರುಣ್ ಸ್ಟುಡಿಯೋಸ್ ಮತ್ತು ಗುಲ್‌ಮೊಹರ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿದ್ದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಮೊದಲ ವಾರವೇ 6 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಈಗಾಗಲೇ ಸಿನಿಮಾ ಕಲೆಕ್ಷನ್ 15 ಕೋಟಿ ರೂ. ದಾಟಿದೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಯೂತ್ ಎಂಟರ್‌ಟೈನರ್ ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು.

More from Filmibeat

English summary
Rashmi replaces Ramya in hostel hudugaru bekagiddare telugu version.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X