ಪಾಕಿಸ್ತಾನದ ಕ್ರಿಕೆಟ್ ಆಟಗಾರನ ಮೇಲೆ ಜಯಸುಧಾಗೆ ಮೋಹ ; ವಜ್ರಕಾಯ ನಟಿಯ ಆಸೆ-ಕನಸೇನಾಗಿತ್ತು..?

'ನೀ ತಂದ ಕಾಣಿಕೆ', 'ತಾಯಿಯ ಮಡಿಲು', 'ವಜ್ರಕಾಯ' ಸಿನಿಮಾಗಳಲ್ಲಿ ಕಾಣಿಸಿಕೊಂಡು, ಕನ್ನಡಿಗರ ಹೃದಯ ಗೆದ್ದವರು ಜಯಸುಧಾ. ಆ ಕಾಲಕ್ಕೆ ತನ್ನ ಅಭಿನಯ ಹಾಗೂ ಸೌಂದರ್ಯದಿಂದ ತೆಲುಗು ಚಿತ್ರರಂಗದಲ್ಲಿ ಹೆಸರುವಾಸಿಯಾಗಿದ್ದ ಜಯಸುಧಾ ತಮ್ಮ ಜೀವನದ ಕೆಲ ಪುಟಗಳನ್ನ ತಿರುವಿ ಹಾಕಿದ್ದಾರೆ. ಮದುವೆ, ನೋವು, ನಲಿವು, ಆತ್ಮಹತ್ಯೆ, ಇಷ್ಟ-ಕಷ್ಟಗಳ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಮಾತನಾಡುತ್ತಾ ಆಗಾಗ ಭಾವುಕ ಆಗಿದ್ದಾರೆ

ಹೌದು, ಸಂದರ್ಶನವೊಂದರಲ್ಲಿ ಪತಿ ನಿತಿನ್ ಆತ್ಮಹತ್ಯೆಯ ನಂತರದ ಹಾಗೂ ಅದಕ್ಕೂ ಮುನ್ನ ಇದ್ದ ಜೀವನದ ಬಗ್ಗೆ ನೆನೆದು ಭಾವುಕರಾದ ಜಯಸುಧಾ, ತನಗೆ ಕ್ರಿಕೆಟ್ ಅಂದರೆ ಪಂಚ ಪ್ರಾಣ ಎಂದಿದ್ದಾರೆ. ನಟಿಯಾಗುವುದಕ್ಕಿಂತ ಮೊದಲು ನಾನು ಕ್ರಿಕೆಟ್ ಪ್ಲೇಯರ್ ಆಗಬೇಕು ಎಂದುಕೊಂಡಿದ್ದೇ ಎಂಬ ಇಂಟ್ರೆಸ್ಟಿಂಗ್ ವಿಚಾರವನ್ನೂ ಬಿಚ್ಚಿಟ್ಟಿದ್ದಾರೆ.

This Pakistan Cricketer Was My Crush Says Jayasudha

ಹಲವು ಜನರಂತೆ, ನಾನು ಮೊದಲು ಕ್ರಿಕೆಟಿಗನಾಗಲು ಬಯಸಿದ್ದೆ. ಎರಡನೇ ಆಯ್ಕೆ ಸಿನಿಮಾ ಆಗಿತ್ತು. ಎರಡು ಕೈ ಕೊಟ್ಟರೆ ಮೂರನೇ ಆಯ್ಕೆ ಶಿಕ್ಷಣ ಕ್ರೇತ್ರವಾಗಿತ್ತು ಎಂದಿರುವ ಜಯಸುಧಾ, ನನ್ನಲ್ಲಿ ನಟಿಯಾಗುವ ಯಾವ ಲಕ್ಷಣವೂ ಇರಲಿಲ್ಲ. ನಟಿಯಾಗಲು ಬೇಕಿರುವ ಗುಣಗಳು ಇರಲಿಲ್ಲವೆಂದಿದ್ದಾರೆ. ಇದೇ ಸಮಯದಲ್ಲಿ ತಮಗೆ ಕ್ರಿಕೆಟ್ ಮೇಲಿದ್ದ ಪ್ರೇಮ ಹಾಗೂ ಮೋಹದ ಬಗ್ಗೆಯೂ ಮಾತನಾಡಿರುವ ಜಯಸುಧಾ ಕ್ರಿಕೆಟ್‌ನಲ್ಲಿ ಸುನಿಲ್ ಗವಾಸ್ಕರ್ ನನ್ನ ಅಚ್ಚು ಮೆಚ್ಚಿನ ಆಟಗಾರರಾಗಿದ್ದರು ಎಂದಿದ್ದಾರೆ.

ಇನ್ನೂ ನಟಿಯಾಗಿ ವೃತ್ತಿ ಜೀವನ ಆರಂಭಿಸಿದ ನಂತರ ಕೂಡ ಕ್ರಿಕೆಟ್ ಹುಚ್ಚು ಇಳಿದಿರಲಿಲ್ಲ ಎಂದಿರುವ ಜಯಸುಧಾ, ಶೂಟಿಂಗ್ ವೇಳೆಯೂ ಕಾಮೆಂಟರಿಯನ್ನ ಕೇಳ್ತಿದ್ದೇ ಎಂದಿದ್ದಾರೆ. ನನ್ನ ಬಾಲ್ಯವೆಲ್ಲ ಕಳೆದಿದ್ದು ಚೆನ್ನೈನಲ್ಲಿ. ನಮ್ಮ ನಿವಾಸ ಚೇಪಾಕ್ ಸ್ಟೇಡಿಯಂ ಬಳಿ ಇತ್ತು. ಕ್ರೀಡಾಂಗಣಕ್ಕೆ ಹೋಗಿ ಪಂದ್ಯಗಳನ್ನು ನೋಡುತ್ತಿದ್ದೆ, ಹೀಗಾಗಿ ಕ್ರಿಕೆಟರ್ ಆಗಬೇಕೆಂಬ ಕನಸುಗಳು ಚಿಗುರೊಡೆದು ಬಾಲ್ಯದಲ್ಲಿ ಕುಣಿದಾಡಿದ್ದವು ಎಂದಿದ್ದಾರೆ ಜಯಸುಧಾ.

ಇಷ್ಟೇ ಅಲ್ಲ ಯೌವನಾವಸ್ಥೆಯಲ್ಲಿ ಪಾಕಿಸ್ತಾನದ ಕ್ರಿಕೆಟ್ ಪ್ಲೇಯರ್ ಇಮ್ರಾನ್ ಖಾನ್ ಅವರನ್ನ ಕಂಡು ಆಕರ್ಷಣೆಗೆ ಒಳಗಾಗಿದ್ದೆ, ನೋಡಲು ತುಂಬಾ ಸುಂದರವಾಗಿದ್ದ ಇಮ್ರಾನ್ ಖಾನ್ ಆ ಕಾಲಕ್ಕೆ ನನ್ನ ಕ್ರಶ್ ಆಗಿದ್ದರು ಎಂದಿದ್ದಾರೆ. ಇಮ್ರಾನ್ ಖಾನ್ ಅವರನ್ನ ನೋಡಲೆಂದೆ, ಕ್ರಿಕೆಟ್ ಮ್ಯಾಚ್ ನೋಡಲು ಹೋಗ್ತಿದ್ದೆ ಎಂದು ಕೂಡ ಹೇಳಿದ್ದಾರೆ ಜಯಸುಧಾ

This Pakistan Cricketer Was My Crush Says Jayasudha

ಕಳೆದ ವರ್ಷ ಮದುವೆ ವಿಚಾರಕ್ಕೆ ಸುದ್ದಿಯಾಗಿದ್ದ ನಟಿ

ಕಳೆದ ವರ್ಷ ಇದೇ ಸಮಯದಲ್ಲಿ, ಜಯಸುಧಾ ಮದುವೆ ವಿಚಾರಕ್ಕೆ ಸುದ್ದಿಯಾಗಿದ್ದರು. 64ನೇ ವಯಸ್ಸಿನಲ್ಲಿ ಜಯಸುಧಾ ಮೂರನೇ ಮದುವೆಯಾಗಿದ್ದಾರೆ ಎಂಬ ಸುದ್ದಿ ಆಗ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈ ಬಗ್ಗೆ ಅವತ್ತು ಮಾತನಾಡಿದ್ದ ಜಯಸುಧಾ, 'ಕಳೆದ ಕೆಲವು ದಿನಗಳಿಂದ ನನ್ನೊಂದಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಹೆಸರು ಫಿಲಿಪ್ ರೂಲ್ಸ್. ಅವರು ಅಮೆರಿಕದವರು. ಅವರು ನನ್ನ ಬಯೋಪಿಕ್ ಮಾಡಲು ಭಾರತಕ್ಕೆ ಬಂದಿದ್ದಾರೆ. ಚಿತ್ರರಂಗದಲ್ಲಿ ನನ್ನ ಪ್ರಾಮುಖ್ಯತೆಯ ಬಗ್ಗೆ ತಿಳಿದುಕೊಳ್ಳಲು ಅವರು ಪ್ರತಿ ಕಾರ್ಯಕ್ರಮಕ್ಕೂ ನನ್ನೊಂದಿಗೆ ಬರುತ್ತಿದ್ದಾರೆ ಎಂದಿದ್ದರು. ವರ್ಷ ಕಳೆದರೂ ಜಯಸುಧಾ ಅವರ ಜೀವನ ಚರಿತ್ರೆಯ ಮೇಲೀನ ಸಿನಿಮಾದ ಸುದ್ದಿ ಇನ್ನೂ ಆಚೆ ಬಂದಿಲ್ಲ ಅನ್ನುವುದು ಬೇರೆ ವಿಷಯ

More from Filmibeat

English summary
Tollywood Senior Actress Jayasudha Says Pakistan Cricketer Imran Khan Was Her First Crush
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X